2nd PUC Kannada Vachanagalu Note , ದ್ವಿತೀಯ ಪಿ.ಯು.ಸಿ. ಬಸವಣ್ಣನವರ ವಚನಗಳು ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು, 2nd puc basavannanavara vachanagalu kannada 2 chapter Question Answer Notes pdf Download
2nd PUC Kannada Vachanagalu Notes
2 PUC Basavannanavara Vachanagalu Kannada Notes
ಕವಿ ಪರಿಚಯ
ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು.
ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು .
ಜನನ : ಬಸವಣ್ಣನವರು 1134 ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತಿ ಇದೆ.),
ತಂದೆ : ಶ್ರೀ ಮಾದರಸ
ತಾಯಿ : ಮಾದಲಾಂಬಿಕೆ
ಭಕ್ತಿ ,ಜ್ಞಾನ , ಮಾನವೀಯತೆ ಹಾಗೂ ವೈರಾಗ್ಯ ಪರವಾದ ಬಸವಣ್ಣನವರ ವಚನಗಳು ಸುಲಭವಾದ , ಲಲಿತವಾದ , ಸರಳ ಭಾಷೆಯಿಂದ ಕೂಡಿವೆ .
ಬಸವಣ್ಣನವರ ಮುಖ್ಯ ಕಾಳಜಿ ಸಮಾಜಸುಧಾರಣೆಯಾಗಿತ್ತು .
ಜಾತಿ – ಕುಲ – ಲಿಂಗ ಭೇದಗಳಿಂದ ಹೊರತಾದ ಸಮಾಜ ನಿರ್ಮಿತಿ ಅವರ ಪ್ರಮುಖ ಗುರಿಯಾಗಿದ್ದಿತು .
ಜನರ ಅಜ್ಞಾನ , ಕಂದಾಚಾರ , ಜಾತಿ ಸಂಕರಗಳನ್ನು ಕುರಿತು ಅವರ ವಚನಗಳು ಚಿಂತಿಸಿವೆ .
ಉಪದೇಶ , ವಿಡಂಬನೆ ಮುಂತಾದ ಗುಣಗಳನ್ನು ಅಲ್ಲಿ ಕಾಣಬಹುದು .
ಬಸವಣ್ಣ ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾಪುರುಷ , ಮಹಾಮನೆಯಲ್ಲಿ ವಿವಿಧ ವರ್ಗದ ವಚನಕಾರರು ಒಂದೆಡೆ ಕಲೆಯುವಂತೆ ಮಾಡಿದ ಬಸವಣ್ಣನವರ ಸಂಘಟನಾ ಶಕ್ತಿಯ ಜೊತೆ ಜೊತೆಗೆ ಯುಗಪರಿವರ್ತನೆಗೆ ಶ್ರಮಿಸಿದ ಸಂಕಲ್ಪಬಲವೂ ಅತ್ಯಂತ ಗಮನಾರ್ಹ ವಾದುದು .
ಅವರ ವಚನಗಳಲ್ಲಿ ಸಾರ್ವಕಾಲಿಕ ಗುಣವಿದೆ .
ಬಸವಣ್ಣನವರ ವಚನಗಳು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಪ್ರಾಮುಖ್ಯತೆಯನ್ನು ನೀಡಿವೆ .
ಮನುಷ್ಯರ ನಡುವಿನಲ್ಲಿ ಹೊಮ್ಮಬೇಕಾದ ಮಾನವೀಯತೆ , ಹೃದಯ ವೈಶಾಲ್ಯತೆಯು ಗೈರು ಹಾಜರಾದಾಗ ನಮ್ಮ ಭಕ್ತಿಗೆ ಅರ್ಥವಿರುವುದಿಲ್ಲ .
ಭಕ್ತನು ಶಿವಲಿಂಗದೊಂದಿಗೆ ಹೊಂದಬೇಕಾದ ಸಾಮರಸ್ಯವೂ ಈ ಬಗೆಯದೇ ಆಗಿದೆ .
