athi ase gathi kedu in kannada essay , ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ, ಅತಿ ಆಸೆ ಗತಿಗೇಡು ಸಾರಾಂಶ, ಅತಿ ಆಸೆ ಗತಿಗೇಡು ಗಾದೆ ಮಾತು, athi ase gathi kedu gade in kannada, ಅತಿ ಆಸೆ ಗತಿಗೇಡು ಗಾದೆ ಬಗ್ಗೆ ಮಾಹಿತಿ
Athi Ase Gathi Kedu In Kannada
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ
ಅತಿ ಆಸೆ ಗತಿ ಕೇಡು. ನಮ್ಮ ಕನ್ನಡ ಭಾಷೆಯ ಸಾ ವಿರಾರು ಗಾದೆಗಳು ಕನ್ನಡಿಗರ ಬಾಯಲ್ಲಿ, ಅದರಲ್ಲಿ ಕೆಲವು ಗಾದೆಗಳನ್ನು ಕೇಳದ ಕನ್ನಡಿ ಇಲವೆಂದು ಹೇಳಬಹುದು. ಅಂತಹ ಸುಪ್ರಸಿದ ಗಾದೆಗಳಲ್ಲಿ ಈ ಮೇಲಿನ ಗಾದೆಯೂ ಒಂದಾಗಿದೆ. ಇದು ನೀತಿ ಬೋಧಕವಾದ ಗಾದೆಯೇ ಆಗಿದೆ. ನಮ್ಮ ಭಾರತೀಯ ವೇದಾಂತ ನಮಗೆ ಅತಿ ಆಸೆಯನ್ನು ವರ್ಜಿಸು ಎಂದು ನಾನಾ ರೀತಿಗಳಲ್ಲಿ ತಿಳಿಸುತ್ತಿದೆಯಾದರೂ ವೇದಾಂತವನ್ನು ಬೋಧಿಸುವವರೂ ಅತಿ ಆಸೆಯಿಂದ ಪಾರಾಗಿರುವುದು ಅಪರೂಪ. ಸುತ್ತಮುತ್ತಲಿನ ಜನ ನಮಗಿಂತ ತುಂಬ ಉತ್ತಮ ಜೀವನ ನಡೆಸುವುದನ್ನು ಕಂಡಾಗ ಅವರ ಮಟ್ಟದಲ್ಲಿ ನಾವೂ ಜೀವನ ಮಾಡಬೇಕೆಂಬ ಬಯಕೆಯಾಗುವುದು ತೀರ ಸಹಜವಾಗಿದೆ. ಆದರೆ ಮನಸ್ಸನ್ನು ನಿಯಂತ್ರಿಸಿಕೊಳ್ಳದಿದ್ದರೆ ಹಲವಾರು ಬಗೆಯ ಪರಿತಾಪಗಳನ್ನು ಅನುಭವಿಸಬೇಕಾಗುವುದೆಂಬ ಎಚ್ಚರಿಕೆಯನ್ನು ಈ ಗಾದೆ ಕೊಡುತ್ತಿದೆ. ‘
ಅತಿ ಆಸೆ’ ಎಂಬುದು ಐಶ್ವಯ್ಯ, ಕೀರ್ತಿ, ಆಹಾರ, ವಾಹನ, ಸುಖ ಎಲ್ಲ ವಿಚಾರಗಳಲ್ಲಿಯೂ ಉಂಟಾಗಲು ಅವಕಾಶವಿದೆ. ಅತಂತ ರುಟಿಕಟ್ಟಾದ ಭಕ್ಷ ವನ್ನು ನಮ್ಮ ಮಿತಿಯರಿಯದೆ ತಿಂದರೆ ಅಜೀರ್ಣವಾಗಿ, ತಿಂದ ಸುಖವನ್ನು ಕಳೆದುಕೊಳ್ಳ ಬೇಕಾಗುವುದರಿಂದ ತಿನ್ನುವ ವಿಷಯದಲ್ಲಿ ಅತಿ ಆಸೆಯನ್ನು ನಿಯಂತ್ರಿಸಿಕೊಳ್ಳದಿದ್ದರೆ ಗತಿ ಕೇಡಾಗದಿರುವುದಿಲ್ಲ.
ಮತ್ತೊಬ್ಬರ ಐಶ್ವರವನ್ನು ಕಂಡು ಅನ್ಯಾಯ ಮಾರ್ಗದಲ್ಲಿ ಹಣ ಸಂಪಾದನೆಗೆ ತೊಡಗಿದರೆ ಕಾರಾಗೃಹ ಒದಗಬಹುದು. ಸರ್ತಿಯನ್ನು ಯತ್ನಿಸಿ ಸಫಲರಾದರೆ ವಾಮಮಾರ್ಗದಲ್ಲಿ ಪುಸಿದ್ಧಿರಬೇಕಾದ ಸ್ಥಿತಿ ವಾಸ್ತವ ಸಂಗತಿ ಪ್ರಪಂಚಕ್ಕೆ ತಿಳಿದು ಅದುವರೆಗೆ ಇದ್ದ ಗೌರವ ನಾಶವಾಗಬಹುದು.
ಅತಿ ಆಸೆ ಗತಿಗೇಡು ಗಾದೆ ಮಾತು
ಯಾರೋ ದೊಡ್ಡ ಮನೆ ಕಟ್ಟಿಸಿರುವುದನ್ನು ನೋಡಿ ಆ ಆರ್ಥಿಕ ಸಾಮರ್ಥ್ಯವಿಲ್ಲದವರು ಅಂತಹ ಮನೆ ಕಟ್ಟಲು ಯತ್ನಿಸಿ ಮಾಡಿದ ಸಾಲ ತೀರಿಸಲಾಗದೆ ಅರ್ಧ ಕಟ್ಟಿದ ಮನೆಯನೇ ಮಾರಾಟ ಮಾಡಬೇಕಾಗಬಹುದು. ಆದ್ದರಿಂದ ಮನುಷ್ಯ ಪ್ರತಿಯೊಂದು ವಿಚಾರದಲ್ಲಿಯೂ ತನ್ನ ಮಿತಿಯಲ್ಲಿ ಮನದಾಸೆಗಳನ್ನು ನೆರವೇರಿಸಿಕೊಳ್ಳಬೇಕೇ ವಿನಾ ಅತಿಯಾಸೆಪಟ್ಟು ತನ್ನ ಗತಿಗೆಕೇಡನ್ನುಂಟುಮಾಡಿಕೊಳ್ಳಬಾರದು. ಪ್ರಾಜ್ಞರು ಅತಿಯಾಸೆ ಪಡದೆ ಮನಸ್ಸನ್ನು ನಿಯಂತ್ರಿಸಿಕೊಳ್ಳುತ್ತಾರೆ.
ಇತರೆ ಸಂಬಂದಿಸಿದ ವಿಷಯಗಳು
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ
ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆ
ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆ ವಿವರಣೆ