Duryodhana Vilapa, ದುರ್ಯೋಧನ ವಿಲಾಪ ಸಾರಾಂಶ ಮತ್ತು ಕವಿ ಪರಿಚಯ, 1st Puc Kannada Notes Textbook, Summary,ಪ್ರಥಮ ಪಿ.ಯು.ಸಿ ದುರ್ಯೋಧನ ವಿಲಾಪ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Duryodhana Vilapa Kannada Notes Question Answer Summary Mcq Pdf Download in Kannada Medium Karnataka State Syllabus Kseeb Solutions For Class 1 Kannada Chapter 1 Notes Duryodhana Vilapa Notes Duryodhana Vilapa Summary in Kannada pdf Duryodhana Vilapa question and answer 1st Puc Kannada Chapter 1 Question Answer duryodhana vilapa prashn uttar in kannada,
Duryodhana Vilapa ದುರ್ಯೋಧನ ವಿಲಾಪ
ಕವಿ ಪರಿಚಯ
ಬಾಗಲಕೋಟೆ ಜಿಲ್ಲೆಯ ಮುದುವೊಳಲು (ಮುಧೋಳ) ಈತನ ಸ್ಥಳ.
ತಂದೆ : ಜಿನವಲ್ಲಭ
ತಾಯಿ : ಅಬ್ಬಲಬ್ಬೆ ಬಳೆಗಾರ ಮನೆತನದಲ್ಲಿ ಜನಿಸಿದನು.
ದುರ್ಯೋಧನ ವಿಲಾಪ’ ಕಾವ್ಯಭಾಗವು ರನ್ನ ಮಹಾಕವಿ ರಚಿಸಿರುವ ‘ ಗದಾಯುದ್ಧ ‘ ಅಥವಾ ‘ ಸಾಹಸ ಭೀಮ ವಿಜಯಂ ‘ ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಿರುವ ಕೃತಿಯಾಗಿದೆ .
ರನ್ನಕವಿಯು ಕ್ರಿ.ಶ. 10 – 11ನೆಯ ಶತಮಾನದ ಜೈನಧರ್ಮಕ್ಕೆ ಸೇರಿದ ಕವಿ .
ಚಾಲುಕ್ಯರ ಸತ್ಯಾಶ್ರಯ ಚಕ್ರವರ್ತಿಯ ಆಸ್ಥಾನದಲ್ಲಿ ಕವಿಚಕ್ರವರ್ತಿಯಾಗಿ ಮೆರೆದವನು
ರನ್ನಕವಿಯು ಬರೆದಿರುವ ‘ ಸಾಹಸ ಭೀಮ ವಿಜಯಂ ‘ ಹಾಗೂ ‘ ಅಜಿತ ಪುರಾಣ‘ಗಳು ನಮಗೆ ದೊರೆತಿವೆ . ಈ ಎರಡೂ ಗ್ರಂಥಗಳು ಚಂಪೂ ಶೈಲಿಯಲ್ಲಿವೆ .
ಪಂಪಕವಿಯು ಹೇಗೆ ಲೌಕಿಕ ಮತ್ತು ಧಾರ್ಮಿಕ ಎಂಬುದಾಗಿ ಎರಡು ಕಾವ್ಯಗಳನ್ನು ಬರೆದನೋ ಹಾಗೇ ಇವನೂ ಲೌಕಿಕ ಹಾಗೂ ಧಾರ್ಮಿಕ ಗ್ರಂಥಗಳನ್ನು ಬರೆದನು . ಇವನು ಬರೆದಿರುವನೆನ್ನಲಾದ ‘
ಕಾವ್ಯಭಾಗದ ಹಿನ್ನೆಲೆ:
ರನ್ನ ಕವಿ ಬರೆದಿರುವ ‘ ಗದಾಯುದ್ಧ ‘ ಅಥವಾ ‘ ಸಾಹಸ ಭೀಮ ವಿಜಯಂ ‘ ಎಂಬ ಚಂಪೂ ಕಾವ್ಯದಿಂದ ‘ ದುರ್ಯೋಧನ ವಿಲಾಪಂ ‘ ಎಂಬ ಕಾವ್ಯಭಾಗವನ್ನು ಆರಿಸಲಾಗಿದೆ .
- ವಿಲಾಪ ಎಂದರೆ ಶೋಕ – ದುಃಖ ಎಂದರ್ಥ .
ದುರ್ಯೋಧನನು ಕುರುಕ್ಷೇತ್ರದ ಯುದ್ಧದಲ್ಲಿ ತನ್ನ ಹತ್ತಿರದ ಬಂಧು – ಬಾಂಧವರೆಲ್ಲರನ್ನು ಕಳೆದುಕೊಂಡು ಅಸಹಾಯಕ ದುಃಸ್ಥಿತಿಯಲ್ಲಿರುವಾಗ ಧೃತರಾಷ್ಟ್ರನ ಸಲಹೆಯಂತೆ ಭೀಷ್ಮಾಚಾರರನ್ನು ನೋಡಲೆಂದು ಹೊರಟನು .
ದಾರಿಯಲ್ಲಿ ಅವನು ಸ್ಮಶಾನ ಸದೃಶವಾದ ರಣರಂಗವನ್ನು ದಾಟಬೇಕಾಯಿತು . ಆ ಸಂದರ್ಭದಲ್ಲಿ ಕೌರವನು ದ್ರೋಣ , ಅಭಿಮನ್ಯು , ಲಕ್ಷಣಕುಮಾರ , ದುಶ್ಯಾಸನ ಹಾಗೂ ಕರ್ಣರ ದೇಹಗಳನ್ನು ನೋಡಿ ದುಃಖತಪ್ತನಾಗುತ್ತಾನೆ . ಆಗ ಕೌರವನ ಹೃದಯದಿಂದ ಹೊರಟ ಮಾತುಗಳು ಈ ಪದ್ಯಭಾಗದಲ್ಲಿವೆ.
ದುರ್ಯೋಧನನಿಗೆ ಕರ್ಣನ ಮೇಲಿದ್ದ ಸ್ನೇಹ ಮತ್ತು ಕರ್ಣನ ನಿಧನದಿಂದ ಅವನು ಮಾನಸಿಕವಾಗಿ ಅನುಭವಿಸುತ್ತಿದ್ದ ಶೋಕ ಇಲ್ಲಿ ವ್ಯಕ್ತವಾಗಿದೆ .
Duryodhana Vilapa ದುರ್ಯೋಧನ ವಿಲಾಪ
ಪದ್ಯಗಳ ವಿಮರ್ಶೆ ಅಥವಾ ಸಾರಾಂಶ
ದುರ್ಯೋಧನನು ತನ್ನ ಸಮಸ್ತ ಬಂಧುಬಾಂಧವರನ್ನು ಕಳೆದುಕೊಂಡ ನಂತರವೂ ಯುದ್ಧವನ್ನು ಮುಂದುವರೆಸಿ , ತನ್ನ ಸೇಡನ್ನು ಪೂರೈಸಿಕೊಳ್ಳುವ ಸಲುವಾಗಿ ಯುದ್ಧೋತ್ಸಾಹವನ್ನು ಉಳಿಸಿಕೊಂಡಿದ್ದನು .
ಯುದ್ಧದಲ್ಲಿ ತನ್ನ ಮುಂದಿನ ನಡೆ ಹೇಗೆಂಬುದನ್ನು ಶರಶಯ್ಕೆಯಲ್ಲಿ ಮಲಗಿದ್ದ ಭೀಷ್ಮಾಚಾರರೊಡನೆ ಸಮಾಲೋಚಿಸಿ ತೀರ್ಮಾನಿಸಲು ಅವರಿದ್ದಲ್ಲಿಗೆ ಹೊರಡು ತ್ತಾನೆ.
ಆಗ ರಣರಂಗದಲ್ಲಿ ಹೋರಾಡಿ ಮಡಿದ ಬಂಧುಮಿತ್ರರ ಶವಗಳನ್ನು ಕಂಡಾಗ ಅವನ ದುಃಖ ಮಡುಗಟ್ಟಿ ನಿಲ್ಲುವುದನ್ನು ಕವಿ ಅತಿ ಸುಂದರವಾಗಿ ಇಲ್ಲಿ ವಿಮರ್ಶೆಯನ್ನು ಮಾಡಿದ್ದಾನೆ.
ಉಡಿದಿರ್ದ ಕಯ್ದು ನೆತ್ತರ
ಕಡಲೊಳಗಡಿಗಡಿಗೆ ತಳಮನುರ್ಚುತ್ತಿರ ಕಾ
ಲಿಡಲೆಡವಡೆಯದೆ ಕುರುಪತಿ
ದಡಿಗವೆಣಂಗಳನೆ ಮೆಟ್ಟಿ ಮೆಲ್ಲನೆ ನಡೆದಂ
ಕವಿಯು ದುರ್ಯೋಧನನು ರಣರಂಗಕ್ಕೆ ಕಾಲಿಟ್ಟ ಸಂದರ್ಭವನ್ನು ಇಲ್ಲಿ ವಿವರಿಸಿದ್ದಾನೆ . ಲಕ್ಷ ಲಕ್ಷ ಜೀವಹಾನಿಯ ಪರಿಣಾಮದಿಂದ ರಕ್ತದ ಸಮುದ್ರದ ಕೊಡಿಯೇ ಅಲ್ಲಿ ಹರಿದಿತ್ತು . ಆ ರುಧಿರ ಕಡಲಿನಲ್ಲಿ ಯೋಧರ ಆಯುಧಗಳೆಲ್ಲ ಮುರಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಕೌರವೇಶ್ವರನು ಆ ನೆಲದಲ್ಲಿ ಮುಗಿದು ಬಿದ್ದು ಹೂಳುಹೋಗಿರುವ ಆಯುಧಗಳ ಮೇಲೆಯೇ ಪಾದಗಳನ್ನು ನಡೆಯಬೇಕಾಯಿತು. ಇದರಿಂದ ಕೌರವೇಶ್ವರನ ಪಾದಗಳಿಗೆ ನೋವಾಯಿತಂತ , ಪಾದ ಊರಲು ಸ್ಥಳವಿಲ್ಲದೆ ಅಲ್ಲಿ ಬಿದ್ದಿದ ಬಿದ್ದಿದ್ದವು . ಭಾರಿ ಹೆಣಗಳ ಮೇಲೆ ಕಾಲಿಟ್ಟು ಮೆಲ್ಲನೆ ಬೀಳದಂತೆ ನಡೆಯುವಂತಾಯಿತು ಎಂದು ಕವಿ ವಿವರಿಸಿದ್ದಾನೆ.
ಶಬ್ದಾರ್ಥ:
ಇಬಶೈಲಂಗಳವೇಟೆಯೇಹಿ ರುಧಿರಸೋತಂಗಳು ದಾಂ
ಟಿಭದೋರ್ನಿಲಪಾಪ್ರತಾನ ವಿಪಿನವಾತಂಗಳೊಳ್ ಸಿಲ್ಕಿ ಸಿ
ಲ್ಕಿ ಭರಂಗೆಯುಂದೆಯ್ಲಿ ಸಂಜಯಶಿರಸಂಭಾವಲಂಬಂ ಕುರು
ಪ್ರಭು ಕಂಡಂ ಶರಚಾಲಜರ್ಜರಿತಗಾತ್ರತ್ರಾಣನಂ ದ್ರೋಣನಂ
ಪದ್ಯದ ಸಾರಾಂಶ
ಹೆಣಗಳ ಮೇಲೆ ಕಾಲಿಟ್ಟು ನಡೆಯುತ್ತಿರುವ ಕೌರವೇಶ್ವರನ ಸ್ಥಿತಿಯನ್ನು ಕಂಡು ಅವನೊಡನಿದ್ದ ಸಂಜಯ ಕಣ್ಣೀರು ಗರೆದನು . ತನುಜಾನುಜರ ವಿಯೋಗದಿಂದ ನೊಂದು ನೊಂದು ಮುಂದೆ ಸಾಗುವಾಗ ದುರ್ಯೋಧನನು ತನ್ನ ಗುರುವಾದ ದ್ರೋಣರ ಶವವನ್ನು ಎದಿರುಗೊಳ್ಳುವ ಸಂದರ್ಭವನ್ನು ಕವಿ ಈ ಪದ್ಯದಲ್ಲಿ ವಿವರಿಸಿದ್ದಾನೆ .
ದುರ್ಯೋಧನನು ರಣರಂಗದಲ್ಲಿ ಸತ್ತು ಬಿದ್ದಿದ್ದ ದೊಡ್ಡ ದೊಡ್ಡ ಅನಗಳ ಪರ್ವಹದಂತಹ ದೇಹವನ್ನು ಏರಿ ಏರಿ , ಹರಿಯುತ್ತಿರುವ ರಕ್ತದ ಕಾಲುವೆಯನ್ನು ದಾಟಿ ದಾಟಿ ಮುಂದುವರೆಯುತ್ತಿದ್ದರು .
ಆ ಸಂದರ್ಭದಲ್ಲಿ ದಟ್ಟವಾದ ಕಾಡಿನಲ್ಲಿ ಇಳಿಬಿದ್ದಿರುವ ಕಪ್ಪುಬಳ್ಳಿಗಳಂತೆ ಚಾಚಿಕೊಂಡಿದ್ದ ಆನೆಗಳ ಸೊಂಡಿಲುಗಳನ್ನು ಎಡವಿದ್ದರಿಂದ ಕಾಲು ತೊಡರಿತಂತೆ , ರಣರಂಗ ದಲ್ಲಿ ನಡೆಯುತ್ತಿದ್ದರೂ ಮಹಾರಣ್ಯದಲ್ಲಿ ನಡೆಯುತ್ತಿರುವಂತೆ ಅವನಿಗೆ ಭಾಸವಾಯಿತಂತೆ .
ಆಗ ಕೌರವನು ಸಂಜಯನ ಹೆಗಲ ಮೇಲೆ ಕೈ ಹಾಕಿ ಕೆಳಕ್ಕೆ ಬೀಳದ ಹಾಗೆ ನಡೆದು ಬರುವಾಗ , ನೂರಾರು ಬಾಣಗಳ ಜಾಲಕ್ಕೆ ಸಿಕ್ಕಿ ಜರ್ಜರಿತವಾಗಿ ಸತ್ತು ಬಿದ್ದಿದ್ದ ದ್ರೋಣನ ಶವವನ್ನು ಕಾಣುವನು.
ಶಬ್ದಾರ್ಥ
ಅಂತು ನಿಸರ್ಗದುಷ್ಪದೃಷ್ಟದ್ಯುಮ್ನ ಕಚನಿಗ್ರಹಾರೆವಿಲುಳಿತ ಮೌಳಿಯಾಗಿರ್ದ ಭಾರಧ್ವಾಜನಿರವಂ ರಾಜರಾಜ ನೋಡಿ.
ಸ್ವಭಾವತಃ ದುಷ್ಟಪ್ರವೃತ್ತಿಯವನಾದ ಧೃಷ್ಟದ್ಯುಮ್ನನ ಕೈಯಿಂದ ತಲೆಕಡಿಸಿಕೊಂಡು ಸತ್ತುಬಿದ್ದಿರುವ ಭರದ್ವಾಜ ವಂಶಜನಾದ ದ್ರೋಣಾಚಾರರ ಕಳೇಬರವನ್ನು ನೋಡಿದಾಗ ದುರ್ಯೋಧನನಿಗೆ ದುಃಖ ಉಮ್ಮಳಿಸಿ ಬಂದಿತು .
