ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು notes | 2nd PUC Political Science Chapter 4 Notes in Kannada

ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು notes | 2nd PUC Political Science Chapter 4 Notes in Kannada

Students can Download Political Science Chapter 4 Social Movements and their Political Implications Questions and Answers, Notes Pdf, samajika chaluvaligalu mattu avugala rajakiya parinamagalu notes

Spardhavani Telegram
Spardhavani.com

2nd PUC Political Science Chapter 4 Notes in Kannada

Notes of 2nd PUC, Political Science ಅಧ್ಯಾಯ-4. ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು

I. . ಒಂದು ಅಂಕದ ಪ್ರಶ್ನೆಗಳು.

ನಾಸಿಕ್ ಕಲಾರಾಮ್ ದೇವಸ್ಥಾನವನ್ನು ಮೊದಲು ಪ್ರವೇಶಿಸಿದ ದಲಿತ ನಾಯಕರು ಯಾರು ?

ಡಾ || ಬಿ . ಆರ್ . ಅಂಬೇಡ್ಕರ್‌ರವರು ನಾಸಿಕ್ ಕಲಾರಾಮ್ ದೇವಸ್ಥಾನವನ್ನು ಮೊದಲು ಪ್ರವೇಶಿಸಿದ ದಲಿತ ನಾಯಕರು .

2. ವರ್ಣಾಶ್ರಮ ವ್ಯವಸ್ಥೆಯಲ್ಲಿ ಇದ್ದಂತಹ ವರ್ಗಗಳೆಷ್ಟು ?

4 ವರ್ಗಗಳು ವರ್ಣಾಶ್ರಮ ವ್ಯವಸ್ಥೆಯಲ್ಲಿ ಇದ್ದಂತಹ ವರ್ಗಗಳು .

3. ‘ ಮೂಕನಾಯಕ ‘ ಪತ್ರಿಕೆಯನ್ನು ಪ್ರಾರಂಭಿಸಿದವರು ಯಾರು ?

ಅಂಬೇಡ್ಕರ್‌ರವರು ‘ ಮೂಕನಾಯಕ ‘ ಪತ್ರಿಕೆಯನ್ನು ಪ್ರಾರಂಭಿಸಿದರು .

4. ‘ ಮನುಸ್ಮೃತಿ ‘ ಯಾವಾಗ ಅಳವಡಿಸಲಾಗಿತ್ತು ?

ಕ್ರಿ.ಪೂ 185 ರಲ್ಲಿ ‘ ಮನುಸ್ಮೃತಿ ‘ ಯನ್ನು ಅಳವಡಿಸಲಾಗಿತ್ತು .

5 , ಜ್ಯೋತಿ ಬಾ ಮಲೆಯವರು ಯಾವ ಪರಿಕಲ್ಪನೆಯ ಬಗ್ಗೆ ಒತ್ತಿ ಹೇಳಿದರು ?

ಜ್ಯೋತಿ ಬಾ ಪುಲೆಯವರು ಅಕ್ಷರ ಕ್ರಾಂತಿ ಎಂಬ ಪರಿಕಲ್ಪನೆಯ ಬಗ್ಗೆ ಒತ್ತಿ ಹೇಳಿದರು .

2nd PUC Political Science Chapter 4 Notes in Kannada

6. ಸಾಮಾಜಿಕ ತಾರತಮ್ಯ ಎಂದರೇನು ?

ಕೀಳು ಭಾವನೆಯನ್ನು ಅನುಭವಿಸಿದ ಕೆಲವು ವರ್ಗಗಳು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳ್ಳಲು ಅವಕಾಶವಿಲ್ಲದಿರುವ ಪರಿಸ್ಥಿತಿಯನ್ನು ಸಾಮಾಜಿಕ ತಾರತಮ್ಯ ಎನ್ನುವರು .

7. ಆರ್ಥಿಕ ಶೋಷಣೆ ಎಂದರೇನು ?

