ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್ | 1st PUC Kannada Ragi Mudde Notes

1st PUC Kannada Ragi Mudde Notes | ರಾಗಿ ಮುದ್ದೆ ಪಾಠ

1st puc kannada ragi mudde notes, ರಾಗಿ ಮುದ್ದೆ ಪಾಠ, notes ragi mudde lesson in kannada answer, ragi mudde 1st puc Pdf, ಪ್ರಥಮ ಪಿ.ಯು.ಸಿ ರಾಗಿಮುದ್ದೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Kannada Ragi Mudde Lesson Notes Question Answer Summary Guide Mcq Pdf Download in Kannada Medium Karnataka State Syllabus 2023 Kseeb Solutions For Class 11 Kannada Chapter 2 Notes 1st Puc Kannada 2nd Lesson Notes 1st Puc Kannada Notes Ragi Mudde Question Answer Summary Pdf prabandha, summary, ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್

1st PUC Kannada Ragi Mudde Notes

ಲೇಖಕರ ಪರಿಚಯ

ಚ.ಹ. ರಘುನಾಥ

ಜನನ : 1974

ಸ್ಥಳ : ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹರಳಾಪುರ

ಕವನ ಸಂಕಲನ

ಹೊಳೆಯಲ್ಲಿ ಹರಿದ ನೀರು

ಕಥಾ ಸಂಕಲನ

ಹೊರಗೂ ಮಳೆ ಒಳಗೂ ಮಳೆ ಎಂಬ ಕಥಾ ಸಂಕಲನದಿಂದ ರಾಗಿಮುದ್ದೆ ‘ ಎಂಬ ಪ್ರಬಂಧ ಸಂಕಲನವನ್ನೂ ಆಯ್ದುಕೊಳ್ಳಲಾಗಿದೆ

ಪುರಸ್ಕಾರಗಳು

  • ಕಥಾರಂಗ ಪ್ರಶಸ್ತಿ
  • ವಸುದೇವ ಭೂಪಾಲಂ ಪ್ರಶಸ್ತಿ
  • ಕೆ . ಸಾಂಬಶಿವಪ್ಪ ಸ್ಮಾರಕ ಪ್ರಶಸ್ತಿ
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಒಂದು ವಾಕ್ಯದಲ್ಲಿ ಉತ್ತರಿಸಿ

ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್ | 1st PUC Kannada Ragi Mudde Notes
ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್ | 1st PUC Kannada Ragi Mudde Notes

ಗ್ರಾಮದ ಅಧಿದೇವತೆ ಯಾರು ?

 ಗ್ರಾಮದ ಅಧಿದೇವತೆಯು ನಾಗಮ್ಮ ಎಂಬ ದೇವತೆ .

ಕಣ್ಣುಗಳಲ್ಲಿ ಯಾವುದರ ಸಾಲುಚಿತ್ರಗಳು ಮೂಡಿಕೊಂಡವು ?

ಕಣ್ಣುಗಳಲ್ಲಿ ಮುದ್ದೆಯ ಸಾಲು ಸಾಲು ಚಿತ್ರಗಳು ಮೂಡಿಕೊಂಡವು .

ಹೋಟೆಲಿನಲ್ಲಿ ಕರಿಯ ಏನು ಕೆಲಸ ಮಾಡುತ್ತಿದ್ದನು ?

ಹೋಟೆಲಿನಲ್ಲಿ ಕರಿಯ ಕಸಮುಸುರೆ ಬಳಿಯುತ್ತಿದ್ದನು .

ಊರಿನ ನೀರು ಎಲ್ಲಿ ನೆಲೆ ನಿಂತಿತ್ತು ?

 ಊರಿನ ನೀರೆಲ್ಲಾ ಪಾತಾಳದಲ್ಲಿ ನೆಲೆ ನಿಂತಿತ್ತು .

ನೀರಿಗಾಗಿ ಕರಿಯ ಏನನ್ನು ತರುತ್ತಿದ್ದ ?

ನೀರಿಗಾಗಿ ಕರಿಯ ದೊಡ್ಡದೊಂದು ಬಾನಿಯನ್ನು ಹೊತ್ತು ತರುತ್ತಿದ್ದ .

ಬಡಮಕ್ಕಳ ಪಾಲಿಗೆ ಚಾಕಲೇಟ್ ಯಾವುದು ?

ಬಡಮಕ್ಕಳ ಪಾಲಿನ ಚಾಕಲೇಟ್ ಎಂದರೆ ಮುದ್ದೆಯ ಸೀಳುಬಾಕು .

ರಾಗಿಗೆ ಎಷ್ಟು ಸಾವಿರ ವರ್ಷಗಳ ಇತಿಹಾಸವಿದೆ ?

ರಾಗಿಗೆ ಸುಮಾರು ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ .

ರಾಗಿಯಲ್ಲಿನ ಸ್ವಲ್ಪ ಸ್ವಲ್ಪವೇ ಬಿಡುಗಡೆಯಾಗುವ ಅಂಶ ಯಾವುದು ?

ಕಾರ್ಬೋಹೈಡೇಟ್ ಅಂಶವು ರಾಗಿಯಲ್ಲಿ ಹೆಚ್ಚಾಗಿದ್ದು ಸ್ವಲ್ಪ ಸ್ವಲ್ಪವೇ ಬಿಡುಗಡೆಯಾಗುತ್ತದೆ .

ಚಿಕ್ಕಿ , ಗೋಧಿಗೆ ಹೋಲಿಸಿದರೆ ರಾಗಿ ಎನ್ನುಪಟ್ಟು ಹೆಚ್ಚು ಪೌಷ್ಟಿಕವಾಗಿದೆ ?

ಅಕ್ಕಿ – ಗೋಧಿಗಳಿಗಿಂತಲೂ ದಾಗಿಯು ಎಂಟತ್ತು ಪಟ್ಟು ಹೆಚ್ಚು ಪೌಷ್ಟಿಕವಾಗಿದೆ .

ಡಾ.ಸಿ.ಎಚ್‌ . ಲಕ್ಷ್ಮಣಯ್ಯನವರು ತಮ್ಮ ಪತ್ನಿಗೆ ಹೇಳಿಕೊಂಡ ಕೊನೆಯ ಆಸೆ ಯಾವುದು ?