ಅಸ್ವಸ್ಥ ವ್ಯಕ್ತಿ ಮತ್ತು ಅಸ್ವಸ್ಥ ಸಮಾಜದ ಲಕ್ಷಣಗಳೆಂದರೆ ಆತ್ಮನಿಂದೆ ಆತ್ಮಸ್ತುತಿ ಆತ್ಮಹತ್ಯೆ – ಆತ್ಮರತಿ ಮುಂತಾದುವು , ಆತ್ಮವಿಮರ್ಶೆಯು ಆರೋಗ್ಯವಂತ ವ್ಯಕ್ತಿ ಮತ್ತು ಆರೋಗ್ಯವಂತ ಸಮಾಜಗಳ ಪ್ರತೀಕ . ಬಸವಣ್ಣನವರ ವಚನಗಳಲ್ಲಿರುವಷ್ಟು ಆತ್ಮವಿಮರ್ಶೆಯನ್ನು ಮತ್ತೊಬ್ಬ ವಚನಕಾರರಲ್ಲಿ ಕಾಣಲಾರೆವು , ಆತ್ಮವಿಮರ್ಶೆಯು ವ್ಯಕ್ತಿತ್ವದ ವರ್ಧಮಾನಕ್ಕೆ ಪ್ರೇರಕವಾಗುವ ಚೈತನ್ಯಶಕ್ತಿ .
ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ 2nd PUC Kannada Vachanagalu Notes pdf
1 “ ಧರೆಹತ್ತಿ ಉರಿದಡೆ ನಿಲಲುಬಾರದು”
ಕಾಯಬೇಕಾದವರೆ ಕೊಲ್ಲಲು ನಿರ್ಧರಿಸಿದಾಗ ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲವೆಂಬುದನ್ನು ವಿವರಿಸುವ ಸಂದರ್ಭದಲ್ಲಿ ಬಸವಣ್ಣ ಈ ಮಾತನ್ನು ಹೇಳಿದ್ದಾರೆ .
ಮನೆಯೊಳಗಿರುವ ಒಲೆಹತ್ತಿ ಉರಿಯುತ್ತಿದ್ದಾಗ ಅದರ ಶಾಖವನ್ನು ತಾಳಿಕೊಂಡು ನಿಲ್ಲಬಹುದು .
ಆದರೆ ನಾವು ನಿಂತಿರುವ ನೆಲವೇ ಹತ್ತಿ ಉರಿಯತೊಡಗಿದರೆ ತಾಳಿನಿಲ್ಲಲು , ಬದುಕುಳಿಯಲು ಅಸಾಧ್ಯವೆಂಬುದು ಬಸವಣ್ಣನವರ ಅಭಿಪ್ರಾಯ .
- “ ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು” ?
ಮರ್ಕಟ ಎಂದರೆ ಮಂಗ ಅಥವಾ ಕೋತಿ . ಕೋತಿಗೆ ಮಾಣಿಕ್ಯದ ಬೆಲೆ ತಿಳಿಯದು . ಹಾಗಾಗಿ ತನ್ನ ಕೈಯೊಳಗಿರುವ ಮಾಣಿಕ್ಯವನ್ನು ಅದು ಕಲ್ಲಿನಂತಹ ಕ್ಷುಲ್ಲಕ ನಿರುಪಯುಕ್ತ ವಸ್ತು ಎಂದೇ ಭಾವಿಸುತ್ತದೆ .
ಇದೇ ರೀತಿಯಲ್ಲಿ ಲಿಂಗದ ಮೌಲ್ಯ ಮಹತ್ತ್ವ ತಿಳಿಯದ ಡಾಂಬಿಕ ಭಕ್ತ ತಾನು ಧರಿಸಿರುವ ಶಿವಲಿಂಗದ ಮಹತ್ತ್ವವನ್ನರಿಯದೆ ವರ್ತಿಸುತ್ತಾನೆ .
ಇದರಿಂದ ಯಾವ ಉಪಯೋಗವೂ ಆಗುವುದಿಲ್ಲ . ಇಂತಹ ಡಾಂಬಿಕನ ಅಂಗದ ಮೇಲೆ ಲಿಂಗವಿರುವುದು ಮರ್ಕಟನ ಕೈಯೊಳಗಣ ಮಾಣಿಕ್ಯದಂತೆ ಎಂಬುದು ಬಸವಣ್ಣನವರ ಅಭಿಪ್ರಾಯವಾಗಿದೆ .