ಶಬ್ದಾರ್ಥ
ಅರಿಯಮೆ ಬಿಲ್ಲ ಬಿನ್ನಣಕೆ ಗಾಂಡಿ ವಿಯಲು ವಿನಾಕಪಾಣಿಯುಂ
ನೆರೆಯನಿದಿರ್ಚಿ ನಿಮ್ಮೊಡನೆ ಕಾದಿ ಗೆಲಲ್ಕದು ನಿಮ್ಮುಪೇಕ್ಷೆಯಂ
ದರೆಯೆನಿದೆನ್ನ ಕರ್ಮವಶಮಂದೆ ಯಂ ನಿಮಗಿಂತು ಸಾವುಮೀ
ತರೆದಿನಕಾರಣಂ ನೆಡೆ’ಯ ಸಂಭವಿಸಿರ್ದುದೂ ಕುಂಭಸಂಭವಾ
Duryodhana Vilapa ದುರ್ಯೋಧನ ವಿಲಾಪ
ದ್ರೋಣಾಚಾರರ ಶವದ ಮುಂದೆ ನಿಂತು ದುರ್ಯೋಧನನು ಪ್ರಲಾಪಿಸಿದ ಬಗೆಯನ್ನು ನೀವು ಇಲ್ಲಿ ನೋಡಬಹುದು. ದ್ರೋಣರನ್ನು ಕಂಡ ಕೌರವೇಶ್ವರನು “ ಅಯ್ಯೋ ನೀವು ಬಿಲ್ವಿದ್ಯಾ ಪಾರಂಗತರೆಂಬುದು ಇಡೀ ಜಗತ್ತಿಗೆ ತಿಳಿದಿದೆ .
ಅಷ್ಟೇ ಅಲ್ಲ ಅರ್ಜುನನೇಕೆ , ಸಾಕ್ಷಾತ್ ಪರಮೇಶ್ವರನೂ ನಿಮ್ಮನ್ನು ಎದುರಿಸಿ ಗೆಲ್ಲಲು ಅಸಮರ್ಥ , ನೀವು ವೀರಾವೇಶದಿಂದ ಹೋರಾಡಿ ಪಾಂಡವರನ್ನು ಜಯಿಸದೆ ಉದಾಸೀನ ತೋರಿದಿರೆಂದು ನಾನಾದರೂ ಭಾವಿಸುವುದಿಲ್ಲ .
ನನ್ನ ಕರ್ಮದ ಫಲದಿಂದಾಗಿ ನೀವು ಜಯವನ್ನು ಸಾಧಿಸಲಾಗ ಲಿಲ್ಲವಷ್ಟೇ ; ನಿಮ್ಮಂತಹ ಪರಾಕ್ರಮಿಗೆ ಇಂತಹ ಸಾವು ಹೇಗೆ ಸಂಭವಿಸಿತೋ ಕಾರಣ ತಿಳಿಯದಾಗಿದೆ ‘ ‘ ಎಂದು ದುಃಖಿಸಿದನು .
ಶಬ್ದಾರ್ಥ
ಎಂದು ದುಃಖಂಗೆಯ್ದು ಕುಂಭಸಂಭವನಂ ತ್ರಿಪ್ರದಕ್ಷಿಣಂಗೆಯ್ದು ಬರುತ್ತಮಾ ದಿಶಾಭಾಗದೊಳ
ಎಂದು ದುಃಖಿಸುತ್ತಾ ದುರ್ಯೋಧನನು ದ್ರೋಣಾಚಾರರ ದೇಹಕ್ಕೆ ಮೂರು ಬಾರಿ ಪ್ರದಕ್ಷಿಣೆ ಬಂದು , ಅಲ್ಲಿಂದ ಮುಂದುವರೆಯುವನು – ಆ ದಿಕ್ಕಿನಲ್ಲಿ .
ಅರೆಮುಗಿದಿರ್ದ ಕಣ್ಣಲರಲದ ಮೊಗಂ ಕಡಿವೋದ ಕಯ್ಯುಮಾ
ಸುರತರಮಾಗೆ ಕರ್ಚೆದವುಡುಂ ಬೆರಸನ್ಯಶರಪ್ರಹಾರ ಜ
ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳು ಬಿಳ್ಳನಂ
ಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ
ದ್ರೋಣರ ಶವದ ಮುಂದೆ ದುಃಖಿಸಿ , ಅವರಿಗೆ ನಮಸ್ಕರಿಸಿ ಮುಂದೆ ಸಾಗಿದ ದುರ್ಯೋಧನನಿಗೆ ಅಭಿಮನ್ಯುವಿನ ಶವ ಸಿಗುತ್ತದೆ . ದುರ್ಯೋಧನ ಕಂಡ ಅಭಿಮನ್ಯುವಿನ ಮೃತದೇಹದ ವರ್ಣನೆಯನ್ನು ರನ್ನ ಇಲ್ಲಿ ನೀಡಿರುವನು , ದುರ್ಯೋಧನನ ಕಣ್ಣಿಗೆ ಅಭಿಮನ್ಯುವಿನ ಶವ ಕಂಡುದು ಹೀಗೆ
“ ಅಭಿಮನ್ಯುವಿನ ಕಣ್ಣರೆಪ್ಪೆಗಳು ಅರ್ಧಮುಚ್ಚಿ ತೆರೆದಿದ್ದವಂತೆ . ಅವನ ಕೈಗಳು ಕತ್ತರಿಸಿ ಹೋಗಿದ್ದವು . ಶತ್ರುಗಳ ಬಾಣದ ಏಟಿನಿಂದಾಗಿ ಅವನ ದೇಹದ ತುಂಬಾ ಗಾಯಗಳಾಗಿದ್ದವು , ಅವನ ದೇಹವು ರಕ್ತದ ಮಡುವಿನಲ್ಲಿ ಅದ್ದಿದಂತಿತ್ತು .
ಯುದ್ಧದಲ್ಲಿ ಮಹಾ ಪರಾಕ್ರಮಿ ಎನಿಸಿದ್ದ ಅಭಿಮನ್ಯುವನ್ನು ದುರ್ಯೋಧನನು ಇಂತಹ ಸ್ಥಿತಿಯಲ್ಲಿ ಕಂಡನೆಂದು ಕವಿ ವರ್ಣಿಸಿದ್ದಾನೆ .
Duryodhana Vilapa ದುರ್ಯೋಧನ ವಿಲಾಪ
ಶಬ್ದಾರ್ಥ
ಅಂತಾತನನಹಿಕೇತನಂ ನೋಡಿ
ಹೀಗೆ ಅಭಿಮನ್ಯುವನ್ನು ದುರ್ಯೋಧನ ನೋಡಿದನು .
ಗುರುಪಣ್ಣಿದ ಚಕ್ರವ್ಯೂ
ಹರಚನೆ ಪದರ್ಗರಿದು ಪಗಲದಂ ಪೊಕ್ಕು ರಣಾ
ಜರದೊಳರಿವ್ಯಪರನಿಕ್ಕಿದ
ನರಸುತ ನಿನ್ನೊರೆಗೆ ದೊರೆಗೆ ಗ೦ಡರುಮೊಳರೇ
ಅಭಿಮನ್ಯುವಿನ ಶವವನ್ನು ಕ೦ಡಾಗ ದುರ್ಯೋಧನನಾಡುವ ಮೆಚ್ಚುಗೆಯ ಮಾತುಗಳನ್ನು ನಾವು ಈ ಮೇಲಿನ ಪದ್ಯದಲ್ಲಿ ಕಾಣಬಹುದು .
ದುರ್ಯೋಧನನು ಅಭಿಮನ್ಯುವಿನ ಸಾಹಸವನ್ನು ಮೆಚ್ಚುತ್ತಾ ‘ ಗುರುದ್ರೋಣರು ರಚಿಸಿದ ಚಕ್ರವ್ಯೂಹವನ್ನು ಭೇದಿಸಿ ಒಳಪ್ರವೇಶಿಸಲು ಬೇರಾರಿಗೂ ಸಾಮರ್ಥ್ಯವಿರಲಿಲ್ಲ .
ಆದರೆ ನೀನು ನಿನ್ನ ಸಾಮರ್ಥ್ಯದಿಂದ ಚಕ್ರವ್ಯೂಹವನ್ನು ಭೇದಿಸಿದೆ . ಒಳನುಗ್ಗಿ ಪರಾಕ್ರಮಿಗಳನ್ನು ಎದುರಿಸಿ ಕೊಂದ ನೀನು , ಅರ್ಜುನನಿಗೆ ತಕ್ಕ ಮಗನಾಗಿದ್ದೀಯ , ನಿನ್ನ ಧೈರ್ಯ – ಸಾಹಸಗಳಿಗೆ ಸಮಾನರಾದ ಪರಾಕ್ರಮಿಗಳು ಬೇರೆ ಯಾರಿದ್ದಾರೆ ? ‘ ‘ ಎಂದು ಹೊಗಳಿದನು .
ಅಭಿಮನ್ಯು ಶತ್ರುಪುತ್ರನಾಗಿದ್ದರೂ ಅವನ ಗುಣವನ್ನು ಮೆಚ್ಚುವ ದುರ್ಯೋಧನನ ಅಂತಃಕರಣ ಇಲ್ಲಿ ಅನಾವರಣಗೊಂಡಿದೆ .
ಶಬ್ದಾರ್ಥ
ಅಸಮಬಲ ಭವದ್ವಿಕ್ರಮ
ಮಸಂಭವಂ ಪೆರರ್ಗೆ ನಿನ್ನನಾನಿನಿತಂ ಪ್ರಾ
ರ್ಥಿ ಸುವನಭಿಮನ್ನು ನಿಜಸಾ
ಹಮ್ಮಿಕದೇಶಾನುಮರಣಮೆಮಗಕ್ಕೆ ಗಡಾ
ಅಭಿಮನ್ಯುವಿನ ಶವದ ಮುಂದೆ ನಿಂತ ದುರ್ಯೋಧನನು ಅವನ ಪ್ರಶಂಸೆಯನ್ನು ಮುಂದುವರೆಸುತ್ತಾ “ ಅಸಮಬಲಶಾಲಿ ಯಾದ ಅಭಿಮನ್ಯು ಕುಮಾರನೆ , ನಿನ್ನಂತಹ ಪರಾಕ್ರಮಿಗಳು ಮತ್ತೊಬ್ಬರಿಲ್ಲ . ನಿನ್ನ ಮುಂದೆ ನಿಂತಿರುವ ನಾನು ಬೇಡಿಕೊಳ್ಳುವುದಿಷ್ಟೇ ನಿನ್ನ ಸಾಹಸದ ಹತ್ತನೇ ಒಂದಂಶವಾದರೂ ನನ್ನಲ್ಲಿದ್ದರೆ ಅದಕ್ಕನುಗುಣವಾದ ವೀರಮರಣ ನನಗೆ ಉಂಟಾಗಲಿ ‘ ಎಂದು ಪ್ರಾರ್ಥಿಸಿದನು.
ಶತ್ರುವಿನ ಮಗನಾದ ಅಭಿಮನ್ಯುವನ್ನು ಕಂಡು ರೋಷದಿಂದ ಕರಳುವ ಬದಲು , ಅವನ ಸಾಹಸಗುಣನ ಸರಿಯೇ , ಯುದ್ಧ ಮಾಡಿಯೇ ತೀರಬೇಕೆಂಬ ಅವನ ಅ೦ತು ದ ಛಲ ಇಲ್ಲಿ ಪುಟಿದೆದ್ದಿದೆ.
ಆದ್ದರಿಂದಲೇ ಅವನು ಬಂದ ಮೆಚ್ಚುವ ದುರ್ಯೋಧನನ ವ್ಯಕ್ತಿತ್ವ ನಿಜಕ್ಕೂ ಅಪರೂಪತ್ತೆಂ ರನ್ನ ಚಿತ್ರಿಸಿದ್ದಾನೆ . ಅಲ್ಲದೆ ಸತ್ತು ವೀರಮರಣವನ್ನಪ್ಪಿದರು . ವೀರಮರಣ ಬರಲಿ ಎಂದು ಆಪೇಕ್ಷಿಸುತ್ತಿದ್ದಾನೆ . ಅವನ ಉಣಕ್ಕೆ ತೀರಾ ಸಹಜವಾದ ಮಾತಿದಾಗಿದೆ .
ಶಬ್ದಾರ್ಥ
ಎಂದಾತ್ಮಗತದೊಳೆ ಬಗೆದು ಅಂತಭಿಮನ್ಯುಗೆ ಕಯ್ದಳೆಂ ಮುಗಿದು ಬರುತ್ತುಂ ತನ್ನ ಮಗನಪ್ಪ ಲಕ್ಷಣಕುಮಾರ ನೆನೆದು ಮನ್ನೂಷ್ಣತಕಂಠನಾಗಿ ತದಾಸನ್ನಪ್ರದೇಶದೊಳ್ ತನ್ನ ಕುಮಾರನಂ ಕಂಡು ಪುತ್ರಸ್ನೇಹಕಾತರಹೃದಯನಾಗಿ ಗಾಂಧಾರ ನಂದನ ಭಾನುಮತೀನಂದನನ ವದನಾರವಿಂದಮಂ ನೋಡಿ
ಅಭಿಮನ್ಯುವಿಗೆ ಬಂದಂತಹ ವೀರಮರಣವು ತನಗೂ ಸಂಭವಿಸಲೆಂದು ದುರ್ಯೋಧನನು ಮನದಲ್ಲೇ ಪ್ರಾರ್ಥಿಸಿ , ಅಭಿಮನ್ಯುವಿಗೆ ಕೈ ಮುಗಿದು ಮುಂದುವರೆಯುವಾಗ ಅವನಿಗೆ ತನ್ನ ಮಗನಾದ ಲಕ್ಷಣಕುಮಾರನ ನೆನಪಾಗುತ್ತದೆ . ದುಃಖ ದಿಂದ ಗಂಟಲು ಉಬ್ಬುತ್ತದೆ . ಅವನ ಹೃದಯ ಪುತ್ರವಾತ್ಸಲ್ಯದಿಂದ ಮಿಡಿಯುತ್ತದೆ . ಅಷ್ಟರಲ್ಲೇ ಅವನಿಗೆ ಮಗನ ತಾವರೆಯಂತಹ ಮೊಗ ಗೋಚರಿಸುತ್ತದೆ .
Duryodhana Vilapa ದುರ್ಯೋಧನ ವಿಲಾಪ
ಶಬ್ದಾರ್ಥ :
ಜನಕಂಗೆ ಜಲಾಂಜಲಿಯ
ತನೂಭವಂ ಕುಡುವುದುಚಿತಮದುಗೆಟ್ಟೇಗಳ
ನಿನಗಾಂ ಕುಡುವಂತಾದುದೆ
ತನೂಜ ನೀಂ ಶ್ರಮವಿಪರ್ಯಯಂ ಮಾಡುವುದೇ
ತನ್ನ ಮಗ ಲಕ್ಷಣಕುಮಾರನ ಶವವನ್ನು ನೋಡಿದಾಕ್ಷಣ ದುರ್ಯೋಧನನ ದುಃಖದ ಕಟ್ಟೆಯೊಡೆಯುತ್ತದೆ . ಬಾಳಿ ಬದುಕಬೇಕಾಗಿದ್ದ ತನ್ನ ಕರುಳಿನ ಕುಡಿಯನ್ನು ಕಂಡ ದುರ್ಯೋಧನನು ‘ ತಂದೆಯಾದವನಿಗೆ ಮಗನಾದವನು ಎಳ್ಳು – ನೀರಿನ ತರ್ಪಣವನ್ನು ಕೊಡಬೇಕಾದ್ದು ಲೋಕರೂಢಿ .
ಆದರೆ ಇದಕ್ಕೆ ವ್ಯತಿರಿಕ್ತವಾಗಿ ತಂದೆಯಾದ ನಾನೇ ಮಗನಾದ ನಿನಗೆ ತರ್ಪಣವನ್ನು ಬಿಡುವಂತಾಯಿತೇ ? ಅಯ್ಯೋ ಮಗನೆ , ನನಗಿಂತ ಮೊದಲು ಪ್ರಾಣವನ್ನು ತೊರೆದು ನೀನೇಕೆ ಹೀಗೆ ಕ್ರಮವನ್ನು ತಪ್ಪಿಸಿದೆ ? ಎಂದು ದುಃಖಿಸಿದನು . ಪುತ್ರಶೋಕತಪ್ತನಾದ ದುರ್ಯೋಧನನ ವಿಲಾಪ ಕರುಳು ಮಿಡಿಯುವಂತೆ ಇಲ್ಲಿ ಚಿತ್ರಿತವಾಗಿದೆ .
