ragale in kannada | ರಗಳೆ – ಕನ್ನಡ ವ್ಯಾಕರಣ | harihara ragale | kannada ragale, ಲಲಿತ ರಗಳ, ಮಂದಾನಿಲ ರಗಳೆ, ಉತ್ಸಾಹ ರಗಳೆ, FDA, SDA, KAS, KEA, KPSC, ragale kavi in kannada, ragale sahitya in kannada, ragale examples in kannada
ರಗಳೆ – ಕನ್ನಡ ವ್ಯಾಕರಣ
ragale in kannada | ರಗಳೆ – ಕನ್ನಡ ವ್ಯಾಕರಣ | harihara ragale | kannada ragale, ಲಲಿತ ರಗಳ, ಮಂದಾನಿಲ ರಗಳೆ, ಉತ್ಸಾಹ ರಗಳೆ, FDA, SDA, KAS, KEA, KPSC
ರಗಳೆ ಕನ್ನಡ ಕಾವ್ಯಗಳಲ್ಲಿ ಬಳಕೆಯಾಗಿರುವ ಛಂದೋಜಾತಿ ಗಳಲ್ಲಿ ಒಂದು . ರಗಳೆ ಎಂಬ ಮಾತನ್ನು ಮೊಟ್ಟ ಮೊದಲು ಮೊದಲನೆಯ ನಾಗವರ್ಮನು ಛಂದೋಂಬುದಿಯಲ್ಲಿ ತನ್ನ ಬಳಸಿರುವಂತೆ ಕಂಡು ಬರುತ್ತದೆ . ಅಲ್ಲದೆ ರಘಟಾ ಎಂಬ ಮಾತನ್ನೂ ಇಲ್ಲಿ ಬಳಸುತ್ತಾನೆ . ರಗಳೆಗಳು ಇತ್ತ ಪೂರ್ಣ ಸಂಸ್ಕೃತಗತಿಯ ಬಂಧಗಳೂ ಅಲ್ಲ . ಅತ್ತ ಪೂರ್ಣ ಪ್ರಾಕೃತ ಛಂದಾಧರಿತಗಳೂ ಅಲ್ಲ . ನಾಗವರ್ಮ ಹಾಗೂ ಜಯಕೀರ್ತಿಗಳಿ ಬ್ಬರೂ ತಮ್ಮ ಕೃತಿಗಳಲ್ಲಿ ರಗಳೆಯ ಲಕ್ಷಣವನ್ನು ಹೇಳುತ್ತಾರೆ .
ragale in kannada
ಲಕ್ಷಣಗಳು : –
ಗಣ ವಿನ್ಯಾಸ ವೈವಿಧ್ಯವನ್ನು ತೋರಿಸುವಂತಿರುತ್ತದೆ .
ಅಂತ್ಯಪ್ರಾಸವಿರುವುದರಿಂದ ಎರಡೆರಡು ಪಾದಗಳು ಒಂದೊಂದು ಗುಂಪುಗಳಾಗಿರುವಂತೆ ಕಂಡು ಬರುತ್ತದೆ .
ಪ್ರತಿಯೊಂದು ಪಾದದಲ್ಲಿಯೂ ನಿಶ್ಚಿತ ಸಂಖ್ಯೆಯ ಮಾತ್ರೆಗಳು ಬರುತ್ತವೆ . ನಿಶ್ಚಿತವಾದ ಮಾತ್ರಾಲಯದ ಪರಿಣಾಮವೂ ಕಂಡು ಬರುತ್ತದೆ .
ರಗಳೆ ಪ್ರಕಾರ ಮೊದಲು ಆದಿಕವಿ ಪಂಪನ ಆದಿ ಪುರಾಣ & ಪಂಪ ಭಾರತದಲ್ಲಿ ಕಾಣಿಸಿಕೊಳ್ಳುತ್ತದೆ . ಆದಿ ಪುರಾಣದಲ್ಲಿ ಬಳಕೆಯಾಗಿರುವ ರಗಳೆಯನ್ನು ರಗಳೆಯೆಂದೂ , ಮಟಟ್ ಮಂದಾನಿಲ ರಗಳೆಯೆಂದೂ ಕರೆಯಲಾಗಿದೆ . ಹರಿಹರನ ಕಾವ್ಯಗಳಲ್ಲಿ ರಗಳೆ ಹೆಚ್ಚು ಬಳಕೆಯಲ್ಲಿರುವುದನ್ನು ಕಾಣಬಹುದು .
ರಗಳೆಯ ವಿಧಗಳು : –
1 ) ಉತ್ಸಾಹ ರಗಳೆ
2 ) ಮಂದಾನಿಲ ರಗಳೆ
3 ) ಲಲಿತ ರಗಳ
ragale in kannada
ಉತ್ಸಾಹ ರಗಳೆ
ಪಂಪನ ಪಂಪ ಭಾರತ ಹಾಗೂ ರನ್ನನ ಅಜಿತನಾಥಪು ರಾಣದಲ್ಲಿ ಉತ್ಸಾಹ ರಗಳೆಯ ಮೊದಲ ಸುಳಿವು ಕಂಡು ಬರುತ್ತದೆ . ಈ ವಿಧದ ರಗಳೆಯಲ್ಲಿ ಇಂತಿಷ್ಟೇ ಪಾದಗಳಿರಬೇಕೆಂಬ ನಿಯಮವಿಲ್ಲ . ಪ್ರತಿಯೊಂದು ಪಾದದಲ್ಲಿಯೂ ಮೂರು ಮಾತ್ರೆಯ ನಾಲ್ಕು ಗಣಗಳು ಅಥವಾ ಮೂರು ಮಾತ್ರೆಯ ಮೂರು ಗಣಗಳು ಒಂದು ಕೊನೆಯಲ್ಲಿ ಬಂದು ಗುರುವೂ ಬರುವುದು . ಅಂತ್ಯ ಪ್ರಾಸವಿರುತ್ತದೆ .