- “ ತಾಯ ಮೊಲೆವಾಲು ನಂಜಾಗಿ ಕೊಲುವಡೆ”
ಬಸವಣ್ಣನವರ ವಚನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ತಾಯ ಗರ್ಭದಿಂದ ಹೊರಬಂದ ಕೂಡಲೇ ಮಗು ಕಾತರಿಸುವುದು ತಾಯಿಯ ಎದೆಹಾಲಿಗೆ .
ತಾಯಿ ಹಾಲು ಕುಡಿಸಿ ಮಗುವನ್ನು ಪೊರೆಯುತ್ತಾಳೆ .
ಅವಳು ಕುಡಿಸುವ ಎದೆಹಾಲು ಮಗುವಿನ ಪಾಲಿಗೆ ಅಮೃತವಿದ್ದಂತೆ .
ಒಂದು ವೇಳೆ ಅವಳು ಕುಡಿಸುವ ಎದೆಹಾಲು ಅಮೃತವಾಗುವ ಬದಲಿಗೆ ವಿಷವಾದರೆ ?
ಯಾರೂ ಮಗುವನ್ನು ಉಳಿಸಲಾಗಲಿ , ಮೊರೆಯಲಾಗಲಿ ಸಾಧ್ಯವಿಲ್ಲ .
ಇದರಂತೆಯೇ ತಾಯಿಯಂತೆ ಪೊರೆವ ದೇವರೇ ಶಿಕ್ಷಿಸತೊಡಗಿದಾಗ ಯಾರಿಂದಲೂ ರಕ್ಷಿಸಲಾಗವೆಂಬುದನ್ನು ಬಸವಣ್ಣ ಈ ಮೇಲಿನ ವಾಕ್ಯದ ಮೂಲಕ ವಿವರಿಸಿದ್ದಾರೆ .
- “ ಅರ್ಥರೇಖೆಯಿದ್ದಲ್ಲಿ ಫಲವೇನು , ಆಯುಷ್ಯರೇಖೆ ಇಲ್ಲದನ್ನಕ್ಕರ”
ಡಾಂಭಿಕ ಭಕ್ತಿಯನ್ನು ವಿಡಂಬಿಸುವ ಸಂದರ್ಭದಲ್ಲಿ ಕವಿ ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ .
ಲಿಂಗವನ್ನು ಮೈಮೇಲೆ ಧರಿಸಿ , ಶಿವಭಕ್ತನೆಂದು ತೋರಿಕೆಯ ಭಕ್ತಿ ಆಚರಿಸುವುದಕ್ಕಿಂತ ಶಿವಪಥದಲ್ಲಿ ನಡೆಯುವುದು ಮುಖ್ಯವೆಂಬುದು ಬಸವಣ್ಣನವರ ಅಭಿಪ್ರಾಯವಾಗಿದೆ .
ಆಯುಷ್ಯವಿಲ್ಲದವನ ಕೈಯಲ್ಲಿ ಅರ್ಥರೇಖೆಯಿದ್ದ ಮಾತ್ರಕ್ಕೆ ಸುಖಿಸಬಲ್ಲನೆ ? ಅರ್ಥ ( ಸಂಪತ್ತನ್ನು ) ವನ್ನು ಅನುಭವಿಸಲು ಆಯುಷ್ಯ ಮುಖ್ಯ ಅಂತೆಯೇ ಅಂಗದ ಮೇಲೆ ಶಿವಲಿಂಗವಿದ್ದ ಮಾತ್ರಕ್ಕೆ ಉಪಯೋಗವಿಲ್ಲ . ಶಿವಪಥವನ್ನು ಅರಿತು ನಡೆಯುವುದು ನಿಜಭಕ್ತನ ಲಕ್ಷಣ ಎಂದು ಬಸವಣ್ಣನವರು ತಿಳಿಸಿದ್ದಾರೆ .
