Champu Kavya in Kannada | ಚಂಪೂ ಸಾಹಿತ್ಯದ ಕೃತಿಗಳು

Champu Kavya in Kannada | ಚಂಪೂ ಸಾಹಿತ್ಯದ ಕೃತಿಗಳು

Champu Kavya in Kannada, ಚಂಪೂ ಸಾಹಿತ್ಯದ ಕೃತಿಗಳು, champu kavya example champu kavya kannada, ಚಂಪೂ ಸಾಹಿತ್ಯ ಕವಿಗಳು, notes, pdf, essay, ಪಂಪ , ರನ್ನ

Champu Kavya in Kannada

ಚಂಪೂ ಕಾವ್ಯ ಎಂದರೇನು?

ಪದ್ಯ ಗದ್ಯ ಮಿಶ್ರಿತವಾದ ಕಾವ್ಯ ಪ್ರಕಾರವನ್ನು ಚಂಪೂ ಕಾವ್ಯ ಎಂದು ಕರೆಯುವರು

champu kavya endarenu in kannada

ಚಂಪೂ ಎಂದರೆ ಪದ್ಯ ಮತ್ತು ಗದ್ಯಗಳ ಸಂಯೋಜನೆ.

ಪದ್ಯ ಗದ್ಯ ಮಿಶ್ರಿತವಾದ ಕಾವ್ಯ ಪ್ರಕಾರವನ್ನು ಚಂಪೂ ಕಾವ್ಯ ಎಂದು ಕರೆಯುವರು , ಇದರಲ್ಲಿ
ಹೆಚ್ಚು ಕಂದ ಪದ್ಯಗಳು ಬಳಕೆಯಾಗಿರುತ್ತವೆ.
ವೃತ್ತಿಗಳನ್ನು ಒಳಗೊಂಡಿರುತ್ತದೆ.

ಇದು ಸಂಸ್ಕೃತದಲ್ಲಿ ಮೊದಲು ಬಳಕೆಯಾಗಿದ್ದು ,ಕತೆಯಾಡಲು ಸರಾಗವಾದ ಪ್ರಕಾರವಾದುದರಿಂದ ಕನ್ನಡ ಕವಿಗಳು ಬಳಸಿ
ಬೆಳೆಸಿದರು. ಆದ್ದರಿಂದ ಕನ್ನಡ ಸಾಹಿತ್ಯದಲ್ಲಿ
ಚಂಪೂಯುಗವೇ ಇದೆ. ಇದರ ವಿವರಣೆಯನ್ನು
ಮೊದಲು ನೀಡಿದವ ’ದಂಡಿ. ’ಈತ ಮೀಮಾಂಸಕ, ಅವನ ಜನಪ್ರಿಯ ಕೃತಿ ’ಕಾವ್ಯಾದರ್ಶ’ ಎಂಬುದಾಗಿದೆ.

