TAX Information In Kannada, income tax information in kannada, ತೆರಿಗೆ ಬಗ್ಗೆ ಮಾಹಿತಿ, ಆದಾಯ ತೆರಿಗೆ ಬಗ್ಗೆ ಮಾಹಿತಿ, income tax information in kannada language
TAX Information In Kannada
ತೆರಿಗೆ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.
Terige Bagge Mahiti In Kannada
ಅರ್ಥ ವ್ಯವಸ್ಥೆಯನ್ನು ವಿಸ್ತರಿಸುವ ಯೋಜನೆ ಗಳನ್ನು ಕೈಗೊಳ್ಳಲು ಬೇಕಾದ ಆದಾಯವನ್ನು ಸಂಗ್ರಹಿಸಲು ಮತ್ತು ತನ್ನ ಜನಗಳ ಜೀವನ ಮಟ್ಟವನ್ನು ಹೆಚ್ಚಿಸಲು, ಸರ್ಕಾರಕ್ಕೆ ಹಣ ಬೇಕಾಗುತ್ತದೆ. ಇದನ್ನು ನಾವು ಸಾರ್ವಜನಿಕ ಆದಾಯ ಎಂದು ಕರೆಯುತ್ತೇವೆ.
ಸಾರ್ವಜನಿಕ ಆದಾಯವನ್ನು ಎರಡು ಮೂಲಗಳಿಂದ ಸರ್ಕಾರಗಳು ಪಡೆಯುತ್ತವೆ,
- ತೆರಿಗೆ ಆದಾಯ
- ತೆರಿಗೆಯೇತರ ಆದಾಯ
ಈ ಭಾಗದಲ್ಲಿ ಅಧ್ಯಯನದ ದೃಷ್ಟಿಯಿಂದ ಕೇವಲ ತೆರಿಗೆಗಳನ್ನು ಮಾತ್ರ ತೆಗೆದುಕೊಳ್ಳುತ್ತೇನೆ.
ಮೊದಲೇ ತಿಳಿಸಿದಂತೆ ಲೋಕೋಪಯೋಗಿ ಕಾರ್ಯಗಳನ್ನು ಕೈಗೊಳ್ಳಲು ರಾಷ್ಟ್ರಗಳು ತನ್ನ ಪ್ರಜೆಗಳ ಮೇಲೆ ತರಿಗೆಯನ್ನು ವಿಧಿಸುತ್ತವೆ. ಭಾರತದಲ್ಲಿ ತೆರಿಗೆ ವಿಧಿಸುವ ಅಧಿಕಾರವನ್ನು ಸಂವಿಧಾನವು ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೀಡಿದೆ.
ಸಂವಿಧಾನದ 265 ನೇ ವಿಧಿಯ ಪ್ರಕಾರ, ಕಾನೂನಿನ ಬೆಂಬಲವಿಲ್ಲದೇ, ಯಾವುದೇ ತೆರಿಗೆಯನ್ನು ವಿಧಿಸುವಂತಿಲ್ಲ ಮತ್ತು ಸಂಗ್ರಹಿಸುವಂತಿಲ್ಲ, ಸಂಸತ್ತು ಅಥವಾ ವಿಧಾನಸಭೆಯಲ್ಲಿ ಅಂಗೀಕಾರವಾದ ಕಾನೂನಿನ ಸಹಾಯದಿಂದ ಮಾತ್ರ ತೆರಿಗೆ ಸಂಗ್ರಹಿಸಬಹುದು.
ತೆರಿಗೆ ಎಂದರೇನು?
ತೆರಿಗೆ ಎಂದರೆ ದೇಶದ ಪ್ರಜೆಯು ಸರ್ಕಾರಕ್ಕೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಸಲ್ಲಿಸಬೇಕಾದ ಕಡ್ಡಾಯ ವಂತಿಕೆ ಆಗಿದೆ .
ಸರ್ಕಾರವು ತನ್ನ ಪ್ರಜೆಗಳಿಗೋಸ್ಕರ ಸಾಕಷ್ಟು ಕಾರ್ಯಗಳನ್ನು ಕೈಗೊಳ್ಳುತ್ತದೆ, ಉದಾಹರಣೆಗೆ, ರಸ್ತೆ, ಶಿಕ್ಷಣ, ನೀರು ಸರಬರಾಜು, ನೈರ್ಮಲ್ಯ, ವೈದ್ಯಕೀಯ ಸೇವೆಗಳು ಇತ್ಯಾದಿ. ಇಂತಹ ಬಾಹುಗಳಿಗೆ ಖರ್ಚು ಮಾಡಲು ಸರ್ಕಾರಕ್ಕೆ ಹಣ ಬೇಕಾಗುತ್ತದೆ. ಆ ಕಾರಣದಿಂದಲೇ ಸರ್ಕಾರಗಳು ವಿಧಿಸಿ, ಆ ಮೂಲಕ ಬಂದ ರಾಜಸ್ವದಿಂದ ಲೋಕೋಪಯೋಗಿ ಕಾರ್ಯಗಳನ್ನು ಕೈಗೊಳ್ಳುತ್ತವೆ
ತೆರಿಗೆಗಳನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಲಾಗುತ್ತದೆ
- ನೇರ ತೆರಿಗೆಗಳು
- ಪರೋಕ್ಷ ತೆರಿಗೆಗಳು
ನೇರ ತೆರಿಗೆಗಳು
ನೇರ ತೆರಿಗೆಗಳು ಎಂದರೆ, ಯಾವ ವ್ಯಕ್ತಿಗೆ ತೆರಿಗೆ ಹಾಕಲಾಗುತ್ತದೆಯೋ, ಅದೇ ವ್ಯಕ್ತಿ ತೆರಿಗೆಯನ್ನೂ ಬರಿಸುತ್ತಾನೆ.
ಪರೋಕ್ಷ ತೆರಿಗೆಗಳು
ಪರೋಕ್ಷ ತೆರಿಗೆಗಳಲ್ಲಿ ತೆರಿಗೆಯನ್ನು ಒಬ್ಬ ವ್ಯಕ್ತಿಗೆ ಹಾಕಲಾಗುತ್ತದೆ ಆದರೆ, ಅಂತಿಮವಾಗಿ ಅದನ್ನು ಭರಿಸುವ ವ್ಯಕ್ತಿ ಬೇರೆಯಾಗಿರುತ್ತಾನೆ.
FAQ
ತೆರಿಗೆ ಎಂದರೇನು?
ತೆರಿಗೆ ಎಂದರೆ ದೇಶದ ಪ್ರಜೆಯು ಸರ್ಕಾರಕ್ಕೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಸಲ್ಲಿಸಬೇಕಾದ ಕಡ್ಡಾಯ ವಂತಿಕೆ ಆಗಿದೆ .
ತೆರಿಗೆಯಲ್ಲಿ ಎಷ್ಟು ವಿಧಗಳು ?
ನೇರ ತೆರಿಗೆಗಳು
ಪರೋಕ್ಷ ತೆರಿಗೆಗಳು
ಇತರೆ ವಿಷಯಗಳು
- ಹಣದ ಅರ್ಥ ಮತ್ತು ಕಾರ್ಯಗಳು
- ಕರ್ನಾಟಕದ ಖನಿಜ ಸಂಪನ್ಮೂಲಗಳು
- ಭಾರತ ದೇಶದ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳು
- ಜಿ ಎಸ್ ಟಿ ಬಗ್ಗೆ ಮಾಹಿತಿ