2nd PUC ಮಾನವನ ಆರ್ಥಿಕ ಚಟುವಟಿಕೆಗಳು | 2nd PUC Chapter 3 Human Economic Activities

ಮಾನವನ ಆರ್ಥಿಕ ಚಟುವಟಿಕೆಗಳು ನೋಟ್ಸ್ । 2nd PUC Geography Notes in Kannada Chapter 3 Free Notes

2nd puc geography notes in kannada chapter 3, ಮಾನವನ ಆರ್ಥಿಕ ಚಟುವಟಿಕೆಗಳು, Chapter 3 Human Economic Activities 2nd PUC Geography Question Bank with Answers in Kannada

2nd PUC Geography Notes in Kannada Chapter 3

ಲೇಖನದಲ್ಲಿ ಮಾನವನ ಆರ್ಥಿಕ ಚಟುವಟಿಕೆಗಳು ದ್ವಿತೀಯ ಪಿಯುಸಿ ಅಧ್ಯಾಯ 3 ರ ಒಂದು ಎರಡು ವಾಕ್ಯದ ಪ್ರಶ್ನೋತ್ತರಗಳನ್ನು ನೀಡಲಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram
ಮಾನವನ ಆರ್ಥಿಕ ಚಟುವಟಿಕೆಗಳು ನೋಟ್ಸ್ । 2nd PUC Geography Notes in Kannada Chapter 3 Free Notes
ಮಾನವನ ಆರ್ಥಿಕ ಚಟುವಟಿಕೆಗಳು ನೋಟ್ಸ್ । 2nd PUC Geography Notes in Kannada Chapter 3 Free Notes

ಒಂದು ವಾಕ್ಯದ ಪ್ರಶ್ನೋತ್ತರಗಳು

ಪ್ರಾಥಮಿಕ ಆರ್ಥಿಕ ವೃತ್ತಿ ಗಳೆಂದರೇನು?

ಪ್ರಾಕೃತಿಕ ಸಂಪನ್ಮೂಲಗಳ ಹೊರತೆಗೆಯುವಿಕೆ ಹಾಗೂ ಉತ್ಪಾದನೆಯಲ್ಲಿ ತೊಡಗಿರುವ ಮನುಷ್ಯನ ಎಲ್ಲಾ ಚಟುವಟಿಕೆಗಳನ್ನು ‘ಪ್ರಾಥಮಿಕ ಆರ್ಥಿಕ ಉದ್ಯೋಗ’ (Primary Occupations) ಎನ್ನುತ್ತಾರೆ. ಉದಾ : ಆಹಾರ ಸಂಗ್ರಹಣೆ, ಬೇಟೆಗಾರಿಕೆ, ಮೀನುಗಾರಿಕೆ, ಮರಕಡಿಯುವಿಕೆ, ವ್ಯವಸಾಯ, ಗಣಿಗಾರಿಕೆ ಇತ್ಯಾದಿ.

ಆರ್ಥಿಕ ಉದ್ಯೋಗಗಳೆಂದರೇನು?

ಮಾನವ ತನ್ನ ಬೇಡಿಕೆಗಳ ಪೂರೈಕೆಗಾಗಿ ಹಲವಾರು ಚಟುವಟಿಕೆಗಳನ್ನು ರೂಢಿಸಿಕೊಂಡಿದ್ದಾನೆ. ಇವುಗಳನ್ನೇ ‘ಆರ್ಥಿಕ ಚಟುವಟಿಕೆ’ ಅಥವಾ ‘ಉದ್ಯೋಗಗಳೆಂದು ಕರೆಯುತ್ತಾರೆ. ಉದಾ : ಆಹಾರ, ಉಡುಪು, ವಸತಿ

ದ್ವಿತೀಯ ಆರ್ಥಿಕ ವೃತ್ತಿಗಳೆಂದರೇನು?

ಪುಕೃತಿಯಿಂದ ಉತ್ಪಾದಿಸಲ್ಪಟ್ಟ ವಸ್ತುಗಳನ್ನು ಮನುಷ್ಯ ತನಗೆ ಉಪಯೋಗವಾಗುವಂತೆ ಪರಿವರ್ತಿಸುವ ಪ್ರಕ್ರಿಯೆಗೆ ‘ಕೈಗಾರಿಕೆ’ ಎನ್ನುವರು ಇವುಗಳನ್ನು ದ್ವಿತೀಯ ಆರ್ಥಿಕ ಉದ್ಯೋಗಗಳೆಂದು ಕರೆಯುವರು. ಉದಾ : ಸಕ್ಕರೆ ಕೈಗಾರಿಕೆ, ರಬ್ಬರ್ ಕೈಗಾರಿಕೆ, ರೇಷ್ಮೆ ಕೈಗಾರಿಕೆ ಇತ್ಯಾದಿ.