ಲಕ್ಷಣಯ್ಯನವರು ‘ ಅಂತ್ಯಸಂಸ್ಕಾರಕ್ಕೆ ಮೊದಲು ನನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ ‘ ಎಂದು ಕೊನೆಯ ಆಸೆಯನ್ನು ತಮ್ಮ ಪತ್ನಿಯ ಬಳಿ ಹೇಳಿಕೊಂಡಿದ್ದರು .

ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್ | 1st PUC Kannada Ragi Mudde Notes

2-3 ಪಾಕ್ಯಗಳಲ್ಲಿ ಉತ್ತರಿಸಿ

ಲೇಖಕರು ಹಾಗೂ ಅವರ ಅಣ್ಣನ ನಾಲಗೆಯ ಮೇಲೆ ನೀರೂರಲು ಕಾರಣವೇನು ?

 ದೇವಾಲಯದ ಪಕ್ಕದಲ್ಲಿ ಉಣ್ಣುತ್ತಿದ್ದ ಶ್ರಮಿಕರು ರಾಗಿಮುದ್ದೆಯನ್ನು ಸಾರಿನಲ್ಲಿ ಹೊರಳಿಸುತ್ತಾ ನುಂಗುತ್ತಿರುವುದನ್ನು ನೋಡಿ ಲೇಖಕ ಹಾಗೂ ಅವರ ಅಣ್ಣನ ನಾಲಗೆಯಲ್ಲಿ ನೀರೂರಿತು ,

ನಮ್ಮ ಯಾವ ಜಿಲ್ಲೆಗಳು ರಾಗಿಯ ಕಣಜಗಳಾಗಿವೆ ?

ನಮ್ಮ ಮಂಡ್ಯ , ಮೈಸೂರು , ತುಮಕೂರು ಮತ್ತು ಕೋಲಾರ ಜಿಲ್ಲೆಗಳು ರಾಗಿಯ ಕಣಜಗಳೆನಿಸಿವೆ .

 ರಾಗಿ ಬೀಸುವ ಕಲ್ಲನ್ನು ಕುರಿತ ಜನಪದ ಹೆಣ್ಣುಮಗಳ ಪ್ರಾರ್ಥನೆ ಯಾವುದು ?

 “ ಕಲ್ಲಮ್ಮ ಮಾತಾಯಿ , ಮೆಲ್ಲಮ್ಮರಾಗೀಯ ಜಲ್ಲ ಜಲ್ಲನೆ ಉದುರಮ್ಮ ” ಎನ್ನುವುದು ರಾಗಿ ಬೀಸುವ ಕಲ್ಲನ್ನು ಕುರಿತ ಜನಪದ ಹೆಣ್ಣು ಮಗಳ ಪ್ರಾರ್ಥನೆಯಾಗಿದೆ .

ಮುದ್ದೆ ಮಾಡಲು ಬೇಕಾದ ಕೌಶಲ್ಯವೇನು ?

 ಮುದ್ದೆ ಮಾಡಲು ಅನುಭವವಿರಬೇಕು . ಗಂಟಾಗದಂತೆ , ಪೆಡುಸಾಗದಂತೆ ಮುದ್ದೆ ಮಾಡಲು ಪಳಗಿದ ಕೈಗಳು ಬೇಕು . ಹಬೆಯಾಡುವ ಮುದ್ದೆಯನ್ನು ಕೈ ಒದ್ದೆಮಾಡಿಕೊಂಡು ಉಂಡೆಗಟ್ಟುವುದಕ್ಕೆ ಕೌಶಲ್ಯವಿರಬೇಕು .

ಲೇಖಕರ ಪ್ರಕಾರ ದುಡಿವ ಜನಕ್ಕೆ ಯಾವ ರೀತಿಯ ಮುದ್ದೆ ಇರಬೇಕು ?

 ದುಡಿಯುವ ಜನಕ್ಕೆ ಗೋಡೆಗೆಸೆದರೆ ಪುಟಿಯುವ ಚೆಂಡಿನಂಥ ಗಟ್ಟಿ , ಮುದ್ದೆಯೇ ಇರಬೇಕು : ರಾಗಿಯಲ್ಲಿನ ಕಾರ್ಬೊ ಹೈಡೇಟ್ ಎಂಬ ಅಂಶ ಸ್ವಲ್ಪ ಸ್ವಲ್ಪವೇ ಬಿಡುಗಡೆಯಾಗುವುದರಿಂದ ಮುದ್ದೆ ನಿಧಾನವಾಗಿ ಜೀರ್ಣವಾಗುತ್ತದೆ . ಈ ಕಾರಣದಿಂದ ದುಡಿವವರಿಗೆ ಮುದ್ದೆ ಒಳ್ಳೆಯದೆಂದು ಲೇಖಕರು ಅಭಿಪ್ರಾಯಪಡುತ್ತಾರೆ .

ಯಾವ ಕಾರಣದಿಂದ ಕ್ಯಾಂಟೀನ್ ರಸಮಯ ಸನ್ನಿವೇಶಗಳ ರಂಗಸ್ಥಳವಾಗಿತ್ತು ?

 ಜರ್ಮನಿ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ೨೦೦೬ ರಲ್ಲಿ ನಡೆದಾಗ ಕ್ಯಾಂಟಿನ್‌ನಲ್ಲಿ ವಾರಕ್ಕೆರಡು ದಿನ ಮುದ್ದೆ ಮಾಡುತ್ತಿದ್ದರಂತೆ , ಅಲ್ಲಿ ಚೆಲುವೆಯರು ತುಟಿಬಣ್ಣ ಅಳಿಸದಂತೆ ಮುದ್ದೆಯನ್ನು ಚಮಚೆಯಲ್ಲಿ ತಿಂದರೆ , ಚೆನ್ನಿಗರು ಇಡೀ ಮುದ್ದ ಯನ್ನು ಒಮ್ಮೆಗೇ ಹಿಡಿದು ತಿನ್ನುವುದರಿಂದ ಆ ಕ್ಯಾಂಟೀನ್ ರಸಮಯ ಸನ್ನಿವೇಶಗಳ ರಂಗಸ್ಥಳವಾಗಿತ್ತು ಎಂದು ಲೇಖಕರು ವಿವರಿಸಿದ್ದಾರೆ .