ಚಂಪೂ ಕಾವ್ಯಗಳು
ಬಂಧುವರ್ಮಜೀವಸಂಭೋಧನೆ
ಹರಿಹರಗಿರಿಜಾಕಲ್ಯಾಣ
ರುದ್ರಭಟ್ಟಜಗನ್ನಾಥ ವಿಜಯ
ಬ್ರಹ್ಮಶಿವಸಮಯ ಪರೀಕ್ಷೆ
ಶಾಂತಿನಾಥಸುಕುಮಾರ ಚರಿತೆ
ಅಗ್ಗಳಚಂದ್ರಪ್ರಭ ಪುರಾಣ
ನಾಗಚಂದ್ರರಾಮಚಂದ್ರ ಚರಿತ ಪುರಾಣ , ಸಮಯ ಪರೀಕ್ಷೆ
ನೇಮಿಚಂದ್ರನೇಮಿನಾಥ ಪುರಾಣ
ದುರ್ಗಸಿಂಹಪಂಚತಂತ್ರ
2 ನೇಯ ನಾಗವರ್ಮವರ್ಧಮಾನ ಪುರಾಣ
ಕರ್ಣಪಾರ್ಯಹರಿವಂಶ ಪುರಾಣ
ನಾಗವರ್ಮಕರ್ನಾಟಕ ಕಾದಂಬರಿ
ಪೋನ್ನಶಾಂತಿಪುರಾಣ
ನಯಸೇನಧರ್ಮಾಮೃತ
ರನ್ನಗದಾಯುದ್ಧ, ಅಜಿತ ಪುರಾಣ
ಪಂಪಆದಿಪುರಾಣ – ವಿಕ್ರಮಾ ರ್ಜುನ ವಿಜಯಂ
ಬಸವಪ ಶಾಸ್ತ್ರೀ ದಮಯಂತಿ ಸ್ವಯಂವರ
ಚಿಕ್ಕಪಾಧ್ಯಾಯರುಕ್ಕಾಂಗದ ಚರಿತೆ
ಚಂದ್ರಕವಿವಿರೂಪಾಕ್ಷ ಸ್ಥಾನ
ಲಿಂಗಣ್ಣಕೆಳದಿನೃಪ ವಿಜಯ
ದೇವಚಂದ್ರರಾಮಕಥಾವತಾರ
ಚಾರುಕೀರ್ತಿ ಪಂಡಿತಭವ್ಯಜನ ಚಿಂತಾಮಣಿ
ಚಂದ್ರಸಾಗರಭವಾಮೃತ ಮಹಾಪುರಾಣ
ಮಲ್ಲರಸದಶಾವತಾರ ಚರಿತೆ
ತಿರುಮಲಾರ್ಯಚಿಕ್ಕದೇವರಾಜ ವಿಜಯ
ಷಡಕ್ಷರರಾಜಶೇಖರ ವಿಳಾಸ, ಬಸವರಾಜ ವಿಜಯ
ಜನ್ನ ಯಶೋಧರ ಚರಿತೆ , ಅನಂತನಾಥ ಪುರಾಣ
ಕವಿಮಲ್ಲಮನ್ಮಥವಿಜಯ
ಮಧುರಧರ್ಮನಾಥಪುರಾಣ
ವೃತ್ತವಿಲಾಸಧರ್ಮಪರೀಕ್ಷೆ
ನಾಗರಾಜಪುಣ್ಯಾಸ್ರವ
ಚೌಂಡರಸಅಭಿನವದಶ ಕುಮಾರ ಚರಿತೆ , ನಳಚರಿತೆ
ಮಹಾಬಲ ಕವಿನೇಮಿನಾಥ ಪುರಾಣ
ಆಂಡಯ್ಯಕಬ್ಬಿಗರ ಕಾವ
2 ನೇ ಗುಣವರ್ಮಪುಷ್ಪದಂತ ಪುರಾಣ
ಸುರಂಗ ಕವಿ ತ್ರಿಷಷ್ಟಿ ಪುರಾತನ ಚರಿತ್ರೆ

business ideas in kannada

ಚಂಪೂ ಎನ್ನುವುದು, ಕನ್ನಡಕ್ಕೆ ವಿಶಿಷ್ಟವಾದ ಸಾಹಿತ್ಯಪ್ರಕಾರವಾಗಿದೆ .

ಸಂಸ್ಕೃತ ಕೂಡ, ಈ ರೂಪವನ್ನು ಕನ್ನಡದಿಂದ ಎರವಲು ತೆಗೆದುಕೊಂಡಿತೆಂದು ವಿದ್ವಾಂಸರ ಅಭಿಪ್ರಾಯ.

ಚಂಪೂ ಎಂದರೆ ಪದ್ಯ ಮತ್ತು ಗದ್ಯಗಳ ಸಂಯೋಜನೆ.

ಇಲ್ಲಿ ಕಾವ್ಯ ಎನ್ನುವುದಕ್ಕಿಂತ ಪದ್ಯ ಎನ್ನುವ ಪದದ ಬಳಕೆಯೇ ಸೂಕ್ತ.

ಏಕೆಂದರೆ ಕಾವ್ಯವು ಹೆಚ್ಚು ವಿಶಾಲವಾದ ಅರ್ಥವಲಯಗಳನ್ನು ಒಳಗೊಂಡಿದೆ.

ಪ್ರಾಚೀನ ಕಾಲದಿಂದಲೂ ಕನ್ನಡ ಕವಿಗಳು ಈ ರೂಪವನ್ನು ಇಷ್ಟಪಟ್ಟಿದ್ದಾರೆ, ಬಳಸಿದ್ದಾರೆ.

