aagama sandhi kannada | ಆಗಮ ಸಂಧಿ
ಆಗಮ ಸಂಧಿ ಮೇಲೆ ಹೇಳಿದ ಲೋಪಸಂಧಿಯನ್ನು ಅರ್ಥವು ಕೆಡದಂತಿದ್ದರೆ ಮಾತ್ರ ಮಾಡಬೇಕು , ಇಲ್ಲದಿದ್ದರೆ ಮಾಡಬಾರದು ಎಂದು ತಿಳಿದಿದ್ದೀರಿ .
ಮನೆ + ಅನ್ನು ಎಂಬಲ್ಲಿ ಲೋಪ ಮಾಡಿದರೆ ‘ ಮನನ್ನು ‘ ಆಗುವುದು.
ಗುರು + ಅನ್ನು ಎಂಬಲ್ಲಿ ಲೋಪ ಮಾಡಿದರೆ ‘ ಗುರನ್ನು ‘ ಆಗುವುದು
ಎಂಬುದನ್ನು ಹಿಂದೆ ತಿಳಿದಿದ್ದೀರಿ . ಹಾಗಾದರೆ ಮನೆ + ಅನ್ನು , ಗುರು + ಅನ್ನು ಇವು ಕೂಡುವಾಗ ಪದದ ಮಧ್ಯದಲ್ಲಿ ಸ್ವರದ ಮುಂದೆ ಸ್ವರ ಬಂದಿದೆಯಾದ್ದರಿಂದ ಅವನ್ನು ಬಿಡಿ ಬಿಡಿಸಿ ಅನ್ನಲೂ ಕೂಡ ಯೋಗ್ಯವಾಗುವುದಿಲ್ಲ .
ಆಗ ಆ ಎರಡೂ ಸ್ವರಗಳ ಮಧ್ಯದಲ್ಲಿ ಕೂಡಿಸಿ ಹೇಳಲು ಅನುಕೂಲವಾಗುವಂತಹ ‘ ಯ್’ಕಾರವನ್ನೋ , ‘ ವ್ ‘ ಕಾರವನ್ನೋ ಹೊಸದಾಗಿ ಸೇರಿಸಿದಾಗ ಉಚ್ಚಾರಮಾಡಲು ಅನುಕೂಲವಾಗುವುದು . ಹೀಗೆ ಹೊಸದಾಗಿ ಸೇರುವ ಅಕ್ಷರವೇ ಆಗಮಾಕ್ಷರ . ಹಾಗೆ ಹೊಸ ಅಕ್ಷರವನ್ನು ಸೇರಿಸಿ ಹೇಳುವ ಸಂಧಿಯೇ ಆಗಮಸಂಧಿ
1 ) ಕೈಯೆತ್ತು = ಕೈ + ಎತ್ತು
2 ) ಈಯಲು = ಈ + ಅಲು
3 ) ಕುಲವನ್ನು = ಕುಲ + ಅನ್ನು
4 ) ಗೋವಿಂದ = ಗೋ + ಇಂದ ಈ ಸಂಧಿಕಾರ್ಯದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಯ್ , ವ್ ವ್ಯಂಜನಗಳು ಹೊಸದಾಗಿ ಆಗಮವಾಗುತ್ತವೆ.
aagama sandhi kannada