2nd PUC Kannada Vachanagalu Notes
5-6 ವಾಕ್ಯಗಳಲ್ಲಿ ಉತ್ತರಿಸಿ
1 ) ರಕ್ಷಿಸಬೇಕಾದವರೆ ಭಕ್ಷಕರಾದರೆ ಒದಗುವ ಘಟನೆಯನ್ನು ಬಸವಣ್ಣನವರು ಹೇಗೆ ಚಿತ್ರಿಸಿದ್ದಾರೆ ?
ರಕ್ಷಿಸಬೇಕಾದವರೆ ಭಕ್ಷಕರಾದರೆ ಒದಗುವ ವಿಘಟನೆಯನ್ನು ಬಸವಣ್ಣನವರು ಬಹಳ ಮಾರ್ಮಿಕವಾಗಿ ಚಿತ್ರಿಸಿದ್ದಾರೆ .
ಒಲೆಹತ್ತಿ ಉರಿಯುತ್ತಿದ್ದರೆ ಅಲ್ಲಿ ನಾವು ನಿಲ್ಲಬಹುದು . ಆದರೆ ಧರೆಯೇ ಹತ್ತಿ ಉರಿಯಲು ಅಲ್ಲಿ ನಿಲ್ಲುವುದಿರಲಿ ಯಾರೂ ಕೂಡ ಬದುಕಲಾರರೂ .
ನೀರಿಗೆ ಅಡ್ಡ ಕಟ್ಟಿದ ಏರಿಯೇ ನೀರನ್ನು ಕುಡಿದರೆ , ಬೇಲಿಯೇ ಎದ್ದು ಹೊಲ ಮೇಯ್ದರೆ , ಮನೆಯ ಗೃಹಿಣಿಯೇ ತನ್ನ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದರೆ ,
ಅಮೃತವಾಗ ಬೇಕಾಗಿದ್ದ ತಾಯಿಯ ಮೊಲೆ ಹಾಲೆ ವಿಷವಾದಾಗ , ರಕ್ಷಿಸಬೇಕಾದವರೇ ಭಕ್ಷಕರಾದರೆ ಕೂಡಲಸಂಗಮ ಇನ್ನು ಉಳಿಯುವುದಾದರೂ ಹೇಗೆ ?
ಬದುಕುವುದಾದರೂ ಹೇಗೆ ? ಎಂದು ತಿಳಿಸಿಕೊಟ್ಟಿದ್ದಾರೆ .
2nd PUC Kannada Vachanagalu Notes
2 ) ಮನುಷ್ಯ – ಮನುಷ್ಯರ ನಡುವೆ ಅಂತಃಕರಣಗಳು ಸ್ಪಂದಿಸಬೇಕಾದ ವಿಚಾರವನ್ನು ಬಸವಣ್ಣನವರು ಹೇಗೆ ನಿರೂಪಿಸಿದ್ದಾರೆ ?
ಮನುಷ್ಯ – ಮನುಷ್ಯರ ನಡುವೆ ಅಂತಃಕರಣಗಳು ಸ್ಪಂದಿಸಬೇಕಾದ ವಿಚಾರವನ್ನು ಬಸವಣ್ಣನವರು ಈ ರೀತಿ ನಿರೂಪಿಸಿದ್ದಾರೆ .
ಮನಗಳ ಅಂತಃಕರಣಗಳು ಬೆರೆತಾಗ ತನು ಕರಗುವುದು . ಸ್ಪರ್ಶದಿಂದ ಪುಳಕಿತಗೊಳ್ಳುವುದು , ಕಣ್ಣುಗಳಲ್ಲಿ ಅಶ್ರುಜಲಗಳು ತುಂಬಿಕೊಳ್ಳುವುದು , ಗಂಟಲು ಬಿಗಿಯುವುದು , ಮುಂತಾದ ಚಿಹ್ನೆಗಳು ಅಂತಃ ಕರಣಗಳನ್ನು ಸ್ಪಂದಿಸುತ್ತವೆ ಎಂಬುದಾಗಿ ಬಸವಣ್ಣನವರು ನಿರೂಪಿಸಿದ್ದಾರೆ .