ಬಡತನ ರೇಖೆಗಿಂತ ಕೆಳಗಿದ್ದವರು ಆರ್ಥಿಕ ಅಸಮಾನತೆಯ ಜೊತೆಗೆ ಶೋಷಣೆಗೆ ಒಳಗಾಗಿದ್ದರು ಇದನ್ನು ಆರ್ಥಿಕ ಶೋಷಣೆ ಎನ್ನುವರು .

8. ಮಂಡಲ ಆಯೋಗ ಯಾವಾಗ ಜಾರಿಗೆ ಬಂದಿತು ?

ಶ್ರೀ . ಬಿ.ಪಿ. ಮಂಡಲ ಆಯೋಗ 1990 ರಲ್ಲಿ ಜಾರಿಗೆ ಬಂದಿತು .

9.ಸತಿ – ಪದ್ಧತಿಯನ್ನು ಹೋಗಲಾಡಿಸಲು ಹೋರಾಡಿದ ನಾಯಕರು ಯಾರು ?

ರಾಜಾರಾಮ್ ಮೋಹನ್‌ರಾಯರು ಸತಿ – ಪದ್ಧತಿಯನ್ನು ಹೋಗಲಾಡಿಸಲು ಹೋರಾಡಿದ ನಾಯಕರು.

2nd PUC Political Science Chapter 4 Notes in Kannada

10. ವಿಧವಾ ಪುನರ್ ವಿವಾಹ ಕಾಯಿದೆ ಯಾವಾಗ ಜಾರಿಗೆ ಬಂದಿತು ?

1856 ರಲ್ಲಿ ವಿಧವಾ ಪುನರ್ ವಿವಾಹ ಕಾಯಿದೆ ಜಾರಿಗೆ ಬಂದಿತು.

11. ರಾಷ್ಟ್ರೀಯ ಮಹಿಳಾ ಆಯೋಗ ಯಾವಾಗ ಜಾರಿಗೆ ಬಂದಿತು ?

1992 ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಯಾವಾಗ ಜಾರಿಗೆ ಬಂದಿತು .

12. ಶೋಷಿತ ಮಹಿಳೆಯರಿಗೆ ಶಿಕ್ಷಣ ಪ್ರಾರಂಭಿಸಿದ ಪ್ರಥಮ ಶಿಕ್ಷಕಿಯನ್ನು ಹೆಸರಿಸಿ .

ಸಾವಿತ್ರಿ ಬಾ ಪುಲೆಯವರು ಶೋಷಿತ ಮಹಿಳೆಯರಿಗೆ ಶಿಕ್ಷಣ ಪ್ರಾರಂಭಿಸಿದ ಪ್ರಥಮ ಶಿಕ್ಷಕಿ .

13.ಕೌಟುಂಬಿಕ ದೌರ್ಜನ್ಯ ಕಾಯಿದೆ ಯಾವಾಗ ಜಾರಿಗೆ ಬಂದಿತು ?

ಕೌಟುಂಬಿಕ ದೌರ್ಜನ್ಯ ಕಾಯಿದೆ 1954 ರಲ್ಲಿ ಜಾರಿಗೆ ಬಂದಿತು .

14. ಎ.ಐ.ಟಿ.ಯು.ಸಿ. ವಿಸ್ತರಿಸಿ .

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್.

15. ಐ.ಎನ್.ಟಿ.ಯು.ಸಿ ವಿಸ್ತರಿಸಿ .

ಇಂಡಿಯನ್ ನ್ಯಾಷನಲ್ ಟ್ರೇಡ್ ಯುನಿಯನ್ ಕಾಂಗ್ರೆಸ್ ,

16. ಸಿ.ಐ.ಟಿ.ಯು ವಿಸ್ತರಿಸಿ .

ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್

17 . ಯು.ಟಿ.ಯು.ಸಿ. ವಿಸ್ತರಿಸಿ ,

ಯುನೈಟೆಡ್ ಟ್ರೇಡ್ ಯುನಿಯನ್ ಕಾಂಗ್ರೆಸ್ .

