ಅಕ್ಕಮಹಾದೇವಿ ವಚನಗಳು ಕನ್ನಡ | Akka Mahadevi Vachana In Kannada

ಅಕ್ಕಮಹಾದೇವಿ ವಚನಗಳು | Akkamahadevi Vachanagalu In Kannada Best No1 Notes

Akkamahadevi Vachanagalu In Kannada , akka mahadevi vachana in kannada,
ಅಕ್ಕಮಹಾದೇವಿ ವಚನಗಳು ಕನ್ನಡ, ಅಕ್ಕಮಹಾದೇವಿ ವಚನಗಳು, akkamahadevi vachanagalu

Akkamahadevi Vachanagalu In Kannada

ಈ ಲೇಖನದಲ್ಲಿ ಅಕ್ಕಮಹದೇವಿ ವಚನಗಳನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ಅಕ್ಕಮಹಾದೇವಿ ಪರಿಚಯ

ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು.

ಅಕ್ಕಮಹಾದೇವಿ ವಚನಗಳು | Akkamahadevi Vachanagalu In Kannada Best No1 Notes
ಅಕ್ಕಮಹಾದೇವಿ ವಚನಗಳು | Akkamahadevi Vachanagalu In Kannada Best No1 Notes

ಅಕ್ಕಮಹಾದೇವಿ ವಚನಗಳು

ಅಂಗದಲ್ಲಿ ಆಚಾರವ ತೋರಿದ

ಆ ಆಚಾರವೇ ಲಿಂಗವೆಂದರುಹಿದ.

ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ

ಆ ಅರಿವೆ ಜಂಗಮವೆಂದು ತೋರಿದ.
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು

ಎನಗೀ ಕ್ರಮವನರುಹಿದನಯ್ಯ ಪ್ರಭುವೆ.

……………………………………………………………………………………………………

ಅಂಗ ಕ್ರಿಯಾಲಿಂಗವ ವೇಧಿಸಿ,
ಅಂಗ ಲಿಂಗದೊಳಗಾಯಿತ್ತು.
ಮನ ಅರಿವ ಬೆರಸಿ, ಜಂಗಮ ಸೇವೆಯ ಮಾಡಿ,

ಮನ ಜಂಗಮಲಿಂಗದೊಳಗಾಯಿತ್ತು.
ಭಾವ ಗುರುಲಿಂಗದೊಳಗೆ ಬೆರಸಿ, ಮಹಾಪುಸಾದವ ಭೋಗಿಸಿ,

ಭಾವ ಗುರುಲಿಂಗದೊಳಗಾಯಿತ್ತು.
ಚೆನ್ನಮಲ್ಲಿಕಾರ್ಜುನಾ, ನಿಮ್ಮ ಒಲುಮೆಯಿಂದ ಸಂದಳಿದು

ಸ್ವಯಲಿಂಗಿಯಾದೆನಯ್ಯಾ ಪ್ರಭುವೆ.

……………………………………………………………………………………………………

ಹೋದೆನೂರಿಗೆ, ಇದೆ ನಾನಲ್ಲಿ,

ಹೋದಡೆ ಮರಳಿತ ಬಾರೆನವ್ವಾ.

ಐವರು ಭಾವದಿರು, ಐವರು ನಗೆವೆಣ್ಣು

ಈ ಐವರು ಕೂಡಿ ಎನ್ನ ಕಾಡುವರು

ಬೈವರು ಹೊಯ್ದರು ಮಿಗೆ ಕೇಡನುಡಿವರು.

ಇವರವರ ಕಾಟಕ್ಕೆ ನಾನಿನ್ನಾರೆ ಕಂಡವ್ವಾ.

ಅತ್ತೆ ಮಾವ ಮೈದುನ ನಗೆವೆಣ್ಣು,

ಚಿತ್ತವನೊರೆದು ನೋಡುವ ಗಂಡ.

ಕತ್ತಲೆಯಾದಡೆ ಕರೆದನ್ನವ ನೀಡವ್ವಾ,

ಅತ್ತಿಗೆ ಹತ್ತೆಂಟ ನುಡಿವಳಮ್ಮಮ್ಮ ತಾಯೆ.