“ಬೇಟೆಗಾರಿಕೆ’ ಎಂದರೇನು?

ಬೇಟೆಗಾರಿಕೆ ಮನುಷ್ಯನ ಪುರಾತನ ವೃತ್ತಿಗಳಲ್ಲಿ ಒಂದು ಆಹಾರ, ಚರ್ಮ, ಮಾರಾಟ, ಹಾಗೂ ಕ್ರೀಡೆಗಾಗಿ ಜೀವಿಗಳನ್ನು ಬೇಟೆಯಾಡಲಾಗುತ್ತಿತ್ತು ಇದನ್ನೇ ‘ಬೇಟೆಗಾರಿಕೆ’ ಎನ್ನಲಾಗಿದೆ.

‘ಮರ ಕಡಿಯುವ ಉದ್ಯಮ’ ಎಂದರೇನು

ಅರಣ್ಯ ವಸ್ತುಗಳ ಸಂಗ್ರಹಣೆ, ಬಳಕೆ, ಮರಗಳನ್ನು ಬೆಳೆಸುವುದು ಹಾಗೂ ‘ಮರ ಕಡಿಯುವುದು ಮರಗಿಡಗಳಿಗೆ ರೋಗ ತಗಲದಂತೆ ನೋಡಿಕೊಳ್ಳುವುದನ್ನು ಮರ ಕಡಿಯುವ ಉದ್ಯಮ ಎನ್ನುವರು.

ವ್ಯವಸಾಯ ಎಂದರೇನು?

ಮಣ್ಣನ್ನು ಉಳುಮೆ ಮಾಡಿ, ಆಹಾರ ಪೂರೈಕೆಗೆ ಬೆಳೆಗಳನ್ನು ಬೆಳೆಯುವ ಕಲೆಯನ್ನು ವ್ಯವಸಾಯ’ ಎನ್ನುತ್ತಾರೆ.

human economic activities questions and answers in kannada

ಮಾನವನ ಆರ್ಥಿಕ ಚಟುವಟಿಕೆಗಳು ನೋಟ್ಸ್ । 2nd PUC Geography Notes in Kannada Chapter 3 Free Notes
ಮಾನವನ ಆರ್ಥಿಕ ಚಟುವಟಿಕೆಗಳು ನೋಟ್ಸ್ । 2nd PUC Geography Notes in Kannada Chapter 3 Free Notes
ಕೈಗಾರಿಕೆ ಎಂದರೇನು?

ಪ್ರಕೃತಿಯಿಂದ ದೊರಕುವ ಕಚ್ಚಾ ವಸ್ತುಗಳನ್ನು ಮನುಷ್ಯನಿಗೆ ಉಪಯೋಗವಾಗುವಂತೆ ಪರಿವರ್ತಿಸುವ ಪ್ರಕ್ರಿಯೆಯನ್ನು ‘ಕೈಗಾರಿಕೆ’ ಎನ್ನುತ್ತಾರೆ.

ಪ್ರಾಣಿ ಸಾಕಾಣಿಕೆ ಎಂದರೇನು?

ನಿರ್ದಿಷ್ಟ ಉಪಯೋಗಕ್ಕಾಗಿ/ಉದೇಶಕ್ಕಾಗಿ ವಿವಿಧ ಪ್ರಾಣಿಗಳನ್ನು ಸಾಕಲಾಗುತ್ತದೆ. ಇದನ್ನು ಪ್ರಾಣಿ ಸಾಕಾಣಿಕೆ’ ಎನ್ನಲಾಗಿದೆ.
ಉದಾ : ಪ್ರಾಣಿಗಳ ಉತ್ಪನ್ನಗಳಾದ ಹಾಲು, ಮಾಂಸ, ಮೂಳೆ, ಚರ್ಮ, ಕೂದಲು ಉಣ್ಣೆ ಮುಖ್ಯವಾದವು.

‘ಗಣಿಗಾರಿಕೆ’ ಎಂದರೇನು?

ಖನಿಜ ನಿಕ್ಷೇಪಗಳನ್ನು ಗುರುತಿಸಿ, ಅದರಿಂದ ಖನಿಜಗಳನ್ನು ಹೊರತೆಗೆಯುವ ಪ್ರಕ್ರಿಯೆಗೆ ‘ಗಣಿಗಾರಿಕೆ” ಎನ್ನುತ್ತಾರೆ.

human economic activities geography kannada

ಮಾನವನ ಆರ್ಥಿಕ ಚಟುವಟಿಕೆಗಳು ನೋಟ್ಸ್ । 2nd PUC Geography Notes in Kannada Chapter 3 Free Notes
ತೃತೀಯ ಆರ್ಥಿಕ ಉದ್ಯೋಗಗಳೆಂದರೇನು?