2nd PUC Political Science Chapter 4 Notes in Kannada

18. ಬಿ.ಎಂ.ಎಸ್ . ವಿಸ್ತರಿಸಿ .

ಭಾರತೀಯ ಮಜೂರ ಸಂಘ

19. ಹೆಚ್.ಎಂ.ಪಿ. ವಿಸ್ತರಿಸಿ

ಹಿಂದೂ ಮದ್ದೂರ್ ಪಂಚಾಯತ್ ,

20.ಹೆಚ್ . ಎಂ . ಎಸ್ . ವಿಸ್ತರಿಸಿ .

ಹಿಂದೂ ಮಜೂರ್ ಸಭಾ .

21. ಯಾವ ದಿನವನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ ?

ಮೇ 1 ನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ .

22. ರೈತರ ಮೂಲ ಕಸುಬು ಯಾವುದು ?

ರೈತರ ಮೂಲ ಕಸುಬು ಕೃಷಿ

23. ಬಿ.ಕೆ.ಯು. ವಿಸ್ತರಿಸಿ .

ಭಾರತೀಯ ಕಿಸಾನ್ ಒಕ್ಕೂಟ .

24. ಎನ್.ಸಿ.ಐ.ಪಿ ವಿಸ್ತರಿಸಿ .

National Crop Insurance Programme ರಾಷ್ಟ್ರೀಯ ಬೆಳೆ ವಿಮೆ ಯೋಜನೆ .

25. ಎನ್.ಎ.ಐ.ಎಸ್ ವಿಸ್ತರಿಸಿ .

ರಾಷ್ಟ್ರೀಯ ಕೃಷಿ ವಿಮೆ ಯೋಜನೆ . National Ag riculture Insurance Scheme .

26. ಪಿ.ಎಲ್.ಡಿ.ಬಿ. ವಿಸ್ತರಿಸಿ .

Primary Land Development Bank. ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌

2nd PUC Political Science Chapter 4 Notes in Kannada

27. ಎನ್.ಡಿ.ಸಿ. ವಿಸ್ತರಿಸಿ .

National Development Council .ರಾಷ್ಟ್ರೀಯ ಅಭಿವೃದ್ಧಿ ಮಂಡಳಿ .

28. ಕೆ.ಆರ್.ಆರ್.ಎಸ್ . ವಿಸ್ತರಿಸಿ .

ಕರ್ನಾಟಕ ರಾಜ್ಯ ರೈತರ ಸಂಘ .

29. ಯು.ಡಿ.ಎಚ್.ಆರ್ ಎಸ್ತರಿಸಿ .

Universal Declaration of Human Rights ಜಾಗತಿಕ ಮಾನವ ಹಕ್ಕುಗಳ ಶೋಷಣೆ .

30. ಎನ್.ಹೆಚ್.ಆರ್.ಸಿ ವಿಸ್ತರಿಸಿ .

National Human Rights commission ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ .

31. ಕರ್ನಾಟಕದಲ್ಲಿ ಮಾನವ ಹಕ್ಕುಗಳ ಆಯೋಗ ಯಾವಾಗ ಸ್ಥಾಪನೆಯಾಯಿತು ?

ಕರ್ನಾಟಕದಲ್ಲಿ ಮಾನವ ಹಕ್ಕುಗಳ ಆಯೋಗ 2005 ರಲ್ಲಿ ಸ್ಥಾಪನೆಯಾಯಿತು .

32. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಯಾವಾಗ ಸ್ಥಾಪನೆಯಾಯಿತು ?

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 1994 ರಲ್ಲಿ ಸ್ಥಾಪನೆಯಾಯಿತು

33. ಜಿಲ್ಲೆಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಮಾಡುವ ಮುಖ್ಯಸ್ಥರು ಯಾರು ?