ಶಬ್ದಾರ್ಥ
ಎಂದು ಪಶ್ಚಾತ್ತಾಪಂಗೆಯ್ಯ ಸಂಜಯಂ ಸಂತೈಸಿ ಮುಂದೊಮ್ಮೆ ಭೀಮಸೇನನ ಗದಾಪರಿಘ ಪ್ರಹರಣದಿಂದ ರುಧಿರ ಪ್ರವಾಹವಶಗತನಾಗಿರ್ದ ಯುವರಾಜನಿರ್ದಡೆಯಂ ಕುರುರಾಜನೆಯ್ದವಂದಾಗಳ್
ಪುತ್ರನಿಗೆ ತರ್ಪಣ ಕೊಡುವ ಸಂದರ್ಭವೊದಗಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತಿರುವ ದುರ್ಯೋಧನನನ್ನು ಸಂಜಯನು ಸಂತೈಸಿ , ಮುಂದೆ ಕರೆದೊಯ್ದನು . ಅಲ್ಲಿ ಅವರಿಗೆ ಭೀಮಸೇನನ ಗದಾಪ್ರಹಾರದಿಂದ ಹತನಾಗಿ ರಕ್ತದ ಪ್ರವಾಹದೊಳಗೆ ಬಿದ್ದಿದ್ದ ಯುವರಾಜನಾದ ದುಶ್ಯಾಸನನ ಮೃತದೇಹ ಎದಿರಾಯಿತು .
ಶಬ್ದಾರ್ಥ
ನಿನ್ನಂ ಕೊಂದಂ ಗಡಮೊಳ
ನಿನ್ನು೦ ಕೊಂದವನನಿಕ್ಕಿ ಕೊಲ್ಲದೆ ಮಣ್ಣ್ಡ್
ನಿನ್ನ ಮೊಳೆಂ ಗಡಸಾಲದೆ
ನಿನ್ನಯ ಕೂರ್ಮಗಮದನ್ನ ಸೌಧರ್ಮಿಕೆಗಂ
ದುರ್ಯೋಧನನೆಂದರೆ ದುಶ್ಯಾಸನನಿಗೆ ಅಪರಿಮಿತವಾದ ಪ್ರೀತಿ . ಅವನ ಭ್ರಾತೃವಾತ್ಸಲಕ್ಕೆ ಎಣೆಯಿಲ್ಲ . ಅಂತಹ ತಮ್ಮನ ಶವವನ್ನು ಕಂಡಾಗ ದುರ್ಯೋಧನನಿಗೆ ತಾನಿನ್ನೂ ತಮ್ಮನ ಸಾವಿಗೆ ಕಾರಣನಾದವನನ್ನು ಬದುಕಲು ಬಿಟ್ಟಿರುವೆನಲ್ಲಾ ಎಂದು ರೋಷ ಉಕ್ಕುತ್ತದೆ .
ಅದನ್ನು ಅವನು ದುಶ್ಯಾಸನನ ಶವದ ಮುಂದೆ ನಿಂತು ಅಭಿವ್ಯಕ್ತಿಸುವುದನ್ನು ಕವಿ ರನ್ನ ಈ ಮೇಲಿನ ಪದ್ಯದಲ್ಲಿ ಚಿತ್ರಿಸಿರುವನು . ” ಎಲೈ ಯುವರಾಜನೇ , ನಿನ್ನನ್ನು ಕೊಂದವನು ( ಭೀಮನು ) ಇನ್ನೂ ಬದುಕಿರುವನು .
ಅವನನ್ನು ಕೊಂದು , ನಿನ್ನ ಸಾವಿನ ಸೇಡು ತೀರಿಸಿಕೊಳ್ಳದ ನಾನಿನ್ನೂ ಬದುಕುಳಿದಿರುವೆ . ನೀನು ನನ್ನಲ್ಲಿ ತೋರಿದ ಪ್ರೀತಿಗೆ ಇದು ಸರಿಯಾದ ಮರ್ಯಾದೆಯಲ್ಲ , ಇದೆಂತಹ ಸಜ್ಜನಿಕೆ ನನ್ನದು ? ‘ ‘ ಎಂದು ದುರ್ಯೋಧನನು ತಮ್ಮನ ಶವದ ಮುಂದೆ ದುಃಖಿಸಿದನು .
ಶಬ್ದಾರ್ಥ
ಜನನೀಸನ್ಯಮನುಂಡೆನಾಂ ಬಳಿಕೆ ನೀಂ ಸೋಮಾಮೃತಂ ದಿವ್ಯಭೋ
ಜನಮೆಂಬಂತಿವನುಂಡನಾಂ ಬಳಿಕೆ ನೀಂ ಬಾಲತ್ವದಿಂದೆಲ್ಲಿಯುಂ
ವಿನಯೋಲ್ಲಂಘನಮಾದುದಿಲ್ಲ ಮರಣಕ್ಕೆನ್ನಿಂದ ನೀಂ ಮುಂಚಿದಯ್
ಮೊನೆಯೊಳ್ ಸೂಳ್ತಡಮಾಯ್ತಿದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ
ಪ್ರಸ್ತುತ ಪದ್ಯದಲ್ಲಿಯೂ ಕವಿಯು ದುಶ್ಯಾಸನನ ಶವದ ಮುಂದೆ ನಿಂತು ಶೋಕಿಸುವ ದುರ್ಯೋಧನನ ಅಳಲನ್ನು ಚಿತ್ರಿಸಿದ್ದಾನೆ . ತನ್ನ ದುಃಖದ ಮಾತುಗಳನ್ನು ಮುಂದುವರೆಸುತ್ತಾ ದುರ್ಯೋಧನನು ಹೀಗೆಂದು ಪ್ರಲಾಪಿಸುವನು ; ” ಎಲೈ ದುಶ್ಯಾಸನವೇ , ತಾಯಿಯ ಎದೆ ಹಾಲನ್ನು ನಾನು ಮೊದಲು ಕುಡಿದೆ , ಬಳಿಕ ನೀನು ಕುಡಿದೆ .
ಇದರಂತೆಯೇ ಅಮೃತವೆನಿಸಿದ ಸೋಮರಸವನ್ನೂ , ರುಚಿಕರವಾದ ದಿವ್ಯಭೋಜನವನ್ನೂ ನಾನು ಮೊದಲು ಸೇವಿಸಿದೆ . ಆನಂತರವೇ ಅವುಗಳನ್ನು ನೀನು ಸೇವಿಸುತ್ತಿದ್ದ .
ಬಾಲ್ಕದಿಂದ ಇಂದಿನವರೆಗೂ ಎಂದಿಗೂ ಈ ಕ್ರಮವನ್ನು ನೀನು ಉಲ್ಲಂಘಿಸಿರಲಿಲ್ಲ . ಅದೇ ರೀತಿ ಸಾವಿನಲ್ಲೂ ನಾನು ಮೊದಲಿಗನಾಗಬೇಕಿತ್ತು . ಆದರೆ ನೀನು ಮೊದಲು ಯುದ್ಧದಲ್ಲಿ ಮರಣವನ್ನಪ್ಪಿ ಏಕೆ ಕ್ರಮವನ್ನು ಉಲ್ಲಂಘಿಸಿದ ? ಹಾ ಪ್ರಿಯಸಹೋದರನಾದ ದುಶ್ಯಾಸನನೇ ‘ ‘ ಎಂದು ದುರ್ಯೋಧನನು ಶೋಕತುಂಬಿ ಗೋಳಾಡಿದನು .
Duryodhana Vilapa ದುರ್ಯೋಧನ ವಿಲಾಪ
ಶಬ್ದಾರ್ಥ
ಎಂದು ವಿಪ್ರಳಾಪಂಗೆಯ್ದು ತನ್ನ ತಮ್ಮನ ಕಳೇಬರಮಂ ನೋಡಲಾರದೆ ಅಲ್ಲಿಂ ತಳರ್ದು ದಿನಕರತನೂಜನಂ ರಾಜರಾಜಂ ನೋಡಿ ಬಾಷ್ಪವಾರಿ ಧಾರಾಪೂರಿತ ಲೋಚನನುಮಾಗಿ
ದುಶ್ಯಾಸನನ ಮುಂದೆ ನಿಂತು ಅತಿಯಾಗಿ ಪ್ರಲಾಪಗೈಯ ದುರ್ಯೋಧನನಿಗೆ ಹೆಚ್ಚು ಹೊತ್ತು ನಿಂತು ತನ್ನ ತಮ್ಮನ ಹೆಣವನ್ನು ನೋಡಲಾಗಲಿಲ್ಲ . ಅಲ್ಲಿಂದ ಮುಂದೆ ಸಾಗಿದಾಗ ಅವನಿಗೆ ದಿವಾಕರ ಮಗನಾದ ಕರ್ಣನ ಮೃತದೇಹ ಎಟರಾಯಿತು . ಅವನನ್ನು ನೋಡಿದ ದುರ್ಯೋಧನನಿಗೆ ಕಣ್ಣೀರಕೋಡಿ ಉಕ್ಕಿಹರಿಯಿತು , ಕಣ್ಣೀರು ಸುರಿಸುತ್ತಾ ಅವನು ಕರ್ಣನ ಶವವನ್ನು ನೋಡುತ್ತಾ ಈ ಮುಂದಿನಂತೆ ಶೋಕಿಸುವನು .
ಶಬ್ದಾರ್ಥ Duryodhana Vilapa ದುರ್ಯೋಧನ ವಿಲಾಪ
ಆನುಂ ದುಶ್ಯಾಸನನುಂ
ನೀನು ಮೂವರೆ ದಲಾತನುಂ ಕಳೆದ ಬ
ಕ್ಯಾನಂ ನೀನೆ ದಲೀಗಲ್
ನೀನುಮಗಲ್ಲೆತ್ತವೋದೆಯಂಗಾಧಿಪತೀ
ತಮ್ಮನಾದ ದುಶ್ಯಾಸನ ಮತ್ತು ಜೀವದ ಗೆಳೆಯನಾದ ಕರ್ಣನನ್ನು ಕಂಡರೆ ಅಪರಿಮಿತವಾದ ಪ್ರೀತಿ ದುರ್ಯೋಧನನಿಗೆ ಇತ್ತು .
ಅವರಿಬ್ಬರನ್ನೂ ಏಕಕಾಲಕ್ಕೆ ಕಳೆದುಕೊಂಡ ದುರ್ಯೋಧನ ದುಃಖಕ್ಕೆ ಎಣೆಯಿಲ್ಲದಾಯಿತು . ಕರ್ಣನ ಶವದ ಮುಂದೆ ನಿಂತು ” ಎಲೈ ಕರ್ಣನೇ , ನಾನು , ದುಶ್ಯಾಸನ ಹಾಗೂ ನೀನು ಮೂವರೂ ಮೊದಲಿನಿಂದಲೂ ಮಹಾಮೈತ್ರಿಯಿಂದಿದ್ದೆವು .
ನಮ್ಮನ್ನಗಲಿ ಮೊದಲು ದುಶ್ಯಾಸನ ದೂರವಾದ . ಆನಂತರ ನಾನು ನೀನು ಇಬ್ಬರೂ ಇದ್ದೇವೆಂಬ ಸಮಾಧಾನವಿತ್ತು .
ಆದರೀಗ ನೀನೂ ಸಾಯುವ ಮೂಲಕ ನನ್ನನ್ನು ಆಗಲಿ ದೂರಾಗಿ ಎಲ್ಲಿಗೆ ಹೋದೆ , ಎಲೆ ಅಂಗಾಧಿಪತಿಯಾದ ಕರ್ಣನೇ ? ” ಎಂದು ದುಃಖ್ಖ ತಪತಪ್ತನಾದ.
ಶಬ್ದಾರ್ಥ
ನಿನ್ನ ಕಳೆಯಂ ಸುಯೋಧನ
ನಂ ನೋಡದೆ ನುಡಿಯದಪ್ಪಿಕೊಳ್ಳದೆ ಬೆಸನೇ
ನನ್ನದ ಜೀಯನ್ನದೆ ದೇ
ವೆನ್ನದೆ ಯೇಕುಸಿರಬರ್ಪೆಯಂಗಾಧಿಪತೀ
ಕರ್ಣನ ಸಾವನ್ನು ದುರ್ಯೋಧನನಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ . ಒಂದೇ ಪ್ರಾಣ ಎರಡು ಜೀವಗಳಂತಿದ್ದವರು ಅವರು , ದುರ್ಯೋಧನನನ್ನು ಕಂಡೊಡನೆ ಬಂದು ಅಪ್ಪಿಕೊಳ್ಳುತ್ತಿದ್ದ ಕರ್ಣ ಇಂದು ಶವವಾಗಿ ಕಣ್ಣೆದುರು ಬಿದ್ದಿದ್ದಾನೆ . ಇದನ್ನು ಕಂಡ ದುರ್ಯೋಧನನು ನಿನ್ನ ಗೆಳೆಯನಾದ ಸುಯೋಧನ ಬಂದಿರುವನು .
ಅವನನ್ನು ನೀನು ಕಣ್ಣೆರೆದು ನೋಡುತ್ತಿಲ್ಲವೇಕೆ ? ಆಪ್ಪಿಕೊಳ್ಳುತ್ತಿಲ್ಲವೇಕೆ ? ಏನಪ್ಪಣೆ ಮಹಾಸ್ವಾಮಿ ಎನ್ನುತ್ತಿಲ್ಲವೇಕೆ ? ಏಕೆ ಏನೂ ಮಾತನಾಡದೆ ಮೌನದಿಂದಿರುವೆ ಎಲೆ ಕರ್ಣನೇ ? ‘ ‘ ಎಂದು ಗೋಳಾಡಿದನು . ತನ್ನ ಸ್ನೇಹಿತನ ಮೌನ ನಿದ್ರೆಯನ್ನು ಅವನು ಸಹಿಸುತ್ತಿಲ್ಲ . ಅಂತಹ ಅನನ್ಯವಾದ ಸ್ನೇಹ ಅವರಿಬ್ಬರದು
ಶಬ್ದಾರ್ಥ Duryodhana Vilapa ದುರ್ಯೋಧನ ವಿಲಾಪ
ಅನ್ನತಂ ಲೋಭಂ ಭಯಮಂ
ಅನಿತಾಂ ನೀನಿರ್ದ ನಾಡೊಳರ್ಕುಮೆ ರವಿನಂ
ದನ ನನ್ನಿ ಚಾಗಮಣ್ಣೆ
ಬಿನಿತರ್ಕ೦ ನೀನೆ ಮೊತ್ತಮೊದಲಿಗನಾದಯ್
ಕರ್ಣನ ಗುಣ ವಿಶೇಷಗಳೆಲ್ಲವೂ ಸಾಲುಸಾಲಾಗಿ ದುರ್ಯೋಧನನಿಗೆ ನೆನಪಿಗೆ ಬರುತ್ತವೆ . ಅವನ ಶವದ ಮುಂದೆ ನಿಂತು ದುರ್ಯೋಧನ “ ಎಲೈ ಕರ್ಣನೇ ನೀನಿದ್ದ ರಾಜ್ಯದಲ್ಲಿ ಸುಳ್ಳೆಂಬುದಿಲ್ಲ . ಸ್ವಾರ್ಥ ಜಿಪುಣತನಗಳಿರುವುದಿಲ್ಲ . ನಿನ್ನಂತಹ ಪರಾಕ್ರಮಿಯಿದ್ದ ನಾಡಲ್ಲಿ ಭಯವೆಂಬುದಕ್ಕೆ ಸ್ಥಳವಿಲ್ಲ .
