Malathi Holla Information in Kannada, ಮಾಲತಿ ಹೊಳ್ಳ ಮಾಹಿತಿ , ಮಾಲತಿ ಕೃಷ್ಣಮೂರ್ತಿ ಹೊಳ್ಳ, malathi holla story in kannada, information about malathi holla in kannada, about malathi holla in kannada, malathi krishnamurthy holla information in kannada
Malathi Holla Information in Kannada
ಮಾಲತಿ ಹೊಳ್ಳ ಜೀವನದ ಬಗ್ಗೆ ಕಿರು ಪರಿಚಯ ಮತ್ತು ಅವರ ಬಗ್ಗೆ ಸಣ್ಣ ಕಥೆ ಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಮಾಲತಿ ಹೊಳ್ಳ ಮಾಹಿತಿ
ಆಗ ಆ ಮಗುವಿಗೆ ಇನ್ನೂ ಒಂದೇ ವರ್ಷ. ಪೋಲಿಯೋ ಆಕ್ರಮಿಸಿಬಿಟ್ಟಿತು. ಮುಂದೆ ಆಕೆಯ ಭವಿಷ್ಯಚಕ್ರ, ಚಕ್ರಗಳ ಮೇಲಿನ ಕುರ್ಚಿಯ ಮೇಗಡೆಗೆ ವಿಧಿತವಾಗಿಬಿಟ್ಟಿತು.
ಆದರೆ ಅವರು 300ಕ್ಕೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪದಕಗಳನ್ನು ಗೆದ್ದರು. ಅವುಗಳಲ್ಲಿ ಸ್ವರ್ಣ ಪದಕ ಕೂಡಾ ಒಂದು. ಅವರೇ ಮಾಲತಿ, ಕೃಷ್ಣಮೂರ್ತಿ ಹೊಳ್ಳ
malathi holla story in kannada
ಮಾಲತಿ ಕೃಷ್ಣಮೂರ್ತಿ ಹೊಳ್ಳ ಬಗ್ಗೆ ಕಥೆ
ಎಲ್ಲಾ ಬಾಗಿಲುಗಳು ಮುಚ್ಚಿ ದರು ಎಲ್ಲೋ ಒಂದು ಸಣ್ಣ ಕಿಂಡಿಯಿಂದ ಬೆಳಕು ಹರಿದು ಬರುತ್ತದೆ. ಇದು ಮಾಲತಿ ಹೊಳ್ಳ ಅವರ ಬದುಕಿನ ಸತ್ಯ ಪೊಲಿಯೋ ಎಂಬ ಭಯಂಕರ ವ್ಯಾಧಿಗೆ ತುತ್ತಾಗಿ.
ಕಾಲುಗಳು ಶಕ್ತಿಹೀನ ವಾದರು ಕ್ರೀಡಾ ಲೋಕದಲ್ಲಿ ವಿಶ್ವವೇ ಬೆರಗಾಗುವಂತಹ ಸಾಧನೆಯನ್ನು ಮಾಡಿದವರು ಮಾಲತಿ ಹೊಳ್ಳ ವಿಧಿ ನೀಡಿದ ಅಂಗವಿಕಲತೆ ಈ ಸಾಧಕಿಯ ಪಾಲಿಗೆ ವರವಾಯಿತು.
ಮಾಲತಿ ಹೊಳ್ಳ ಅವರ ತಂದೆ :- ಕೃಷ್ಣಮೂರ್ತಿ ಹೊಳ್ಳ.
ತಾಯಿ:- ಪದ್ಮಾವತಿ.
ಹೋಟೆಲ್ ವೃತ್ತಿ ಗಾಗಿ ಉಡುಪಿ ಜಿಲ್ಲೆಯ ಮಣ್ಣೂರು ಗ್ರಾಮ ದಿಂದ ಬೆಂಗಳೂರಿಗೆ ಬಂದವರು. ಇವರ ನಾಲ್ಕನೆಯ ಮಗುವಾಗಿ ಜುಲೈ 6, 1958ರಂದು ಮಾಲತಿ ಜನಿಸಿದರು. ದುರದೃಷ್ಟ ವಶಾತ್ ಒಂದು ವರ್ಷದ ಮಗು ಮಾಲತಿಗೆ ಪೊಲಿ ಯೋ ಆಗಿದ್ದರಿಂದ ಮಗುವನ್ನು ಚೆನ್ನೈನ ಲ್ಲಿರುವ ದತ್ತಾತ್ರೇಯ ಮೆಡಿಕಲ್ ಸೆಂಟರ್ ಎಂಬ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆ ಗಾಗಿ ಸೇರಿಸಿದರು. ಆಕೆಯ ಬಾಲ್ಯದ ಬಹುಭಾಗಲ್ಲಿಯೇ ಕಳೆಯಿತು.
information about malathi holla in kannada
ದೇಹದ ನರ ಗಳೆಲ್ಲಾ ಚೆಂಡಿನಂತೆ ಒಂದುಗೂಡುವುದು. ಇವರ ಕಾಯಿಲೆಯ ಸ್ವರೂಪ. ಇದನ್ನು ತಪ್ಪಿಸಲು ಪ್ರತಿ ಆರು ತಿಂಗಳಿಗೊಮ್ಮೆ ಮಾಲತಿ ಗೆ ಚಿಕಿತ್ಸೆ ಯಾಗುತ್ತಿತ್ತು. ಇಂತಹ 32 ಶಸ್ತ್ರಚಿಕಿತ್ಸೆ ಗಳನ್ನು ಅವರು ಎದುರಿಸಿದ್ದರು.