ಉಪಮಾತೀತರು ಬಂಧುಬಳಗಂಗಳು.
ಶ್ರೀಶೈಲ ಚೆನ್ನಮಲ್ಲಿಕಾರ್ಜುನ ಒಲಿದಡೆ ಮರಳಿ ಬಾರೆನಮ್ಮ ತಾಯೆ.

……………………………………………………………………………………………………

akkamahadevi vachanagalu

ಅಕ್ಕಮಹಾದೇವಿ ವಚನಗಳು | Akkamahadevi Vachanagalu In Kannada Best No1 Notes
ಅಕ್ಕಮಹಾದೇವಿ ವಚನಗಳು | Akkamahadevi Vachanagalu In Kannada Best No1 Notes

ಹೊನ್ನು ಮುರಿದಡೆ ಬೆಸಸಬಹುದಲ್ಲದೆ,
ಮುತ್ತು ಒಡೆದಡೆ ಬೆಸಸಬಹುದೆ ?
ಮನ ಮುರಿದಡೆ ಮನಕೊಬ್ಬರೊಡೆಯರುಂಟೆ ?

ಚೆನ್ನಮಲ್ಲಿಕಾರ್ಜುನ ಸಾಕ್ಷಿಯಾಗಿ ಬೇಟವುಳ್ಳಲ್ಲಿ ಬೆರೆಸೆ ಘನ.

……………………………………………………………………………………………………
ಹೊಳೆವ ಕೆಂಜೆಡೆಗಳ, ಮಣಿಮಕುಟದ, ಒಪ್ಪುವ ಸುಲಿಪಲ್ಗಳ,

ನಗೆಮೊಗದ, ಕಂಗಳ ಕಾಂತಿಯ,
ಈರೇಳುಭುವನವ ಬೆಳಗುವ ದಿವ್ಯಸ್ವರೂಪನ ಕಂಡೆ ನಾನು.

ಕಂಡೆನ್ನ ಕಂಗಳ ಬರ ಹಿಂಗಿತ್ತೆನಗೆ.
ಗಂಡಗಂಡರೆಲ್ಲರ ಹೆಂಡಿರಾಗಿ ಆಳುವ
ಗರುವನ ಕಂಡೆ ನಾನು.
ಜಗದಾದಿ ಶಕ್ತಿಯೊಳು ಬೆರಸಿ ಮಾತನಾಡುವ ಪರಮಗುರು ಚೆನ್ನಮಲ್ಲಿಕಾರ್ಜುನನ

ನಿಲವ ಕಂಡು ಬದುಕಿದೆನು

……………………………………………………………………………………………………

ಹೊಳೆ ಕೆಂಜೆಡೆಯ ಮೇಲೆ ಎಳೆವೆಳದಿಂಗಳು,
ಫಣಿಮಣಿ ಕರ್ಣಕುಂಡಲ ನೋಡವ್ವಾ
ರುಂಡಮಾಲೆಯ ಕೊರಳವನ ಕಂಡಡೆ ಒಮ್ಮೆ ಬರಹೇಳವ್ವಾ ?
ಗೋವಿಂದನ ನಯನ ಉಂಗುಟದ ಮೇಲಿಪ್ಪುದು, ಚೆನ್ನಮಲ್ಲಿಕಾರ್ಜುನದೇವನ ಕುರುಹವ್ವಾ.

……………………………………………………………………………………………………

ಹೆಣ್ಣು ಹೆಣ್ಣಾದಡೆ ಗಂಡಿನಸೂತಕ.
ಗಂಡು ಗಂಡಾದಡೆ ಹೆಣ್ಣಿನಸೂತಕ. ಮನದಸೂತಕ ಹಿಂಗಿದಡೆ
ತನುವಿನ ಸೂತಕಕ್ಕೆ ತೆರಹುಂಟೆ ?
ಅಯ್ಯಾ, ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ. ಎನ್ನ ದೇವ ಚೆನ್ನಮಲ್ಲಿಕಾರ್ಜುನನೆಂಬ ಗರುವಂಗೆ ಜಗವೆಲ್ಲ ಹೆಣ್ಣು ನೋಡಾ ಅಯ್ಯಾ
……………………………………………………………………………………………………