ಜಿಲ್ಲೆಯಲ್ಲಿ ಮಾನವ ಹಕ್ಕುಗಳ ರಕ್ಷಣೆಯನ್ನು ಜಿಲ್ಲಾಧಿಕಾರಿಗಳು ಮಾಡುತ್ತಾರೆ .

34. ಚಿಸ್ಕೋ ಚಳುವಳಿಯ ರೂವಾರಿ ಯಾರು ?

ಚಿಕ್ಕೋ ಚಳುವಳಿಯ ರೂವಾರಿ ಸುಂದರ್‌ಲಾಲ್ ಬಹುಗುಣ .

35. ಅಪ್ಪಿಕೋ ಚಳುವಳಿ ಎಲ್ಲಿ ಪ್ರಾರಂಭವಾಯಿತು ?

ಕರ್ನಾಟಕದ ಮಲೆನಾಡಿನ ಶಿರ್ಸಿ , ಸಿದ್ದಾಪುರದಲ್ಲಿ ಪ್ರಾರಂಭವಾಯಿತು .

2nd PUC Political Science Chapter 4 Notes in Kannada

36. ನರ್ಮದಾ ಬಚಾವೋ ಆಂದೋಲನದ ನಾಯಕರು ಯಾರು ?

ನರ್ಮದಾ ಬಚಾವೋ ಆಂದೋಲನದ ನಾಯಕರು ಬಾಬಾ ಆಮೆ ಮತ್ತು ಮೇದಾ ಪಾಟ್ಕರ್ .

37. ಗಂಗಾ ನದಿಯ ಶುದ್ದೀಕರಣಕ್ಕಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದವರು ಯಾರು ?

ಶ್ರೀ ಎಂ.ಸಿ. ಮೆಹತಾ ಗಂಗಾ ನದಿಯ ಶುದ್ದೀಕರಣಕ್ಕಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು

38. ಜೀವ ವೈವಿಧ್ಯ ಕಾಯಿದೆ ಯಾವಾಗ ಜಾರಿಗೆ ಬಂದಿತು ?

ಜೀವ ವೈವಿಧ್ಯ ಕಾಯಿದೆ 2002 ರಲ್ಲಿ ಜಾರಿಗೆ ಬಂದಿತು .

39. ಸಾಲು ಮರದ ತಿಮ್ಮಕ್ಕ ಯಾವ ಜಿಲ್ಲೆಗೆ ಸೇರಿದವರು ?

ಸಾಲು ಮರದ ತಿಮ್ಮಕ್ಕ ರಾಮನಗರ ಜಿಲ್ಲೆಗೆ ಸೇರಿದವರು .

40. ಪಶ್ಚಿಮಘಟ್ಟ ಚಳುವಳಿ ಪ್ರಾರಂಭಿಸಿದವರು ಯಾರು ?

ಪರಿಸರವಾದಿಗಳು ಪಶ್ಚಿಮಘಟ್ಟ ಚಳುವಳಿಯನ್ನು ಪ್ರಾರಂಭಿಸಿದರು .

41. ಯಾವ ದಿನದಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ ?

ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ

2nd PUC Political Science Chapter 4 Notes in Kannada

II . ಎರಡು ಅಂಕದ ಪ್ರಶ್ನೆಗಳು

1. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಯಾರು ಮತ್ತು ಯಾವಾಗ ಸ್ಥಾಪಿಸಿದರು ?

1918 ರಲ್ಲಿ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ‘ ಲೆಸ್ಲಿ ಮಿಲ್ಲರ್’ರವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿ ಹಿಂದುಳಿದ ವರ್ಗದವರು ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದರು .

2. ದಲಿತರೆಂದರೆ ಯಾರು ?

ವರ್ಣಾಶ್ರಮದ ಐದನೇ ವರ್ಗದ ಜನ ಅಥವಾ ಪಂಚಮರು ( ಶೋಷಿತರು / ಅಸ್ಪೃಶ್ಯರು ) .