 ರಾಗಿಯಲ್ಲಿ ಯಾವ ರೋಗಗಳನ್ನು ತಡೆಯಬಲ್ಲ ಗುಣವಿದೆ ?

ಪ್ರತ್ಯಾಮೀಯ ಗುಣ ಹೊಂದಿರುವ ರಾಗಿಯ ತಿನಿಸು ದೇಹಕ್ಕೆ ತಂಪು , ರಾಗಿಯಲ್ಲಿ ಹೃದಯಬೇನೆ ಹಾಗೂ ಕ್ಯಾನ್ಸರ್ ತಡೆಗಟ್ಟಬಲ್ಲ ಔಷಧೀಯ ಗುಣವಿದೆ . ರಕ್ತದಲ್ಲಿನ ಸಕ್ಕರೆ ಅಂಶವನ್ನು ರಾಗಿ ನಿಯಂತ್ರಿಸುತ್ತದೆ . ರಾಗಿಯ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಮಕ್ಕಳ ಬೆಳವಣಿಗೆಗೆ ಉಪಕಾರಿ

 ಮುದ್ದೆಯ ಕುರಿತು ಕೋಮಲಾಂಗಿಯರಿಗೆ ಇರುವ ಹೆದರಿಕೆ ಯಾವುದು ?

ಮುದ್ದೆ ತಿಂದರೆ ಮೈ ಬಣ್ಣ ಕಪ್ಪಾಗುತ್ತದೆಂದು ಕೋಮಲಾಂಗಿಯರು ಕಂಗಾಲಾಗುವರಂತೆ .

ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್ | 1st PUC Kannada Ragi Mudde Notes
ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್ | 1st PUC Kannada Ragi Mudde Notes
ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ

ಹಳ್ಳಿಯ ಜನ ಕೈಯಲ್ಲೇ ಮುದ್ದೆ ತಿನ್ನುವ ಚಿತ್ರಣವನ್ನು ವಿವರಿಸಿ

ಹಳ್ಳಿಯ ಜನ ಮುದ್ದೆಯನ್ನು ತಟ್ಟೆ ಅಥವಾ ಇನ್ನಾವುದೇ ಬಟ್ಟಲಿನಲ್ಲಿ ಇಟ್ಟುಕೊಳ್ಳದೆ ಕೈಯಲ್ಲೇ ಹಿಡಿದುಕೊಂಡು ತಿನ್ನುವ ಚಿತ್ರಣವನ್ನು ಲೇಖಕರು ನೀಡಿದ್ದಾರೆ . ಮಧ್ಯಾಹ್ನದ ಊಟಕ್ಕೆ ಗುಂಪುಗೂಡಿದ ಒಬ್ಬೊಬ್ಬರ ಕೈಯಲ್ಲೂ ಒಂದೊಂದು ರಾಗಿಮುದ್ದೆಗಳು , ಅವರು ಮುದ್ದೆಯನ್ನು ಅದುಮುತ್ತಾ ಅದುಮುತ್ತಾ ಇಡೀ ಮುದ್ದೆಯನ್ನೇ ಬಟ್ಟಲಿನಾಕಾರಕ್ಕೆ ಬದಲಿಸುವರಂತೆ.

ಆ ಮುದ್ದೆ ಗುಂಡಿಯಲ್ಲಿ ಸಾರನ್ನೋ ಗೊಜ್ಜನ್ನೋ ತುಂಬಿಸಿಕೊಂಡು , ಎಡ ಅಂಗೈಗುಣಿಯಲ್ಲಿ ಪವಡಿಸಿದ ಮುದ್ದೆಯ ಮೇಲ್ಬಾಗದಿಂದ ತುತ್ತುತ್ತುತ್ತಾಗಿ ಮುರಿಯುತ್ತಾ ನುಂಗುತ್ತಾ ಇರುತ್ತಾರೆ .

ಕೈಯಲ್ಲಿನ ಮುದ್ದೆ ಕರಗುವ ವೇಳೆಗೆ ಅಂಗೈಯಲ್ಲಿ ಮತ್ತೊಂದು ಮುದ್ದೆ ಪ್ರತ್ಯಕ್ಷ – ಈ ರೀತಿಯ ಹಳ್ಳಿ ಜನರ ಮುದ್ದೆ ತಿನ್ನುವ ಚಿತ್ರಣವನ್ನು ಲೇಖಕ ಚ.ಹ. ರಘುನಾಥ ಅವರು ನೀಡಿದ್ದಾರೆ .

ಕರಿಯನ ಜೀವನ ಹೇಗಿತ್ತು ? ಜನರು ಆತನನ್ನು ಕಾಣುವ ರೀತಿಯನ್ನು ಲೇಖಕರು ಹೇಗೆ ವಿವರಿಸಿದ್ದಾರೆ ?

ಕರಿಯ ನೋಡಲು ಕಪ್ಪಗಿದ್ದನು . ಹೋಟೆಲೊಂದರಲ್ಲಿ ಮುಸುರೆ ತಿಕ್ಕುವ ಕೆಲಸ ಮಾಡುತ್ತಿದ್ದನು . ಅವನ ಹೆಸರು ಯಾರಿಗೂ ತಿಳಿದಿರಲಿಲ್ಲ . ನೋಡಲು ಕಪ್ಪಗಿದ್ದುದರಿಂದ ಕರಿಯನೆಂದೇ ಎಲ್ಲರೂ ಕರೆಯುತ್ತಿದ್ದರು . ಅಲ್ಲದೆ ಅವನನ್ನು ನೋಡಿದರೆ ದೊಡ್ಡ ರಾಗಿಮುದ್ದೆಯಂತೆಯೇ ಕಾಣುತ್ತಿದ್ದನು .