ಇದೆ ಅಲ್ಲದೆ ಇವೆಲ್ಲಕ್ಕೂ ಮಿಗಿಲಾದುದು ಕೂಡಲಸಂಗಮನಲ್ಲಿ ಅಚ ಭಕ್ತಿ , ಅಚಲವಾದ ಭಕ್ತಿ ಇದ್ದಲ್ಲಿ ಇತರ ಅಂತಃಕರಣಗಳು ತಾನೇ ತಾನಾಗಿ ಸ್ಪಂದಿಸುತ್ತವೆ ಎಂಬುದಾಗಿ ತಿಳಿಸಿಕೊಟ್ಟಿದ್ದಾರೆ .
3 ) ಶಿವಪಥವನ್ನರಿಯದವನ ಭಕ್ತಿ ನಿರರ್ಥಕವೆಂಬುದನ್ನು ಬಸವಣ್ಣನವರು ಯಾವ ಯಾವ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ ?
ಶಿವಪಥವನ್ನರಿಯದವನ ಭಕ್ತಿ ನಿರರ್ಥಕವೆಂಬುದನ್ನು ಬಸವಣ್ಣನವರು ಹಲವಾರು ಉದಾಹರಣೆಗಳಿಂದ ವಿವರಿಸಿದ್ದಾರೆ .
ಬೇಕಾದಷ್ಟು ಹಣ , ಐಶ್ವರ್ಯವಿದ್ದರೂ ಅದನ್ನು ಅನುಭವಿಸಲು ಆರೋಗ್ಯ ಆಯಸ್ಸು ಇಲ್ಲದಿದ್ದರೆ ಪ್ರಯೋಜನವಿಲ್ಲ .
ಅಂತೆಯೇ ಹೇಡಿಯ ಅಥವಾ ಅಂಜುಬುರುಕನ ಕೈಲಿ ಚಂದ್ರಾಯುಧ ಕೊಟ್ಟರು ಅದನ್ನು ಆತ ಉಪಯೋಗಿಸಲಾಗದಿದ್ದಲ್ಲಿ ಅದು ವ್ಯರ್ಥ .
ಕಣ್ಣೆ ಕಾಣದ ಕುರುಡನ ಕೈಗೆ ತನ್ನನ್ನು ತಾನು ನೋಡಿಕೊಳ್ಳಲು ಕನ್ನಡಿ ಕೊಟ್ಟರೆ ಅದರಿಂದ ಅವನಿಗೇನು ಉಪಯೋಗವಾಗದು .
ಅಂತೆಯೇ ಬೆಲೆ ಬಾಳುವ ರತ್ನವನ್ನು ಮಂಗನ ಕೈಗೆ ಕೊಟ್ಟರೆ ಆ ರತ್ನದ ಬೆಲೆ ಮಂಗ ಹೇಗೆ ತಾನೇ ಬಲ್ಲದು . ಅಂತೆಯೇ ಶರಣನಾದವನಿಗೆ ಲಿಂಗ ಪೂಜೆ , ಶಿವ ಪಥದ ಅರಿವು ಇಲ್ಲದಿದ್ದರೆ ಆ ಪೂಜೆಯು ನಿರರ್ಥಕ ಎಂಬುದಾಗಿ ಬಸವಣ್ಣನವರು ತಿಳಿಸಿಕೊಟ್ಟಿದ್ದಾರೆ .
02-03 ವಾಕ್ಯಗಳಲ್ಲಿ ಉತ್ತರಿಸಿ 2nd PUC Kannada Vachanagalu Notes KSEEB
1 ) ಯಾವಾಗ ನಿಲಬಹುದು ? ಯಾವಾಗ ನಿಲಲಾಗದು ?
ಒಲೆಹತ್ತಿ ಉರಿವಾಗ ನಿಲಬಹುದು , ಧರೆಯೇ ಹತ್ತಿ ಉರಿಯುವಾಗ ನಿಲಲು ಆಗದು ಎಂಬುದಾಗಿ ಬಸವಣ್ಣನವರು ತಿಳಿಸಿಕೊಟ್ಟಿದ್ದಾರೆ .
