77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ | Independence Day Essay in Kannada 2023

ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ ಕನ್ನಡ | Independence Day Essay in Kannada

ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ ಕನ್ನಡ, independence day speech in kannada, independence day essay in kannada, about independence day in kannada, independence day information in kannada, independence day in kannada essay, independence day prabandha in kannada, independence in kannada,ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ ಕನ್ನಡ 2023

Independence Day Essay in Kannada 2023

15 ನೆಯ ಆಗಸ್ಟ್ 1947! ಭಾರತದ ಇತಿಹಾಸದಲ್ಲಿಯೇ ಸ್ವರ್ಣಾಕ್ಷರಗಳಿಂದ ಬರೆದಿಡಬೇಕಾದ ದಿನ . ಅಂದು ಭಾರತೀಯರಾದ ನಮಗೆಲ್ಲರಿಗೂ ಸ್ವಾತಂತ್ರ್ಯ ಪ್ರಾಪ್ತವಾದ ದಿನ .

ಭಾರತಮಾತೆಗೆ ತೊಡಿಸಿದ್ದ ದಾಸ್ಯತೆಯ ಶೃಂಖಲೆಗಳನ್ನು ಕಳಚಿ ಹಾಕಿದ ಅಪೂರ್ವ ದಿನ . ಈ ಮೊದಲು ಸಹಸ್ರಾರು ಮೈಲಿಗಳ ದೂರದಲ್ಲಿದ್ದ ಇಂಗ್ಲಿಷರು ವ್ಯಾಪಾರಕ್ಕೆಂದು ಒಂಟೆಗಳ ಹಾಗೆ ಬಂದು , ಮುಗ್ಧಮನದ ಭಾರತೀಯರನ್ನು ಮರುಳು ಮಾಡಿ , ವೈವಿಧ್ಯತೆಯಲ್ಲಿ ಏಕತೆಯ ಕುಹಕ ತತ್ವದಿಂದ ಭಾರತದ ರಾಜರುಗಳಲ್ಲಿ ಇಲ್ಲಸಲ್ಲದ ವೈಮನಸ್ಯಗಳನ್ನು ತಂದು , ದೇಶದ ಐಕ್ಯತೆಯನ್ನೇ ಛಿದ್ರಛಿದ್ರಗೊಳಿಸಿ , ತಮ್ಮ ದಬ್ಬಾಳಿಕೆಯ ಆಡಳಿತವನ್ನು ನೂರಾರು ವರ್ಷಗಳ ಕಾಲ ನಡೆಸಿ , ಭಾರತದ ಸಕಲ ಸಂಪತ್ತನ್ನೂ ಸೂರೆಮಾಡಿದರು .

ಹುಲುಸಾದ ಭೂಮಿಯಿಂದ ಕೂಡಿದ ಭಾರತವನ್ನೇ ತಮ್ಮ ಸ್ವಾರ್ಥಲಾಲಸೆಗಳ ಕಾರಣ ಬರಡುಮಾಡಿ ಹೋದರು . ಇವರನ್ನು ಬಡಿದೋಡಿಸಲು ಭಾರತದ ಸ್ವಾತಂತ್ರ್ಯವೀರರು , ಜನ ನಾಯಕರು , ಪಟ್ಟಪಾಡು ವರ್ಣಿಸಲಾಗದು , ದೇಶಮಾತೆಯ ರಕ್ಷಣೆಯ ಸಲು ವಾಗಿ ಪ್ರಾಣ – ಪಣತೊಟ್ಟು , ತೆತ್ತು ಹೋರಾಡಿದವರು ಅಸಂಖ್ಯಾತ .

ಭಗತ್‌ಸಿಂಗ್ , ಚಂದ್ರಶೇಖರ ಅಜಾದ್ , ಬಿಸ್ಮಿಲ್ಲಾ , ರಾಜಗುರು , ಸುಭಾಷ್ ಚಂದ್ರ ಬೋಸ್ , ಹೀಗೆಯೇ ಎಣಿಸುತ್ತಾ ಹೋದರೆ , ಹಾಗೆ ಹುತಾತ್ಮರಾದವರ ಸಂಖ್ಯೆ ಗಗನವನ್ನೇ ಮುಟ್ಟಿತು .

ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ ಕನ್ನಡ | Independence Day Essay in Kannada
ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ ಕನ್ನಡ 2023

ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ ಕನ್ನಡ

ಇವರೆಲ್ಲರ ಬಲಿದಾನದ ಕಾರಣ ನಾವಿಂದು ಸ್ವತಂತ್ರ ಭಾರತದ ಪೌರರೆನಿಸಿದ್ದೇವೆ . ಇಂತಹವರೆಲ್ಲರನ್ನೂ ಸ್ವಾತಂತ್ರ ದಿನಾಚರಣೆಯ ದಿನ ಸ್ಮರಿಸುವುದೇ ಮುಖ್ಯ ಉದ್ದೇಶ . ಜೊತೆಗೆ ನಾವೂ ಸಹ ಅಂತಹ ಹುತಾತ್ಮ ವೀರರಿಂದ ಸ್ಫೂರ್ತಿ ಪಡೆದು , ಬಿಸಿರಕ್ತದ ಕೋಡಿ ಹರಿಸಿ , ಗಳಿಸಿಕೊಟ್ಟು ಹೋಗಿರುವ ಸ್ವಾತಂತ್ರ್ಯವನ್ನು ಉಳಿಸುವ ಸಲುವಾಗಿ ಈ ದಿನಾಚರಣೆಯ ದಿನ ಪಣ ತೊಡಬೇಕಾದುದು ಇಂದಿನ ಉದ್ದೇಶವೇ ಆಗಿದೆ .

ಭಾರತೀಯ ಪೌರರೆನಿಸಿದ ನಮ್ಮೆಲ್ಲರಿಗೂ ಸ್ವಾತಂತ್ರೋತ್ಸವನ್ನು ಆಚರಿಸುವುದೆಂದರೆ ಹರ್ಷದ , ಹೆಮ್ಮೆಯ ವಿಷಯ . ನಾವೆಲ್ಲರೂ ಆಚರಣೆಯ ಒಂದೆರಡು ದಿನಗಳ ಮೊದಲೇ ಉತ್ಸವದ ಪೂರ್ವಸಿದ್ಧತೆಗಳಿಗೆ ತೊಡಗಿರುತ್ತೇವೆ . ಕಾರಣ ನಮ್ಮಲ್ಲಿ ದೇಶಭಕ್ತಿಯ ಭಾವನೆ ತುಂಬಿರುತ್ತದೆ .

ಅದರಲ್ಲೂ ಶಾಲೆಯ ಮಕ್ಕಳಲ್ಲಿ ಈ ಸಂಭ್ರಮಗಳು ವೈಭವೋಪೇತ , ಸಾಂಸ್ಕೃತಿಕ ಚಟುವಟಿಕೆಗಳಾದ ನಾಟಕ , ಕಾವ್ಯ , ವಾಚನ , ಹಾಡುಗಾರಿಕೆ , ಆಶುಭಾಷಣ , ಇವೇ ಅಲ್ಲದೆ ವಿವಿಧ ಕ್ರೀಡೆಗಳಲ್ಲಿಯೂ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಆಸಕ್ತಿ ಹಾಗೂ ಉತ್ಸಾಹ ದಿಂದ ಭಾಗವಹಿಸುತ್ತಾರೆ . ಬಹುಮಾನಗಳನ್ನು ಪಡೆಯಲು , ಸ್ವಾತಂತ್ರ್ಯ . ಸಮಾರಂಭದಲ್ಲಿ ನೆರೆಯಲು ಅವರೆಲ್ಲರ ಭುಜಗಳೂ ಕುಣಿಯುತ್ತಿರುತ್ತವೆ .

ಶಾಲೆಯ ಒಳ – ಹೊರ ಆವರಣಗಳ ಶುಚಿತ್ವದ ಬಗ್ಗೆ ಗಮನ ಹರಿಸುತ್ತಾರೆ . ರಾಷ್ಟ್ರ ಧ್ವಜಸ್ತಂಭವನ್ನು ಪತ್ರೆ – ಪುಷ್ಪಗಳಿಂದ ಅಂದ – ಚಂದ ಎನಿಸುವಂತೆ ಅಲಂಕರಿಸುತ್ತಾರೆ . ಸಮಾರಂಭದ ವೇದಿಕೆಯನ್ನೂ ಸಹಾ ಚಿತ್ತಾಕರ್ಷಕ ರೀತಿಯಲ್ಲಿ ಸಜ್ಜುಗೊಳಿಸಿರುತ್ತಾರೆ .