ಬಲದಲ್ಲಿ ಭೀಮನನ್ನು ಹೋಲುತ್ತಿದ್ದ ಆತ ದೊಡ್ಡ ಬಾನಿಯನ್ನು ಹೊತ್ತು ನೀರಿಗಾಗಿ ಬೋರ್‌ವೆಲ್‌ಗೆ ಬಂದವನು ಫರ್ಲಾಂಗು ದೂರ ಕೇಳಿಸುವಂತೆ ಬೋರ್‌ವೆಲ್ ಒತ್ತುತ್ತಿದ್ದನು . ಅವನ ಬಲಪ್ರಯೋಗಕ್ಕೆ ಬೋರ್‌ವೆಲ್‌ ಮುರಿಯುತ್ತದೆನ್ನಿಸುತ್ತಿತ್ತು .

ನೀರು ತುಂಬಿದ ಬನಿಯನ್ನು ಭುಜದ ಮೇಲೆ ಹೊತ್ತುಕೊಂಡು ಅವನು ಸಾಗುತ್ತಿದ್ದರೆ ಎರಡು ಬೃಹತ್ ಗುಡಾಣಗಳು ಒಟ್ಟಿಗೇ ಸಾಗುತ್ತಿರುವಂತೆ ಜನರಿಗೆ ಭಾಸವಾಗುತ್ತಿತ್ತು . ಅವನ ಶಕ್ತಿಯ ಹಿಂದೆ ಮುದ್ದೆ ಅಥವಾ ಸೀಕುಬಾಕಿನ ಪರಿಣಾಮವನ್ನು ಲೇಖಕರು ಊಹಿಸಿದ್ದಾರೆ .

ರಾಗಿಮುದ್ದೆ ಕುರಿತು ಇರುವ ಹತ್ತಾರು ಮೆಚ್ಚುಗೆಯ ನಂಬಿಕೆಯ ಮಾತುಗಳಾವುವು ?

ಅಕ್ಕಿ – ಗೋಧಿಗಳಿಗಿಂತ ರಾಗಿ ಉತ್ತಮ ಎಂಬುದು ಜನರ ನಂಬಿಕೆ . ಅವರ ಅಭಿಪ್ರಾಯದಂತೆ ರಾಗಿಯಲ್ಲಿ ಅಕ್ಕಿ – ಗೋಧಿ ಗಳಿಗಿಂತ ಎಂಟ್ಟಿತ್ತು ಪಟ್ಟು ಪೌಷ್ಠಿಕಾಂಶ ಅಧಿಕ . ರಾಗಿಯಲ್ಲಿ ರೋಗ ನಿರೋಧಕ ಗುಣವಿದೆ , ರಕ್ತದಲ್ಲಿನ ಸಕ್ಕರೆಯ ಅಂಶವನ್ನು ರಾಗಿ ನಿಯಂತ್ರಿಸುತ್ತದೆ . ಪ್ರತ್ಯಾಮೀಯ ಗುಣ ಹೊಂದಿರುವುದರಿಂದ ರಾಗಿ ತಿನಿಸು ದೇಹಕ್ಕೆ ತಂಪು , ರಾಗಿಯಲ್ಲಿ ಹೃದಯದ ಬೇನೆ ಹಾಗೂ ಕ್ಯಾನ್ಸರ್ ತಡೆಗಟ್ಟಬಲ್ಲ ಔಷಧೀಯ ಗುಣಗಳಿವೆ .

ತೆಳ್ಳಗಾಗಬೇಕೆನ್ನುವವರಿಗೆ ರಾಗಿ ಹೇಳಿ ಮಾಡಿಸಿದ ಊಟ . ಹೀಗೆ – ರಾಗಿ ಮತ್ತು ರಾಗಿಮುದ್ದೆ ಕುರಿತು ಹತ್ತಾರು ಮೆಚ್ಚುಗೆ , ನಂಬಿಕೆಯ ಮಾತುಗಳಿವೆ ಎಂದು ಲೇಖಕರು ವಿವರಿಸಿದ್ದಾರೆ . ಅವರ ಅಭಿಪ್ರಾಯದಂತೆ , ಆರೋಗ್ಯಕರ ದೇಹದ ಹಳ್ಳಿಗರೇ ರಾಗಿಯ ಮಹಿಮೆಯನ್ನು ಜಗತ್ತಿಗೆ ಸಾರಬಲ್ಲ ಜೀವಂತ ಉದಾಹರಣೆಗಳು .

ರಾಗಿ ಮುದ್ದೆ ಪಾಠ

ರಾಗಿಮುದ್ದೆ ಯಾವ ಬಗೆಯ ಸಾರುಗಳ ಜೊತೆ ಸೇರಿ ಎಂತಹ ರಸಾನುಭವವನ್ನು ಸೃಷ್ಟಿಸುತ್ತದೆ ? ವಿವರಿಸಿರಿ .

ರಾಗಿಮುದ್ದೆಗೂ ಸೊಪ್ಪಿನ ಸಾರಿಗೂ ಒಳ್ಳೆಯ ಜೋಡಿ ಎಂದು ಹೇಳಿರುವ ಲೇಖಕರು ಮುದ್ದೆ ಯಾವ ಬಗೆಯ ಸಾರಿಗೆ ಬೇಕಾದರೂ ಹೊಂದಿಕೊಳ್ಳುವ ಗುಣ ಪಡೆದಿದೆ ಎಂದಿದ್ದಾರೆ .

ಕಿವುಚಿದ ಸಾರು , ಸೊಪ್ಪು ಸಾರು , ಹಿತಕವರ , ಮೊಳಕೆಯೊಡೆದ ಹುರುಳಿಸಾರು , ಉಪ್ಪು – ಮೆಣಸಿನಕಾಯಿ ಗೊಜ್ಜು , ಕೋಳಿ ಸಾರು – ಹೀಗೆ ಎಲ್ಲದರೊಂದಿಗೂ ರಾಗಿಮುದ್ದೆ ಅನುರೂಪ ವಾದ ಜೋಡಿ ಎಂದಿದ್ದಾರೆ ಲೇಖಕರು .