ಸತ್ಯದ ನಡೆಯಲ್ಲಿ , ತ್ಯಾಗದ ಗುಣದಲ್ಲಿ , ಪರಾಕ್ರಮದಲ್ಲಿ ನಿನಗಾರು ಸರಿಸಾಟಿಯಿಲ್ಲ . ನೀನು ಅದ್ವಿತೀಯ ” ಎಂದು ಮನದುಂಬಿ ಕರ್ಣನ ಗುಣಗಳನ್ನು ಕೊಂಡಾಡುವನು . ಸತ್ಯಮಾರ್ಗದಲ್ಲಿ ನಡೆದ , ಮಹಾತ್ಮಾಗಿಯಾಗಿ ‘ ದಾನಶೂರ’ನೆನಿಸಿದ , ಅದ್ವಿತೀಯ ಪರಾಕ್ರಮಿಯಾದ ತನ್ನ ಗೆಳೆಯ ಕರ್ಣನನ್ನು ದುರ್ಯೋಧನ ಶೋಕದ ನಡುವೆಯೂ ಹೊಗಳಿ ಮಾತನಾಡುವುದು ಅವನ ಅಪ್ಪಟ ಗುಣಪಕ್ಷಪಾತಿ ನಡೆವಳಿಕೆಯನ್ನು ತೋರಿದೆ ಎನ್ನಬಹುದು .
Duryodhana Vilapa ದುರ್ಯೋಧನ ವಿಲಾಪ
ಶಬ್ದಾರ್ಥ Duryodhana Vilapa ದುರ್ಯೋಧನ ವಿಲಾಪ
ಆನರಿವೆಂ ಪೃಥೆಯದವಳ
ದಾನವರಿಪುವಟವನರ್ಕನನಂ ದಿವ್ಯ
ಜ್ಞಾನಿಸಹದೇವನ ವಂ
ನೀನಾರ್ಗಂದಾರುಮದೆಯರಂಗಾಧಿಪತೀ
ಕರ್ಣನು ಕುಂತಿಯ ಹಿರಿಯ ಮಗನೆಂಬ ಜನ್ಮರಹಸ್ಯವನ್ನು ದುರ್ಯೋಧನ ಬಲ್ಲವನಾಗಿದ್ದನು . ಅದನ್ನೀಗ ಅವನ ಕಳೇಬರದ ಮುಂದೆ ನಿಂತು ಪ್ರಕಟಿಸುವುದನ್ನು ಕವಿ ರನ್ನನು ಈ ಪದ್ಯದಲ್ಲಿ ಚಿತ್ರಿಸಿದ್ದಾನೆ .
ದುರ್ಯೋಧನನು’ ಕರ್ಣನನ್ನು ಉದ್ದೇಶಿಸಿ ಮಾತನಾಡುತ್ತಾ ‘ನಿಜಕ್ಕೂ ನೀನು ಯಾರ ಮಗನೆಂಬ ಸಂಗತಿಯು ನನಗೆ ತಿಳಿದಿತ್ತು , ಕುಂತಿಗೆ ತಿಳಿದಿತ್ತು , ಅಲ್ಲದೆ ದಾನವರ ಶತ್ರುವಾದ ಶ್ರೀಕೃಷ್ಣನಿಗೂ ತಿಳಿದಿತ್ತು , ಸೂರ್ಯನಿಗೂ ಆರಿವಿತ್ತು. ಮಾತ್ರವಲ್ಲ , ದಿವ್ಯಜ್ಞಾನಿಯಾದ ಸಹದೇವನೂ ಈ ವಿಚಾರವನ್ನು ಬಲ್ಲವನಾಗಿದ್ದನು.
ಇವರನ್ನುಳಿದು ಬೇರಾರಿಗೂ ನೀನಾರೆಂಬ ಸಂಗತಿ ತಿಳಿದಿರಲಿಲ್ಲ ‘ ಎಂದು ಸ್ಮರಿಸಿಕೊಂಡನು . ಕುಂತಿಯ ಹಿರಿಯ ಮಗನೆಂಬುದು ತಿಳಿದಿದ್ದರೆ ಕರ್ಣನೇ ರಾಜನಾಗುವ ಅವಕಾಶವಿತ್ತು.
ತಿಳಿದಿದ್ದವರಾರು ಅವನಿಗೂ ಅದನ್ನು ಹೇಳಲಿಲ್ಲ . ಕರ್ಣ ದುರಂತ ನಾಯಕನೆನಿಸಿದನು . ದುರ್ಯೋಧನ ಈಗ ಅದನ್ನು ಸ್ಮರಿಸಿಕೊಂಡು ಪಶ್ಚಾತ್ತಾಪ ಪಡುವಂತಿದೆ .
ಶಬ್ದಾರ್ಥ Duryodhana Vilapa ದುರ್ಯೋಧನ ವಿಲಾಪ
ನೀನುಳ್ಳೋಡುಂಟು ರಾಜ್ಯಂ
ನೀನುಳ್ಕೊಡೆ ಪಟ್ಟಮುಂಟು ಬೆಳ್ಕೊಡೆಯುಂಟಯ್
ನೀನುಲ್ಲೊಡುಂಟು ಪೀಡೆಗೆ
ನೀನಿಲ್ಲದಿವೆಲ್ಲಮೊಳವೆ ಅಂಗಾಧಿಪತೀ
ಮರ್ಯೋಧನನಿಗೆ ಕರ್ಣನನ್ನು ಕಂಡರೆ ಗಾಢವಾದ ಸ್ನೇಹ – ಮಮಕಾರಗಳು , ಕರ್ಣ ಸತ್ತಿರುವುದರಿಂದ ಅವನಿಗೆ ತನ್ನ ಅಧಿಕಾರ , ಐಶ್ವರ್ಯ , ಬದುಕು – ಎಲ್ಲವೂ ಅರ್ಥಹೀನವಾಗಿ ಕಂಡವಂತೆ , ಕರ್ಣನಿಲ್ಲದ ಯಾವ ಸುಖವೂ ತನಗೆ ಬೇಡವೆಂದು ದುರ್ಯೋಧನ ಆಡುವ ಮಾತುಗಳನ್ನು ರನ್ನ ಈ ಮೇಲಿನ ಪದ್ಯದಲ್ಲಿ ವಿವರಿಸಿದ್ದಾನೆ . ದುರ್ಯೋಧನನಾಡುವ ಈ ಮಾತುಗಳಲ್ಲಿ ಅವರಿಬ್ಬರ ಅಗಾಧ ಸ್ನೇಹದ ಚಿತ್ರಣವಿದೆ .
ಎಲೈ ಕರ್ಣನೇ , ನೀನು ಬದುಕಿದ್ದರೆ ನನಗೆ ಈ ರಾಜ್ಯವಿದ್ದಂತೆ , ನೀನಿದ್ದರೆ ಮಾತ್ರ ನನ್ನ ರಾಜಪದವಿಗೆ ಅರ್ಥಬರುವುದು , ನೀನಿದ್ದರೆ ಮಾತ್ರ ಈ ಚಕ್ರವರ್ತಿತ್ವದ ಬೆಳೊಡೆಗೆ ಶೋಭೆ , ನೀನಿದ್ದರೆ ನನ್ನ ಸಿಂಹಾಸನ , ಪೀಳಿಗೆಗಳಿಗೆ ಮೆರಗು ನೀನಿಲ್ಲದೆ ಈ ಮೇಲಿನ ಎಲ್ಲವೂ ನನ್ನ ಪಾಲಿಗೆ ಇದ್ದೂ ಇಲ್ಲದಂತೆ ಅಂಗಾಧಿಪತಿ ‘ ‘ ಎಂದು ದುರ್ಯೋಧನ ಹೇಳುವನು .
ಶಬ್ದಾರ್ಥ
ಹರಿ ಬೇಡ ಕವಚಮಂ ನೀ
ವರಿದಿತ್ತಯ್ ಕೊಂತಿ ಬೇಡೆ ಬೆಗಡದೆ ಕೊಟ್ಟಯ್
ಪುರಿಗಣೆಯಂ ನಿನಗಳ ಕಸ
ವರಿಗಲಿ ಮೆಯ್ದಲಿಯುಮಾವನಂಗಾಧಿಪತೀ
ಪ್ರಸ್ತುತ ಪದ್ಯದಲ್ಲಿ ದುರ್ಯೋಧನನು ದಾನಶೂರ ವೀರಕರ್ಣನ ದಾನ ಮತ್ತು ತ್ಯಾಗದ ಗುಣಗಳ ಗುಣಗಾನ ಮಾಡು ತ್ತಿದ್ದಾನೆ . ದುರ್ಯೋಧನನು ಕರ್ಣನನ್ನು ಉದ್ದೇಶಿಸಿ ಈ ರೀತಿ ಹೇಳುವನು . “ ಎಲೆ ಕರ್ಣನೇ , ನೀನು ದೇವೇಂದ್ರನು ಬಂದು ಜನ್ಮದತ್ತವಾಗಿ ಬಂದ ನಿನ್ನ ರಕ್ಷಾಕವಚವನ್ನು ದಾನವಾಗಿ ಕೇಳಿದಾಗ , ದೇಹಕ್ಕಂಟಿದ ಕವಚವನ್ನು ಹಿಂದುಮುಂದು ನೋಡದೆ ಕತ್ತರಿಸಿಕೊಟ್ಟೆ .
ಅದೇ ರೀತಿ ಕುಂತಿಯು ದಿವ್ಯಾಸ್ತ್ರವನ್ನು ನ್ಯಾಸವಾಗಿ ತೊಟ್ಟ ಬಾಣವನ್ನು ಮತ್ತೆ ತೊಡುವುದಿಲ್ಲವೆಂದು ಭಾಷೆ ಕೇಳಿದಾಗ ಮರುಮಾತಾಡದೆ ನೀಡಿದೆ . ಹೆದರದೆ ಇಂತಹ ವಾಗ್ದಾನ ಮಾಡಿದ ನಿನ್ನಂತಹ ಯುದ್ಧವೀರನಾಗಲೀ ಸಂಪತ್ತನ್ನು ದಾನ ಮಾಡುವ ದಾನವೀರನಾಗಲೀ ಬೇರೆ ಯಾರಿದ್ದಾರೆ ? ‘ ಎಂದು ಕರ್ಣನ ದಾನ – ಶೂರ ಗುಣಗಳನ್ನು ಕೊಂಡಾಡುವನು .
ಶಬ್ದಾರ್ಥ
ಎಂದು ಶೋಕಾಂಧಂ ಕರ್ಣವಿರಹಿತನಪ್ಪುದರಿಂ ಸಂಕ್ರಂದನನಂದನಂಗೆ ಮುಳಿದು ಶರಶಯನಗತನಾಗಿರ್ಪ ನದೀ ನಂದನನ ಚರಣಾರವಿಂದ ವಂದನಂಗೆಯ್ಯಲೆಂದು ಗಾಂಧಾರೀನಂದನನೆಯೆವಂದಂ
ಹೀಗೆ ಕರ್ಣನ ಸ್ನೇಹದಿಂದ ವಂಚಿತವಾಗಿ ದುಃಖತಪ್ತನಾದ , ಕರ್ಣನ ಅಗಲಿಕೆಯನ್ನು ಸಹಿಸದ ಸ್ನೇಹವಿರಹಿ ಯಾದ ದುರ್ಯೋಧನನಿಗೆ ಕರ್ಣನ ಸಾವಿಗೆ ಕಾರಣನಾದ ಇಂದ್ರನ ಮಗ ಅರ್ಜುನನ ಮೇಲೆ ಕೋಪ ಉಕ್ಕಿ ಬಂದಿತು . ಆದರೂ
ಮೊದಲು ಶರಶಯ್ಕೆಯಲ್ಲಿ ಮಲಗಿರುವ ಭೀಷ್ಮಾಚಾದ್ಯರ ಚರಣಾರವಿಂದಗಳಿಗೆ ನಮಸ್ಕರಿಸಲೆಂದು ದುರ್ಯೋಧನ ಮುಂದೆ ಸಾಗಿದನು.
ಶಬ್ದಾರ್ಥ
ಹೀಗೆ ಈ ದುರ್ಯೋಧನನು ತನ್ನ ಬಂಧುಬಾಂಧವರನ್ನೆಲ್ಲಾ ಕಳೆದುಕೊಂಡು ಏಕಾಂಗಿಯಾಗಿ ದುಃಖತಪ್ಪ ರಣರಂಗವನ್ನು ಹಾದು ಹೋಗುವ ಚಿತ್ರಣವನ್ನು ಕವಿ ರನ್ನನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ . ಶೋಕರಸ ಮಡುಗಟ್ಟಿ ನಿಂತಿದೆ ಎನ್ನಬಹುದು .
Duryodhana Vilapa ದುರ್ಯೋಧನ ವಿಲಾಪ
ಒಂದು ವಾಕ್ಯದಲ್ಲಿ ಉತ್ತರಿಸಿ Duryodhana Vilapa ದುರ್ಯೋಧನ ವಿಲಾಪ
Duryodhana Vilapa ದುರ್ಯೋಧನ ವಿಲಾಪ
ರುಪತಿ ರಣರಂಗದಲ್ಲಿ ಏನನ್ನು ಮೆಟ್ಟಿ ನಡೆದನು ?
ಕುರುಪತಿಯು ರಣರಂಗದಲ್ಲಿ ಭಾರಿ ಹೆಣಗಳನ್ನು ಮೆಟ್ಟಿ ನಡೆದನು
ಪಿನಾಕಪಾಣಿ ಎಂದರೆ ಯಾರು ?
ಪಿನಾಕಪಾಣಿ ಎಂದರೆ ಯಾರು ?
ಚಕ್ರವ್ಯೂಹವನ್ನು ರಚಿಸಿದವನು ಯಾರು ?
ರು ದ್ರೋಣಾಚಾರ್ಯರು ಚಕ್ರವ್ಯೂಹವನ್ನು ರಚಿಸಿದ್ದರು
ತಂದೆಗೆ ಜಲಾಂಜಲಿಯನ್ನು ಯಾರು ಕೊಡಬೇಕು ?
೦ ದೆಗೆ ಮಗನಾದವನು ಜಲಾಂಜಲಿಯನ್ನು ಕೊಡಬೇಕು
ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ ?
ಸಹದೇವನನ್ನು ‘ ದಿವ್ಯಜ್ಞಾನಿ ‘ ಎಂದು ಕರೆಯಲಾಗಿದೆ
ಅಂಗಾಧಿಪತಿ ಯಾರು ?
ಕರ್ಣನು ಅಂಗಾಧಿಪತಿ ಎನಿಸಿದ್ದನು
ಹರಿಯು ಕರ್ಣನಿಂದ ಬೇಡಿದ್ದೇನು ?
ಹರಿಯು ಕರ್ಣನಿಂದ ರಕ್ಷಾಕವಚವನ್ನು ಬೇಡಿ ಪಡೆದನು
ಹೆಚ್ಚುವರಿ ಪ್ರಶ್ನೆಗಳು Duryodhana Vilapa ದುರ್ಯೋಧನ ವಿಲಾಪ
ರನ್ನ ಕವಿಯ ಜನ್ಮಸ್ಥಳ ಯಾವುದು ?
ನ್ನ ಕವಿಯ ಜನ್ಮಸ್ಥಳ ಬಿಜಾಪುರ ( ಈಗಿನ ಬಾಗಲಕೋಟೆ ) ಜಿಲ್ಲೆಯ ಮುಧೋಳ ( ಮುದುವಳಲು )
ಕುಂಭಸಂಭವ ಎಂದರೆ ಯಾರು ?
ಜನಿಸಿದ್ದು ಕಳಶದಲ್ಲಿ . ಆದ್ದರಿಂದ ಅವನಿಗೆ ಕುಂಭಸಂಭವ ಎಂಬ ಹೆಸರಿತ್ತು
ಭಾನುಮತೀನಂದನ ಯಾರು ?
ಭಾನುಮತೀನಂದನ ಎಂದರೆ ಲಕ್ಷಣಕುಮಾರ
ಕಸವರಗಲಿ ‘ ಎಂದು ದುರ್ಯೋಧನನು ಯಾರನ್ನು ಕರೆದಿದ್ದಾನೆ ?
