ಪೊಲೀಸ್ ಇಲಾಖೆ ಬಗ್ಗೆ ಮಾಹಿತಿ,police information in kannada, ಪೊಲೀಸ್ ಇಲಾಖೆ ಹುದ್ದೆಗಳು, karnataka state police information in kannada, essay, notes
ಪೊಲೀಸ್ ಇಲಾಖೆ ಬಗ್ಗೆ ಮಾಹಿತಿ Police Information In Kannada
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 7 ವಲಯಗಳ ಮಾಹಿತಿ
ಕೇಂದ್ರ ಕಚೇರಿ | ವಲಯ | ವ್ಯಾಪ್ತಿಗೆ ಬರುವ ಜಿಲ್ಲೆಗಳು |
ಮೈಸೂರು | ದಕ್ಷಿಣ ವಲಯ | ಮೈಸೂರು, ಕೊಡಗು, ಮಂಡ್ಯ , ಹಾಸನ ಮತ್ತು ಚಾಮರಾಜನಗರ |
ಮಂಗಳೂರು | ಪಶ್ಚಿಮ ವಲಯ | ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಮತ್ತು ಉಡುಪಿ |
ದಾವಣಗೆರೆ | ಪೂರ್ವ ವಲಯ | ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆ |
ಬೆಂಗಳೂರು | ಕೇಂದ್ರ ವಲಯ | ಬೆಂಗಳೂರು ತುಮಕೂರು, ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ರಾಮನಗರ |
ಬೆಳಗಾವಿ | ಉತ್ತರ ವಲಯ | ಬೆಳಗಾವಿ, ವಿಜಯಪುರ, ಧಾರವಾಡ, ಬಾಗಲಕೋಟೆ ಮತ್ತು ಗದಗ |
ಕಲ್ಬುರ್ಗಿ | ಈಶಾನ್ಯ ವಲಯ | ಕಲ್ಬುರ್ಗಿ, ಬೀದರ್ ಮತ್ತು ಯಾದಗಿರಿ |
ಬಳ್ಳಾರಿ | ಬಳ್ಳಾರಿ ವಲಯ | ಬಳ್ಳಾರಿ ಬಳ್ಳಾರಿ, ರಾಯಚೂರು, ಕೊಪ್ಪಳ |

ಪೊಲೀಸ್ ಇಲಾಖೆ ಬಗ್ಗೆ ಮಾಹಿತಿ
ಪೊಲೀಸ್ ತರಬೇತಿ ಕೇಂದ್ರಗಳು
ಡಿ.ಎ.ಆರ್ . ಪೋಲೀಸ್ ತರಬೇತಿ :- ಬೆಂಗಳೂರು
ಟ್ರಾಫಿಕ್ ಪೊಲೀಸ್ ತರಬೇತಿ ಕೇಂದ್ರ :- ಬೆಂಗಳೂರು
ಸ್ಪೇಶಲ್ ಬ್ರಾಂಚ್ ಪೊಲೀಸ್ ಇನ್ಸಿಟ್ಯೂಟ್ :- ಬೆಂಗಳೂರು
ಕರ್ನಾಟಕದ ಪೊಲೀಸ್ ಅಕಾಡೆಮಿ :- ಮೈಸೂರು
ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ :- ಚನ್ನಪಟ್ಟಣ
ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಕೇಂದ್ರ :- ಕಲಬುರಗಿ
ವೈರಲೆಸ್ ಟ್ರೇನಿಂಗ್ ಇನ್ಸಿಟ್ಯೂಟ್ :- ಬೆಂಗಳೂರು
ಕರ್ನಾಟಕ ರಾಜ್ಯದ ಗೃಹ ಸಚಿವಾಲಯ ಪೊಲೀಸ್ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ವಿಭಾಗಗಳು
>ಗುಪ್ತಚರ ಇಲಾಖೆ
> ಅಪರಾಧ ಮತ್ತು ತಾಂತ್ರಿಕ ಸೇವೆಗಳು
> COD , ವಿಶೇಷ ಘಟಕ ಮತ್ತು ಆರ್ಥಿಕ ಅಪರಾಧ
> ಕರ್ನಾಟಕ ರಾಜ್ಯ ಮೀಸಲು ಪೊಲೀಸ್
> ಸಾರಿಗೆ ದೂರಸಂಪರ್ಕ ಮತ್ತು ಆಧುನಿಕರಣ
> ಪೊಲೀಸ್ ನೇಮಕಾತಿ ಮತ್ತು ತರಬೇತಿ
> ನಾಗರಿಕ ಹಕ್ಕು ಜಾರಿ
> ಕಾನೂನು ಮತ್ತು ಸುವ್ಯವಸ್ಥೆ
> ಆಡಳಿತ > ರಾಜ್ಯ ಪೊಲೀಸ್ ವಸತಿ ನಿಗಮ
> ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ
> ಕಾರಾಗೃಹ ಇಲಾಖೆ
>ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ
> ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಇಲಾಖೆ
> ಕಾನೂನು ಇಲಾಖೆ
>ರಾಜ್ಯ ಗ್ರಹ ನಿಗಮ
> ವಿದೇಶಿಯರ ವಿಭಾಗ
karnataka state police information in kannada

ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗಳ ಮಾಹಿತಿ
ಪೊಲೀಸ್ ಮಹಾನಿರ್ದೇಶಕರು Director General of Police DGP
ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯದ ಅತ್ಯುನ್ನತ ಪೊಲೀಸ್ ಅಧಿಕಾರಿಯಾಗಿದ್ದು ರಾಜ್ಯದ ಐಪಿಎಸ್ ಅಧಿಕಾರಿಗಳಲ್ಲಿಯ ಅತ್ಯುನ್ನತ ಹುದ್ದೆಯಾಗಿದೆ . ನೀಲಮಣಿ ಕರ್ನಾಟಕದ ಮೊಟ್ಟ ಮೊದಲ ಮಹಿಳಾ ಪೊಲೀಸ್ ಅವರು ರಾಜು ಮಹಾನಿರ್ದೇಶಕರಾಗಿದ್ದರು .
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು Additional Director General of Police – ADGP
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಅಡಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರುಗಳು ಕಾರ್ಯನಿರ್ವಹಿಸುತ್ತಾರೆ . ಬೆಂಗಳೂರು ಕಮಿಷನರ್ ಹುದ್ದೆಯು ADGP ದರ್ಜೆಯ ಹುದ್ದೆಗೆ ಸಮನಾಗಿರುತ್ತದೆ . ಪೊಲೀಸ್ ಇಲಾಖೆಯ ಕೆಲವು ವಿಭಾಗಗಳಲ್ಲಿ ಇವರು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ .
ಪೊಲೀಸ್ ಮಹಾನಿರೀಕ್ಷಕರು IGP Inspector General of Police
ಈ ಹುದ್ದೆಯು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಅಡಿಯಲ್ಲಿ ಬರುವ ಹುದ್ದೆಯಾಗಿದ್ದು , ಗ್ರಾಮೀಣ ಭಾಗದಲ್ಲಿ ಕೆಲವು ಜಿಲ್ಲೆಗಳನ್ನು ಒಟ್ಟುಗೂಡಿಸಿ ವಲಯಗಳನ್ನಾಗಿ ಮಾಡಲಾಗಿದ್ದು , ವಲಯಗಳ ಮುಖ್ಯಸ್ಥರಾಗಿ ಪೊಲೀಸ್ ಮಹಾನಿರೀಕ್ಷಕರು ಕಾರ್ಯನಿರ್ವಹಿಸುತ್ತಾರೆ . ಪ್ರಸ್ತುತವಾಗಿ ಕರ್ನಾಟಕದಲ್ಲಿ 07 ವಲಯಗಳಿವೆ ಪ್ರತಿ ವಲಯಕ್ಕೂ ಪೊಲೀಸ್ ಮಹಾನಿರೀಕ್ಷಕರು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ , ನಗರಗಳಾದ ಮೈಸೂರು ಮಂಗಳೂರು ಪೊಲೀಸ್ ಕಮಿಷನರ್ಗಳ ಹುದ್ದೆಯು ಐಜಿಪಿ ದರ್ಜೆಯ ಹುದ್ದೆಯಾಗಿದೆ
ಉಪ ಪೊಲೀಸ್ ಮಹಾನಿರೀಕ್ಷಕರು Deputy Inspector General of Police DIGP
ಈ ಹುದ್ದೆಯು ಪೊಲೀಸ್ ಮಹಾನಿರೀಕ್ಷಕರ ಅಡಿಯಲ್ಲಿ ಬರುವ ಹುದ್ದೆಯಾಗಿದೆ ಬೆಳಗಾವಿ ನಗರದ ಪೊಲೀಸ್ ಕಮಿಷನರ್ ಗಳ ಹುದ್ದೆಯು ಉಪ ಪೊಲೀಸ್ ಮಹಾ ನಿರೀಕ್ಷಕರ DIG ಹುದ್ದೆಗೆ ಸಮನಾಗಿರುತ್ತದೆ .
