ಬಾಲಗಂಗಾಧರ ತಿಲಕ್ ಜೀವನ ಚರಿತ್ರೆ, ಬಾಲಗಂಗಾಧರ ತಿಲಕ್ ಜಯಂತಿ, bal gangadhar tilak life history in kannada, bal gangadhar tilak details in kannada, bal gangadhar tilak jivan charitra in kannada, bal gangadhar tilak speech in kannada, lokmanya bal gangadhar tilak in kannada, bal gangadhar tilak essay in kannada, bal gangadhar tilak prabandha in kannada
ಲೋಕಮಾನ್ಯ ಬಾಲಗಂಗಾಧರ್ ತಿಲಕ್
ಬಾಲಗಂಗಾಧರ ತಿಲಕರು ಇಂದಿನ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಮರಾಠಿ ಬ್ರಾಹ್ಮಣ ಕುಟುಂಬದಲ್ಲಿ 23 ಜುಲೈ 1856 ರಂದು ಜನಿಸಿದರು. ಇವರ ಜನ್ಮನಾಮ ಕೇಶವ ಗಂಗಾಧರ ತಿಲಕ್.
Bal Gangadhar Tilak in Kannada
ಪರಿಚಯ
ಭಾರತೀಯ ಸ್ವಾತಂತ್ರ್ಯ ಚಳವಳಿಯ ಮೊದಲ ತೀವ್ರಗಾಮಿ ನಾಯಕರಾದರು. ಅವರ ಜನಪ್ರಿಯತೆಯು ಮಹಾತ್ಮ ಗಾಂಧಿಯವರ ನಂತರ ಎರಡನೆಯದು.
ಶಿಕ್ಷಣ ಮತ್ತು ಪ್ರಭಾವಗಳು
ಪ್ರಕಾಂಡ ವಿದ್ವಾಂಸರೂ , ಚರಮ ಕೋಟೆಯ ದೇಶಭಕ್ತರೂ ಮತ್ತು ಮಹಾನ್ ಪಂಡಿತರಾಗಿದ್ದರು ನಿಜವಾದ ಅರ್ಥದಲ್ಲಿ ಅವರು ಕರ್ಮಯೋಗಿ ಗಳಾಗಿದ್ದರು . 1876 ರಲ್ಲಿ ಡೆಕ್ಕನ್ ಕಾಲೇಜಿನಲ್ಲಿ ಬಿ.ಎ. ಪರೀಕ್ಷೆಯನ್ನು ಪಾಸು ಮಾಡಿದರು . 1879 ರಲ್ಲಿ ಕಾನೂನು ಪದವಿಯನ್ನು ಗಳಿಸಿದರು .
1880 ರಲ್ಲಿ ನ್ಯೂ ಇಂಗ್ಲಿಷ್ ಸ್ಕೂಲಿನ ಸ್ಥಾಪನೆ ಮಾಡಿದರು . ಆರ್ಯಭೂಷಣ ಪ್ರೆಸ್ ಪ್ರಾರಂಭಿಸಿದರು . ಈ ಮೂಲಕ ಮರಾಠಾ ಮತ್ತು ಕೇಸರಿ ಹೆಸರಿನ ಪತ್ರಿಕೆಗಳನ್ನು ನಡೆಸಲನುವಾದರು . ಚಿಪರ್ಲೂಕರರು ಸ್ಥಾಪಿಸಿದ ಈ ಪತ್ರಿಕೆಗಳ ಜವಾಬ್ದಾರಿಯು ಅವರು ತೀರಿಕೊಂಡ ನಂತರ ಲೋಕಮಾನ್ಯ ಬಾಲಗಂಗಾಧರ ತಿಲಕರೇ ನೋಡಿಕೊಂಡು ಹೋಗತೊಡಗಿದರು .