ಯಾವುದೂ ಇಲ್ಲದಿರುವಾಗ ನೀರು ಮಜ್ಜಿಗೆಯಲ್ಲಿ ಬೇಕಾದರೂ ಮುದ್ದೆಯನ್ನು ಕದಡಿ ಕುಡಿಯುವ ಸುಖ , ಉಪ್ಪ – ಮಾವಿನಕಾಯಿ ಗೊಜ್ಜಿನೊಂದಿಗೆ ಮುದ್ದೆಯನ್ನು ಮೆಲ್ಲುವ ಆನಂದವನ್ನು ಅನುಭವಿಸಿದವರೇ ಬಲ್ಲರು . ಆದು ಪದಗಳಿಗೆ ನಿಲುಕದ ರಸಾನುಭವ ಎಂಬುದು ಲೇಖಕರ ಅಭಿಪ್ರಾಯವಾಗಿದೆ .

ಡಾ | ಸಿ.ಎಚ್ , ಲಕ್ಷ್ಮಣಯ್ಯನವರ ರಾಗಿ ಸಂಶೋಧನೆ ಮತ್ತು ರಾಗಿ ಪ್ರೀತಿಯನ್ನು ವಿವರಿಸಿರಿ .

 ಡಾ || ಸಿ.ಎಚ್ , ಲಕ್ಷ್ಮಣಯ್ಯನವರು ಮೈಸೂರು ತಾಲ್ಲೂಕಿನ ಹಾರೋಹಳ್ಳಿಯವರು . ‘ ರಾಗಿ ಲಕ್ಷ್ಮಣಯ್ಯ ‘ ಎಂದೇ ಪ್ರಸಿದ್ಧ ರಾಗಿದ್ದರು . ‘ ಸಂಪರ್ಕ ಪದ್ಧತಿ ‘ ಎನ್ನುವ ತಮ್ಮ ನೂತನ ಪರಿಕಲ್ಪನೆಯ ಮೂಲಕ ಹೊಸ ತಳಿಗಳ ಅನ್ವೇಷಣೆಯಲ್ಲಿ ತೊಡಗಿಸಿ ಕೊಂಡಿದ್ದರು .

ಕಡಿಮೆ ಇಳುವರಿಯ ಹಾಗೂ ಆರ್ಥಿಕವಾಗಿ ಲಾಭದಾಯಕವಲ್ಲದ ಸ್ಥಳೀಯ ತಳಿಗಳನ್ನು ನೆಚ್ಚಿಕೊಂಡು ನರಳುತ್ತಿದ್ದ ರೈತರಿಗೆ ಲಕ್ಷ್ಮಣಯ್ಯನವರ ಈ ಪ್ರಯೋಗ ದಾರಿದೀಪವಾಯಿತು .

ಅದರಿಂದಾಗಿ ಪರಿಣಾಮಕಾರಿ ‘ ರಾಗಿ ಕ್ರಾಂತಿ’ಯೇ ನಡೆಯಿತು . ಅನಾರೋಗ್ಯದಿಂದ ಬಳಲಿದ ಲಕ್ಷ್ಮಣಯ್ಯ ಶಸ್ತ್ರಚಿಕಿತ್ಸೆಗೆ ಒಳಪಡುವ ಮುನ್ನ ರಾಗಿ ಸಂಶೋಧನೆಯ ತಮ್ಮ ಕೆಲಸ ಮುಂದುವರಿಸುವ ಬಗ್ಗೆ ಕಾಳಜಿ ತೋರಿದರಂತೆ .

ಸಾಯುವಾಗ ಹೆ ೦ ಡತಿಯ ಬಳಿ ಶವಸಂಸ್ಕಾರಕ್ಕಿಂತ ಮೊದಲು ತಮ್ಮ ದೇಹದ ಮೇಲೆ ಒಂದು ಹಿಡಿ ರಾಗಿ ಚೆಲ್ಲಬೇಕೆಂದು ತಮ್ಮ ಕೊನೆಯ ಆಸೆಯನ್ನು ತೋಡಿಕೊಂಡರಂತೆ , ಅಂತಹ ಮಹಾ ರಾಗಿಪ್ರೇಮಿ ಅವರಾಗಿದ್ದರು

ಪ್ರಥಮ ಪಿ.ಯು.ಸಿ ರಾಗಿಮುದ್ದೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು

ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್ | 1st PUC Kannada Ragi Mudde Notes
ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್ | 1st PUC Kannada Ragi Mudde Notes

ಸಂದರ್ಭಸೂಚಿಸಿ , ಸ್ವಾರಸ್ಯವನ್ನು ವಿವರಿಸಿ

“ ಅಂಗೈಯಲ್ಲಿ ಮತ್ತೊಂದು ಮುದ್ದೆ ಪ್ರತ್ಯಕ್ಷ . ”

 ಶ್ರೀಯುತ ಚ.ಹ. ರಘುನಾಥ ಅವರು ಬರೆದಿರುವ ‘ ರಾಗಿಮುದ್ದೆ ‘ ಎಂಬ ಲಲಿತಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ .

 ಮುದ್ದೆಯ ನೆನಪಿನೊಂದಿಗೆ ಬರುವ ಹಳ್ಳಿಯ ಚಿತ್ರವನ್ನು ಲೇಖಕರು ಕಟ್ಟಿಕೊಡುವ ಸಂದರ್ಭದಲ್ಲಿ , ಹೊಲದ ಬದಿ ಕುಳಿತ ಶ್ರಮಿಕರು ಹೊಲದೊಡತಿ ಬುಟ್ಟಿಯಲ್ಲಿ ಹೊತ್ತು ತಂದ ಮುದ್ದೆಗೆ ಸಾರನ್ನೋ , ಗೊಜ್ಜನ್ನೋ ತುಂಬಿಸಿಕೊಂಡು , ಎಡಗೈಯಲ್ಲಿ ಹಿಡಿದು ಬಲಗೈಯಿಂದ ತುತ್ತುಗಳನ್ನು ತಿನ್ನುವುದನ್ನು ವಿವರಿಸಿದ್ದಾರೆ .

ಕೈಯಲ್ಲಿ ಮುದ್ದೆ ಕರಗಿದಾಕ್ಷಣ ಮತ್ತೊಂದು ಮುದ್ದೆ ಅಂಗೈಯಲ್ಲಿ ಪ್ರತ್ಯಕ್ಷವಾಗುವುದಂತೆ , ದುಡಿದ ಜನರು ಮುದ್ದೆ ತಿಂದು ಶ್ರಮಪಡುವ , ಗಟ್ಟಿತನವನ್ನು ರೂಢಿಸಿಕೊಳ್ಳುವುದನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ .

“ ಎಷ್ಟು ಜೋರಾಗಿ ಜಗ್ಗಿದರೂ ಚಿಮ್ಮುತ್ತಿದ್ದುದು ದಾರದಷ್ಟೇ ದಪ್ಪದ ನೀರು . ”

 ಶ್ರೀಯುತ ಚ.ಹ. ರಘುನಾಥ ಅವರು ಬರೆದಿರುವ ‘ ರಾಗಿಮುದ್ದೆ ‘ ಎಂಬ ಲಲಿತಪ್ರಬಂಧದಲ್ಲಿ ಈ ಮೇಲಿನ ವಾಕ್ಯವಿದೆ . ಲೇಖಕರು ತಮ್ಮೂರಿನ ಕರಿಯ ಎಂಬ ಬಲಭೀಮನೊಬ್ಬ ಬೋರ್‌ವೆಲ್ ಒತ್ತುತ್ತಿದ್ದ ರಭಸವನ್ನು ಸ್ವಾರಸ್ಯಕರ ವಾಗಿ ವಿವರಿಸಿದ್ದಾರೆ .

ಈ ಸಂದರ್ಭದಲ್ಲಿ ಊರಿನಲ್ಲಿದ್ದ ಬೋರ್‌ವೆಲ್ ನೀರು ಪಾತಾಳಕ್ಕೆ ಹೋಗಿದ್ದರಿಂದ ಎಷ್ಟು ಜಗ್ಗಿದರೂ ಬೋರ್‌ವೆಲ್‌ನಿಂದ ಚಿಮ್ಮುತ್ತಿದುದು ದಾರದ ದಪ್ಪದಷ್ಟೇ ನೀರು ಮಾತ್ರ ಎಂದಿದ್ದಾರೆ .

ಅದನ್ನು ಒತ್ತಲು ಲೇಖಕರ ತಾಯಿ ಮತ್ತಿತರು ಕಷ್ಟಪಡುತ್ತಿದ್ದರೆ ಬಲಭೀಮನಾದ ಕರಿಯ ಮಾತ್ರ ಫರ್ಲಾಂಗು ದೂರಕ್ಕೆ ಕೇಳುವಂತೆ ಬೋರ್‌ವೆಲ್ ಒತ್ತುತ್ತಿದ್ದನಂತೆ . ನೀರು ಪಾತಾಳಕ್ಕಿಳಿದಿರುವುದು ಅಂತರ್ಜಲ ಕ್ಷೀಣಿಸುತ್ತಿದ್ದುದನ್ನು ಧ್ವನಿಸಿದೆ .

  ಸೀಕನ್ನು ಚಪ್ಪರಿಸಿದ ರುಚಿ ಇನ್ನೂ ನಾಲಗೆಯಲ್ಲಿದೆ . “

ಶ್ರೀಯುತ ಚ.ಹ. ರಘುನಾಥ ಅವರು ತಮ್ಮ ‘ ರಾಗಿಮುದ್ದ ‘ ಎಂಬ ಲಲಿತಪ್ರಬಂಧದಲ್ಲಿ ಮುದ್ದೆಯ ಸೀಕಿನ ವಿಚಾರ ತಿಳಿಸುವಾಗ ಈ ಮೇಲಿನ ಮಾತನ್ನಾಡಿದ್ದಾರೆ .

ರಾಗಿಮುದ್ದೆ ಮಾಡಿದ ನಂತರ ಮಡಕೆಯಲ್ಲಿ ಅಂಟಿಕೊಂಡ ಸಣ್ಣ ಪದರವನ್ನು ಮುದ್ದೆಯ ಸೀಕು ಎನ್ನುತ್ತಾರೆ . ಇದು ಬಹಳ ರುಚಿಕರವಾದ ತಿನಿಸು , ಬಡವರ ಮಕ್ಕಳ ಪಾಲಿನ ಚಾಕಲೇಟ್‌ಗಳೆಂದು ವಿವರಿಸುತ್ತಾ ಲೇಖಕರು

ತಮ್ಮ ಬಾಲ್ಯದ ದಿನಗಳಲ್ಲಿ ತಮ್ಮ ತಾಯಿ ಒಲೆಯ ದಂಡೆಯ ಮೇಲೆ ಬಿಡಿಸಿಟ್ಟಿರುತ್ತಿದ್ದ ಸೀಕನ್ನು ಚಪ್ಪರಿಸಿದ ರುಚಿ ಇನ್ನೂ ನಾಲಗೆಯ ಮೇಲಿದೆ ಎಂದಿ ದ್ದಾರೆ . ಇಂದಿಗೂ ಅದರ ರುಚಿ ಬಲ್ಲವರ ಕಣ್ಣುಗಳು ಸೀಕನ್ನು ನೋಡಿದಾಗ ಅರಳುತ್ತವೆಂದಿದ್ದಾರೆ . ಶಾಲೆಗೆ ಹೋಗುವ ಮಕ್ಕಳ ಜೇಬಿನಲ್ಲಿ ಮುದ್ದೆ ಸೀಕೆಗೆ ಜಾಗವಿದೆ .

“ ಮುದ್ದೆ ಮಾಡಲಿಕ್ಕೆ ಪಳಗಿದ ಕೈಗಳೇ ಆಗಬೇಕು . “

ಶ್ರೀ ಚ.ಹ. ರಘುನಾಥ ಅವರು ತಮ್ಮ ‘ ರಾಗಿಮುದ್ದ ‘ ಎಂಬ ಲಲಿತಪ್ರಬಂಧದಲ್ಲಿ ಮುದ್ದೆ ತಯಾರಿಸುವ ಕೌಶಲವನ್ನು ವಿವರಿಸುತ್ತಾ ಈ ಮೇಲಿನ ಮಾತನ್ನಾಡಿರುವರು .