Independence Day Speech in Kannada

ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವ ಸಂದರ್ಭಗಳಲ್ಲಿ ಉತ್ಸಾಹದ ಬೆಳಕು ವಿದ್ಯಾರ್ಥಿ – ವಿದ್ಯಾರ್ಥಿನಿಯರ ಮುಖಾರವಿಂದದಲ್ಲಿ ಮಿಂಚುತ್ತಿರುತ್ತದೆ . ಸ್ವಾತಂತ್ರೋತ್ಸವದ ದಿನ ಪ್ರಾತಃಕಾಲದ ವೇಳೆಗೆ ಎಲ್ಲರೂ ಶುಚಿ ರ್ಭೂತರಾಗಿ , ಸಮವಸ್ತ್ರಗಳನ್ನು ಧರಿಸಿ , ಬಾವುಟವನ್ನು ಹಾರಿಸುವುದನ್ನು ನೋಡಲು , ಧ್ವಜವಂದನೆಯನ್ನು ಮಾಡಲು ಧ್ವಜಸ್ತಂಭದ ಸುತ್ತಲೂ ಶಿಸ್ತಿನಿಂದ ನಿಂತಿರುತ್ತಾರೆ .

ಈ ಧ್ವಜಾರೋಹಣದ ಕಾರ್ಯಗೌರವದಲ್ಲಿ ಸ್ಥಳೀಯ ಪ್ರಮುಖರೂ ಸಹ ಆಸಕ್ತಿಯಿಂದ ಹಾಜರಿರುತ್ತಾರೆ . ಇವರೆಲ್ಲರ ಸಮ್ಮಖದಲ್ಲಿ , ನಗರದ ಗಣ್ಯರಿಂದಲೋ , ಇಲ್ಲವೇ ಮುಖ್ಯೋಪಾಧ್ಯಾಯರಿಂದಲೋ ಧ್ವಜಾರೋಹಣ ಕಾರ್ಯ ನಡೆಯುತ್ತದೆ .

ಧ್ವಜವು ಮುಗಿಲೇರುತ್ತಿದ್ದಂತೆ , ಗಾಳಿಯೊಂದಿಗೆ ಅಲುಗಾಡುತ್ತಾ ಧ್ವಜವು ನಲಿಯುತ್ತಿದ್ದಂತೆ ಎಲ್ಲರೂ ಕತ್ತೆತ್ತಿ , ಧ್ವಜಮಾತೆಯ ಕಡೆ ತುಂಬು ಕಣ್ಣುಗಳಿಂದ ವೀಕ್ಷಿಸುತ್ತಾ ನಿಂತಲ್ಲಿಯೇ ಶಿಸ್ತು ಸಂಯತೆಯೊಂದಿಗೆ ವಂದನೆ ಸಲ್ಲಿಸುತ್ತಾರೆ .

ಸಲ್ಲಿಸುತ್ತಿದ್ದಂತೆ “ ಝಂಡಾ ಊಂಚಾ ರಹೇ ಹಮಾರಾ ” ಧ್ವಜಗೀತೆಯು ನೆರೆದಿರುವವರೆಲ್ಲರ ಬಾಯಿಂದ ತಾಳ ಬದ್ದವಾಗಿ ಸುಶ್ರಾವ್ಯವಾಗಿ ಕೇಳಿ ಬರುತ್ತಿರುತ್ತದೆ . ಧ್ವಜಾರೋಹಣ ಹಾಗೂ ಧ್ವಜವಂದನೆಯ ಕಾರ್ಯಚಟುವಟಿಕೆಯು ಪೂರ್ಣಗೊಂಡ ನಂತರ , ವ್ಯಾಯಾಮ ಶಿಕ್ಷಕರು ಹಾಗೂ ಸಹೋಪಾಧ್ಯಾಯರು ಗಳ ಉಸ್ತುವಾರಿಯಲ್ಲಿ ವಿದ್ಯಾರ್ಥಿ – ವಿದ್ಯಾರ್ಥಿನಿಯ ಪ್ರಭಾತ ಫೇರಿ ಹೊರಡುತ್ತದೆ .