ದುರ್ಯೋಧನ ಕರ್ಣನನ್ನು ಕಸವರಗಲಿ ಎಂದು ಕರೆದಿದ್ದಾನೆ
ನದೀನಂದನ ಯಾರು ?
ದೀನಂದನ ಎಂದರೆ ಭೀಷ್ಮಾಚಾರ್ಯರು
ಗಾಂಡೀವಿ ಎಂಬುದು ಯಾರಿಗಿದ್ದ ಹೆಸರು ?
ಗಾಂಡೀವಿ ಎಂಬುದು ಅರ್ಜುನನಿಗಿದ್ದ ಹೆಸರು
ಅಹಿಕೇತನ ಎಂದರೆ ಯಾರು ?
ಅಹಿಕೇತನ ( ಸರ್ವಧ್ವಜ ) ಎಂದರೆ ದುರ್ಯೋಧನ
ದ್ರೋಣನ ತಲೆಯನ್ನು ಕತ್ತರಿಸಿದವರು ಯಾರು ?
ದುಷ್ಟನಾದ ಧೃಷ್ಟದ್ಯುಮ್ನನು ದ್ರೋಣನ ತಲೆಯನ್ನು ಕತ್ತರಿಸಿ ಹಾಕಿದ್ದನು .
ಕ್ರವ್ಯೂಹವನ್ನು ಭೇದಿಸಿದ ಸಾಹಸಿಗ ಯಾರು ?
ಅಭಿಮನ್ಯುವು ಚಕ್ರವ್ಯೂಹವನ್ನು ಭೇದಿಸಿದ ಸಾಹಸಿಗ
ದುರ್ಯೋಧನನ ಪುತ್ರನ ಹೆಸರೇನು ?
ಲಕ್ಷಣಕುಮಾರ ಎಂಬುದು ದುರ್ಯೋಧನನ ಪುತ್ರನ ಹೆಸರು
ಲಕ್ಷಣಕುಮಾರನ ತಾಯಿ ಯಾರು ?
ಭಾನುಮತಿಯು ಲಕ್ಷಣಕುಮಾರನ ತಾಯಿ
ಕರ್ಣನು ಯಾರ ಮಗ ?
ಕರ್ಣನು ಸೂರ್ಯ ಮತ್ತು ಕುಂತಿಯರ ಪುತ್ರ
ಕುಂತಿಯು ಕರ್ಣನಿಂದ ಏನನ್ನು ಬೇಡಿದಳು ?
ಕುಂತಿಯು ಕರ್ಣನಿಂದ ಪುರಿಗಣೆ ( ದಿವ್ಯಾಸ್ತ ) ಯನ್ನು ನ್ಯಾಸವಾಗಿ ಪಡೆದಳು .
Duryodhana Vilapa ದುರ್ಯೋಧನ ವಿಲಾಪ
ಎರಡು – ಮೂರು ವಾಕ್ಯ ದಲ್ಲಿ ಉತ್ತರಿಸಿ Duryodhana Vilapa ದುರ್ಯೋಧನ ವಿಲಾಪ
ರಣರಂಗದಲ್ಲಿ ಬಿದ್ದಿದ್ದ ಅಭಿಮನ್ಯುವಿನ ಕಳೇಬರ ಯಾವ ರೀತಿ ಕಾಣುತ್ತಿತ್ತು ?
ದುರ್ಯೋಧನನು ಕಂಡಾಗ ಅಭಿಮನ್ಯುವಿನ ಶವ ರಣರಂಗದಲ್ಲಿ ಅರೆ ತೆರೆದು ಅರೆ ಮುಚ್ಚಿದ್ದ ಕಣ್ಣರೆಪ್ಪೆಗಳು , ತುಂಡರಿಸಿ ಬಿದ್ದಿದ್ದ ಕೈಗಳು , ಕಚ್ಚಿದ ದವಡೆ , ಶತ್ರುಗಳ ಬಾಣ ಪ್ರಹಾರಕ್ಕೆ ಸಿಕ್ಕಿ ಜರ್ಝರಿತವಾಗಿದ್ದ ದೇಹವು ರಕ್ತದ ಸಮುದ್ರದಲ್ಲಿ ಅದ್ದಿದಂತೆ ” ಬಿದ್ದಿತ್ತು .
ದುಶ್ಯಾಸನನು ಅಣ್ಣನಿಗೆ ತೋರಿದ ವಿನಯಶೀಲತೆ ಯಾವುದು ?
ದುಶ್ಯಾಸನನಿಗೆ ತನ್ನಣ್ಣ ದುರ್ಯೋಧನನೆಂದರೆ ತುಂಬಾ ಪ್ರೀತಿ – ಗೌರವ , ತಾಯಿಯ ಎದೆ ಹಾಲಿರಲಿ , ಸೋಮಾಮೃತವಿರಲಿ , ದಿವ್ಯ ಭೋಜನವಿರಲಿ ಯಾವುದನ್ನೂ ಅಣ್ಣ ಸ್ವೀಕರಿಸಿದ ಮೇಲೆ ತಾನು ಸ್ವೀಕರಿಸುವ ವಿನಯಶೀಲತೆಯನ್ನು ಅಣ್ಣನಿಗೆ ತೋರಿದ್ದನು .
ಕರ್ಣನ ಜನ್ಮರಹಸ್ಯವನ್ನು ಯಾರು ಯಾರು ಅರಿತಿದ್ದರು ?
ಕರ್ಣನ ಜನ್ಮರಹಸ್ಯವು ದುರ್ಯೋಧನನಿಗೆ ತಿಳಿದಿತ್ತು . ಅಲ್ಲದೆ ತಾಯಿ ಕುಂತಿ , ತಂದೆ ಸೂರ್ಯದೇವ , ಶ್ರೀಕೃಷ್ಣ ಮತ್ತು ದಿವ್ಯಜ್ಞಾನಿಯಾದ ಸಹದೇವರು ಅರಿತಿದ್ದರು
ದುರ್ಯೋಧನನು ಕರ್ಣನ ದಾನಗುಣವನ್ನು ಹೇಗೆ ಪ್ರಶಂಸಿಸಿದ್ದಾನೆ ?
ದುರ್ಯೋಧನನು ಕರ್ಣನ ದಾನಗುಣವನ್ನು ಕೊಂಡಾಡುತ ನೀನು ದೇವೇಂದ್ರ ಬಂದು ಕೇಳಿದಾಗ ನಿನಗೆ ಜನ್ಮದ ವಾಗಿ ದೇಹಕ್ಕಂಟಿಕೊಂಡು ಬಂದಿದ್ದ ಕವಚವನ್ನೇ ಹಿಂದುಮುಂದು ನೋಡದೆ ಕತ್ತರಿಸಿಕೊಟ್ಟೆ , ಕುಂತಿಯು ದಿವ್ಯಾಸ್ತ್ರವನ್ನು ನ್ಯಾಸವಾಗಿ ಕೇಳಲು , ಮರುಮಾತಾಡದೆ ವಾಗ್ದಾನ ಮಾಡಿದೆ . ನಿನ್ನಂತಹ ಯುದ್ಧವೀರನಾಗಲೀ ಸಂಪತ್ತನ್ನು ದಾನಮಾಡುವ ದಾನಶೂರನಾಗಲೀ ಬೇರೆ ಯಾರಿದ್ದಾರೆ ? ‘ ‘ ಎಂದು ಹೊಗಳಿದನು .
ರಣರಂಗದಲ್ಲಿ ಬಿದ್ದಿದ್ದ ದ್ರೋಣಾಚಾರ್ಯರ ಕಳೇಬರ ಯಾವ ರೀತಿ ಕಾಣುತ್ತಿತ್ತು ?
ನೂರಾರು ಬಾಣಗಳ ಜಾಲಕ್ಕೆ ಸಿಕ್ಕಿ ಜರ್ಝರಿತವಾಗಿ ದ್ರೋಣಾಚಾರ್ಯರು ಸತ್ತುಬಿದ್ದಿದ್ದರು . ಅಲ್ಲದೆ ಸ್ವಭಾವತಃ ದುಷ್ಪಪ್ರವೃತ್ತಿಯವನಾದ ದೃಷ್ಟದ್ಯುಮ್ನನ ಕೈಯಿಂದ ತಲೆಕಡಿಸಿಕೊಂಡು ದ್ರೋಣಾಚಾರ್ಯರು ಸತ್ತು ಬಿದ್ದಿದ್ದರು .
5-6 ವಾಕ್ಯಗಳಲ್ಲಿ ಉತ್ತರಿಸಿ Duryodhana Vilapa ದುರ್ಯೋಧನ ವಿಲಾಪ
ದುರ್ಯೋಧನ ರಣರಂಗದಲ್ಲಿ ನಡೆದು ಬಂದ ಬಗೆಯನ್ನು ಕವಿ ಹೇಗೆ ವರ್ಣಿಸಿದ್ದಾನೆ ?
ದುರ್ಯೋಧನನು ಸಂಜಯನೊಡನೆ ರಣರಂಗದಲ್ಲಿ ನಡೆದು ಬರುವ ಚಿತ್ರಣವನ್ನು ಕವಿ ಭೀಭತ್ಸವಾಗಿ ವರ್ಣಿಸಿರುವ ನೆನ್ನಬಹುದು . ಕುರುಕ್ಷೇತ್ರ ಯುದ್ಧದಲ್ಲಿ ಲಕ್ಷಾಂತರ ಜೀವಹಾನಿಯಾದುದರಿಂದ ರಕ್ತದ ಸಮುದ್ರವೇ ಅಲ್ಲಿತ್ತು , ದುರ್ಯೋಧನನು ಮುರಿದು ನೆಲದಲ್ಲಿ ಹೂತ ಆಯುಧಗಳ ಮೇಲೆ ಕಾಲಿಟ್ಟ ಪರಿಣಾಮ ಪಾದಗಳು ನೊಂದು ಹೆಜ್ಜೆಯಿಡಲು ಜಾಗವಿಲ್ಲದೆ , ಭಾರಿ ಹಣಗಳನ್ನೇ ಮೆಟ್ಟಿ ನಡೆಯಬೇಕಿತ್ತು .
ಪರ್ವತದಂತೆ ಬಿದ್ದಿದ್ದ ಆನೆಗಳ ಶವವನ್ನು ಏರಿ ಏರಿ , ರಕ್ತದ ಕಾಲುವೆಗಳನ್ನು ದಾಟಿ ನಾಟಿ ಮುಂದುವರೆಯಬೇಕಾದ ಸಂದರ್ಭವೊದಗಿತು . ದೊಡ್ಡ ಬಳ್ಳಿಗಳಂತೆ ನೆಲದಲ್ಲಿ ಚಾಚಿಕೊಂಡಿದ್ದ ಆನೆಗಳ ಸೊಂಡಿಲು ಕಾಲಿಗೆ ತಡವರಿಸಿದ ಪರಿಣಾಮ ನೆಲಕ್ಕೆ ಬೀಳದಂತೆ ದುರ್ಯೋಧನನು ಸಂಜಯನ ಹೆಗಲಿನ ಆಸರೆಯನ್ನು ಅವಲಂಬಿಸಿ ಮುಂದೆ ನಡೆದನೆ ೦ ದು ಕವಿಯು ವರ್ಣಿಸಿದ್ದಾನೆ .
ದ್ರೋಣರ ಕಳೇಬರವನ್ನು ಕಂಡು ದುರ್ಯೋಧನ ಹೇಗೆ ದುಃಖಿಸುತ್ತಾನೆ ?
ಸ್ವಭಾವತಃ ದುಷ್ಟಪ್ರವೃತ್ತಿಯವನಾದ ಧೃಷ್ಟದ್ಯುಮ್ನನ ಕೈಗೆ ಸಿಕ್ಕುತಲೆ ಕತ್ತರಿಸಿಕೊಂಡು ಬಿದ್ದಿದ್ದ ಭರದ್ವಾಜ ವಂಶಜರಾದ ದ್ರೋಣಾಚಾರರ ಕಳೇಬರವನ್ನು ಕಂಡು ದುರ್ಯೋಧನನಿಗೆ ಅಪಾರವಾದ ಶೋಕವುಂಟಾಯಿತು .
ಅವನು ದ್ರೋಣರ ಕಳೇಬರ ದೆದುರು ನಿಂತು ‘ ‘ ಅಯ್ಯೋ , ನೀವು ಬಿಲ್ವಿದ್ಯಾಪಾರಂಗತರೆಂಬುದನ್ನು ಲೋಕವೇ ಬಲ್ಲುದು , ಧನುರ್ವಿದ್ಯೆಯಲ್ಲಿ ನಿಮಗಿರುವ ಪ್ರಾವೀಣ್ಯತೆಗೆ ಅರ್ಜುನ ಮಾತ್ರವಲ್ಲ , ಸಾಕ್ಷಾತ್ ಶಿವನೂ ಎದುರಿಸಿ ನಿಮ್ಮನ್ನು ಗೆಲ್ಲಲಾರ , ನೀವು ವೀರಾವೇಶದಿಂದ ಹೋರಾಡಿ , ಪಾಂಡವರನ್ನು ಜಯಿಸದೆ ಉದಾಸೀನ ತೋರಿದಿರೆಂದು ನಾನು ಯೋಚಿಸುವುದಿಲ್ಲ .
ನನ್ನ ಹಣೆಬರಹದಿಂದಾಗಿ ನೀವು ಜಯಿಸ ಲಿಲ್ಲವಷ್ಟೇ ನಿಮ್ಮಂತಹ ಪರಾಕ್ರಮಿಗೆ ಸಾವು ಹೇಗೆ ಸಂಭವಿಸಿತೋ ಕಾಲ ತಿಳಿಯದಾಗಿದೆ ‘ ಎಂದು ಪರಿಪರಿಯಾಗಿ ದುಃಖಿಸಿದನು .
ಅಭಿಮನ್ಯುವಿನ ಶೌರ್ಯ – ಸಾಹಸಗಳನ್ನು ದುರ್ಯೋಧನ ಹೇಗೆ ಹೊಗಳುತ್ತಾನೆ ?
ಅಭಿಮನ್ಯುವು ಅರ್ಜುನನ ಮಗ , ದುರ್ಯೋಧನನಿಗೆ ಶತ್ರು ಪಕ್ಷದವನು . ಆದರೂ ದುರ್ಯೋಧನ ಅಭಿಮನ್ಯುವಿನ ಶವವನ್ನು ಕಂಡಾಗ ಅವನ ಶೌರ್ಯ – ಸಾಹಸಗಳನ್ನು ಮನದುಂಬಿ ಹೊಗಳುತ್ತಾನೆ . ದ್ರೋಣರು ಚಕ್ರವ್ಯೂಹವನ್ನು ರಚಿಸಿದಾಗ ಇತರರಿಗೆ ಅದನ್ನು ಭೇದಿಸಲು ಸಾಧ್ಯವಾಗಲಿಲ್ಲ .
ಆಗ ಚಿಕ್ಕವಯಸ್ಸಿನ ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸಿ ಹಲವಾರು ರಾಜ ರನ್ನು ಮಣ್ಣುಮುಕ್ಕಿಸಿದ . ಆದ್ದರಿಂದ ಅವನಿಗೆ ಸಮಾನನಾದ ವೀರ ಮತ್ತೊಬ್ಬನಿಲ್ಲವೆಂದು ದುರ್ಯೋಧನ ಕೊಂಡಾಡುತ್ತಾನೆ . ಬಲ ಮತ್ತು ಪರಾಕ್ರಮಗಳಲ್ಲಿ ಅಭಿಮನ್ಯುವಿಗೆ ಸರಿಸಾಟಿಯಾದವರು ಮತ್ತೊಬ್ಬರಿಲ್ಲ .
