ಛಂದಸ್ಸು ಕನ್ನಡ ವ್ಯಾಕರಣ | Chandassu in Kannada

ಛಂದಸ್ಸು ಕನ್ನಡ ವ್ಯಾಕರಣ | Chandassu in Kannada

chandassu in kannada, ಕನ್ನಡ ಛಂದಸ್ಸು, chandassu kannada grammar, ಛಂದಸ್ಸು – ಕನ್ನಡ ವ್ಯಾಕರಣ, ಲಘು ಗುರು ಉದಾಹರಣೆ, FDA, SDA, KPSC, PDO, KAS, KSP, PC

Chandassu in Kannada

ಛಂದೋಂಬುಧಿ ಎಂಬ ಕನ್ನಡ ಛಂದಸ್ಸನ್ನು ತಿಳಿಸುವ ಗ್ರಂಥವನ್ನು ಕ್ರಿ.ಶ. ೯೯೦ ರ ಸುಮಾರಿನಲ್ಲಿ ೧ನೆಯ ನಾಗವರ್ಮನೆಂಬುವನು ಬರೆದನು. ಇವನು ಕರ್ನಾಟಕ ಕಾದಂಬರಿಯೆಂಬ ಇನ್ನೊಂದು ಗ್ರಂಥವನ್ನೂ ಬರೆದಿದ್ದಾನೆ.

ಕೆಲವು ಪ್ರಮುಖ ಛಂದೋಗ್ರಂಥಗಳು

chandassu in kannada

ಮಾನಸೋಲ್ಲಾಸ ಅಥವಾ ಅಭಿಲಷೀತಾರ್ಥ ಚಿಂತಾಮಣಿ ಕರ್ತೃ : –

3 ನೇ ಸೋಮೇಶ್ವರ 

ಈ ಕೃತಿಯಲ್ಲಿ ಛಂದಸ್ಸು ಕೂಡ ಬಳಕೆಯಾಗಿದೆ . ಛಂದೋವಿಚಿತಿ ಕೃತಿಯ ಕರ್ತೃ : – 2 ನೇ ನಾಗವರ್ಮ ಇದರಲ್ಲಿ ಕೂಡ ಛಂದಸ್ಸು ಬಳಕೆಯಾಗಿದೆ .

ಛಂದೋಂಬುಧಿಕರ್ತೃ

1 ನೇ ನಾಗವರ್ಮ ಕಾಲ ಕ್ರಿ.ಶ0 99

ಇದು ಕನ್ನಡದ ಅತೀ ಪ್ರಾಚೀನ ಛಂದೋಗ್ರಂಥ ಕನ್ನಡ ಛಂದಸ್ಸಿಗೆ ಅಡಿಗಲ್ಲಾದ ಅಥವಾ ನೆಲೆಗಟ್ಟನ್ನು ಒದಗಿಸಿದ ಗ್ರಂಥ . ಇದರಲ್ಲಿ ಒಟ್ಟು 6 ಅಧಿಕಾರ ( ಭಾಗ ಗಳಿವೆ.

ಪಿಂಗಲನ -ಛಂದಃಸೂತ್ರಗಳು ( ಕ್ರಿ.ಪೂ .200 ) :

ಇದು ಸಂಸ್ಕೃತದ ಮೊದಲ ಛಂದೋಗ್ರಂಥವಾಗಿದೆ

ಈಶ್ವರ ಕಏ ( ಕೃತಿ : – ಜಿಹ್ವಾಬಂಧನಂ ) –

ಕಾಲ ಕ್ರಿಶ 1500 .ಇದು ನಾಲ್ಕು ಆಶ್ವಾಸ ( ಭಾಗ ) ಗಳಲ್ಲಿದೆ . ವಾಡಿಯನ್ನು ಕನ್ನಡದಲ್ಲಿ ಮೊದಲಿಗೆ ಇವರು ಪ್ರಸ್ತಾಪಿಸಿದರು .