ನಗರದಲ್ಲೆಲ್ಲಾ ಶಿಸ್ತು – ಸಂಯಮತೆಯೊಂದಿಗೆ ಭಾರತಮಾತೆಯ ಆಕರ್ಷಕ ಭಾವಚಿತ್ರದೊಂದಿಗೆ ತಿರುಗಾಡಿದ ನಂತರ , ಶಾಲೆಗೆ ಹಿಂದಿರುಗುತ್ತಾರೆ . ಈ ತಿರುಗಾಟದ ಸಂದರ್ಭದಲ್ಲಿ ಜನರೆಲ್ಲರ ಬಾಯಿಂದ ಬರುವ ಉಘ ಘೋಷ ಉದ್ಧಾರ , ದೇಶಭಕ್ತಿ ಗೀತೆಗಳು ನೆರೆದಿರುವವರೆಲ್ಲರಿಗೂ ಕರ್ಣಾನಂದ ವನ್ನುಂಟುಮಾಡುತ್ತದೆ .

ನಿಜಕ್ಕೂ ಈ ಸಂಭ್ರಮ ಸಡಗರದ ದೃಶ್ಯವು ಸ್ವರ್ಗಸಾದೃಶವೆನಿಸಿರುತ್ತದೆ . ಪ್ರಾಭಾತ ಫೇರಿ ಮುಗಿಸಿ ಬರುವ ವೇಳೆಗೆ ರಂಗಮಂಟಪದಲ್ಲಿ ವೇದಿಕೆಯ ಸಕಲ ಸಿದ್ಧತೆಗಳೂ ಪೂರ್ಣಗೊಂಡಿರುತ್ತವೆ . ಅಂದು ಹೆಸರಾಂತ ಸಾಹಿತಿ ಯನ್ನೋ , ನಗರದ ಹಿತಚಿಂತಕರೆನಿಸಿದ ಗಣ್ಯರನ್ನೋ , ಒಮ್ಮೊಮ್ಮೆ ಮಂತ್ರಿ ಗಳನ್ನೋ ಸಮಾರಂಭದ ಅಧ್ಯಕ್ಷಸ್ಥಾನವನ್ನು ಸ್ವೀಕರಿಸಲು ಗೌರವಾದರದಿಂದ ಆಹ್ವಾನಿಸುವುದು ಸದ್ಬಂಪ್ರದಾಯ . ಅಧ್ಯಕ್ಷರು ತಮ್ಮ ಆಸನದಲ್ಲಿ ಕುಳಿತ ನಂತರ ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾರಂಭವಾಗುತ್ತದೆ . ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೆದ್ದು ಬಂದವರ ಪ್ರತಿಭೆಯನ್ನೂ ಸಹ ವೇದಿಕೆಯಲ್ಲಿ ಲಘುರೂಪದಲ್ಲಿ ಪ್ರದರ್ಶಿಸ ಲಾಗುತ್ತದೆ .

About Independence Day in Kannada

ವಿದ್ಯಾರ್ಥಿಗಳ ಮುಖದಲ್ಲಿ ತಮ್ಮ ಶಾಲೆಯ ಕೀರ್ತಿಯು ಉತ್ತುಂಗ ಶಿಖರವನ್ನು ಏರುತ್ತಿರುವುದೇನೋ ! ಎನ್ನುವಂತಹ ಹುರುಪು , ಉಲ್ಲಾಸ ಕಂಡು ಬರುತ್ತಿರುತ್ತದೆ . ಹಲವರು ಗಣ್ಯರ ಭಾಷಣದ ನಂತರ ಅಧ್ಯಕ್ಷರು ವಿವಿಧ ಚಟುವಟಿಕೆಗಳಲ್ಲಿ ಗೆದ್ದು ಬಂದಿರುವ ಪ್ರತಿಭಾವಂತ ವಿದ್ಯಾರ್ಥಿ – ವಿದ್ಯಾರ್ಥಿನಿ ಯರಿಗೆ ತಮ್ಮ ಹಾರ್ದಿಕ ಹಾರೈಕೆಯೊಂದಿಗೆ ಬಹುಮಾನ ವಿತರಣೆ ಮಾಡುತ್ತಾರೆ .