3. ದಲಿತ ಕಾಯ್ದೆಯ ವಿಶೇಷತೆ ಏನು ?

1989 ರ ದೌರ್ಜನ್ಯ ತಡೆ ಕಾಯ್ದೆಯು ‘ ದಲಿತ ಕಾಯ್ದೆ ‘ ಎಂದು ಜನಪ್ರಿಯವಾಗಿದೆ . ಸೆಕ್ಷನ್ 21 ರ ಪ್ರಕಾರ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳಿಗೆ ಕಾನೂನು ಸಲಹೆಯನ್ನು ಮತ್ತು ಸಾಮಾಜಿಕ , ಆರ್ಥಿಕ ಬೆಂಬಲ ನೀಡುವಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ವಿಷ್ಕಲವಾದಾಗ ದ ೦ ಡನಾರ್ಹವಾಗುತ್ತದೆ . ಇದಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ನೇಮಿಸಲಾಗಿದೆ .

2nd PUC Political Science Chapter 4 Notes in Kannada

4. ಅಂಬೇಡ್ಕರ್‌ ಮೂರು ವಾಣಿಗಳು ಯಾವುವು ?

  • ಶಿಕ್ಷಣ
  • ಸಂಘಟನೆ
  • ಹೋರಾಟ

ಇವು ಅಂಬೇಡ್ಕರರ ಮೂರು ವಾಣಿಗಳು ,

5. ಪ್ರಾಚೀನ ಕಾಲದ ನಾಲ್ಕು ಸಾಮಾಜಿಕ ವರ್ಗಗಳಾವುವು ?

ಪ್ರಾಚೀನ ಕಾಲದ ನಾಲ್ಕು ಸಾಮಾಜಿಕ ವರ್ಗಗಳು ಯಾವುವೆಂದರೆ

1. ಬ್ರಾಹ್ಮಣ

2. ಕ್ಷತ್ರಿಯ

3. ವೈಶ್ಯ

4. ಶೂದ

6. ಹಿಂದುಳಿದ ವರ್ಗದವರ ಏಳಿಗೆಗೆ ಹೋರಾಡಿದ ನಾಯಕರು ಯಾರು ?

ಕೇರಳದ ನಾರಾಯಣ ಗುರು , ತಮಿಳುನಾಡಿನ ಶ್ರೀ ಪೆರಿಯಾರ ರಾಮಸ್ವಾಮಿ , ಗ್ವಾಲಿಯರ್‌ನ ಮಹಾರಾಜ ಸಯ್ಯಾಜಿರಾವ್ ಗಾಯಕವಾಡ್ , ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ , ಕೊಲ್ಲಾಪುರದ ಸಾಹು ಮಹಾರಾಜ ಮುಂತಾದವರು ಹಿಂದುಳಿದ ವರ್ಗದವರ ಏಳಿಗೆಗೆ ಹೋರಾಡಿದರು .

7. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಹೋರಾಟ ಎಲ್ಲಿ ಮತ್ತು ಯಾವಾಗ ಪ್ರಾರಂಭವಾಯಿತು ?

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಹೋರಾಟ ಮೈಸೂರಿನಲ್ಲಿ , 1918 ರಲ್ಲಿ ಪ್ರಾರಂಭವಾಯಿತು .

8.ಹಿಂದು ವಿಡೋಸ್ ಹೊಮ್ ‘ ಎಲ್ಲಿ ಮತ್ತು ಯಾವಾಗ ಸ್ಥಾಪನೆಯಾಯಿತು ?

1899 ರಲ್ಲಿ ಪೂನಾದಲ್ಲಿ “ ಹಿಂದು ವಿಡೋಸ್ ಹೊಮ್ ಸ್ಥಾಪನೆಯಾಯಿತು .