ಮುದ್ದೆಯನ್ನು ಉಂಡೆಗಟ್ಟುವ ಕೆಲಸ ಮೇಲ್ನೋಟಕ್ಕೆ ಅತ್ಯಂತ ಸುಲಭದ್ದಾಗಿ ಕಾಣಿಸಿದರೂ ಅದು ಅನುಭವವನ್ನು ಬೇಡುವ ಕೆಲಸವೆಂದು ಲೇಧಿಕರು ಹೇಳಿದ್ದಾರೆ . ಗಂಟಾಗದಂತೆ , ಪಡುಸಾಗದಂತೆ ಮುದ್ದೆ ಮಾಡಲು ಪಳಗಿದ ಕೈಗಳೇ ಆಗಬೇಕು ಎಂಬುದು ಲೇಖಕರ ಖಚಿತವಾದ ಅಭಿಪ್ರಾಯ .

ಹಬೆಯಾಡುವ ಮುದ್ದೆಯನ್ನು ಕೈ ಒದ್ದೆ ಮಾಡಿಕೊಂಡು ಉಂಡೆಗಟ್ಟುವುದಕ್ಕೂ ಕೌಶಲ ಅಗತ್ಯವಿರುವುದನ್ನು ರಘುನಾಥ ಅವರು ಇಲ್ಲಿ ವಿವರಿಸಿರುವರು .

ಸಂದುಹೋದ ಜೀವನ ಶೈಲಿಯೊಂದರ ಮೆಲುಕು .

ಶ್ರೀಯುತ ಚ.ಹ. ರಘುನಾಥ ಅವರ ‘ ರಾಗಿಮುದ್ದೆ ‘ ಎಂಬ ಲಲಿತಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ರಾಗಿಮುದ್ದೆ ತಯಾರಿಸುವುದು ಮೇಲ್ನೋಟಕ್ಕೆ ತೋರುವಷ್ಟು ಸುಲಭದ ಕೆಲಸವಲ್ಲ .

ಅದಕ್ಕೆ ಪಳಗಿದ ಕೈಗಳ ಕೌಶಲವಿರಬೇಕು ಎಂದು ವಿವರಿಸುತ್ತಾ ಲೇಖಕರು ಮುದ್ದೆ ತಿರುವಲು ಬೇಕಾದ ದೈಹಿಕ ಶ್ರಮದ ವಿವರಣೆ ನೀಡಿದ್ದಾರೆ . ದೇಹದ ಶಕ್ತಿಯಪ್ಪನ್ನೂ ಕ್ರೋಢೀಕರಿಸಿ ದೊಡ್ಡದೊಂದು ಕಟ್ಟಿಗೆಯಲ್ಲಿ ಮುದ್ದೆ ಎಸರನ್ನು ತೊಳೆಸುವುದು ಬಲು ಕಷ್ಟದ ಕೆಲಸವಾಗಿತ್ತು .

notes ragi mudde lesson in kannada answer

ಬಲಪ್ರಯೋಗ ಹೆಚ್ಚಾದಾಗ ಹಳೆಯ ಮಡಕೆ ಒಡೆದು ಮುದ್ದೆಯ ಎಸರೆಲ್ಲಾ ಒಲೆಯ ಪಾಲಾದರೆ , ಹಿಂದಿನ ಕಾಲದ ಅಜ್ಜಿಯರು ಮುದ್ದಕೋಲಿನಲ್ಲಿ ಮಗಳನ್ನು ಬಡಿಯುತ್ತಿದ್ದರಂತೆ , ಮುದ್ದೆ ಮಾಡಲು ಬಾರದವಳು ಸಂಸಾರ ನಡೆಸಲಾರಳು ಎಂಬುದು ಅಜ್ಜಿಯರ ಭಾವ , ಲೇಖಕರು ಈ ಬಗೆಯ ನೆನಪು ಕೇವಲ ನನಪಲ್ಲ , ಸಂದುಹೋದ ಜೀವನಶೈಲಿಯೊಂದರ ಮೆಲುಕು ಎಂದಿರುವರು .

ಪುಟಬಣ್ಣ ಕೆಡದಂತೆ ಚಮಚೆಯಲ್ಲಿ ತಿನ್ನುವ ಚೆಲುವೆಯರು ,

ಶ್ರೀಯುತ ಚ.ಹ. ರಘುನಾಥ ಅವರು ‘ ರಾಗಿಮುದ್ದೆ ‘ ಎಂಬ ಲಲಿತಪ್ರಬಂಧದಿಂದ ಸ್ವಾರಸ್ಯಕರವಾದ ಈ ಮೇಲಿನ ಮಾತನ್ನು ಆಯ್ದುಕೊಳ್ಳಲಾಗಿದೆ .

೨೦೦೬ ನೇ ಇಸವಿಯಲ್ಲಿ ಜರ್ಮನಿ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ವೇಳೆ ಲೇಖಕರ ಕಚೇರಿ ಕ್ಯಾಂಟೀನಿನಲ್ಲಿ ವಾರಕ್ಕೆರಡು ದಿನ ಮುದ್ದೆ ಮಾಡುವ ನಿರ್ಣಯವನ್ನು ಜಾರಿಗೆ ತಂದಿದ್ದರಂತೆ .

ಅಲ್ಲಿ ರಾಗಿಬಾಲ್‌ಗಳನ್ನು ತಟ್ಟೆಯಲ್ಲಿಟ್ಟುಕೊಂಡು ಚಮಚೆಯಲ್ಲಿ ತಿನ್ನುತ್ತಿದ್ದ ಚೆಲುವೆಯರು ತಮ್ಮತುಟಿಬಣ್ಣ ಕೆಡದಂತೆ ಎಚ್ಚರ ವಹಿಸಿದ್ದರಂತೆ , ಇನ್ನು ಕೆಲವರು ಇಡೀ ಮುದ್ದೆಯನ್ನು ಒಮ್ಮೆಗೇ ಎತ್ತಿಕೊಂಡು ಕಚ್ಚಿ ತಿನ್ನುವ ಚೆನ್ನಿಗರೂ ಇದ್ದರಂತೆ . ಒಟ್ಟಿನಲ್ಲಿ ಮುದ್ದೆಯ ಕಾರಣದಿಂದ ಕ್ಯಾಂಟಿನ್ ರಸಮಯ ಸನ್ನಿವೇಶಗಳ ರಂಗಸ್ಥಳವಾಗಿತ್ತೆಂದು ಲೇಖಕರು ವರ್ಣಿಸಿದ್ದಾರೆ .