ಪ್ರಾಥಮಿಕ ಹಾಗೂ ದ್ವಿತೀಯ ರಂಗಗಳಿಗೆ ಪೂರಕವಾಗಿರುವ ಉದ್ಯೋಗಗಳನ್ನು ತೃತೀ ಆರ್ಥಿಕ ಉದ್ಯೋಗಗಳೆನ್ನುತ್ತಾರೆ

ಎರಡು ಅಂಕದ ಪ್ರಶ್ನೋತ್ತರಗಳು

ಗಣಿಗಾರಿಕೆಯ ವಿಧಗಳಾವುವು?
  • ತೆರೆದ ಗಣಿ ವಿಧಾನ : ಖನಿಜ ನಿಕ್ಷೇಪದ ಮೇಲ್ಪದರ ತೆಗೆದು ಮಾಡುವ ಗಣಿ
    ಉದಾ : ಕಲ್ಲಿದ್ದಲು, ಕಬ್ಬಿಣದ ಅದಿರು.
  • ಆಂತರಿಕ ಗಣಿಗಾರಿಕೆ : ಭೂ ಮೇಲ್ಮನಿಂದ
    ಆಳದಲ್ಲಿರುವ ಖನಿಜಗಳನ್ನು ಹೊರತೆಗೆಯ ಉದಾ : ಕಲ್ಲಿದ್ದಲು, ಸೀಸ, ಕಬ್ಬಿಣದ ಅದಿರ ಬಳಸುವರು.
  • ಸುರಂಗ ವಿಧಾನ : ಅತಿ ಹೆಚ್ಚು ಳದಲ್ಲಿರುವ ಖನಿಜಗಳನ್ನು ತೆಗೆಯುವರು. ಉದಾ : ಪೆಟ್ರೋಲಿಯಂ, ಸ್ವಾಭಾವಿಕ ಅನಿಲ
ದ್ವಿತೀಯ ಉಉದ್ಯೋಗಗಳ ಪ್ರಾಮುಖ್ಯತೆಯನ್ನು ತಿಳಿಸಿ

ಕೈಗಾರಿಕೆಗಳನ್ನು ದ್ವಿತೀಯ ಆರ್ಥಿಕ ಉದ್ಯೋಗಗಳನ್ನುತ್ತಾರೆ. ಪ್ರಾಕೃತಿವಾಗಿ ದೊರಕುವ ಕಚ್ಚಾ ವಸ್ತುಗಳನ್ನು ಮೌಲ್ಯಯುತವಾದ ವಸ್ತುಗಳಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಈ ಉದ್ಯೋಗಗಳು ಒಳಗೊಂಡಿವೆ. ಹಾಗಾಗಿ ಆರ್ಥಿಕ ಅಭಿವೃದ್ಧಿಗಾಗಿ ಪ್ರಥಮ ಮತ್ತು ತೃತೀಯ ಉದ್ಯೋಗಗಳ ಚಟುವಟಿಕೆಗೆ, ವಿದೇಶಿ ವಿನಿಯಮಯಕ್ಕೂ ಹಾಗೂ ಜನರ ಜೀವನ ಮಟ್ಟ ಉತ್ತಮಗೊಳ್ಳಲೂ ಸಹಕಾರಿಯಾಗಿದೆ.

ಮರ ಕಡಿಯುವ ಉದ್ಯಮ ಸಮತೋಷ್ಣ ವಲಯದಲ್ಲಿ ಏಕೆ ಹೆಚ್ಚು ಅಭಿವೃದ್ಧಿಯಾಗಿದೆ?
  • ವಿಸ್ತಾರವಾಗಿ ದೇಶದಲ್ಲಿ ಒಂದೇ ಜಾತಿಯ ಮರಗಳು
    ಬೆಳೆಯವುದು.ಗೆ ಸೌಲಭ್ಯಗಳಿವೆ.
  • ಉತ್ತಮ ಸಾರಿಗೆ ಸೌಲಭ್ಯಗಳಿವೆ.
  • ಮರವನ್ನು ಕಾಗದ, ಹಾಗೂ ಹಡಗು ನಿರ್ಮಾಣಗಳಿಗೆ ಬಳಕೆ ಮಾಡಲಾಗಿರುತ್ತದೆ.
  • ಅರಣ್ಯ ಉತ್ಪನ್ನಗಳಿಗೆ ಹತ್ತಿರದಲೇ ಕೈಗಾರಿಕೆಗಳಿವೆ.