ಅದಾಗ್ಯೂ ಪ್ರತಿ ಪರೀಕ್ಷೆಯಲ್ಲೂ ಮಾಲತಿ ತರಗತಿಗೆ ಪ್ರಥಮ ಳಾಗಿ ರುತ್ತಿದ್ದರು 1975 ರಲ್ಲಿ ಬೆಂಗಳೂರಿಗೆ ಹಿಂತಿರುಗಿದ ನಂತರ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು.
ತಂದೆಯ ಪ್ರೋತ್ಸಾಹದ ನುಡಿಗಳು ಮಾಲತಿಗೆ ಧೈರ್ಯ ನೀಡಿದವು. ಅದೇ ವರ್ಷ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ, ಎರಡು ಬೆಳ್ಳಿ ಪದಕ ಗಳನ್ನು ಗಳಿಸಿದ ಮಾಲತಿ ಹೊಳ್ಳ ಸಾಧನೆಯ ಹಾದಿಯಲ್ಲಿ ಮುಂದುವರೆದರು.
ಈ ಯಶಸ್ಸು ಕ್ರೀಡೆಗಳತ್ತ ಅವರ ಒಲವು ಬೆಳೆಯಲು ಕಾರಣ ವಾಯಿತು. ಒಮ್ಮೆ ಅಹಮದಾಬಾದಿನಲ್ಲಿ ನಡೆದ ಕ್ರೀಡಾಕೂಟ ದಲ್ಲಿ ಗಾಲಿ ಕುರ್ಚಿಯ ಓಟದ ಸ್ಪರ್ಧೆಗೆ ಬೇರೆ ಮಹಿಳಾ ಸ್ಪರ್ಧಿಗಳೂ ಇರಲಿಲ್ಲ. ಆಗ ಮಾಲತಿ ಪುರುಷ ಸ್ಪರ್ಧಿಗಳೊಂದಿಗೆ ಸ್ಪರ್ಧಿಸ ಬೇಕಾಯಿತು. ಅವರೆಲ್ಲ ಆಗಲೇ ಹೆಸರು ಮಾಡಿದ ವರು. ಅದ್ಭುತ ಮಾಲತಿಯೇ ಗೆದ್ದರು. ಒಬ್ಬ ಮಹಿಳೆ ಪುರುಷನ ನ್ನು ಹಿಮ್ಮೆಟ್ಟಿಸಿ ಬಹುಮಾನ ಪಡೆದಾಗ ಅಭಿಮಾನಿಗಳ ಸುರಿಮಳೆಯೇ ಆಯಿತು.
ಕೊರಿಯಾ ಡೆನ್ಮಾರ್ಕ್ ಬೀಜಿಂಗ್ ಬ್ಯಾಂಗ್ ಬ್ಯಾಂಗ್ ಮ್ಯಾಂಚೆಸ್ಟರ್ ನಲ್ಲಿ ನಡೆದ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಏಶಿಯಾದ ಕ್ರೀಡಾಕೂಟಗಳಲ್ಲಿ ಗಾಲಿಕುರ್ಚಿ ಓಟ, ಗುಂಡು ಎಸೆತ, ತಟ್ಟೆ ಎಸೆತ ಇ ಟಿ ಸ್ಪರ್ಧೆ ಗಳಲ್ಲಿ ಮಾಲತಿ ಹೊಳ್ಳ ಭಾಗವಹಿಸಿ ವಿಜಯದಾಗ ಇಡೀ ವಿಶ್ವವೇ ಅವರತ್ತ ತಿರುಗಿತು. ಬರ್ಮಿಂಗ್‌ಹ್ಯಾಮ್ ಗೆ ಹೋದಾಗ ಬಸ್ಸಿನಿಂದ ಬಿದ್ದು ಮೂಳೆ ಮುರಿದರು. ಅವರ ಉತ್ಸಾಹ ಮಾತ್ರ ತಗ್ಗಿಲ್ಲ.