ಹೆದರದಿರು ಮನವೆ, ಬೆದರದಿರು ತನುವೆ,
ನಿಜವನರಿತು ನಿಶ್ಚಿಂತನಾಗಿರು.
ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ,
ಎಲವದಮರನ ಇಡುವರೊಬ್ಬರ ಕಾಣೆ. ಭಕ್ತಿಯುಳ್ಳವರ ಬೈವರೊಂದುಕೋಟಿ,
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ.
ನಿಮ್ಮ ಶರಣರ ನುಡಿಯೆ ಎನಗೆ ಗತಿ, ಸೋಪಾನ, ಚೆನ್ನಮಲ್ಲಿಕಾರ್ಜುನಾ.

……………………………………………………………………………………………………
ಹೊನ್ನು ಮುರಿದಡೆ ಬೆಸಸಬಹುದಲ್ಲದೆ, ಮುತ್ತು ಒಡೆದಡೆ ಬೆಸಸಬಹುದೆ ? ಮನ ಮುರಿದಡೆ ಮನಕೊಬ್ಬರೊಡೆಯರುಂಟೆ ?
ಚೆನ್ನಮಲ್ಲಿಕಾರ್ಜುನ ಸಾಕ್ಷಿಯಾಗಿ ಬೇಟವುಳ್ಳಲ್ಲಿ ಬೆರೆಸೆ ಘನ.

……………………………………………………………………………………………………

ಕೋಲ ತುದಿಯ ಕೋಡಗದಂತೆ, ನೇಣ ತುದಿಯ ಬೊಂಬೆಯಂತೆ, ಆಡಿದೆನಯ್ಯಾ ನೀನಾಡಿಸಿದಂತೆ, ಆನು ನುಡಿದೆನಯ್ಯಾ ನೀ ನುಡಿಸಿದಂತೆ, ಆನು ಇದೆನಯ್ಯಾ ನೀನು ಇರಿಸಿದಂತೆ, ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ.
……………………………………………………………………………………………………

ಕ್ರೀಯುಳ್ಳಡಂತೊಂದಾಸೆ, ಸದ್ಭಕ್ತರ ನುಡಿಗಡಣವುಳ್ಳಡಂತೊಂದಾಸೆ,
ಶ್ರೀಗಿರಿಯನೇರಿ ನಿಮ್ಮ ಬೆರಸಿದಡೆ ಎನ್ನಾಸೆಗೆ ಕಡೆಯ ಅಯ್ಯಾ
ಆವಾಸೆಯೂ ಇಲ್ಲದೆ ನಿಮ್ಮ ನಂಬಿ ಬಂದು ಕೆಟ್ಟೆನಯ್ಯಾ ಚೆನ್ನಮಲ್ಲಿಕಾರ್ಜುನಾ.

……………………………………………………………………………………………………

akka mahadevi vachana in kannada

ಅಕ್ಕಮಹಾದೇವಿ ವಚನಗಳು | Akkamahadevi Vachanagalu In Kannada Best No1 Notes


ಕ್ರಿಯೆಗಳು ಮುಟ್ಟಲರಿಯವು,
ನಿಮ್ಮನೆಂತು ಪೂಜಿಸುವೆ ?
ನಾದ ಬಿಂದುಗಳು ಮುಟ್ಟಲರಿಯವು,
ನಿಮ್ಮನೆಂತು ಹಾಡುವೆ ?
ಕಾಯ ಮುಟ್ಟುವಡೆ ಕಾಣಬಾರದ ಘನವು,
ನಿಮ್ಮನೆಂತು ಕರಸ್ಥಲದಲ್ಲಿ ಧರಿಸುವೆ ?
ಚೆನ್ನಮಲ್ಲಿಕಾರ್ಜುನಯ್ಯಾ, ನಾನೇನೆಂದರಿಯದೆ ನಿಮ್ಮ ನೋಡಿ ನೋಡಿ ಸೈವೆರಗಾಗುತಿರ್ದೆನು.

download 21

……………………………………………………………………………………………………

ಎನಗೇಕಯ್ಯಾ ನಾ ಪ್ರಪಂಚಿನ ಪುತ್ಥಳಿ.
ಮಾಯಿಕದ ಮಲಭಾಂಡ, ಆತುರದ ಭವನಿಳಯ.

