kriya padagalu in kannada examples, ಕ್ರಿಯಾಪದಗಳು | Kriya Padagalu | ಕನ್ನಡ ವ್ಯಾಕರಣ, FDA SDA Group C Kannada | Kriyapadagalu, pdo, kas
Kriya Padagalu In Kannada Examples
ಕ್ರಿಯಾಪ್ರಕೃತಿ ( ಧಾತು )
ಹಿಂದಿನ ಅಧ್ಯಾಯದಲ್ಲಿ , ನಾಮಪ್ರಕೃತಿ – ನಾಮವಿಭಕ್ತಿ ಪ್ರತ್ಯಯ – ನಾಮಪದ ಎಂದರೇನು ? ಪ್ರಕೃತಿಗಳ ವಿಧಗಳು , ಪ್ರತ್ಯಯಗಳ ವಿಧಗಳು ಇವುಗಳ ಬಗೆಗೆ ತಿಳಿದಿದ್ದೀರಿ . ಈಗ ನಾಮಪದ ಗಳ ಹಾಗೆಯೇ ಇನ್ನೊಂದು ರೀತಿಯ ಪದಗಳ ವಿಚಾರವನ್ನು ತಿಳಿಯೋಣ , ಪದವೆಂದರೆ ಪ್ರಕೃತಿಗೆ ಪ್ರತ್ಯಯ ಸೇರಿ ಆದ ಶಬ್ದರೂಪವೆಂದು ನಿಮಗೆ ತಿಳಿದಿದೆ ,
( 1 ) ಅಣ್ಣ ಊಟವನ್ನು ಮಾಡುವನು .
( 2 ) ತಂದೆಯು ಕೆಲಸವನ್ನು ಮಾಡಿದನು .
(3 ) ಅವನು ನಾಳೆಯದಿನ ಮಾಡಾನು ( ಮಾಡಿಯಾನು .
( 4 ) ದೇವರು ಒಳ್ಳೆಯದನ್ನು ಮಾಡಲಿ .
( 5 ) ತಾಯಿಯು ಅಡಿಗೆಯನ್ನು ಮಾಡುತ್ತಾಳೆ .
ಅವನು ಊಟವನ್ನು ಮಾತನು:
ಮೇಲೆ ಇರುವ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳಾದ- ಮಾಡುತ್ತಾಳೆ , ಮಾಡಿದನು , ಮಾಡುವನು , ಮಾಡಲಿ , ಮಾಚಾನು ( ಮಾರಿಯಾನು ) , ಮಾಡನು -ಇವೆಲ್ಲ ಒಂದೊಂದು ಕ್ರಿಯೆಯು ಪೂರ್ಣಗೊಂಡ ಅರ್ಥಕೊಡುವಂಥ ಪದಗಳಾಗಿವೆ . ಆದುದರಿಂದ ಹೀಗೆ ಪೂರ್ಣಗೊಂಡ ಒಂದು ಕ್ರಿಯೆಯ ಅರ್ಥಕೊಡುವ – ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ .
ಮೇಲೆ ಹೇಳಿದ ಆರು ಕ್ರಿಯಾಪದಗಳಿಗೆಲ್ಲ ಮೂಲ ‘ ಮಾಡು ‘ ಎಂಬ ಶಬ್ದವಾಗಿದೆ . ಇದು ಕ್ರಿಯೆಯ ಅರ್ಥವನ್ನು ಕೊಡುವ ಮೂಲ ‘ ರೂಪವೇ ಆಗಿದೆ .
ಮಾಡುತ್ತಾನೆ
ಮಾಡಿದನು
ಮಾಡುವನು
ಮಾಡಲಿ ಮಾಡು ‘
ಮಾಡಾನು
ಮಾಡನು ‘
ಮಾಡು ‘ ಎಂಬ ಈ ಮೂಲರೂಪಕ್ಕೆ ಅನೇಕ ಪ್ರತ್ಯಯಗಳು ಸೇರಿದ ಮೇಲೆ ಆರು ವಿವಿಧ ರೂಪಗಳನ್ನು ಹೊಂದಿ ವಿವಿಧವಾದ ಕ್ರಿಯೆಯನ್ನು ಸೂಚಿಸುವ ಕ್ರಿಯಾಪದವಾಗುವುದು . ಇಂಥ ಕ್ರಿಯಾಪದದ ಮೂಲರೂಪವನ್ನು ಕ್ರಿಯಾಪ್ರಕೃತಿ ‘ ಅಥವಾ ‘ ಧಾತು ‘ ಎನ್ನುವರು . ಇದರ ಸೂತ್ರವನ್ನು ಮುಂದಿನಂತೆ ಹೇಳಬಹುದು .