ಕೊಲ್ಲಾಪುರದ ಘಟನೆಯೊಂದರಲ್ಲಿ ತಿಲಕರು ಅಪರಾಧಿಗಳೆಂದು ಸಾಬೀತಾದರು . ಅವರು ನಾಲ್ಕು ತಿಂಗಳು ಸರಮನೆವಾಸವನ್ನು ಅನುಭವಿಸಬೇಕಾಯಿತು . ಸೆರೆಮನೆಯಿಂದ ಬಿಡುಗಡೆಯಾದ ಬಳಿಕ ಅರ ಸನ್ಮಾನ ನಡೆಯಿತು ಸೆರೆಮನೆಯಿಂದ ಮುಕ್ತರಾದ ಬಳಿಕ ತಿಲಕರು ದೇಶಸೇವೆಯಲ್ಲಿ ಇನ್ನಷ್ಟು ಉತ್ಸುಕರಾಗಿ ಸೇವೆ ಸಲ್ಲಿಸತೊಡಗಿದರು ತಮ್ಮ 1884 ರಲ್ಲಿ ಫರ್ಗುಸನ್ ಕಾಲೇಜನ್ನು ಸ್ಥಾಪಿಸಿದರು .
1896 ರವರೆಗೆ ಇಲ್ಲಿ ಅವರು ಪ್ರಾಧ್ಯಾಪರಾಗಿ ಕೆಲಸ ಮಾಡಿದರು . ಭಾನ್ನಾಭಿಪ್ರಾಯಗಳು ತಲೆದೋರಿದಾಗ ಕಾಲೇಜಿನಿಂದ ಸಂಬಂಧವನ್ನು ಕಳಚಿಹಾಕಿದರು . ಕೇಸರಿ ಮತ್ತು ಮರಾಠಾ ಪತ್ರಿಕೆಯ ಸಂಪಾದಕತ್ವವನ್ನು ತಾವೇ ನಡೆಸುತ್ತಿದ್ದರು .
1892 ರಲ್ಲಿ ಲಂಡನ್‌ನಲ್ಲಿ ಪ್ರಾಚ್ಯ ವಿದ್ಯಾ ವಿಶಾರದರ ಸಮ್ಮೇಳನ ಜರುಗಿತು . ದೇಶದಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ತಿಲಕರು ಶಿವಾಜಿ ಜಯಂತಿ ಮತ್ತು ಗಣೇಶ ಚತುರ್ಥಿಯನ್ನು ರಾಷ್ಟ್ರೀಯ ಹಬ್ಬಗಳಲ್ಲಿ ತಿರುವಿ ತಂದರು .
ಶಿವಾಜಿಯ ಕೂಗು ಎಂಬ ಕವಿತೆ , ವಿರುದ್ಧ ವಿಷಯ ಇರುವ ತಮ್ಮ ಪತ್ರಿಕೆಯಾದ ಕೇಸರಿಯಲ್ಲಿ ಪ್ರಕಟಿಸಿದ್ದರಿಂದ ಇಂಗ್ಲೀಷರು ಅವರನ್ನು 18 ತಿಂಗಳು ಸೆರೆಮನೆವಾಸಕ್ಕೆ ತಳ್ಳಿದರು . ಮ್ಯಾಕ್ಸ್‌ಮುಲ್ಲರ್‌ಮತ್ತು ವಿಲಿಯಮ್ ಹೇಟರ್ ಇವರ ಅನುರೋಧದಂತೆ ಮತ್ತೆ ಮುಕ್ತರಾದರು .
Bal Gangadhar Tilak in Kannada
ಹಿಂದೂ- ಭಾರತೀಯ ರಾಷ್ಟ್ರೀಯತೆ
ಹಿಂದೂ ವಿಚಾರಧಾರೆ ಮತ್ತು ಭಾವನೆಗಳು ಬೆರೆತರೆ ಈ ಸ್ವಾತಂತ್ರ್ಯ ಚಳವಳಿ ಹೆಚ್ಚು ಯಶಸ್ವಿಯಾಗುತ್ತದೆ ಎಂದು ಬಾಲಗಂಗಾಧರ ತಿಲಕರು ಅಭಿಪ್ರಾಯಪಟ್ಟರು. ಹಿಂದೂ ಗ್ರಂಥಗಳಾದ ‘ರಾಮಾಯಣ’ ಮತ್ತು ‘ಭಗವದ್ಗೀತೆ’ಯಿಂದ ಪ್ರಭಾವಿತರಾದ ತಿಲಕರು ಸ್ವಾತಂತ್ರ್ಯ ಚಳುವಳಿಯನ್ನು ‘ಕರ್ಮಯೋಗ’ ಎಂದು ಕರೆದರು, ಇದರರ್ಥ ಕ್ರಿಯೆಯ ಯೋಗ.