ಏಕೆಂದರೆ, ಇದು ವೈವಿಧ್ಯ ಮತ್ತು ಪ್ರಯೋಗಶೀಲತೆಗಳಿಗೆ ಹೆಚ್ಚಿನ ಆಸ್ಪದ ಕೊಡುತ್ತದೆ.

ಪದ್ಯ ಮತ್ತು ಗದ್ಯಗಳೆರಡನ್ನೂ ಬಳಸುವುದರಿಂದ ಅನೇಕ ಲಾಭಗಳಿವೆ.

ಚಂಪೂ ಕಾವ್ಯದಲ್ಲಿ, ಒಂದಕ್ಕಿಂತ ಹೆಚ್ಚು ಛಂದೋರೂಪಗಳನ್ನು ಬಳಸಲು ಸಾಧ್ಯ.

ಕಾವ್ಯದ ಅಗತ್ಯಕ್ಕೆ ತಕ್ಕ ಹಾಗೆ, ವರ್ಣನೆ, ಚಿಂತನೆ ಮತ್ತು ಭಾವನೆಗಳನ್ನು ಕಟ್ಟಿಕೊಡಲು, ಗದ್ಯವನ್ನೋ ಪದ್ಯವನ್ನೋ ಬಳಸುವ ಸ್ವಾತಂತ್ರ್ಯವು ಕವಿಗೆ ಇರುತ್ತದೆ.

ಪ್ರಾಯಶಃ, ಕನ್ನಡದ ಆದಿಕವಿಯಾದ ಪಂಪನಿಗಿಂತ ಮುಂಚಿತವಾಗಿಯೇ ಪ್ರಾರಂಭವಾದ ಚಂಪೂ ಪರಂಪರೆಯು, ಸುಮಾರು ಒಂದು ಸಾವಿರ ವರ್ಷಗಳವರೆಗೂ ನಿರಂತರವಾಗಿ ಮುಂದುವರಿಯಿತು. ಈ ಅವಧಿಯಲ್ಲಿ ಅದು ಇತರ ದೇಸೀ ಸಾಹಿತ್ಯಪ್ರಕಾರಗಳ ಸವಾಲನ್ನು ಎದುರಿಸಬೇಕಾಯಿತು.

ಚಂಪೂ ಸಾಹಿತ್ಯದ ಕೃತಿಗಳು

ಆದರೆ, ಅದು ಸಂಪೂರ್ಣವಾಗಿ ನಿರ್ಗಮಿಸಲಿಲ್ಲ. ಚಂಪೂ ಪ್ರಕಾರದ ಸ್ವರ್ಣಯುಗವು, ಹಳಗನ್ನಡದ ಉನ್ನತಿಯ ಕಾಲದೊಂದಿಗೆ ಹೊಂದಿಕೆಯಾಗುತ್ತದೆ.

ನಡುಗನ್ನಡದ ಭಾಷೆಯು ಬಳಕೆಗೆ ಬಂದ ನಂತರ, ಚಂಪೂ ಪ್ರಕಾರವು ಹಿನ್ನೆಲೆಗೆ ಸರಿದು, ಕೇವಲ ಪಂಡಿತಮಾನ್ಯವಾಯಿತು.

ನೇಮಿಚಂದ್ರ, ರುದ್ರಭಟ್ಟ, ಷಡಕ್ಷರದೇವ ಮುಂತಾದ ಕವಿಗಳು ಚಂಪೂ ರೂಪವನ್ನು ಆರಿಸಿಕೊಂಡಿದ್ದು ನಿಜವಾದರೂ ಅವರ ಕೃತಿಗಳು ಜನಸಾಮಾನ್ಯರ ಮನ್ನಣೆಯನ್ನು ಪಡೆಯಲಿಲ್ಲ.

ಇತರೆ ಪ್ರಮುಖ ವಿಷಯಗಳ ಲಿಂಕ್

ಕನ್ನಡ ಸಮಾನಾರ್ಥಕ ಪದಗಳು

ಕರ್ನಾಟಕದ 31 ಜಿಲ್ಲೆಗಳ ಹೆಸರು

ಸಮಾನಾರ್ಥಕ ಪದಗಳು-೦೨

ಕರ್ನಾಟಕ ವಿಧಾನ ಪರಿಷತ್ ಸದಸ್ಯರು 2021

https://newsinkannada.com/dhaniya-powder-in-kannada/

Leave a Reply

Your email address will not be published. Required fields are marked *