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ Superintendent of Police SP
ಇವರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದು , ಜಿಲ್ಲೆಯ ಪೊಲೀಸ್ ಇಲಾಖಾ ವ್ಯಾಪ್ತಿಯ ಮುಖ್ಯಸ್ಥರಾಗಿರುತ್ತಾರೆ . ಬೆಂಗಳೂರು – ಮೈಸೂರು , ಬೆಳಗಾವಿ , ಹುಬ್ಬಳ್ಳಿ , ಧಾರವಾಡ , ನಗರಗಳಲ್ಲಿ ನಗರ ಪೊಲೀಸ್ ಕಮಿಷನರ್ಗಳು ನಗರದ ನಿಯಂತ್ರಣ ಹೊಂದಿರುತ್ತಾರೆ ಉಳಿದ ಜಿಲ್ಲೆಯಲ್ಲಿ ಜಿಲ್ಲಾ ವರಿಷ್ಕಾಧಿಕಾರಿಯು ನಗರದ ಮೇಲೂ ಮತ್ತು ಗ್ರಾಮೀಣ ಭಾಗದಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತಾರೆ .
ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ Additional Superintendent of Police ASP
ಜಿಲ್ಲಾ ಪೊಲೀಸ್ ವರಿಷ್ಕಾಧಿಕಾರಿಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಯಾಗಿರುತ್ತಾರೆ .
ಪೊಲೀಸ್ ಉಪ ಅಧೀಕ್ಷಕರು Deputy Superintendent of Police DySP
ಇವರು ಉಪವಿಭಾಗಗಳ ಪೊಲೀಸ್ ಮುಖ ಸರಾಗಿರುತ್ತಾರೆ ಅನೇಕ ತಾಲ್ಲೂಕುಗಳನ್ನು ಸೇರಿ ಉಪ ವಿಭಾಗವನ್ನು ಮಾಡಲಾಗಿರುತ್ತದೆ . ಇವರು ಕೆಎಸ್ಬಿಎಸ್ ದರ್ಜೆಯ ಅಧಿಕಾರಿಯಾಗಿರುತ್ತಾರೆ . ಇವರಲ್ಲಿ ಕೆಲವರು ಕೆಪಿಎಸಿ , ನಡೆಸುವ ಪ್ರೊಬೆಷನರಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆಯಾದರೆ ಕೆಲವರು ಬಡ್ತಿ ಮೂಲಕ ಆಯ್ಕೆಯಾಗುತ್ತಾರೆ .
ಸಹಾಯಕ ಪೊಲೀಸ್ ಉಪ ನಿರೀಕ್ಷಕರು ASI Assistant Police Sub Inspector
ಪೊಲೀಸ್ ಸಬ್ ಇನ್ಸ್‌ಕ್ಟರ್ ಗಳ ಅಧೀನದಲ್ಲಿ ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್‌ಕ್ಟರ್ ಇವರು ಕಾರ್ಯ ನಿರ್ವಹಿಸುತ್ತಾರೆ .
ಮುಖ್ಯ ಕಾನ್ಸ್ಬಲ್ Head Constable
ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸೆಕ್ಟರ್ ಅವರ ಅಧೀನದಲ್ಲಿ ಮುಖ್ಯ ಕಾನ್ಹೋಬಲ್ ಕಾರ್ಯನಿರ್ವಹಿಸುತ್ತಾರೆ .
ಪೊಲೀಸ್ ಕಾನ್ಸ್ಟೇಬಲ್ Police Constable
ಮುಖ್ಯ ಕಾನ್ಸ್ಟೇಬಲ್ ಅಧೀನದಲ್ಲಿ ಪೊಲೀಸ್ ಕಾನ್ಸ್ಬಲ್ಲಳು ಕಾರ್ಯನಿರ್ವಹಿಸುತ್ತಾರೆ .

ದೇಶದ ಮೊದಲ ಸೈಬರ್ ಪೊಲೀಸ್ ಠಾಣೆ?
ಬೆಂಗಳೂರು
ವೈರ್ ಲೆಸ್ ತರಬೇತಿ ಸಂಸ್ಥೆ ?
ಬೆಂಗಳೂರು
ಇತರ ಪ್ರಮುಖ ವಿಷಯಗಳ ಮಾಹಿತಿ ಲಿಂಕ್ ಈ ಕೆಳಗೆ
ಚಂದ್ರಶೇಖರ ಕಂಬಾರ ಅವರ ಜೀವನ ಚರಿತ್ರೆ