ತಿಲಕರ ಅಂತಿಮ ದಿನಗಳು
ವೈದಿಕ ಕಾಲಕ್ಕೆ ಸಂಬಂಧಿಸಿದ ಪ್ರಬಂಧವೊಂದನ್ನು ತಿಲಕರು ಬರೆದು ಪ್ರಸ್ತುಪಡಿಸಿದರು . ಆ ಪ್ರಬಂಧವು ವಿದ್ವಾಂಸರ ಪ್ರಶಂಸೆಗೆ ಪಾತ್ರವಾಯಿತು . ಕೆಲವು ವರ್ಷಗಳವರೆಗೆ ಅವರು ಡೆಕ್ಕನ್ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದರು .
1899 ರಲ್ಲಿ ಬೊಂಬಾಯಿಯಲ್ಲಿ ಬರಗಾಲ ಕಂಡುಬಂದಿತು . ತಿಲಕರು ಅನೇಕ ಕಷ್ಟಗಳನ್ನು ಎದುರಿಸಿ ಜನರ ಸೇವೆ ಮಾಡಿದರು . ಒಂದು ಆಸ್ಪತ್ರೆಯೊಂದನ್ನು ತೆರೆದರು . ಪುಣೆಯಲ್ಲಿ ಆ ವೇಳೆಯಲ್ಲಿ ಪ್ಲೇಗ್ ತಾಂಡವವಾಡುತ್ತಿತ್ತು . ತಿಲಕರು ಮನೆಯಿಂದ ಮನೆಗೆ ಜನರಿಗೆ ಸಹಕಾರಿಯಾಗಿ ನಿಂತರು .
1908 ರಲ್ಲಿ ಅವರಮೇಲೆ ಮೊಕದ್ದಮೆ ನಡೆಯಿತು . ಅವರಿಗೆ ಆರು ವರ್ಷಗಳ ಕಾಲ ಸರಮನವಾಸದ ಶಿಕ್ಷೆಯನ್ನು ಘೋಷಿಸಲಾಯಿತು . ಅವರನ್ನು ಬರ್ಮಾದ ಮಾಂಡಲೇ ಜೈಲಿನಲ್ಲಿ ಇಡಲಾಯಿತು. ಅಲ್ಲಿಯೇ ಅವರು ಭಗವದ್ಗೀತೆಯ ಬಾಷ್ಯವನ್ನು ಬರೆದರು.
Bal Gangadhar Tilak in Kannada
ಉಪಸಂಹಾರ
ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಶಿಕ್ಷಕ ಮತ್ತು ಸಮಾಜ ಸುಧಾರಕರಾಗಿದ್ದರು, ಅವರ ಗುರಿ ಕೇವಲ ಸ್ವರಾಜ್ಯ, ಅವರ ಧೈರ್ಯ, ದೇಶಭಕ್ತಿ ಮತ್ತು ರಾಷ್ಟ್ರೀಯತೆ ಅವರನ್ನು ಮಹಾತ್ಮ ಗಾಂಧಿಯವರ ನಂತರ ಭಾರತದ ಅತ್ಯಂತ ಜನಪ್ರಿಯ ನಾಯಕನನ್ನಾಗಿ ಮಾಡಿತು.
Bal Gangadhar Tilak in Kannada
ಬಾಲಗಂಗಾಧರ ತಿಲಕರ ಜನನ?
23 ಜುಲೈ 1856 ರಂದು ಜನಿಸಿದರು
ಬಾಲಗಂಗಾಧರ ತಿಲಕ್ ಪ್ರಾರಂಭಿಸಿದ ಪತ್ರಿಕೆ?
ಕೇಸರಿ, ಮರಾಠಿ ಮತ್ತು ಮರಾಠಾ
ಇತರೆ ಪ್ರಬಂಧಗಳನ್ನು ಓದಿ
- ಮೇಡಂ ಕ್ಯೂರಿ ಜೀವನ ಚರಿತ್ರೆ
- ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ
- ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ
- ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ
- ಸಿದ್ದಲಿಂಗಯ್ಯ ಅವರ ಪರಿಚಯ
- ಭಗತ್ ಸಿಂಗ್ ಅವರ ಬಗ್ಗೆ
- ನಾಡಪ್ರಭು ಕೆಂಪೇಗೌಡ ಬಗ್ಗೆ