ಅವನ ಸಾಹಸದಲ್ಲಿ ಒಂದಂಶವಾದರೂ ತನ್ನಲ್ಲಿದ್ದರೆ ಅಭಿಮನ್ಯುವಿನಂತಹ ವೀರ ಮರಣ ತನಗೂ ಬರಲೆಂದು ದುರ್ಯೋಧನ ಪ್ರಾರ್ಥಿಸುತ್ತಾನೆ . ಇದು ಅಭಿಮನ್ಯುವಿನ ಸಾಹಸ – ಪರಾಕ್ರಮಗಳಿಗೆ ದುರ್ಯೋಧನ ತೋರಿದ ಗೌರವವೆನ್ನಬಹುದು .
ದುರ್ಯೋಧನನು ದುಶ್ಯಾಸನನನ್ನು ಕಂಡು ವ್ಯಕ್ತಪಡಿಸಿದ ಭಾವನೆಗಳಾವುವು ?
ದುಶ್ಯಾಸನನನ್ನು ಕಂಡರೆ ದುರ್ಯೋಧನನಿಗೆ ತುಂಬಾ ಪ್ರೀತಿಯಿತ್ತು . ಅವರಿಬ್ಬರೂ ಅಣ್ಣ – ತಮ್ಮಂದಿರಿಗಿಂತ ಹೆಚ್ಚಾಗಿ ಸ್ನೇಹಿತರಂತಿದ್ದರು . ಚಿಕ್ಕಂದಿನಿಂದ ವಿನಯವಂತನಾಗಿದ್ದ , ತನಗಾಗಿ ಪ್ರಾಣ ತೊರೆದ ದುಶ್ಯಾಸನನ ಶವವನ್ನು ಕಂಡು
ದುರ್ಯೋಧನ ತುಂಬಾ ಸಂಕಟಪಡುತ್ತಾನೆ .
ತನ್ನ ತಮ್ಮದುಶ್ಯಾಸನನನ್ನು ಕೊಂದವನನ್ನು ಇನ್ನೂ ಜೀವಂತವಾಗಿ ಉಳಿಸಿರುವೆನಲ್ಲಾ ಎಂದು ತನ್ನ ಬಗ್ಗೆ ತಾನೇ ನಾಚಿಕೆಪಡುತ್ತಾನೆ . ತಾಯಿಯ ಎದೆಹಾಲು ಕುಡಿದದ್ದು , ಸೋಮಾಮೃತ – ದಿವ್ಯ ಭೋಜನಗಳನ್ನು ಸೇವಿಸಿದ್ದು ತಾನೇ ಮೊದಲು . ಆನಂತರವಷ್ಟೇ ದುಶ್ಯಾಸನ ಸೇವಿಸಿದ್ದು , ಚಿಕ್ಕಂದಿನಿಂದ ಎಂದೂ ಈ ಕ್ರಮ ತಪ್ಪಿರಲಿಲ್ಲ . ಸಾವಿನಲ್ಲೂ ಹಿರಿಯನಾದ ತಾನು ಸತ್ತ ಬಳಿಕವಷ್ಟೇ ಕಿರಿಯನಾದ ದುಶ್ಯಾಸನ ಸಾಯಬೇಕಿತ್ತು .
ಇಲ್ಲೇಕೆ ನನ್ನ ತಮ್ಮ ಕ್ರಮಭಂಗ ಮಾಡಿದ ? ಎಂದೆಲ್ಲಾ ಗೋಳಾಡುವ ದುರ್ಯೋಧನನಿಗೆ ತುಂಬಾ ಹೊತ್ತು ನಿಂತು ತನ್ನ ತಮ್ಮನ ಶವವನ್ನು ನೋಡಲು ಸಾಧ್ಯವಾಗಲಿಲ್ಲ .
ಕರ್ಣನ ಉದಾತ್ತ ಗುಣಗಳನ್ನು ದುರ್ಯೋಧನ ಹೇಗೆ ಕೊಂಡಾಡಿದ್ದಾನೆ ?
ದುರ್ಯೋಧನ ಕರ್ಣನ ಗುಣವಿಶೇಷಗಳನ್ನು ಬಹುವಾಗಿ ಕೊಂಡಾಡಿದ್ದಾನೆ . ಕರ್ಣನು ಸತ್ಯ , ತ್ಯಾಗ ಮತ್ತು ಪರಾಕ್ರಮ ದಲ್ಲಿ ಮೊತ್ತಮೊದಲಿಗನೆಂದು ದುರ್ಯೋಧನ ಸ್ಮರಿಸುತ್ತಾನೆ . ಮಾತ್ರವಲ್ಲ ಕರ್ಣನಿರುವ ರಾಜ್ಯದಲ್ಲಿ ಸುಳ್ಳಿಗಾಗಲಿ , ಲೋಭಕ್ಕಾಗಲಿ , ಭಯಕ್ಕಾಗಲಿ ಸ್ಥಳವಿಲ್ಲವೆಂದಿದ್ದಾನೆ .
ಇಂದ್ರನು ಬಂದು ಕರ್ಣನ ಜನ್ಮದತ್ತ ರಕ್ಷಾಕವಚವನ್ನು ದಾನವಾಗಿ ಬೇಡಿದಾಗ ಅದನ್ನು ಕತ್ತರಿಸಿಕೊಟ್ಟ ದಾನಶೂರ ಕರ್ಣ . ಅದೇ ರೀತಿ ಕುಂತಿಯು ತೊಟ್ಟ ಬಾಣವನ್ನು ತೊಡೆನೆಂಬ ಭಾಷೆ ಕೇಳಿದಾಗ ಹಿಂದು ಮುಂದು ನೋಡದೆ ನೀಡಿದವನು . ಪರಾಕ್ರಮದಲ್ಲಾಗಲೀ , ದಾನಗುಣದಲ್ಲಾಗಲಿ ಕರ್ಣನಿಗೆ ಸರಿಸಮಾನನಾದವನು ಮತ್ತೊಬ್ಬನಿಲ್ಲ ಎಂಬುದು ದುರ್ಯೋಧನನ ಅಭಿಪ್ರಾಯವಾಗಿದೆ .
ಕರ್ಣನಂತಹ ಸ್ನೇಹಿತನಲ್ಲದೆ ತನಗೆ ರಾಜ್ಯವಾಗಲಿ , ಪಟ್ಟವಾಗಲಿ , ಬೆಳ್ಕೊಡೆಯಾಗಲಿ ಅರ್ಥಹೀನ , ಬದುಕಿಗೆ ಕರ್ಣನಂತಹ ಉದಾತ್ತ ಗುಣಗಳ ಗಣಿಗಳು ಬೇಕೆಂಬ ಆಶಯವನ್ನು ದುರ್ಯೋಧನ ವ್ಯಕ್ತಪಡಿಸುತ್ತಾನೆ .
“ ಉದಾತ್ತನಾಯಕ ದುರ್ಯೋಧನ ” ಎಂಬ ರನ್ನನ ಮಾತನ್ನು ಕಾವ್ಯಭಾಗದ ಹಿನ್ನೆಲೆಯಲ್ಲಿ ವಿಮರ್ಶಿಸಿ
ರನ್ನನ ದುರ್ಯೋಧನ ಧೀರನೂ ಹೌದು ಉದಾತ್ತನೂ ಹೌದು . ಯುದ್ಧದಲ್ಲಿ ತನ್ನ ಸಮಸ್ತ ಬಂಧುಬಾಂಧವರನ್ನು ಕಳೆದು ಕೊ ೦ ಡ ದುರ್ಯೋಧನ ಭೀಷರನ್ನು ಕಾಣಲು ರಣರಂಗದಲ್ಲಿ ಹೋಗುತ್ತಿರುತ್ತಾನೆ . ಹೆಣಗಳನ್ನು ಎಡವುತ್ತಾ , ದಾಟುತ್ತಾ ಸಾಗುವ ದುರ್ಯೋಧನನ ಅಂತರಂಗವು ಅಭಿಮನ್ಯು , ಮಗ ಲಕ್ಷಣ , ಸೋದರ ದುಶ್ಯಾಸನ , ಗುರು ದ್ರೋಣ ಹಾಗು ಮಿತ್ರ ಕರ್ಣನ ಛಿದ್ರಗೊಂಡ ಶರೀರ ನೋಡಿದಾಗ ಕಲಕಿಹೋಗುತ್ತದೆ .
ತನ್ನ ಪರಮವೈರಿ ಅರ್ಜುನನ ಮಗನ ಶವದೆದುರು ನಿಂತ ದುರ್ಯೋಧನ ನಿನ್ನಂತಹ ಪರಾಕ್ರಮಿ ಅಸಂಭವ . ನಿನ್ನ ಸಾಹಸ ಹಾಗು ಮರಣದ ಒಂದಂಶವಾದರು ನನಗೆ ಪ್ರಾಪ್ತವಾಗಲಿ ಎಂದು ಪ್ರಾಂಜಲ ಮನಸ್ಸಿನಿಂದ ಪ್ರಾರ್ಥಿಸುತ್ತೇನೆ . ಗುರು ದ್ರೋಣರಂತಹವರು ಹತರಾದುದಕ್ಕೆ ಅವರ ಪರಾಕ್ರಮವನ್ನು ಶಂಕಿಸದೆ ತನ್ನ ವಿಧಿಯನ್ನು ಹಳಿಯುತ್ತಾನೆ . ಸೋತ ದುಶ್ಯಾಸನನಿಗಾಗಿ ಮರುಗುವುದು ಸಹಜವೆನಿಸಿದರು ಕರ್ಣನ ಜನ್ಮರಹಸ್ಯವನ್ನು ಬಲ್ಲ ಮರ್ಯೋಧನ ಕಿಂಚಿತ್ತೂ ದ್ವೇಷಭಾವವಿಲ್ಲದ ಕರ್ಣನಿಲ್ಲದ ರಾಜ್ಯಕ್ಕೆ ಅರ್ಥವಿಲ್ಲವೆಂದು ಸಂಕಟಪಡುತ್ತಾನೆ .
ಇಂದ್ರನಿಗೆ ಕವಚಕುಂಡಲವನ್ನು ಹೆತ್ತ ತಾಯಿಗೆ ಬಾಣವನ್ನು ನೀಡಿದ ಕರ್ಣನ ದಾನಗುಣಕ್ಕೆ ಸರಿಸಾಟಿಯಾದವರು ಯಾರೆ ೦ ದು ಶೋಕಿಸುತ್ತಾನೆ . ಹೀಗೆ ದುರ್ಯೋಧನ ಇಲ್ಲಿ ನಮಗೆ ಛಲದಂಕಮಲ್ಲನಾಗಿ ಕಾಣದೆ ದಯಾದ್ರ್ರ ಹೃದಯಿಯಾದ , ಗುಣಗ್ರಾಹಿಯಾದ ಉದಾತ್ತನಾಯಕನಾಗಿ ಕಾಣಿಸುತ್ತಾನೆ . ನಿಜಕ್ಕೂ ಧನ್ನನ ದುರ್ಯೋಧನ ‘ ಮಹಾನುಭಾವನೆ ‘ ಸರಿ .
Duryodhana Vilapa ದುರ್ಯೋಧನ ವಿಲಾಪ
ಪದ್ಯಗಳ ಸ್ವಾರಸ್ಯ / ಭಾವಾರ್ಥ Duryodhana Vilapa ದುರ್ಯೋಧನ ವಿಲಾಪ
ಅರಿಯಮೆ ಬಿಲ್ಲ ಬಿನ್ನಣಕಿ ಗಾಂಡಿವಿಯ ಪಿನಾಕ ರಾಣಿಯಂ
ನೆರೆಯನಿದಿರ್ಟ್ ನಿಮ್ಮೊಡನೆ ಕಾದಿ ಗೆಲಲ್ಕದು ನಿಮ್ಮುಪೇಕ್ಷೆಯಂ
ದರಿಯೆನಿದನ್ನ ಕರ್ಮವಶಮಂದೆಯಂ ನಿಮಗಿಂತು ಸಾವುನೋ
ತೆರೆ ದಿನಕಾರಣಂ ನೆಯ ಸಂಭವಿಸಿರ್ದುದೂ ಕುಂಭಸಂಭವಾ
ಕನ್ನಡದ ರತ್ನತ್ರಯರಲ್ಲಿ ಒಬ್ಬನೆನಿಸಿರುವ ಶಕ್ತಿಕವಿ ರನ್ನನು ರಚಿಸಿರುವ ‘ ಸಾಹಸ ಭೀಮ ವಿಜಯಂ ‘ ಎಂಬ ಮೇರು ಕಾವ್ಯದಿ ೦ ದ ಸ ೦ ಗ್ರಹಿಸಿರುವ ‘ ದುರ್ಯೋಧನ ವಿಲಾಪ ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಸ್ವೀಕರಿಸಲಾಗಿದೆ . ಕುರುಕ್ಷೇತ್ರ ಯುದ್ಧದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡು ಏಕಾಂಗಿಯಾಗುಳಿದ ದುರ್ಯೋಧನ ತನ್ನ ಮುಂದಿನ ನಡೆಯನ್ನು ಶರಶಯ್ಕೆಯಲ್ಲಿ ಮಲಗಿರುವ ಭೀಷ್ಮರೊಡನೆ ಸಮಾಲೋಚಿಸಲು ರಣರಂಗವನ್ನು ಹಾಯ್ದು ಬರುವಾಗ , ಅವನಿಗೆ ಗುರು ದ್ರೋಣರ ಪಾರ್ಥಿವ ಶರೀರ ಎದಿರಾಗುತ್ತದೆ .
ಆ ಸಂದರ್ಭದಲ್ಲಿ ದುರ್ಯೋಧನನು ದ್ರೋಣರನ್ನು ಸ್ಮರಿಸಿ ಆಡುವ ಮಾತುಗಳು ಈ ಪದ್ಯದಲ್ಲಿ ಚಿತ್ರಿತಗೊಂಡಿವೆ . ದ್ರೋಣಾಚಾರರು ಜಗತೃಸಿದ್ಧ ಬಿಲ್ಲೋಜರು . ಆದರೂ ಯುದ್ಧದಲ್ಲಿ ಸೋತು ಮೃತರಾದರು . ಕೌರವೇಶ್ವರನು ದ್ರೋಣ ರನ್ನು ಕುರಿತು ” ನಿಮ್ಮ ಬಿಲ್ವಿದ್ಯಾ ಪ್ರಾವೀಣ್ಯತೆ ಇಡೀ ಜಗತ್ತಿಗೆ ತಿಳಿದಿದೆ . ಅರ್ಜುನ ಮಾತ್ರವಲ್ಲ ಸ್ವತಃ ಪರಶಿವನೂ ನಿಮ್ಮನ್ನು ಗೆಲ್ಲಲಾರ . ಆದರೂ ನೀವು ಸೋತಿದ್ದು ನಿಮ್ಮ ಉದಾಸೀನದಿಂದ ಎಂದು ನಾನು ಭಾವಿಸುವುದಿಲ್ಲ .
ಇದು ನಿಜಕ್ಕೂ ನನ್ನ ಕರ್ಮದ ಫಲವಷ್ಟೇ , ನಿಮ್ಮಂತಹವರಿಗೆ ಇಂತಹ ದುರ್ಮರಣ ಹೇಗೆ ಸಂಭವಿಸಿತೋ , ಕಾರಣ ತಿಳಿಯದಾಗಿದೆ ‘ ಎಂದು ಹೇಳಿದನು . ಮಹಾಪರಾಕ್ರಮಿಯಾದ ದ್ರೋಣರ ಶೌರವು ತನಗೆ ಗೆಲುವನ್ನು ತಂದು ಕೊಡದೇ ಹೋದುದು ತನ್ನ ಹಣೆಬರಹ ಎಂಬ ಕೌರವನ ಆತ್ಮವಿಮರ್ಶೆಯ ಜೊತೆಗೆ , ದ್ರೋಣರಿಗೆ ಒದಗಿದ ಮರಣದ ಬಗ್ಗೆ ಅವನಲ್ಲಿ ಪಶ್ಚಾತ್ತಾಪ ತುಂಬಿರುವುದನ್ನು ಇಲ್ಲಿ ಕಾಣಬಹುದು .