 “ ಛಂದಃಸ್ಥಾರ ” ಕರ್ತೃ – ಗುಣಚಂದ್ರ -ಕ್ರಿ.ಶ .1650 ಐದು ಅಧಿಕಾರಗಳಲ್ಲಿದೆ . ಇವು ಮೂರು ಕನ್ನಡ ಭಾಷೆಯಲ್ಲಿಯೇ ರಚನೆಯಾದ ಛಂದೋಗ್ರಂಥವಾಗಿವೆ

ಕವಿರಾಜ ಮಾರ್ಗ ಕರ್ತೃ : –

ಶ್ರೀವಿಜಯ : -ಕ್ರಿ.ಶ .850 : ಮೊದಲು ಯತಿ ಹಾಗೂ ಪ್ರಾಸ ವಿಷಯಗಳನ್ನು ಪ್ರಸ್ತಾಪ ಇದರಲ್ಲಿ ಮಾಡಲಾಗಿದೆ “ ಛಂದೋನುಶಾಸನಂ ಕರ್ತೃ -ಜಯಕೀರ್ತಿ ಕಾಲ ಕ್ರಿ.ಶ .1050 ಈ ಕೃತಿಯು ಸಂಸ್ಕೃತದ ಛಂದೋಗ್ರಂಥವಾಗಿದೆ

“ ಸಂಗೀತ ರತ್ನಾಕರ ” ಕರ್ತೃ-

ಶಾರ್ಙ್ಗದೇವ ಕಾಲ 13 ನೇ ಶತಮಾನದ ಆದಿ.ಇದರಲ್ಲಿ 7 ಅಧ್ಯಾಯಗಳಿವೆ . ಇದು ಸಂಸ್ಕೃತ ಭಾಷೆಯಲ್ಲಿ ರಚನೆಯಾಗಿದೆ .4 ನೇ ಅಧ್ಯಾಯ ಕನ್ನಡ ಛಂದಸ್ಸನ್ನು ಕುರಿತು ಚರ್ಚಿಸುತ್ತದೆ

ಮಾತ್ರೆ

ಮಾತ್ರೆ ಎಂದರೆ ಒಂದು ಪ್ರಸ್ವ ಅಕ್ಷರವನ್ನು ಉಚ್ಚಾರ ಮಾಡಲು ತೆಗೆದುಕೊಳ್ಳುವ ಕಾಲ ಎಂದು ಅರ್ಥ . ಈ ಮಾತ್ರೆಗಳು ಮೂರು ತೆರನಾಗಿ ಇರುತ್ತವೆ . ಅವುಗಳೆಂದರೆ ಲಘು , ಗುರು , ಪ್ಲುತ .

ಲಘು ಎಂದರೆ ಒಂದು ಪ್ರಸ್ವ ಅಕ್ಷರವನ್ನು ಉಚ್ಚಾರ ಮಾಡುವುದಕ್ಕೆ ತೆಗೆದುಕೊಳ್ಳುವ ಕಾಲ . ಇದನ್ನು ಛಂದಶಾಸ್ತ್ರದಲ್ಲಿ ‘ U ‘ ಎಂಬ ಚಿಹ್ನೆಯಿಂದ ಗುರ್ತಿಸುತ್ತಾರೆ . ಇದಕ್ಕೆ ಅದರದೇ ಆದ ಬೆಲೆಯಿದೆ . ಆದ್ದರಿಂದ ಇದರ ಬೆಲೆ ಒಂದು ಮಾತ್ರೆ

ಗುರು ಎಂದರೆ ಒಂದು ದೀರ್ಘಾಕ್ಷರವನ್ನು ಉಚ್ಛರಿಸಲು ತೆಗೆದುಕೊಳ್ಳುವ ಕಾಲ . ಇದನ್ನು ‘ ಎಂಬ ಚಿಹ್ನೆಯಿಂದ ಗುರ್ತಿಸುತ್ತಾರೆ . ಇದಕ್ಕೆ ಎರಡು ಮಾತ್ರೆಯ ಬೆಲೆ ಇರುತ್ತದೆ .

ಪ್ಲುತ ಎಂದರೆ ಕೆಲವು ಸಂದರ್ಭದಲ್ಲಿ ದೀರ್ಘಾಕ್ಷರವನ್ನು ಸ್ವಲ್ಪ ಎಳೆದು ಉಚ್ಛರಿಸಬೇಕಾಗುತ್ತದೆ . ಇದು ಲಘುವಿನ ಮೂರರಷ್ಟಿರುತ್ತದೆ . ಇದರ ಬೆಲೆ ಮೂರು ಮಾತ್ರೆ ಇದನ್ನು ‘ s ‘ ಚಿಹ್ನೆಯಿಂದ ಗುರ್ತಿಸುತ್ತೇವೆ .