ಜಲಕುಂಭದ ಒಡೆಯಲ್ಲಿ ಒಸರುವ ನೆಲೆವನೆಗೇಕಯ್ಯಾ ?

ಬೆರಳು ತಾಳಹಣ್ಣ ಹಿಸುಕಿದಡೆ ಮೆಲಲುಂಟೆ ?
ಬಿತ್ತೆಲ್ಲಾ ಜೀವ ಅದರೊಪ್ಪದ ತೆರ ಎನಗೆ.
ಎನ್ನ ತಪ್ಪನೊಪ್ಪಗೊಳ್ಳಿ, ಚೆನ್ನಮಲ್ಲಿಕಾರ್ಜುನದೇವರದೇವ ನೀವೆ ಅಣ್ಣಗಳಿರಾ.

……………………………………………………………………………………………………

ಎನ್ನ ಅಂಗದಲ್ಲಿ ಆಚಾರವ ತೋರಿದನಯ್ಯಾ ಬಸವಣ್ಣನು.

ಆ ಆಚಾರವನೆ ಲಿಂಗವೆಂದರುಹಿದನಯ್ಯಾ ಬಸವಣ್ಣನು.
ಎನ್ನ ಪ್ರಾಣದಲ್ಲಿ ಅರಿವ ತೋರಿದನಯ್ಯಾ ಬಸವಣ್ಣನು.

ಆ ಅರಿವೆ ಜಂಗಮವೆಂದರುಹಿದನಯ್ಯಾ ಬಸವಣ್ಣನು.
ಚೆನ್ನಮಲ್ಲಕಾರ್ಜುನಯ್ಯಾ,

ಎನ್ನ ಹೆತ್ತತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯಾ ಪ್ರಭುವೆ.

……………………………………………………………………………………………………

ಎನ್ನ ಕಾಯ ಮಣ್ಣು, ಜೀವ ಬಯಲು,ಆವುದ ಹಿಡಿವೆನಯ್ಯಾ.
ದೇವಾ, ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯಾ ?

ಎನ್ನ ಮಾಯೆಯನು ಮಾಣಿಸಯ್ಯಾ ಚೆನ್ನಮಲ್ಲಿಕಾರ್ಜುನಾ.

……………………………………………………………………………………………………

ಆಕಾರವಿಲ್ಲದ ನಿರಾಕಾರ ಲಿಂಗವ

ಕೈಯಲ್ಲಿ ಹಿಡಿದು ಕಟ್ಟಿದೆವೆಂಬರು ಅಜ್ಞಾನಿ ಜೀವಿಗಳು.
ಹರಿಬ್ರಹ್ಮರು ವೇದ ಪುರಾಣ ಆಗಮಂಗಳು
ಅರಸಿ ಕಾಣದ ಲಿಂಗ. ಭಕ್ತಿಗೆ ಫಲವಲ್ಲದೆ ಲಿಂಗವಿಲ್ಲ.

ಕರ್ಮಕ್ಕೆ ನರಕವಲ್ಲದೆ ಲಿಂಗವಿಲ್ಲ.

ಜ್ಞಾನಕ್ಕೆ ಪರಿಭ್ರಮಣವಲ್ಲದೆ ಲಿಂಗವಿಲ್ಲ.

ವೈರಾಗ್ಯಕ್ಕೆ ಮುಕ್ತಿಯಲ್ಲದೆ ಲಿಂಗವಿಲ್ಲ.

ಇದು ಕಾರಣ ತನ್ನ ತಾನರಿದು ತಾನಾದಡೆ

ಚೆನ್ನಮಲ್ಲಿಕಾರ್ಜುನ ತಾನೆ ಬೇರಿಲ್ಲ.

download 1 removebg preview
Akkamahadevi Vachanagalu In Kannada

……………………………………………………………………………………………………

ಆಡಬಹುದು ಪಾಡಬಹುದಲ್ಲದೆ

ನುಡಿದಂತೆ ನಡೆಯಬಾರದು ಎಲೆ ತಂದೆ.