2 ) ಯಾವ ಗುಣಗಳಿಲ್ಲದವನು ಡಾಂಭಿಕನೆನಿಸುತ್ತಾನೆ ?
ಮನ ಬೆರತರು ತನು ಬೆರೆಯದಿದ್ದೆಡೆ ಸ್ಪರ್ಶದಲ್ಲಿ ಪುಳಕಿತನಾಗದಿದ್ದಲ್ಲಿ ರೋಮಾಂಚನಕಾರಿ ನುಡಿಗಳು ನುಡಿದಾಗ ಕಂಠದಲ್ಲಿ ಗದ್ದತೆ ಇಲ್ಲದಿದ್ದಲ್ಲಿ ಘಟನೆಗಳನ್ನು ನೋಡಿದಾಗ ಕಣ್ಣುಗಳಲ್ಲಿ ಅಶ್ರು ತುಂಬಿ ಬಾರದಿದ್ದಲ್ಲಿ ಏನು ಪ್ರಯೋಜನ ಕೂಡಲಸಂಗಮದೇವನಲ್ಲಿ ಭಕ್ತಿಯನ್ನು ತೋರದಿದ್ದಲ್ಲಿ ಅದು ಡಾಂಭಿಕ ಭಕ್ತಿ ಎನಿಸುತ್ತದೆ .
3 ) ಶಿವಪಥವನ್ನು ಅರಿಯದವನನ್ನು ಹೇಗೆ ವಿಡಂಬಿಸಲಾಗಿದೆ ?
ಶಿವಪಥವನ್ನು ಅರಿಯದವನನ್ನು ಬಸವಣ್ಣನವರು ಹಲವಾರು ಉದಾಹರಣೆಗಳ ಮೂಲಕ ವಿಡಂಬಿಸಿದ್ದಾರೆ . ಉದಾಹರಣೆಗೆ – ಹಣ , ಐಶ್ವರ್ಯವಿದ್ದು ಆಯುಷ್ಯ ಇಲ್ಲದಿದ್ದರೆ ಹೇಡಿಯ ಕೈಲಿ ಚಂದ್ರಾಯುಧ ಕೊಟ್ಟರೆ ,
ಅಂಧಕನ ಕೈಗೆ ಕನ್ನಡಿ ಕೊಟ್ಟಲ್ಲಿ , ಮಂಗನ ಕೈಲಿ ಮಾಣಿಕ್ಯ ಕೊಟ್ಟರೆ ಏನು ಹೇಗೆ ಪ್ರಯೋಜನವಿಲ್ಲವೋ ಅಂತೆಯೇ ಶಿವಪಥವನ್ನು ಅರಿಯದವನು ಶಿವ ಪೂಜೆ ಮಾಡಿದರೂ ಪ್ರಯೋಜನವಾಗದು .
ಒಂದು ವಾಕ್ಯದಲ್ಲಿ ಉತ್ತರಿಸಿ 2nd PUC Kannada Vachanagalu Notes
1 ) ಯಾರ ಕೈಲಿ ದರ್ಪಣವಿದ್ದು ಫಲವಿಲ್ಲ ?
ಅಂಧರ ಕೈಲಿ ದರ್ಪಣವಿದ್ದು ಫಲವಿಲ್ಲ .
2 ) ಬಸವಣ್ಣನವರ ವಚನಗಳ ಅಂಕಿತ ಯಾವುದು ?
“ ಕೂಡಲಸಂಗಮದೇವ ” ಬಸವಣ್ಣನವರ ವಚನಗಳ ಅಂಕಿತವಾಗಿದೆ .
3 ) ಶಿವಪಥವನ್ನು ಅರಿಯದಿದ್ದರೇನಾಗುವುದು ?
ಶಿವಪಥವನ್ನು ಅರಿಯದಿದ್ದರೆ ಶಿವಲಿಂಗವನ್ನು ಪೂಜಿಸಿ ಫಲವಿಲ್ಲ ಅಂದರೆ ಶಿವಪಥವನ್ನು ಅರಿಯದಿದ್ದರೆ ಲಿಂಗಪೂಜೆಯು ಪ್ರಯೋಜನವಾಗದು .
