autobiography in kannada | ಪ್ರಮುಖ ಆತ್ಮಕಥನಗಳು | kannada autobiography

Autobiography in kannada ಪ್ರಮುಖ ಆತ್ಮಕಥನಗಳು

autobiography in kannada | ಪ್ರಮುಖ ಆತ್ಮಕಥನಗಳು | kannada autobiography

ತಮ್ಮ ಜೀವನದ ವೃತ್ತಾಂತವನ್ನು ತಾವಾಗಿಯೇ ಅಥವಾ ಕೆಲವೊಮ್ಮೆ ಮತ್ತೊಬ್ಬರ ಸಹಾಯದೊಂದಿಗೆ ಬರೆದ ಪುಸ್ತಕವನ್ನು ಆತ್ಮಚರಿತ್ರೆ

ಅಥವಾ “ಆತ್ಮಕತೆ” ಎಂದು ಕರೆಯುತ್ತಾರೆ. ಆತ್ಮಕಥೆ ವ್ಯಕ್ತಿ ತನ್ನ ಜೀವನಚರಿತ್ರೆಯನ್ನು ತಾನೇ ಬರೆದರೆ ಅದನ್ನು ಆತ್ಮಕಥೆ,

ಆತ್ಮವೃತ್ತ ಎನ್ನುತ್ತೇವೆ. ಅದೇ ವ್ಯಕ್ತಿಯ ಚರಿತ್ರೆಯನ್ನು ಬೇರೊಬ್ಬ ಬರೆದಾಗ ಅದನ್ನು ಜೀವನಚರಿತ್ರೆ ಎನ್ನುತ್ತೇವೆ.

ಆತ್ಮಕಥೆ ಸಾಹಿತ್ಯದ ಒಂದು ಪ್ರಮುಖ ಪ್ರಕಾರ. ಪತ್ರಗಳು (ದಿನಚರಿ, ಜರ್ನಲ್‍ಗಳು, ಬಖೈರುಗಳು), ವೈಯಕ್ತಿಕ ಪ್ರಬಂಧಗಳು ಮುಂತಾದುವು ಈ ವರ್ಗಕ್ಕೆ ಸೇರುತ್ತವೆ.

ಮಾನವನ ವ್ಯಕ್ತಿತ್ವ ತನ್ನನ್ನು ತಾನು ಚಿರಸ್ಮರಣೀಯ ಮಾಡಿಕೊಳ್ಳುವ ಪ್ರಯತ್ನವನ್ನು ಈ ಬಗೆಯ ಸಾಹಿತ್ಯದಲ್ಲಿ ನಾವು ಕಾಣುತ್ತೇವೆ.

ಆತ್ಮಕಥನಗಳು ಸಾಹಿತಿಗಳು
ಭಾವ ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ನಾಟ್ಯ ನೆನಪುಗಳು ಶ್ರೀರಂಗ
ನೆನಪಿನ ದೋಣಿಯಲ್ಲಿ ಕುವೆಂಪು
ಹೋರಾಟದ ಬದುಕು ದೇ.ಜ.ಗೌ
ಗೌರ್ಮೆಂಟ್ ಬ್ರಾಹ್ಮಣ ಅರವಿಂದ ಮಾಲಗತ್ತಿ
ಮೂರು ತಲೆಮಾರು ತ.ಸು. ಶಾಮರಾಯ
ನಡೆದು ಬಂದ ದಾರಿ ಬೇಂದ್ರೆ
ನನಸಾಗದ ಕನಸು ಕಡಿದಾಳ್ ಮಂಜಪ್ಪ
ಜೀವನ ರಸಿಕ ರಂ.ಶ್ರೀ.ಮುಗಳಿ
ದುಡಿತವೇ ನನ್ನ ದೇವರು ಕಯ್ಯಾರ್‌ ಕಿಂಞ್ಞಣ್ಣ ರೈ
ಹತ್ತು ವರ್ಷಗಳು ಜಿ.ಪಿ.ರಾಜರತ್ನಂ
ನನ್ನ ಬಯೋಗ್ರಾಫಿ ಬೀಚಿ
ಹುಳಿ ಮಾವಿನ ಮರ ಪಿ.ಲಂಕೇಶ್
ನೆನಪು ಸಿಹಿ – ಕಹಿ ಅನುಪಮಾ ನಿರಂಜನ
ಆಡಾಡತಾ ಆಯುಷ್ಯ ಗಿರೀಶ್ ಕಾರ್ನಾಡ್
ಹುಚ್ಚು ಮನಸ್ಸಿನ ಹತ್ತು ಮುಖಗಳು ಶಿವರಾಂ ಕಾರಂತ
ಊರುಕೇರಿ ಡಾ || ಸಿದ್ಧಲಿಂಗಯ್ಯ
ಹೋರಾಟದ ಹಾದಿ ಹೆಚ್ . ನರಸಿಂಹ

ಇತಿಹಾಸ
ಭಾರತೀಯರಲ್ಲಿ ಆತ್ಮಕಥೆಗಳಾಗಲಿ ಜೀವನಚರಿತ್ರೆಗಳಾಗಲಿ ಬೆಳೆಯದಿದ್ದುದಕ್ಕೆ ಅವರ ಅಲೌಕಿಕ ಜೀವನೋದ್ದೇಶವೇ ಕಾರಣವೆನ್ನಬಹುದು. ವ್ಯಕ್ತಿಚರಿತ್ರೆ, ರಾಜಮಹಾರಾಜರುಗಳ ಚರಿತ್ರೆ ಅವರಿಗೆ ಗೌಣವೆನಿಸಿತು.