download 97
ಛಂದಸ್ಸು ಕನ್ನಡ ವ್ಯಾಕರಣ | Chandassu in Kannada

    UUU

 ಉದಾ : – ಲಘುವಿಗೆ :      ಕಮಲ

    –  –

ಗುರುವಿಗೆ         ಮಾಲಾ

    U-

 ಪ್ಲುತಕ್ಕೆ :       ಕುಕೂಕೂ s

ಲಘು ಬರುವ ಸಂದರ್ಭಗಳು Chandassu in Kannada

 ಒತ್ತಕ್ಷರದ ಹಿಂದಿನ ಪ್ರಸ್ವಾಕ್ಷರಗಳನ್ನು ಬಿಟ್ಟು ಉಳಿದೆಡೆ ಬರುವ ಎಲ್ಲ ಪ್ರಸ್ವ ಅಕ್ಷರಗಳು ಲಘುವಾಗಿರುತ್ತವೆ .

ಶಿಥಿಲದ್ವಿತ್ವದ ಹಿಂದಿನ ಅಕ್ಷರ ಪ್ರಸ್ವಾಕ್ಷರವಾಗಿದ್ದರೆ ಅದು ಲಘುವಾಗಿಯೇ ಇರುತ್ತದೆ. ‘ ಶಿಥಿಲದ್ವಿತ್ವ ‘ ಎಂದರೆ ತೇಲಿಸಿಉಚ್ಛರಿಸುವುದು.

ಉದಾ :

UU – U

ಕುಳಿರ್ಗಾಳಿ      ಯಲ್ಲಿ      ‘ ರ್ಗಾ ‘    ಎನ್ನುವುದು  ಒತ್ತಕ್ಷರವಾಗಿ ದ್ದರೂ ಅದು ಶಿಥಿಲದ್ವಿತ್ವ ಆದ್ದರಿಂದ ಇದರ ಹಿಂದಿನಾಕ್ಷರ ‘ ಳಿ ‘ ಎಂಬುದು ಗುರುವಾಗಬೇಕಾಗಿದ್ದರೂ ಲಘುವಾಗಿರುವುದನ್ನು ಕಾಣಬಹುದು .

chandassu in kannada
chandassu in kannada

ಗುರು ಬರುವ ಸಂದರ್ಭ .

ದೀರ್ಘಾಕ್ಷರಗಳೆಲ್ಲವು ಗುರುವಾಗುತ್ತವೆ .

ಉದಾ : –

  –    –

ಮಾತಾ

ಒತ್ತಕ್ಷರದ ಹಿಂದಿನ ಅಕ್ಷರ ದೀರ್ಘವೇ ಆಗಿರಲಿ ಅಥವಾ ಪ್ರಸ್ವವೇ ಆಗಿರಲಿ ಅದು ಗುರುವಾಗುತ್ತದೆ

ಉದಾ : –

 – U U

ಶಾಶ್ವತ

ಸೊನ್ನೆಯಿಂದ ಕೂಡಿದ್ದರೆ ಅದು ಗುರುವಾಗುತ್ತದೆ .

ಉದಾ : –

U – UU              – UU

ಮಂಥನ   ಅಥವ    ನಂದನ

ಛಂದಸ್ಸು ಕನ್ನಡ ವ್ಯಾಕರಣ | Chandassu in Kannada

ಪ್ಲುತ ಬರುವ ಸಂದರ್ಭ

ಯಾವ ಅಕ್ಷರದ ಮುಂದೆ ‘ S ‘ ಚಿಹ್ನೆ ಬರುತ್ತದೋ ಅದನ್ನು ಪ್ಲುತ ಎಂದು ಕರೆಯುತ್ತೇವೆ . ಉದ್ದಾರದ ಸಂದರ್ಭದಲ್ಲಿ ಕವಿಗಳು ಈ ಚಿಹ್ನೆಯನ್ನು ಕಾವ್ಯದಲ್ಲಿ ಬಳಸಿರುವುದನ್ನು ಕಾಣಬಹುದು .

            _ _         _  _

ಉದಾ :  ವೀಣಾs ,    ರಾಧಾs

chandassu in kannada

kannada gadhe | ಕನ್ನಡ ಗಾದೆ ಮಾತುಗಳು | Kannada Gadegalu (ಗಾದೆಗಳು)

Leave a Reply

Your email address will not be published. Required fields are marked *