9 .ಲಿಂಗ ಅಸಮಾನತೆಯನ್ನು ಅಳಿಸಲು ಜಾರಿಗೆ ತಂದಿರುವ ಯಾವುದಾದರೂ ಎರಡು ಕಾಯ್ದೆಗಳನ್ನು ತಿಳಿಸಿ .

ಸಂವಿಧಾನದ 14 ನೇ ಮತ್ತು 15 ನೇ ವಿಧಿಗಳನ್ನು ಲಿಂಗ ಅಸಮಾನತೆಯನ್ನು ಅಳಿಸಲು ಜಾರಿಗೆ ತರಲಾಗಿದೆ .

10. ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಎರಡು ಕಾಯ್ದೆಗಳನ್ನು ಹೆಸರಿಸಿ .

ಗೃಹ ಹಿಂಸೆಯ ವಿರುದ್ಧ ರಕ್ಷಣಾ ಕಾಯ್ದೆ 2005 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಈ ಕಾಯ್ದೆಗಳು ಮಹಿಳೆಯರಿಗೆ ಸಂಬಂಧಿಸಿವೆ .

11. ಇಬ್ಬರೂ ಭಾರತೀಯ ಕಮ್ಯೂನಿಸ್ಟ್ ನಾಯಕರನ್ನು ಹೆಸರಿಸಿ .

ಭಾರತೀಯ ಪ್ರಮುಖ ಕವನಿಸ್ಟ್ ನಾಯಕರುಗಳೆಂದರೆ ಎಸ್.ಎ. ಢಾಂಗೆ ಮತ್ತು ಇ.ಎಮ್.ಎಸ್.ನಂಬೂದ್ರಿಪಾಡ್

ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು notes | 2nd PUC Political Science Chapter 4 Notes in Kannada
ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು notes | 2nd PUC Political Science Chapter 4 Notes in Kannada

12. ಕಾರ್ಮಿಕರೆಂದರೆ ಯಾರು ?

ಕೃಷಿ ಮತ್ತು ಕೈಗಾರಿಕೆಗಳಲ್ಲಿ ಯಾರು ತಮ್ಮ ದೈಹಿಕ ಶ್ರಮವನ್ನು ಹಾಕಿ ಕೆಲಸ ಮಾಡುವರೋ ಅವರೇ ಕಾರ್ಮಿಕರು , ಈ ಕೆಲಸದಿಂದ ಪಡೆಯುವ ಕೂಲಿಯೇ ಅವರಿಗೆ ಜೀವನಾಧಾರವಾಗಿದೆ .

13. ಯಾವುದಾದರೂ ಎರಡು ಕಾರ್ಮಿಕ ಕಾಯ್ದೆಗಳನ್ನು ಹೆಸರಿಸಿ .

  • ಕಾರ್ಮಿಕ ಪರಿಹಾರ ಕಾಯ್ದೆ -1923
  • ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆ – 1965 14 .

14.ಕರ್ನಾಟಕ ರೈತ ಸಂಘದ ಇಬ್ಬರು ನಾಯಕರ ಹೆಸರು ತಿಳಿಸಿ .

ಕರ್ನಾಟಕ ರೈತ ಸಂಘದ ಇಬ್ಬರು ನಾಯಕರುಗಳೆಂದರೆ ಪ್ರೊ || ಎಮ್.ಡಿ. ನಂಜುಂಡಸ್ವಾಮಿ , ಮತ್ತು ಎನ್.ಡಿ. ಸುಂದರೇಶ .

2nd PUC Political Science Chapter 4 Notes in Kannada

15. ಖೇಡಾ ಚಳುವಳಿಯ ಎರಡು ಪ್ರಮುಖ ಕಾರಣಗಳು ಯಾವುವು ?