ಮಾನವನ ಆರ್ಥಿಕ ಚಟುವಟಿಕೆಗಳು

ಮಾನವನ ಆರ್ಥಿಕ ಚಟುವಟಿಕೆಗಳು ನೋಟ್ಸ್ । 2nd PUC Geography Notes in Kannada Chapter 3 Free Notes
2nd puc geography notes in kannada pdf
ಆಹಾರ ಸಂಗ್ರಹಣೆಯ ವೃತ್ತಿಯನ್ನು ಕುರಿತು ಸಂಕ್ಷಿಪ್ತವಾಗಿ ವಿವರಿಸಿ.

ಮನುಷ್ಯ ತನ್ನ ಜೀವನವನ್ನು ರೂಪಿಸಲು, ಮೂಲ ಅವಶ್ಯಕತೆಗಳಾಗಿ ಆಹಾರ, ಉಡುಪು, ವಸತಿಗಾಗಿ ಪ್ರಕೃತಿಯನ್ನು ಅವಲಂಬಿಸಿದ್ದಾನೆ.

  • ಆಹಾರಕ್ಕಾಗಿ ಪಕೃತಿಯಿಂದ ದೊರಕುವ ಹಣ್ಣು, ಗೆಣಸು, ಕಾಯಿ, ಎಲೆ; ಉಡುಪಿಗಾಗಿ :: ತೊಗಟೆ, ಹುಲ್ಲು :ವಸತಿಗಾಗಿ ಮರದ ಕೊಂಬೆ ಮುಂತಾದ ಸಂಗ್ರಹಣೆಯನ್ನು ‘ಆಹಾರ’ ವೃತ್ತಿಗೆ ಸೇರಿಸಲಾಗಿದೆ.
  • ಈ ವೃತ್ತಿ ಅತ್ಯಂತ ಸರಳವಾಗಿದ್ದು ಯಾವುದೇ ರೀತಿಯ ಕೌಶಲ್ಯಗಳ ಅಗತ್ಯವಿರುವುದಿಲ್ಲ
ಮೀನುಗಾರಿಕೆಯ ವಿಧಗಳಾವುವು?

ಮೀನುಗಾರಿಕೆಯನ್ನು ನಿರ್ವಹಿಸುವ ಸ್ಥಳಗಳ ಆಧಾರದ ಮೇಲೆ ಇದನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

  • ಸಿಹಿ ನೀರಿನ ಮೀನುಗಾರಿಕೆ
  • ತೀರ ಪ್ರದೇಶದ ಮೀನುಗಾರಿಕೆ
  • ತೆರೆದ ಸಮುದ್ರದ ಮೀನುಗಾರಿಕೆ

ಮುಂದೆ ಓದಿ…

FAQ

ಆರ್ಥಿಕ ಉದ್ಯೋಗಗಳೆಂದರೇನು?

ಮಾನವ ತನ್ನ ಬೇಡಿಕೆಗಳ ಪೂರೈಕೆಗಾಗಿ ಹಲವಾರು ಚಟುವಟಿಕೆಗಳನ್ನು ರೂಢಿಸಿಕೊಂಡಿದ್ದಾನೆ. ಇವುಗಳನ್ನೇ ‘ಆರ್ಥಿಕ ಚಟುವಟಿಕೆ’ ಅಥವಾ ‘ಉದ್ಯೋಗಗಳೆಂದು ಕರೆಯುತ್ತಾರೆ. ಉದಾ : ಆಹಾರ, ಉಡುಪು, ವಸತಿ

“ಬೇಟೆಗಾರಿಕೆ’ ಎಂದರೇನು?

ಬೇಟೆಗಾರಿಕೆ ಮನುಷ್ಯನ ಪುರಾತನ ವೃತ್ತಿಗಳಲ್ಲಿ ಒಂದು ಆಹಾರ, ಚರ್ಮ, ಮಾರಾಟ, ಹಾಗೂ ಕ್ರೀಡೆಗಾಗಿ ಜೀವಿಗಳನ್ನು ಬೇಟೆಯಾಡಲಾಗುತ್ತಿತ್ತು ಇದನ್ನೇ ‘ಬೇಟೆಗಾರಿಕೆ’ ಎನ್ನಲಾಗಿದೆ.

ಇತರೆ ವಿಷಯಗಳು

Leave a Reply

Your email address will not be published. Required fields are marked *