How do whales take a breath?

ಪರಿವಿಡಿ

ತಿಮಿಂಗಿಲಗಳು ಶ್ವಾಸವನ್ನು ಹೇಗೆ ತೆಗೆದುಕೊಳ್ಳುತ್ತವೆ ?

ತಿಮಿಂಗಿಲಗಳು ನಮ್ಮ ಹಾಗೆಯೇ ಶ್ವಾಸವನ್ನು ತೆಗೆದುಕೊಳ್ಳುತ್ತವೆ . ತಿಮಿಂಗಿಲಗಳಲ್ಲಿ ಶ್ವಾಸಕೋಶಗಳಿವೆ . ಆದರೆ ಇವು ಮನುಷ್ಯರ ಶ್ವಾಸಕೋಶಗಳಿಗಿಂತ ಬಹು ದೊಡ್ಡದಾಗಿರುತ್ತವೆ . ಇವು ನೀರಿನ ಮೇಲ್ಮೈ ಭಾಗದಲ್ಲಿದ್ದಾಗ ಮನುಷ್ಯನ ಹಾಗೆ ಶ್ವಾಸವನ್ನು ತೆಗೆದುಕೊಳ್ಳುತ್ತವೆ .
59ee3877ddd0631c1e8b658f
ಇವು ನೀರಿನೊಳಗೆ ಅರ್ಧಗಂಟೆಯ ಕಾಲ ಉಸಿರನ್ನು ಬಿಗಿ ಹಿಡಿದಿಟ್ಟುಕೊಳ್ಳಬಲ್ಲವು . ಶ್ವಾಸಕೋಶಗಳು ದೊಡ್ಡದಾಗಿರುವುದೇ ಇದಕ್ಕೆ ಕಾರಣವಲ್ಲ ಇವು ಶ್ವಾಸವನ್ನು ಪಡೆದಾಗ ಶ್ವಾಸಕೋಶಗಳು ತುಂಬಾ ಗಾಳಿಯನ್ನು  ಹೀರಿಕೊಳ್ಳುವುದು . ಆದರೆ ಮನುಷ್ಯರು ಶ್ವಾಸವನ್ನು ತೆಗೆದುಕೊಂಡಾಗ ಶ್ವಾಸಕೋಶಗಳು ಭಾಗಶಃ ಮಾತ್ರ ಗಾಳಿಯನ್ನು ತುಂಬಿಕೊಳ್ಳುತ್ತವೆ .
whale breathing spout ocean
ತಿಮಿಂಗಿಲಗಳು ಅಧಿಕ ಸಮಯ ಉಸಿರನ್ನು ಬಿಗಿ ಹಿಡಿದುಕೊಂಡರೂ , ಅವುಗಳಿಗೆ ಅಗತ್ಯವಾದ ಆಮ್ಲಜನಕಕ್ಕಾಗಿ ನೀರಿನ ಮೇಲ್ಮೈ ಭಾಗಕ್ಕೆ ಬರಲೇಬೇಕಾಗುತ್ತದೆ . ತಿಮಿಂಗಿಲಗಳು ಶ್ವಾಸವನ್ನು ಬಿಟ್ಟಾಗ , ಅವುಗಳ ನಾಸಿಕ ರಂಧ್ರಗಳ ಮೂಲಕ ಬಿಸಿ ಹವೆಯಂತಹ ಆ ಗಾಳಿಯು ನೀರನ್ನು ಚಿಲುಮೆಯ ರೀತಿಯಲ್ಲಿ   ಮೇಲಕ್ಕೆ ಚಿಮ್ಮುತ್ತದೆ .

Leave a Reply

Your email address will not be published. Required fields are marked *