ಲಿಂಗಕ್ಕೆ ಶರಣೆನ್ನಬಹುದಲ್ಲದೆ

ಜಂಗಮಕ್ಕೆ ಶರಣೆನ್ನ ಬಾರದೆಲೆ ತಂದೆ.

ಚೆನ್ನಮಲ್ಲಿಕಾರ್ಜುನದೇವಾ,
ನಿಮ್ಮ ಶರಣರು ನುಡಿದಂತೆ ನಡೆಯಬಲ್ಲರು ಎಲೆ ತಂದೆ.

ಅಕ್ಕಮಹಾದೇವಿ ಜೀವನ ಚರಿತ್ರೆ ಕನ್ನಡ

ಅಕ್ಕ ಮಹಾದೇವಿ ವೀರಶೈವ ಧರ್ಮಕ್ಕೆ ಸೇರಿದ ಪ್ರಸಿದ್ಧ ಮಹಿಳಾ ಸಂತರಾಗಿದ್ದರು . ಇದು ಹನ್ನೆರಡನೆಯ ಶತಮಾನದಲ್ಲಿ ಸಂಭವಿಸಿತು . ಕನ್ನಡ ಗದ್ಯದಲ್ಲಿ ಅವರ ಪದಗಳು ಭಕ್ತಿ ಕಾವ್ಯಕ್ಕೆ ಅತ್ಯುನ್ನತ ಕೊಡುಗೆ ಎಂದು ಪರಿಗಣಿಸಲಾಗಿದೆ .

ಒಟ್ಟಾರೆಯಾಗಿ, ಅಕ್ಕ ಮಹಾದೇವಿ ಸುಮಾರು 430 ಶ್ಲೋಕಗಳನ್ನು ಮಾತನಾಡಿದ್ದಾರೆ, ಇದು ಇತರ ಸಮಕಾಲೀನ ಸಂತರ ಮಾತುಗಳಿಗಿಂತ ಕಡಿಮೆಯಾಗಿದೆ . ವೀರಶೈವ ಧರ್ಮದ ಇತರ ಋಷಿಗಳಾದ ಬಸವ , ಚೆನ್ನಬಸವ, ಕಿನ್ನರಿ ಬೊಮ್ಮಯ್ಯ, ಸಿದ್ದರಾಮ, ಆಲಂಪ್ರಭು ಮತ್ತು ದಾಸ್ಸಿಮಯ್ಯ ಅವರಿಗೆ ಉನ್ನತ ಸ್ಥಾನವನ್ನು ನೀಡಲಾಯಿತು.ಮುಂದೆ ಓದಿ …

ಬಸವಣ್ಣನವರ ವಚನಗಳು ಕನ್ನಡ

ಸ್ವಾಮಿ ನೀನು, ಶಾಶ್ವತ ನೀನು.

ಎತ್ತಿದೆ ಬಿರುದ ಜಗವೆಲ್ಲರಿಯಲು.

ಮಹಾದೇವ, ಮಹಾದೇವ!

ಇಲ್ಲಿಂದ ಮೇಲೆ ಶಬ್ದವಿಲ್ಲ!

ಪಶುಪತಿ ಜಗಕ್ಕೆ ಏಕೋದೇವ

ಸ್ವರ್ಗಮರ್ತ್ಯ ಪಾತಾಳದೊಳಗೊಬ್ಬನೇ ದೇವ

ಕೂಡಲಸಂಗಮದೇವ ಮುಂದೆ ಓದಿ …

FAQ

ಅಕ್ಕಮಹಾದೇವಿ ತಂದೆ ತಾಯಿ?

ನಿರ್ಮಲಶೆಟ್ಟಿ ಮತ್ತು ಸುಮತಿ

ಅಕ್ಕಮಹಾದೇವಿ ಜನ್ಮಸ್ಥಳ

ಉಡುತಡಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ.

ಇತರೆ ಪ್ರಬಂಧಗಳನ್ನು ಓದಿ

Leave a Reply

Your email address will not be published. Required fields are marked *