ದೇವರ ಮತ್ತು ದೇವತೆಗಳ ಕಡೆಗೆ ಅವರ ಒಲವು ಹೆಚ್ಚಾಗಿದ್ದುದರಿಂದ ಮತಧರ್ಮ ಸಂಬಂಧದ ಸಾಹಿತ್ಯವೇ ಹೇರಳವಾಗಿ ಬೆಳೆಯಿತು. ಅನಂತರ ರಾಮಾಯಣ ಮಹಾಭಾರತಗಳಲ್ಲಿ ಚರಿತ್ರೆಯ ನವುರಾದ ಎಳೆಗಳನ್ನು ಕಾಣುತ್ತೇವೆ.

ಪುರಾಣಗಳಲ್ಲಿ ಚರಿತ್ರೆ ಕಲಸಿಹೋಗಿದೆ. ಮುಂದಿನ ಕವಿಗಳು ರಾಜಮಹಾರಾಜರ ಚರಿತ್ರೆಯನ್ನು ಹೇಳುವಾಗಲೂ

ತಮ್ಮ ಧಾರ್ಮಿಕ ಕಾವ್ಯಗಳಲ್ಲಿ ಅವನ್ನು ಹಾಸುಹೊಕ್ಕಾಗಿ ಹೆಣೆದುಬಿಟ್ಟಿದ್ದಾರೆ. ಕಾಳಿದಾಸನ ರಘುವಂಶ ಚರಿತ್ರೆಯಾದರೂ ಕಾವ್ಯವೆಂದೇ ಅದರ ಪ್ರಾಶಸ್ತ್ಯ ಉಳಿದಿದೆ.

ಭಾರತೀಯ ಸಾಹಿತ್ಯದಲ್ಲಿ ಚರಿತ್ರೆಯ ರಚನೆ ಪ್ರಾರಂಭವಾದದ್ದು ೧೮, ೧೯ನೆಯ ಶತಮಾನಗಳಲ್ಲಿ; ಜೀವನ ಚರಿತ್ರೆಯಾದರೋ ಇನ್ನೂ ಒಂದು ಶತಮಾನದ ಅನಂತರ ಬೆಳೆಯಿತು

ಆತ್ಮಕಥೆಯ ಉದ್ದೇಶ
ಆತ್ಮಕಥೆಗಳನ್ನು ಬರೆಯಲು ಹಲವಾರು ಉದ್ದೇಶಗಳಿರುತ್ತವೆ. ತನ್ನ ಜೀವನದ ಸ್ವಾರಸ್ಯವನ್ನು ಇತರರೊಡನೆ ಹೇಳಿಕೊಂಡರೆ

ಅದು ಅವರಿಗೆ ರುಚಿಸಬಹುದು, ಪ್ರಯೋಜನಕಾರಿಯಾಗಬಹುದು ಎಂಬ ಭಾವನೆ. ತಾನು ಮಾಡಿದ ಕೆಲಸಕಾರ್ಯಗಳನ್ನು, ಜೀವನದಲ್ಲಿ ತಾಳಿದ ನಿಲುವನ್ನು ಸಮರ್ಥಿಸಿಕೊಳ್ಳುವುದು. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು.

ತನ್ನ ತೃಪ್ತಿ ಮತ್ತು ಉಪಯೋಗಕ್ಕಾಗಿ ತನ್ನ ಜೀವನವನ್ನು ಒಂದು ದೃಷ್ಟಿಯಿಂದ ನೋಡುವುದು ಮತ್ತು ಅದಕ್ಕೆ ಒಂದು

ಕ್ರಮವನ್ನು ಕೊಡುವುದು. ತನ್ನ ವೈಯಕ್ತಿಕ ಜೀವನವನ್ನು ಓದುಗರ ಮುಂದಿಟ್ಟು ಆ ಮೂಲಕ ಪ್ರಚಾರ ಮತ್ತು ಹಣವನ್ನು ಗಳಿಸುವುದು.

ಓದುಗರ ಅನುಕಂಪವನ್ನು ಪಡೆಯುವುದು. ಮೆಚ್ಚಿಕೆ ಮತ್ತು ಹೊಗಳಿಕೆಯನ್ನು ಗಳಿಸುವುದು.

ತನ್ನ ಜೀವನದ ಸಿಹಿಯಾದ ನೆನಪುಗಳನ್ನು ಮೆಲುಕುಹಾಕುವ ಸಲುವಾಗಿ ಕಹಿ ನೆನಪುಗಳ ಹೊರೆಯನ್ನು ಕಳೆದುಕೊಳ್ಳುವುದಕ್ಕಾಗಿ, ಕಲಾಮಯವಾದ ಜೀವನಚಿತ್ರವನ್ನು ಕೊಡುವುದಕ್ಕಾಗಿ ಬರೆದಿಡುವುದು-ಇವುಗಳಲ್ಲಿ ಯಾವುದಾದರೂ ಒಂದು ಅಥವಾ

ಹಲವು ಅಂಶಗಳು ಆತ್ಮಕಥೆಯನ್ನು ಬರೆಯಲು ಒಬ್ಬ ವ್ಯಕ್ತಿಯನ್ನು ಪ್ರಚೋದಿಸುತ್ತವೆ.

ಡಾ || ಸಿದ್ಧಲಿಂಗಯ್ಯ, “ಆತ್ಮ ಚರಿತ್ರೆ ಪುಸ್ತಕಗಳು”

autobiography in kannada

ಆತ್ಮಚರಿತ್ರೆ

Applications for Recruitment of Anganwadi Worker / Helper

Leave a Reply

Your email address will not be published. Required fields are marked *