ಖೇಡಾ ಚಳುವಳಿಯ ಎರಡು ಪ್ರಮುಖ ಕಾರಣಗಳೆಂದರೆ

  • ಬಂಗಾಳ ಸರ್ಕಾರ ನೀಲಿ ಬೆಳೆ ಬೆಳೆಯುವುದನ್ನು ನಿಷೇಧಿಸಿ ರೈತರ ಭೂಮಿಯನ್ನು ವಶಪಡಿಸಿಕೊಂಡರು .
  • ರೈತರ ಸಮಸ್ಯೆಗಳನ್ನು ಕಡೆಗಣಿಸಿದ ಸರ್ಕಾರ ಹೆಚ್ಚು ಮೊತ್ತದ ತೆರಿಗೆ ವಿಧಿಸಿದರು .

16. ಮಾನವ ಹಕ್ಕುಗಳ ಬಗ್ಗೆ ಅರ್ಥೈಸಿ .

ಮಾನವನಿಂದ ಬೇರ್ಪಡಿಸಲಾಗದಂತಹ ಹಕ್ಕುಗಳೇ ಮಾನವ ಹಕ್ಕುಗಳು . ಯಾವುದೇ ಧರ್ಮ , ಜಾತಿ , ಲಿಂಗ , ಬಣ್ಣ , ಭಾಷೆ , ಜನ್ಮಸ್ಥಳ , ಸಾಮಾಜಿಕ , ಆರ್ಥಿಕ ರಾಜಕೀಯ ಮತ್ತು ಇತರ ಸ್ಥಾನಮಾನಗಳ ಅಂತರವಿಲ್ಲದೇ ಮಾನವರು ಈ ಹಕ್ಕುಗಳನ್ನು ಅನುಭವಿಸುತ್ತಾರೆ .

17. ‘ ಮರ್ಯಾದೆ ಹತ್ಯೆ ‘ ಎಂದರೇನು ?

ಆಧುನಿಕತೆಯ ಪರಿಣಾಮವಾಗಿ ಯುವ ಜನತೆ ಅಂರ್ಜಾತಿಯ ವಿವಾಹ ಮತ್ತು ಅಂತರ್‌ಜಾತಿಯ ಧರ್ಮೀಯ ವಿವಾಹಗಳಿಗೆ ಮಾರುಹೋಗುತ್ತಿದ್ದಾರೆ . ಆದರೆ ಇದನ್ನು ತಪ್ಪಿಸಲು , ಕುಟುಂಬದ ಗೌರವವನ್ನು ಕಾಪಾಡಲು ಹತ್ಯೆ ಮಾಡಲಾಗುವುದು . ಇದನ್ನು ಮರ್ಯಾದೆ ಹತ್ಯೆ ಎನ್ನಲಾಗುವುದು .

2nd PUC Political Science Chapter 4 Notes in Kannada

18. ಪರಿಸರ ಚಳುವಳಿಗೆ ಸಂಬಂಧಿಸಿದ ಎರಡು ಕಾಯ್ದೆಗಳನ್ನು ಹೆಸರಿಸಿ .

  • ಪರಿಸರ ಸಂರಕ್ಷಣಾ ಕಾಯ್ದೆ – 1986
  • ಜೀವ ವೈವಿಧ್ಯ ಕಾಯ್ದೆ – 2002

ಇವು ಪರಿಸರ ಚಳುವಳಿಗೆ ಸಂಬಂಧಿಸಿದ ಎರಡು ಕಾಯ್ದೆಗಳು .

19. ಪರಿಸರ ಎಂದರೇನು ?

ನಮ್ಮ ಸುತ್ತಮುತ್ತಲಿನ ಜೈವಿಕ ಮತ್ತು ಅಜೈವಿಕ ಅಂಶಗಳ ಒಟ್ಟು ಸಮೂಹವೇ ಪರಿಸರ ,

2nd PUC Political Science Chapter 4 Notes in Kannada

ಇದನ್ನು ಓದಿ :-

ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ

ಭಾರತದಲ್ಲಿ ಆಡಳಿತ ಯಂತ್ರ

3 thoughts on “ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು notes | 2nd PUC Political Science Chapter 4 Notes in Kannada

Leave a Reply

Your email address will not be published. Required fields are marked *