4 ) ತನು ಯಾವಾಗ ಕರಗಬೇಕು ?
ಮನಗಳು ಬೆರೆತಾಗ ತನುವು ಕರಗಬೇಕು .
ಪದಗಳ ಅರ್ಥ
ತನು – ದೇಹ
ಸೋಂಕು – ಮುಟ್ಟು , ತಗಲು , ಸ್ಪರ್ಶಿಸು
ಪುಳಕ – ರೋಮಾಂಚನ
ಅಶ್ರುಜಲ – ಕಣ್ಣೀರು
ಗದ್ಗದ– ಗಂಟಲು ತೇವಗೊಳ್ಳುವುದು
ಪೊಣ್ಣು – ಹೊಮ್ಮು
ಚಿಹ್ನೆ – ಸಂಕೇತ
ಡಂಬಕ – ದೃಢಭಕ್ತಿಯಿಲ್ಲದವನು
ಅರ್ಥ– ಹಣ , ಸಂಪತ್ತು
ಫಲ – ಪ್ರಯೋಜನ
ಅಂಧಕ – ಕುರುಡ
ದರ್ಪಣ – ಕನ್ನಡಿ
ಮರ್ಕಟ – ಮಂಗ
ಮಾಣಿಕ – ಮಾಣಿಕ್ಯ , ನವರತ್ನಗಳಲ್ಲಿ ಒಂದು
ಶಿವಪಥ – ಲಿಂಗಾಚಾರದ ಮಾರ್ಗ
ಅರಿಯದನ್ನಕ್ಕ – ಅರಿತುಕೊಳ್ಳುವವರೆಗೆ
ಧರೆ – ಭೂಮಿ ; ಉಂಬು-ತಿನ್ನು , ಸೇವಿಸು ;
ಕೆಯ್ಯ – ಬೆಳೆ , ನಾರಿ – ಹೆಣ್ಣು , ಗೃಹಿಣಿ
ನಂಜು – ವಿಷ
ಕೆಲವು ವಚನಗಳು 2nd PUC Kannada Vachanagalu Notes
“ದೇವ ಸಹಿತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡಡೆ
ನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ ! ತಲೆದಂ ಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ
ನಿಮ್ಮ ರಾಣಿವಾಸದಾಣೆ.”
ಹೀಗೆ ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ.
“ಮನೆ ನೋಡಾ ಬಡವರು, ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು.”
ಎಂದು ಬಸವಣ್ಣನವರು ಕಾಯಕಜೀವಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರ ವ್ಯಕ್ತಿತ್ವವನ್ನು ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಅವರು ಘನಮನದವರೂ ಪರಿಶುದ್ಧ ರೂ ಸ್ವತಂತ್ರ ಧೀರರೂ ಆಗಿದ್ದಾರೆ.
“ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯುಳ್ಳನ್ನಕ್ಕರ”
ಎಂದು ಆಯ್ದಕ್ಕಿ ಲಕ್ಕಮ್ಮ ಕಾಯಕದ ಮಹತ್ವ ವ್ಯಕ್ತಪಡಿಸುತ್ತಾಳೆ.
FAQ
ಬಸವಣ್ಣನವರ ಅಂಕಿತ ನಾಮ ಯಾವುದು?
ಕೂಡಲ ಸಂಗಮದೇವ
ಬಸವಣ್ಣ ಜಯಂತಿ?
ವೈಶಾಖ ಶುದ್ಧ ತದಿಗೆಯಂದು, ಲಿಂಗಾಯತ ಮತದ ಸ್ಥಾಪಕರಾದ ಬಸವಣ್ಣನವರ ಜನ್ಮದಿನವಾದ ಬಸವ ಜಯಂತಿಯನ್ನು ಆಚರಿಸಲಾಗುತ್ತದೆ.
ಇತರೆ ವಿಷಯದ ಲಿಂಕ್
ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್
🙏🙏