ಕಡೆಯದಾಗಿ ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯವಾದ ನಂತರ ಸಿಹಿ ವಿನಿಯೋಗದೊಂದಿಗೆ ಸಭೆ ಚದರುತ್ತದೆ . ನಿಜಕ್ಕೂ ಸ್ವಾತಂತ್ರ್ಯದಿನಾಚರಣೆಯ ಕಾರಣ ಮಕ್ಕಳಲ್ಲಿ , ಪೌರರಲ್ಲಿ ದೇಶ ಭಕ್ತಿಯ ಸ್ಪೂರ್ತಿ – ಸಂತೋಷ ಸ್ಪುರಣಗೊಳ್ಳುತ್ತದೆ . ಜಾತೀಯತೆ , ಪ್ರಾಂತೀಯತೆ ಮೊದಲಾದ ಸಂಕೀರ್ಣ , ಸಂಕುಚಿತ ದುರ್ಭಾವನೆಗಳು ವಿದ್ಯಾರ್ಥಿ – ವಿದ್ಯಾರ್ಥಿಗಳ ಮನದಿಂದ ದೂರವಾಗಿರುತ್ತದೆ .

ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ ಕನ್ನಡ | Independence Day Essay in Kannada
Independence Day Essay in Kannada prabandha

ಭಾರತಮಾತೆ ನಮ್ಮೆಲ್ಲರ ತಾಯಿ , ಭಾರತವು ನಮ್ಮೆಲ್ಲರದು ಎಂಬ ಬೃಹತ್ – ಭವ್ಯ ಭಾವನೆ ನೆರೆದಿರುವವರೆಲ್ಲರ ಮನದಲ್ಲಿ ಮೂಡುತ್ತವೆ . ದೇಶೈಕ್ಯತೆ , ರಾಷ್ಟ್ರಕ್ಯತೆಯ ಭಾವನೆಗಳು ವೃದ್ಧಿಸಲು ಇಂತಹ ಆಚರಣೆಗಳು ಅನುವಾಗುತ್ತವೆ . ಆದರೆ ಹಲವೆಡೆ ಈ ಆಚರಣೆಯನ್ನು ಯಾಂತ್ರಿಕವಾಗಿ ಆಚರಿಸುತ್ತಿರುವ ವಿಚಾರವೂ ಇಂದು ಕಂಡುಬರುತ್ತಿದೆ . ಇದೊಂದು ಶೋಚನೀಯ ಸಂಗತಿಯೇ ಸರಿ .

ಇಷ್ಟಾದರೂ ಜನಮನದಲ್ಲಿ ಸ್ವಾತಂತ್ರೋತ್ಸವವು ಹಸಿರು – ಹರುಷವನ್ನು ಅಂದು ತುಂಬುವುದಂತೂ ಸತ್ಯಸಂಗತಿ . ಅಂದು ದೇಶಮಾತೆಯ ರಕ್ಷಣೆಗಾಗಿ ವಿದ್ಯಾರ್ಥಿ – ವಿದ್ಯಾರ್ಥಿನಿಯರೆಲ್ಲರೂ ತೊಡುವ ಪಣವು ಅವರ ಚಿಗುರು ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುವುದು . ತಮ್ಮ ಭಾವೀ ಜೀವನದಲ್ಲಿ ಭವ್ಯ ಪರಿಣಾಮವನ್ನುಂಟುಮಾಡುವುದು ಸ್ವಾತಂತ್ರೇತಿಹಾಸದ ಸಾಕಷ್ಟು ಸಂಗತಿಗಳನ್ನು ಕಿರಿಯರು ತಿಳಿಯಲು ಹಿರಿಯರು ಮೆಲಕು ಹಾಕಲು ಈ ದಿನಾಚರಣೆ ಸಂಪೂರ್ಣ ಸಹಕಾರಿ.

ಸ್ವಾತಂತ್ರ್ಯ ದಿನಾಚರಣೆ ಯಾವ ದಿನದಂದು ಆಚರಿಸಲಾಗುತ್ತದೆ ?

ಆಗಸ್ಟ್ 15

ಪ್ರಸ್ತುತ ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ?

77

77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ | Independence Day Essay in Kannada

ಇದನ್ನು ಓದಿ :- ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಹೀಗಿರಲಿ

Leave a Reply

Your email address will not be published. Required fields are marked *