ಕ್ರಿಯಾರ್ಥವನ್ನು ಕೊಡುವುದಾಗಿಯೂ , ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ ‘ ಅಥವಾ ‘ ಧಾತು ‘ ಎನ್ನುವರು.
Kriya Padagalu In Kannada Examples
ಧಾತು ಮೂಲ ಧಾತು
ಪ್ರತ್ಯಯಾಂತ ಧಾತು
( 1 ) ಮೂಲಧಾತುಗಳು- ಉದಾಹರಣೆಗೆ : – ಮಾಡು , ತಿನ್ನು , ಹೋಗು , ಬರು , ಮಲಗು , ಏಳು , ನಡೆ , ನೋಡು , ಓಡು , ನಿಲ್ಲು , ಓದು , ಆಗು , ಹೊಳೆ , ಬದುಕು , ಇಕ್ಕು , ಮುಗಿ , ತೂಗು , ಹಿಗ್ಗು , ನಡುಗು , ಮಿಂಚು , ಮೆಟ್ಟು , ಹಂಚು , ಅಂಜು , ಈಜು , ಉಜ್ಜು , ದಾಟು , ಹುಟ್ಟು , ಒಕ್ಕು , ತುಂಬು , ಮುಚ್ಚು , ಹಿಡಿ , ಕೊಡು , ಹರಡು , ಇಡು , ಪಡೆ , ಕುಣಿ , ಕಾಣು , ಸುತ್ತು , ಒತ್ತು , ಎತ್ತು , ಬಿತ್ತು , ತೆರು , ಒದೆ , ತಿದ್ದು , ಹೊಡೆ , ಬಡಿ , ಬರೆ , ನೆನೆ , ಎನ್ನು , ಒಪ್ಪು , ತಪ್ಪು , ನಂಬು , ಉಬ್ಬು , ಕಾ , ಬೇ
( 2 ) ಸಾಧಿತ ಧಾತು ( ಪ್ರತ್ಯಯಾಂತ ಧಾತು ) – ಒಮ್ಮೊಮ್ಮೆ ನಾವು ನಾಮಪ್ರಕೃತಿಗಳನ್ನೇ ಧಾತುಗಳನ್ನಾಗಿ ಮಾಡಿಕೊಂಡು ಕ್ರಿಯಾಪ್ರಕೃತಿಗಳಿಗೆ ಹತ್ತುವ ಪ್ರತ್ಯಯ ಹಚ್ಚಿ ಕ್ರಿಯಾಪದಗಳ ನ್ನಾಗಿ ಮಾಡಿ ಹೇಳುತ್ತೇವೆ .
ಉದಾಹರಣೆಗೆ : –
ಅವನು ಆ ಗ್ರಂಥವನ್ನು ಕನ್ನಡಿಸಿದನು . ‘ ಕನ್ನಡ ‘ ಎಂಬುದು ನಾಮಪ್ರಕೃತಿಯಾಗಿದೆ . ಇದು ಧಾತುವಲ್ಲ . ಇದರ ಮೇಲೆ ‘ ಇಸು ‘ ಪ್ರತ್ಯಯ ಹಚ್ಚಿ ‘ ಕನ್ನಡಿಸು ‘ ಎಂದು ಆಗುವುದಿಲ್ಲವೆ ? ಹೀಗೆ ‘ ಕನ್ನಡಿಸು ‘ ಎಂದಾದ ಮೇಲೆ ಇದು ಧಾತುವೆನಿಸುತ್ತದೆ . ಇದರ ಮೇಲೆ ಧಾತುಗಳ ಮೇಲೆ ಸೇರಬೇಕಾದ ಎಲ್ಲ ಪ್ರತ್ಯಯಗಳು ಸೇರಿ – ಕನ್ನಡಿಸುತ್ತಾನೆ , ಕನ್ನಡಿಸಿದನು , ಕನ್ನಡಿಸುವನು , ಕನ್ನಡಿಸಲಿ , ಕನ್ನಡಿಸಾನು , ಕನ್ನಡಿಸನು – ಇತ್ಯಾದಿ ಕ್ರಿಯಾಪದಗಳಾಗಿ ಬಳಸಲ್ಪಡುತ್ತವೆ . ಇಂಥ ಧಾತುಗಳನ್ನೇ ನಾವು ಸಾಧಿತಧಾತು ಅಥವಾ ಪ್ರತ್ಯಯಾಂತಧಾತು ಗಳೆಂದು ಕರೆಯುತ್ತೇವೆ.
Nice 👍👍👍👍👍
👍👍👍
Very good sentences of kriya padagalu