ಅದು ಪದಗಳಿಗೆ ನಿಲುಕದ ರಸಾನುಭವ . “

ಶ್ರೀಯುತ ಚ.ಹ. ರಘುನಾಥ ಅವರ ರಾಗಿಮುದ್ದೆ ‘ ಎಂಬ ಲಲಿತಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸ ಲಾಗಿದೆ . ರಾಗಿಮುದ್ದೆಯನ್ನು ಯಾವುದರ ಜೊತೆ ಬೇಕಾದರೂ ಸವಿಯಬಹುದು ಎಂಬುದನ್ನು ವಿವರಿಸುತ್ತಾ ಲೇಖಕರು ಈ ಮೇಲಿನ ಮಾತನ್ನು ಹೇಳಿದ್ದಾರೆ . ಮುದ್ದೆ ಸೊಪ್ಪಿನ ಸಾರಿನ ಜೊತೆ ತಿನ್ನಲು ರುಚಿಕರವಾದರೂ ಯಾವುದೇ ಸಾರಿಗೆ ಹೊಂದಿಕೊಳ್ಳುವ ಗುಣ ಮುದ್ದೆಯದೆಂದು ಲೇಖಕರು ವಿವರಿಸಿದ್ದಾರೆ .

 ಕಿವುಚಿದ ಸಾರು , ಕೋಳಿಸಾರು , ಮೊಳಕೆ ಹುರುಳಿಸಾರು , ಹಿಚುಕಿದ ಅವರೆ ಕಾಯಿ ಸಾರು , ಗೊಜ್ಜು , ಚಟ್ಟಿ ಎಲ್ಲದರೊಂದಿಗೆ ಅನುರೂಪವಾಗುವ ಮುದ್ದೆಯನ್ನು ನೀರು ಮಜ್ಜಿಗೆಯೊಂದಿಗೆ ಕದಡಿ ಕುಡಿಯುವ ಸುಖವಾಗಲಿ , ಉಪ್ಪು ಮೆಣಸಿನ ಗೊಜ್ಜಿನೊಂದಿಗೆ ಮುದ್ದೆಯನ್ನು ಮೆಟ್ಟಿ ಮೆಲ್ಲುವ ಆನಂದವನ್ನು ಅನುಭವಿಸಿದವರೇ ಬಲ್ಲರು .

ಅದು ಪದಗಳಿಗೆ ನಿಲುಕದ ರಸಾನುಭವ ಮಾತಿಗೆ ಮೀರಿದ ಸುಖ ಎಂದು ಲೇಖಕರು ಓದುಗರ ಬಾಯಲ್ಲಿ ನೀರೂರುವಂತೆ ವಿವಧಿಸಿದ್ದಾರೆ .

ನನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ , ”

ಶ್ರೀಯುತ ಚ.ಹ. ರಘುನಾಥ ಅವರ ‘ ರಾಗಿಮುದ್ದೆ ‘ ಎಂಬ ಲಲಿತಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಆಯ್ದು ಕೊಳ್ಳಲಾಗಿದೆ . ಡಾ . ಸಿ.ಎಚ್ . ಲಕ್ಷ್ಮಣಯ್ಯನವರ ರಾಗಿ ಪ್ರೇಮವನ್ನು ವಿವರಿಸುವ ಸಂದರ್ಭವಿದಾಗಿದೆ .

‘ ರಾಗಿ ಲಕ್ಷ್ಮಣಯ್ಯ ‘ ಎಂದೇ ಪ್ರಸಿದ್ಧರಾಗಿದ್ದ ಡಾ . ಸಿ.ಎಚ್ . ಲಕ್ಷ್ಮಣಯ್ಯನವರು ಹೊಸ ತಳಿಯ ರಾಗಿ ಸಂಶೋಧನೆಯ ಮೂಲಕ ಕರ್ನಾಟಕದಲ್ಲಿ ರಾಗಿ ಕ್ರಾಂತಿಯನ್ನು ಉಂಟುಮಾಡಿದವರು . ಆ ಮೂಲಕ ಎಲ್ಲಾ ಋತುವಿನಲ್ಲಿ ಕಡಿಮೆ ನೀರಿನಲ್ಲಿ ರಾಗಿ ಬೆಳೆಯುವುದನ್ನು ರೈತರಿಗೆ ಕಲಿಸಿ , ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದವರು .

ಇಂತಹ ಮಹಾನ್ ರಾಗಿಪ್ರೇಮಿಯಾದ ಲಕ್ಷ್ಮಣಯ್ಯನವರು ಸಾಯುವಾಗ ತಮ್ಮ ಹೆಂಡತಿಯ ಬಳಿ ” ಅಂತ್ಯ ಸಂಸ್ಕಾರಕ್ಕೆ ಮೊದಲು ನನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ ‘ ‘ ಎಂಬ ತಮ್ಮ ಕೊನೆಯ ಆಸೆಯನ್ನು ತೋಡಿಕೊಂಡಿದ್ದರಂತೆ . ಅವರ ವ್ಯಕ್ತಿತ್ವ ಎಂಥದೆಂಬುದನ್ನು ಈ ಆಸೆಯ ಮೂಲಕ ಅರಿತುಕೊಳ್ಳಬಹುದು .

ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್ | 1st PUC Kannada Ragi Mudde Notes
ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್ | 1st PUC Kannada Ragi Mudde Notes

ಇತರ ಪ್ರಮುಖ ಮಾಹಿತಿ

ಗಾಂಧಿ ಪಾಠದ ನೋಟ್ಸ್

ಹಲುಬಿದಳ್ ಕಲ್ಮರಂ ಕರಗುವಂತೆ notes

ಪ್ರಥಮ ಪಿಯುಸಿ ಭೂಗೋಳಶಾಸ್ತ್ರ ನೋಟ್ಸ್

Leave a Reply

Your email address will not be published. Required fields are marked *