ಜನಕಗೆ ಜಲಾಂಜಲಿಯಂ
ತನೂಭವಂ ಕುಡುವುದುಚಿತಮದುಗೆಟ್ಟೇಗಳ್
ನಿನಗಾಂ ಕುಡುವಂತಾದುದ
ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ
ರನ್ನ ಕವಿಯು ರಚಿಸಿರುವ ‘ ಗದಾಯುದ್ಧಂ ‘ ಎಂಬ ಕಾವ್ಯದಿಂದ ಈ ಪದ್ಯವನ್ನು ಆರಿಸಲಾಗಿದೆ .
ಕೌರವೇಶ್ವರನು ತನ್ನ ಸಮಸ್ತ ಬಂಧುಮಿತ್ರರನ್ನು ಕುರುಕ್ಷೇತ್ರದ ಯುದ್ಧದಲ್ಲಿ ಕಳೆದುಕೊಂಡು ‘ ಮುಂದೇನು ? ‘ ಎಂಬುದರ ಬಗ್ಗೆ ಭೀಷ್ಮಾಚಾರರ ಸಲಹೆಯನ್ನು ಕೇಳಲು ಹೊರಟು , ದಾರಿಯಲ್ಲಿ ತನ್ನ ಮಗನಾದ ಲಕ್ಷಣಕುಮಾರನ ಶವವನ್ನು ನೋಡಿ ಮಾಡಿದ ವಿಲಾಪ ಈ ಪದ್ಯದಲ್ಲಿದೆ . ತಂದೆಯು ಸತ್ತಮೇಲೆ ಮಗನು ಉತ್ತರ ಕ್ರಿಯೆಗಳನ್ನು ಮಾಡಿ ಎಳ್ಳುನೀರುಗಳ ತರ್ಪಣ ಬಿಡುವುದು ಸರಿಯಾದ ಕ್ರಮ .
ಆದರೆ ತಂದೆಯೇ ಮಗನಿಗೆ ಅಂತ್ಯ ಸಂಸ್ಕಾರಕ್ಕೆ ಏರ್ಪಾಟು ಮಾಡಬೇಕಾದ ದುಃಸ್ಥಿತಿ ತನಗುಂಟಾಗಿದೆ ಎಂದೂ ವಿಧಿಯು ತಂದೆಯನ್ನು ಮೊದಲು ಕರೆಸಿಕೊಳ್ಳದೆ ಮಗನನ್ನು ಮೊದಲು ಕರೆಸಿಕೊಂಡು ವಿಪರ್ಯಯ ( ವ್ಯತ್ಯಾಸ ) ವನ್ನುಂಟುಮಾಡಿದೆ ಎಂದು ದುರ್ಯೋಧನನು ಅಪಾರವಾಗಿ ಶೋಕಭರಿತನಾದನು , ದುರ್ಯೋಧನನು ಯುದ್ಧವನ್ನು ತಾನಾಗಿಯೇ ಘೋಷಿಸಿ ಶೋಕತಪ್ತ ನಾಗಬೇಕಾಯಿತು .
Duryodhana Vilapa ದುರ್ಯೋಧನ ವಿಲಾಪ
ಜನನಿಸ್ತನ್ಯಮನುನುಂಡೆನಾರಿ ಬಳಿಕೆ ನೀಂ ಸೋಮಾಮೃತಂ ದಿವ್ಯಭೋ
ಜನಮೆಂಬಂತಿವನುಂಡೆನಾಂ ಬಳಕೆ ನೀಂ ಬಾಲತ್ವದಿಂದೆಲ್ಲಿಯುಂ
ವಿನಯೋಲ್ಲಂಘನಮಾದುದಿಲ್ಲ ಮರಣಕ್ಕೆನ್ನಿಂದ ನೀಂ ಮುಂಚಿದಯ್
ಮನೆಯೊಳ್ ಸೂಳ್ತಡಮಾಯಿದೊಂದರೆಯೊಳಂ ಹಾ ವತ್ಸ ದುಶ್ಯಾಸನಾ
ಕನ್ನಡದ ಕವಿ ಚಕ್ರವರ್ತಿಗಳಲ್ಲಿ ಒಬ್ಬನಾದ ಮಹಾಕವಿ ರನ್ನನ ಗದಾಯುದ್ಧ’ದಿಂದ ಆಯ್ದುಕೊಳ್ಳಲಾದ ದುರ್ಯೋಧನ ವಿಲಾಪ ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಸ್ವೀಕರಿಸಲಾಗಿದೆ . ತನ್ನ ತಮ್ಮನಾದ ದುಶ್ಯಾಸವನ ಶವವನ್ನು ಕಂಡಾಗ ದುರ್ಯೋಧನನಾಡುವ ಮಾತುಗಳು ಈ ಪದ್ಯದಲ್ಲಿ ಚಿತ್ರಿತಗೊಂಡಿದೆ .
ದುಶ್ಯಾಸನನದು ಮಹಾ ಭ್ರಾತೃತ್ವ ನಿಷ್ಠೆಯ ಗುಣ . ಅಣ್ಣ ಹೇಳಿದ್ದನ್ನೆಲ್ಲಾ ಪರಿಣಾಮವನ್ನು ಯೋಚಿಸದೆ ಮಾಡಿದವನು . ಎಂದಿಗೂ ಅಣ್ಣನಿಗೆ ಎದುರಾಡಿ ಸೌಜನ್ಯವನ್ನು ಮೀರಿದವನಲ್ಲ . ಅಂತಹ ತಮ್ಮನನ್ನು ಕಳೆದುಕೊಂಡ ದುರ್ಯೋಧನನ ದುಃಖ ಭರಿಸಲಾರದ ನಷ್ಟ . ಅವನು ತಮ್ಮನಾದ ದುಶ್ಯಾಸನನನ್ನು ಕುರಿತು ” ಎಲೆ ತಮ್ಮನೇ , ತಾಯಿಯ ಎದೆಹಾಲನ್ನು ನಾನು ಕುಡಿದ ಮೇಲೆ ನೀನು ಕುಡಿದೆ . ಅದೇ ರೀತಿ ಸೋಮರಸದ ಅಮೃತವಿರಲಿ , ರುಚಿಕಟ್ಟಾದ ದಿವ್ಯ ಭೋಜನವಿರಲಿ ನಾನು ಸೇವಿಸಿದ ಮೇಲಷ್ಟೇ ನೀನು ಸೇವಿಸಿದ್ದು .
ಚಿಕ್ಕಂದಿನಿಂದ ಎಲ್ಲಿಯೂ ಈ ಕ್ರಮಕ್ಕೆ ಭಂಗ ಬಂದುದಿಲ್ಲ . ಆದರೆ ಸಾವಿನಲ್ಲಿ ಮಾತ್ರ ಅಣ್ಣನಾದ ನನ್ನನ್ನು ಬಿಟ್ಟು ನೀನು ಮೊದಲು ಹೊರಟೆ . ಇಲ್ಲೇಕೆ ಕ್ರಮಭಂಗ ಮಾಡಿದೆ ? ಯುದ್ಧದಲ್ಲೇಕೆ ಸರದಿ ತಪ್ಪಿದೆ ? ಹಾ ವತ್ಸಾ ದುಶ್ಯಾಸನಾ ? ‘ ಎಂದು ಪ್ರಲಾಪಿಸಿದನು .
ದುರ್ಯೋಧನನು ಈ ಮೇಲಿನ ಮಾತುಗಳನ್ನಾಡುವ ಮೂಲಕ ದುಶ್ಯಾಸನನ ವಿನಯದ , ಭ್ರಾತೃಪ್ರೇಮದ ವ್ಯಕ್ತಿತ್ವವನ್ನು ಅನಾವರಣಗೊಳಿಸಿರುವನೆನ್ನಬಹುದು .
Duryodhana Vilapa ದುರ್ಯೋಧನ ವಿಲಾಪ
ನಿನ್ನ ಕೆಳೆಯಂ ಸುಯೋಧನ
ನಂ ನೋಡದೆ ನುಡಿಯದಪ್ಪಿಕೊಳ್ಳದೆ ಬೆಸನೇ
ನೆನ್ನದೆ ಜೀಯೆನ್ನದೆ ದೇ
ವೆನ್ನದೆ ಯೇಕುಸಿರದಿರ್ಪೆಯಂಗಾಧಿಪತೀ
ರನ್ನ ಕವಿಯು ರಚಿಸಿರುವ ‘ ಸಾಹಸ ಭೀಮ ವಿಜಯಂ ‘ ಎಂಬ ಮಹಾಕಾವ್ಯದಿಂದ ಸ್ವೀಕರಿಸಲಾಗಿರುವ ದುರ್ಯೋಧನ ವಿಲಾಪ ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಆಯ್ದುಕೊಳ್ಳಲಾಗಿದೆ . ದುರ್ಯೋಧನನು ಭೀಷರನ್ನು ಕಾಣಲೆ೦ದು ಕುರುಕ್ಷೇತ್ರದ ಮೂಲಕ ಸಾಗುತ್ತಿರುವಾಗ ದಾರಿಯಲ್ಲಿ ಕರ್ಣನ ಕಳೇಬರವನ್ನು ಕಂಡು ಪ್ರಲಾಪಿಸಿದ ಬಗೆ ಇಲ್ಲಿದೆ .
ಕರ್ಣನು ಬದುಕಿರುವಾಗ ಹೇಗೆ ನಡೆದುಕೊಳ್ಳುತ್ತಿದ್ದನೆಂಬುದನ್ನು ಜ್ಞಾಪಿಸಿಕೊಂಡ ದುರ್ಯೋಧನನು ಅವನು ಸತ್ತಿರುವನೆಂಬುದನ್ನೇ ಮರೆತು ಮಾತನಾಡುತ್ತಾನೆ . ಏಕೆಂದರೆ ಅವನಿಗೂ ಕರ್ಣನಿಗೂ ಅಂತಹ ಲೋಕೋತ್ತರವಾದ ಸ್ನೇಹವಿತ್ತು . ಇಲ್ಲಿ ಶೋಕಭಾವ – ಕರುಣರಸ ಹೃದಯ ಕರಗುವಂತೆ ಚಿತ್ರಿತವಾಗಿದೆ .
ಅಯ್ಯಾ ಕರ್ಣಾ , ನಿನ್ನ ಗೆಳೆಯನಾದ ಸುಯೋಧನನು ನಿನ್ನೆದುರು ಬಂದು ನಿಂತಿದ್ದರೂ ಕಣ್ಣುಗಳನ್ನು ತೆರೆದು ನೋಡದೆ , ಎದ್ದು ಮಾತನಾಡಿಸದೆ , ಪ್ರೀತಿಯಿಂದ ಆಲಿಂಗಿಸಿಕೊಳ್ಳದೆ , ‘ ಅಪ್ಪಣೆ ಏನು ? ‘ ಎಂದು ಕೇಳದೆ , ‘ ದೇವಾ ‘ ಎಂದು ನನ್ನನ್ನು ಕರೆಯದ ಏಕೆ ಮಾತನಾಡದೆ ಇರುವೆ ? ” ಎಂದು ಕೌರವನು ಸತ್ತಿರುವ ಕರ್ಣನನ್ನು ಪ್ರಶ್ನಿಸುತ್ತಾನೆ . ಕೌರವನಿಗೆ ಕರ್ಣನು ಇನ್ನೂ ಬದುಕಬೇಕಾಗಿತ್ತೆಂಬ ಆಶಯವೂ , ಸತ್ತು ಹೋದನೆಂಬ ದುಃಖವೂ ಇಲ್ಲಿ ಮಡುಗಟ್ಟಿ ನಿಂತಿದೆ . ದುಃಖಾತಿಶಯದಿಂದುಂಟಾಗುವ ಭ್ರಮೆಯನ್ನು ನಾವಿಲ್ಲಿ ಗುರುತಿಸಬಹುದು .
Duryodhana Vilapa ದುರ್ಯೋಧನ ವಿಲಾಪ
ಆನೃತಂ ಲೋಭಂ ಭಯಮೆಂ
ಬಿನಿತುಂ ನೀನಿರ್ದ ನಾಡೂರ್ಕುಮೆ ರವಿನಂ
ದನ ನನ್ನಿ ಚಾಗಮಣ್ಣೆಂ
ಬಿನಿತರ್ಕಂ ನೀನೆ ಮೊತ್ತಮೊದಲಿಗನಾದಯ್
ರನ್ನನು ರಚಿಸಿರುವ ‘ ಸಾಹಸ ಭೀಮ ವಿಜಯಂ ‘ ಎಂಬ ಮಹಾಕಾವ್ಯದಿಂದ ಸ್ವೀಕರಿಸಲಾಗಿರುವ ‘ ದುರ್ಯೋಧನ ವಿಲಾಪ ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಆಯ್ದುಕೊಳ್ಳಲಾಗಿದೆ .
ದುರ್ಯೋಧನ ಅವನ ಗುಣಗಾನ ಮಾಡುವ ಸಂದರ್ಭವಿದಾಗಿದೆ . ಕರ್ಣ ಮತ್ತು ದುರ್ಯೋಧನರದು ಅನುಪಮವಾದ ಸ್ನೇಹ . ಅವರಿಬ್ಬರೂ ಒಡಲೆಗಡು , ಪ್ರಾಣ ಒಂದೇ ಎಂಬಂತೆ ಜೀವಿಸಿದ್ದವರು .
ಕರ್ಣನ ಅಗಲಿಕೆಯು ದುರ್ಯೋಧನನನ್ನು ಶೋಕತಪ್ತನನ್ನಾಗಿಸಿದೆ . ತನ್ನ ಗೆಳೆಯನ ಕಳೇಬರದೆದುರು ನಿಂತು ದುರ್ಯೋಧನನು ಕರ್ಣನ ಗುಣವಿಶೇಷಗಳನ್ನು ಈ ಮುಂದಿನಂತೆ ನೆನಪಿಸಿಕೊಳ್ಳುತ್ತಾನೆ . ” ಎಲೈ ಕರ್ಣನೇ , ನೀಡಿದಲ್ಲಿ ಸುಳ್ಳಿಗೆ ಎಡೆಯಿಲ್ಲ . ಭಯ ಮತ್ತು ಜಿಪುಣತನಕ್ಕೆ ಜಾಗವೇ ಇಲ್ಲ .
ಸುಳ್ಳು , ಲೋಭ , ಭಯಗಳು ಕರ್ಣನಿದ್ದ ರಾಜ್ಯದಲ್ಲಿ ಎಂದಿಗೂ ದುರ್ಯೋಧನನು ಮನದುಂಬ ಗೆಳೆಯ ಕರ್ಣನನ್ನು ಕೊಂಡಾಡುತ್ತಾನೆ . ದುರ್ಯೋಧನನ ಈ ಮಾತುಗಳಲ್ಲಿ ಸ್ವಲ್ಪವ ಇರುವುದಿಲ್ಲ , ಸತ್ಯ , ಗುಣಕ್ಕೆ , ತ್ಯಾಗಕ್ಕೆ ಮತ್ತು ಪರಾಕ್ರಮಕ್ಕೆ ನೀವೇ ಮೊತ್ತಮೊದಲಿಗ , ನಿನಗಾರು ಸರಿಸಮಾನರಿಲ್ಲ ಎಂದು ಉತ್ತೇಕ್ಷೆಯಿಲ್ಲ . ಬದಲಿಗೆ ಆ ಗುಣಗಳ ಸಾರ್ವಭೌಮನೆಂಬಂತೆ ಕರ್ಣ ಬದುಕಿ – ಬಾಳಿದವನೆನ್ನಬಹುದು . ದುರ್ಯೋಧನನ ಉದಾತ್ತ ಗುಣಕ್ಕೆ ಇದು ಕನ್ನಡಿ ಹಿಡಿಯುತ್ತದೆ .