ಇದು ಅವರಿಗೆ ಹದಿನೇಳನೇ ಮೂಳೆ ಮುರಿತ ಕ್ರೀಡಾ ಜಗತ್ತಿನಲ್ಲಿ ಮಾಲತಿ ಹೊಳ್ಳರ ಸಾಧನೆಯನ್ನು ಪರಿಗಣಿಸಿ ಭಾರತ ಸರಕಾರ ಅರ್ಜುನ್ ಪ್ರಶಸ್ತಿ ಯನ್ನ 1995 ತೊಂಬತ್ತ ಇದರಲ್ಲಿ ನೀಡಿದೆ. ಪದ್ಮ ಶ್ರೀ ಪ್ರಶಸ್ತಿಯ ನ್ನ 2001ರಲ್ಲಿ ನೀಡಿ ಗೌರವಿಸಿತು. ಕೆ ಕೆ ಬಿರ್ಲಾ ಪ್ರಶಸ್ತಿ, ಅಮೆರಿಕನ್ ಬಯೋ ಗ್ರಾಫಿಕಲ್ ಇನ್‌ಸ್ಟಿಟ್ಯೂಟ್ ವರ್ಷದ ಮಹಿಳಾ ಪ್ರಶಸ್ತಿ, ಇಂಗ್ಲೆಂಡಿನ ಅಂತರರಾಷ್ಟ್ರೀಯ ಬಯೋ ಗ್ರಾಫಿ ಕೇಂದ್ರದ ಅಂತರ ರಾಷ್ಟ್ರೀಯ ಮಹಿಳಾ ಪ್ರಶಸ್ತಿ.
ಕರ್ನಾಟಕ ಸರಕಾರದ ಏಕಲವ್ಯ ಪ್ರಶಸ್ತಿ ಮುಂತಾದ 30 ಕ್ಕೂ ಮೀರಿ ಪ್ರತಿಷ್ಠಿತ ಪ್ರಶಸ್ತಿ ಗಳಿಗೆ ಮಾಲತಿ ಹೊಳ್ಳ ಭಾಜನ ರಾಗಿದ್ದಾರೆ.
malathi krishnamurthy holla biography in kannada
ಅಭಿನಯ ಜಗತ್ತಿಗೂ ಮಾಲತಿ ಹೊಳ್ಳ ಹೊರತಾಗಿಲ್ಲ. ಡಾಕ್ಟರ್ ರಾಜ್ ಕುಮಾರ್ ಅವರೊಡನೆ ಕಾಮನಬಿಲ್ಲು ಚಲನಚಿತ್ರ ದಲ್ಲಿ ಅಭಿನಯಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾಲತಿ ಹೊಳ್ಳ, ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ.
ವಿಧಿ ಬದುಕಿನಲ್ಲಿ ಕೊಟ್ಟ ನೋವನ್ನು ನುಂಗಿ ವಿಶ್ವ ವೇ ಬೆರಗಾಗುವಂತೆ ಬೆಳೆದಿರುವುದರಲ್ಲಿ ಅವರ ಪರಿಶ್ರಮ ವಿದೆ. ಅವರ ಸಾಧನೆಯನ್ನು ಕುರಿತು ಬರೆಯಲಾದ ಪ್ರೌಢ ಪ್ರಬಂಧ ಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.
ತಮ್ಮಂತೆಯೆ ವಿಕಲ ಚೇತನರಾದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಆಶ್ರಯ, ಶಿಕ್ಷಣ, ವೈದ್ಯಕೀಯ ನೆರವು ನೀಡುವ ಸಲು ವಾಗಿ ಮಾತೃ ಫೌಂಡೇಶನ್ ಎಂಬ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಸದಾ ಚಟುವಟಿಕೆ ಅವರ ಯಶಸ್ಸಿನ ಗುಟ್ಟು ಕೀಳರಿಮೆಗಿಂತ ಮಿಗಿಲಾದ ಅಂಗವೈಕಲ್ಯವಿಲ್ಲ. ನಾವು ನಗುತ್ತಲೇ ಜೀವನವನ್ನು ಎದುರಿಸ ಬೇಕು ಎನ್ನುವುದು ಅವರ ಸಿದ್ಧಾಂತ. ಮಾಲತಿ ಹೊಳ್ಳ ಅವರ ಜೀವನ ವಿಶೇಷಚೇತನರಿಗೆ.
ಮಾತ್ರವಲ್ಲ, ಎಲ್ಲ ಮಹಿಳೆಯರಿಗೂ ಸ್ಪೂರ್ತಿದಾಯಕ ಛಲ ಗಾತಿ ಮಾಲತಿ ವಿಶೇಷಚೇತನರ ಕ್ರೀಡಾ ಪ್ರಪಂಚ ದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿ ಭಾರತದ ಕೀರ್ತಿಯನ್ನ ಹೆಚ್ಚಿಸಿದ್ದಾರೆ.
FAQ
ಮಾಲತಿ ಹೊಳ್ಳ ಜನನ?
ಜನನ: ಜುಲೈ 6, 1958 (ವಯಸ್ಸು64 ವರ್ಷಗಳು)
ಮಾಲತಿ ಹೊಳ್ಳ ಅವರಿಗೆ ಸಂದಿದೆ ಪ್ರಶಸ್ತಿಗಳು ?
ಪದ್ಮಶ್ರೀ, ಅರ್ಜುನ ಪ್ರಶಸ್ತಿ – ಅಥ್ಲೆಟಿಕ್ಸ್
ಇತರೆ ಪ್ರಬಂಧಗಳನ್ನು ಓದಿ
ಮಹಾತ್ಮ ಗಾಂಧಿ ಜೀವನ ಚರಿತ್ರೆ ಕನ್ನಡ ಪ್ರಬಂಧ Gandhiji Information in Kannada
ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ
ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು ಅರ್ಥ ವಿವರಣೆ