ಉದಾ : -1 ನೇ ಪ್ರಕಾರ
ಮಾವಿನಡಿಯೊಳಾಡುತುಂ = 3 : 3 : 3
ಪಾಡನೆಯೇ ಕೇಳುತಂ = 3 : 3 : 3
ಪೂವಿನಿಂತ ಕಳೆಯುತುಂ = 3 : 3 : 3 :
ತೊಲಗದಿ ದಟರೆಸೆಯುತುಂ
2 ನೇ ಪ್ರಕಾರ
ಕುಳಿರ್ವಪೂಗೊಳಂಗಳಲ್ಲಿ 3 : 3 : 3 : 3
ತಳಿರ ಕಾವಣಂಗಳಲ್ಲಿ 3 : 3 : 3 : 3
ತುಂಬಿವಿಂಡಿಯಂತೆ ಪಾಡಿ 3 : 3 : 3 : 3
ಜಕ್ಕವಕ್ಕಿಯಂತೆ ಕೂಡಿ 3 : 3 : 3 : 3
ಮಂದಾನಿಲ ರಗಳೆ
ಇದು ಪ್ರಾಕೃತದಲ್ಲಿರುವ ಪಜ್ಜಟಿಕೆಯ ಪ್ರಭಾವದಿಂದ ಕನ್ನಡಕ್ಕೆ ಬಂದಿರುವುದಾಗಿದೆ . ಮಟ್ಟ ರಗಳೆ ಎಂದು ಕರೆಯುವ ಪಂಪನ ಕಾವ್ಯದಲ್ಲಿ ಬಳಕೆಯಾಗಿರುವ ರಗಳೆಯಾಗಿದೆ . ಮಂದಾನಿಲ ರಗಳೆಯ ನಾಲ್ಕು ನಾಲ್ಕು ಪ್ರತಿಯೊಂದು ಪಾದದಲ್ಲಿಯೂ ಮಾತ್ರೆಯ ಸಾಲುಗಳು ಇರುತ್ತವೆ .
ಉದಾ : –
1 ನೇ ಪ್ರಕಾರ
ನಾಲ್ಕು ಮಾತ್ರೆಯ ನಾಲ್ಕು ಗಣಗಳು ಬರುತ್ತವೆ . ಅಂತ್ಯ ಪ್ರಾಸ ನಿಯತವಾಗಿರುತ್ತದೆ .
ಪೊವಿಲ ಬೆಡಂಗಂ ಮಗೆ ಮೆಚ್ಚೆ ನೋಡಿ = 4 : 4 : 4 : 4
ದಿವಿ ಜೇನ ವಿಲಾಸದೊಳೀತು ಕೂಡಿ = 4 : 4 : 4 : 4 -ಪಂಪಭಾರತ
2 ನೇ ಪ್ರಕಾರ
ಒಟ್ಟು 16 ಮಾತ್ರೆಗಳಾದರೂ ಗಣಗಳಲ್ಲಿ ವ್ಯತ್ಯಾಸ ಉಂಟು
ಈ ರಗಳೆಯಲ್ಲಿ 3 ಮಾತ್ರೆಯ ಗಣದ ಮುಂದೆ 5 ಮಾತ್ರೆಯ ಗಣ ಹೀಗೆ ಎರಡೆರಡು ಗಣ .
ಅಂತ್ಯಪ್ರಾಸ ಕಡ್ಡಾಯ
ragale in kannada
ಲಲಿತ ರಗಳೆ
ಇದು ಕೂಡ ಹತ್ತನೇಯ ಶತಮಾನದಿಂದಲೇ ಕನ್ನಡ ಕಾವ್ಯಗಳಲ್ಲಿ ಬಳಕೆಯಾಗಿದೆ . ಪಂಪನು ತನ್ನ ಆದಿ ಪುರಾಣದಲ್ಲಿ ಇದನ್ನು ಪ್ರಯೋಗ ಮಾಡಿದ್ದಾನೆ . ಇವನಲ್ಲದೆ ರನ್ನನು ಕೂಡ ತನ್ನ ಅಜಿತನಾಥ ಪುರಾಣದಲ್ಲಿ ಈ ರಗಳೆಯ ಪ್ರಯೋಗ ಮಾಡಿರುವುದನ್ನು ನೋಡಬಹುದು . ಉಳಿದೆರಡು . ರಗಳೆಗಳಿಗಿಂತ ಲಲಿತ ರಗಳೆಯು ಹೆಚ್ಚು ಬಳಕೆಯಲ್ಲಿದೆ . ಪ್ರತಿ ಪಾದದಲ್ಲಿಯೂ ಮಾತ್ರೆಯ ನಾಲ್ಕು ಗಣಗಳಿರುತ್ತವೆ . ಅಲ್ಲದೆ ಅಂತ್ಯ ಪ್ರಾಸವಿರುವುದೂ ಕಂಡು ಬರುತ್ತದೆ
ಉದಾ : – 5:5:5:5: = 20
bhamini shatpadi in kannada | ಕನ್ನಡ ಭಾಮಿನಿ ಷಟ್ಪದಿ | bhamini shatpadi examples