ಆನುಂ ದುಶ್ಯಾಸನನುಂ
ನೀನಂ ಮೂವರೆ ದಲಾತನುಂ ಕದ ಬಡಿ
ಕ್ಯಾನಂ ನೀನೆ ದಲೀಗಲ್
ನೀನುಮಗಲ್ಲೆತ್ತವೋದೆಯಂಗಾಧಿಪತೀ
ಮಹಾಕವಿ ರನ್ನನು ರಚಿಸಿರುವ ‘ ಸಾಹಸ ಭೀಮ ವಿಜಯಂ ‘ ಎಂಬ ಮಹಾಕಾವ್ಯದಿಂದ ಸ್ವೀಕರಿಸಲಾಗಿರುವ ‘ ದುರ್ಯೋಧನ ವಿಲಾಪ ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಆಯ್ದುಕೊಳ್ಳಲಾಗಿದೆ . ದುರ್ಯೋಧನನಿಗೆ ತನ್ನ ತಮ್ಮನಾದ ದುಶ್ಯಾಸನ ಮತ್ತು ಜೀವದ ಗೆಳೆಯನಾದ ಕರ್ಣನನ್ನು ಕಂಡರೆ ಅಪರಿಮಿತವಾದ ಪ್ರೀತಿಯಿತ್ತು .
ಅವರಿಬ್ಬರನ್ನೂ ಏಕಕಾಲಕ್ಕೆ ಕಳೆದುಕೊಂಡ ದುರ್ಯೋಧನನ ದುಃಖಕ್ಕೆ ಎಣೆಯಿಲ್ಲದಾಯಿತು . ಕರ್ಣನ ಶವರ ಮುಂದೆ ನಿಂತು ‘ ಎಲೈ ಕರ್ಣನೇ , ನಾನು , ದುಶ್ಯಾಸನ ಹಾಗೂ ನೀನು ಮೂವರೂ ಮೊದಲಿನಿಂದಲೂ ಮಹಾಮೈತ್ರಿಯಿಂದಿದ್ದೆವು . ನಮ್ಮನ್ನಗಲಿ ಮೊದಲು ದುಶ್ಯಾಸನ ದೂರವಾದ . ಆನಂತರ ನಾನು – ನೀನು ಇಬ್ಬರೂ ಇದ್ದೇವೆಂಬ ಸಮಾಧಾನವಿತ್ತು . ಆದರೀಗ ನೀನೂ ಸಾಯುವ ಮೂಲಕ ನನ್ನನ್ನು ಅಗಲಿ ದೂರಾಗಿ ಎಲ್ಲಿಗೆ ಹೋದೆ , ಎಲೆ ಅಂಗಾಧಿಪತಿಯಾದ ಕರ್ಣನೇ ? ‘ ‘ ಎಂದು ದುಃಖಸಿದನು .
ನೀನುಳೊಡುಂಟು ರಾಜ್ಯ
ನೀನುಳ್ಕೊಡೆ ಪಟ್ಟಮುಂಟು ಬೆಳ್ಕೊಡೆಯುಂಟಯ್
ನೀನುಳ್ಳೋದುಂಟು ಪೀಟಿಗೆ
ನೀನಿಲ್ಲದಿವೆಲ್ಲಮೊಳವ ಅಂಗಾಧಿಪತೀ
Duryodhana Vilapa ದುರ್ಯೋಧನ ವಿಲಾಪ
ಮಹಾಕವಿ ರನ್ನನು ರಚಿಸಿರುವ ‘ ಸಾಹಸ ಭೀಮ ವಿಜಯಂ ‘ ಎಂಬ ಮಹಾಕಾವ್ಯದಿಂದ ಸ್ವೀಕರಿಸಲಾಗಿರುವ ‘ ದುರ್ಯೋಧನ ವಿಲಾಪ ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಆಯ್ದುಕೊಳ್ಳಲಾಗಿದೆ . ದುರ್ಯೋಧನನಿಗೆ ಕರ್ಣನನ್ನು ಕಂಡರೆ ಗಾಢವಾದ ಸ್ನೇಹ – ಮಮಕಾರಗಳು , ಕರ್ಣ ಸತ್ತಿರುವುದರಿಂದ ಅವನಿಗೆ ತನ್ನ ಅಧಿಕಾರ , ಐಶ್ವರ್ಯ , ಬದುಕು – ಎಲ್ಲವೂ ಅರ್ಥಹೀನವಾಗಿ ಕಂಡವಂತೆ .
ಕರ್ಣನಿಲ್ಲದ ಯಾವ ಸುಖವೂ ತನಗೆ ಬೇಡವೆ ೦ ದು ದುರ್ಯೋಧನ ಆಡುವ ಮಾತುಗಳನ್ನು ರನ್ನ ಈ ಮೇಲಿನ ಪದ್ಯದಲ್ಲಿ ವಿವರಿಸಿದ್ದಾನೆ . ದುರ್ಯೋಧನನಾಡುವ ಈ ಮಾತುಗಳಲ್ಲಿ ಅವರಿಬ್ಬರ ಅಗಾಧ ಸ್ನೇಹದ ಚಿತ್ರಣವಿದೆ . ನೀನಿದ್ದರೆ ಮಾತ್ರ ಈ ಚಕ್ರವರ್ತಿತ್ವದ ಬೆಳೆಡೆಗೆ ಶೋಭೆ , ನೀನಿದ್ದರೆ ನನ್ನ ಸಿಂಹಾಸನ , ಪೀಳಿಗೆಗಳಿಗೆ ಮೆರಗು .
ನೀನಿಲ್ಲದೆ ” ಎಲೈ ಕರ್ಣನೇ , ನೀನು ಬದುಕಿದ್ದರೆ ನನಗೆ ಈ ರಾಜ್ಯವಿದ್ದಂತೆ , ನೀನಿದ್ದರೆ ಮಾತ್ರ ನನ್ನ ರಾಜಪದವಿಗೆ ಅರ್ಥಬರುವುದು ಮೇಲಿನ ಎಲ್ಲವೂ ನನ್ನ ಪಾಲಿಗೆ ಇದ್ದೂ ಇಲ್ಲದಂತೆ ಅಂಗಾಧಿಪತೀ ‘ ಎಂದು ದುರ್ಯೋಧನ ಹೇಳುವನು . ಅವನ ಈ ಮಾತುಗಳಲ್ಲಿ ಕರ್ಣನ ಬಗೆಗೆ ಅವನಲ್ಲಿದ್ದ ಸ್ನೇಹ ಭಾವ , ಆದರ , ಗೌರವಗಳೆಲ್ಲವೂ ಅತ್ಯಂತ ಪರಿಣಾರ ಕಾರಿನ ಎಲ್ಲ ಸುಖಕ್ಕಿಂತ ಸ್ನೇಹದಿಂದ ಸಿಗುವ ಸುಖ ಅತ್ಯಂತ ದೊಡ್ಡದು , ಬೆಲೆ ಕಟ್ಟಲಾಗದಂತಹದ್ದ ೦ ಬುದನ್ನು ಕವಿ ರನ್ನ ಸೊಗಸಾಗಿ ವರ್ಣಿತಗೊಂಡಿದೆ.
ಟಿಪ್ಪಣಿಗಳು
ಸಂಜಯ ರನ್ನ ಕವಿಯ ‘ ಸಾಹಸ ಭೀಮ ವಿಜಯಂ’ದಲ್ಲಿ ಸಂಜಯನ ಪಾತ್ರವಿದೆ . ಇವನು ಕುರುಕ್ಷೇತ್ರದಲ್ಲಿ ನಡೆದ ಪಾಂಡವ – ಕೌರವರ ಯುದ್ಧ ವಿವರಣೆಯನ್ನು ಧೃತರಾಷ್ಟ್ರನಿಗೆ ನೀಡುತ್ತಿದ್ದನು . ದುರ್ಯೋಧನನು ಸಕಲ ಬಂಧುಗಳನ್ನೂ , ಸೈನ್ಯವನ್ನೂ ಕಳೆದುಕೊಂಡ ಮೇಲೆ ಸಂಜಯನು ದುರ್ಯೋಧನನನ್ನು ಸಮಾಧಾನಪಡಿಸಲು ಯತ್ನಿಸುತ್ತಲೇ ಪಾಂಡವರಂತಹ ವೀರರನ್ನು ಜಯಿಸಲು ಸಾಧ್ಯವಿಲ್ಲವೆಂದೂ ಅವರೊಡನೆ ಸಂಧಿಮಾಡಿಕೊಳ್ಳುವುದೇ ಸೂಕ್ತವೆಂದೂ ಹೇಳುತ್ತಾನೆ .
ಆದರೆ ಈ ಸಲಹೆಯು ಕೌರವನಿಗೆ ಅಸಮಾಧಾನವನ್ನುಂಟು ಮಾಡಿತೆಂದು ತಿಳಿದಾಗ ಅವನು ವ್ಯತಿರಿಕ್ತವಾಗಿ ನಡೆದುಕೊಳ್ಳುವುದಿಲ್ಲ . ದುರ್ಯೋಧನನು ತಾಯಿತಂದೆಯರ ಸಲಹೆಯ ಮೇರೆಗೆ ಭೀಷರ ಬಳಿ ಹೋಗುವಾಗಲೂ ಸಂಜಯನು ಅವನೊಡನೆ ಹೋಗುತ್ತಾನೆ . ರಣಾಂಗಣದ ರಕ್ತದ ಕೆಸರಿನಲ್ಲಿ ಕಾಲಿಟ್ಟು ಒಮ್ಮೆ ದುರ್ಯೋಧನನು ಜಾರಿದಾಗ ಸಂಜಯನು ದುರ್ಯೋಧನ ನನ್ನು ಹಿಡಿದು ಅವನು ಕೆಳಗೆ ಬೀಳದಂತೆ ಕಾಪಾಡುತ್ತಾನೆ.
ಅಭಿಮನ್ಯು
ಅಭಿಮನ್ಯುವು ಪಂಚಪಾಂಡವರಲ್ಲಿ ಒಬ್ಬನಾದ ಅರ್ಜುನನ ಮಗ , ಸುಭದ್ರೆಯಲ್ಲಿ ಹುಟ್ಟಿದವನು . ಬೆಳೆದದ್ದು ಮಾವ ಕೃಷ್ಣನ ಆರೈಕೆಯಲ್ಲಿ . ಮಹಾಪರಾಕ್ರಮಶಾಲಿ . ತಾಯಿಯ ಗರ್ಭದಲ್ಲಿರುವಾಗಲೇ ತಂದೆ – ತಾಯಿಯರು ಆಡುತ್ತಿದ್ದ ಮಾತಿನಿಂದ ಚಕ್ರವ್ಯೂಹವನ್ನು ಭೇದಿಸಲು ಕಲಿತ ಏಕಸಂಧಿಗ್ರಾಹಿ .
ವಿರಾಟರಾಯನ ಮಗಳಾದ ಉತ್ತರ ಈತನ ಹೆಂಡತಿ , ಮಹಾಭಾರತ ಯುದ್ಧದಲ್ಲಿ ಕೌರವರ ಅನೇಕ ಮಹಾವೀರರನ್ನು ಕೊಂದು ವೈರಿಗಳ ಪಾಲಿಗೆ ಸಿಂಹಸ್ವಪ್ನನಾದ . ಹಾಗಾಗಿ ದ್ರೋಣರು ಚಕ್ರವ್ಯೂಹ ರಚಿಸಿ ಅಭಿಮನ್ನು ಅದನ್ನು ಪ್ರವೇಶಿಸುವಂತೆ ಮಾಡಿದರು . ದ್ರೋಣ , ಕರ್ಣ , ದುಶ್ಯಾಸನ ಮುಂತಾದ ಎಲ್ಲರೂ ಸೇರಿ ಒಟ್ಟಿಗೆ ಅವನ ಮೇಲೆ ಯುದ್ಧ ಮಾಡಿ ಅವನನ್ನು ಮೋಸದಿಂದ ಕೊಂದರು . ತಾನು ವಯಸ್ಸಿನಲ್ಲಿ ಕಿರಿಯವನಾದರೂ ತನ್ನ ಪರಾಕ್ರಮಕ್ಕೆ ಕಿರಿತನವಿಲ್ಲ ಎಂದು ತೋರಿದ ಧೀರ , ಅಭಿಮನ್ಯು.
Duryodhana Vilapa ದುರ್ಯೋಧನ ವಿಲಾಪ
ಭಾಷಾಭ್ಯಾಸ
ಬರ್ದುಕು – ಇದು ಶಿಥಿಲದ್ವಿತ್ವ . ಇಲ್ಲಿ ವಿಜಾತೀಯ ಒತ್ತಕ್ಷರವನ್ನು ಶಿಥಿಲವಾಗಿ , ತೇಲಿಸಿ ಉಚ್ಚರಿಸುತ್ತಾರೆ . ಇದು ಹಳಗನ್ನಡದ ಒಂದು ಲಕ್ಷಣ . ಅಮರ್ದು , ಎರ್ದೆ …. ಮೊದಲಾದ ಶಿಥಿಲದ್ವಿತ್ವಗಳನ್ನು ಗಮನಿಸಿ .
ಉರ್ಚು
ಮುಗಿದಿರ್ದ
ಇರ್ಕುಮೆ
ಸಂಭವಿಸಿರ್ದುದೊ
ಗತನಾಗಿರ್ದ
ಜರ್ಜರಿತ
ಅಲರ್ದಮೊಗಂ
ಇದಿರ್ಚು
ಕರ್ಚಿದವುಡುಂ
ಕಳ ಪ್ರಯೋಗ – ಸಂಸ್ಕೃತದ ‘ ಲ ‘ ಕಾರಕ್ಕೆ ಬದಲಾಗಿ ಕನ್ನಡದಲ್ಲಿ ಬಳಸುವ ‘ ಳ ‘ ಕಾರವನ್ನು ‘ ಕಳ ‘ ಎನ್ನುವರು . ಉದಾ : ಜಲ > ಜಳ , ಅನಲ > ಅನಳ , ಇಂತಹ ಪದಗಳನ್ನು ಪಟ್ಟಿಮಾಡಿ .
ಚಂಚಲ > ಚಂಚಳ
ಸಂಚಲ > ಸಂಚಳ
ಅಚಲ > ಅಚಳ
ಅಂಜಲಿ > ಅ ೦ ಜಲ್ಲಿ
ಪ್ರಲಾಪ > ಪ್ರಳಾಪ
ಪಲ್ಲಿ > ಹಲ್ಲಿ
ಪುಲ್ಲು > ಹುಲ್ಲು
ತಲ > ತಳ
ಪ > ಹ ಬದಲಾವಣೆ : ಹಳಗನ್ನಡದ ಕೆಲವು ‘ ಪ ‘ ಕಾರ ನಡುಗನ್ನಡದಲ್ಲಿ ‘ ಹ ‘ ಕಾರಗಳಾಗಿವೆ . ಇದೊಂದು ಪ್ರಮುಖ ಧ್ವನಿ ವ್ಯತ್ಯಾಸ . ಉದಾ : ಪಾರು > ಹಾರು , ಫೆಸರ್ > ಹೆಸರ್ ಇತ್ಯಾದಿ . ಇಂತಹ ಐದು ಪದಗಳನ್ನು ಸಂಗ್ರಹಿಸಿ ,
ಪಲವು > ಹಲವು
ಪಾಲು > ಹಾಲು
ಪಳ್ಳಿ > ಹಳ್ಳಿ
ಪೋಗು > ಹೋಗು
ಪೀರು > ಹೀರು
ಪನಿ > ಹನಿ
ಪಿರಿದು > ಹಿರಿದು
ಪಂಜರ > ಹಂದರ
ಪಸಿದು > ಹಸಿದು
ಇತರೆ ಪ್ರಮುಖ ಮಾಹಿತಿ
10ನೇ ತರಗತಿ ಯುದ್ಧ ಪಾಠದ ಪ್ರಶ್ನೋತ್ತರಗಳು
Super
Notes
Hi
I’m here for the first time please help me with it
Good
Thank you