ಗ್ರಹಣವು ಎಲ್ಲರಿಗೂ ಏಕಕಾಲಕ್ಕೆ ಗೋಚರಿಸುವುದಿಲ್ಲ ಏಕೆ ?
ಭೂಮಿ , ಸೂರ್ಯರ ನಡುವೆ ಚಂದ್ರನು ಬಂದಾಗ , ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದನ್ನು ಸೂರ್ಯಗ್ರಹಣವೆನ್ನುತ್ತಾರೆ .
ಆದರೆ ಇದು ಮೊದಲು ಒಂದು ಪ್ರದೇಶದಲ್ಲಿ ಆರಂಭವಾಗಿ ಅನಂತರ ಪೂರ್ವ ದಿಕ್ಕಿನೆಡೆಗೆ ಚಲಿಸುತ್ತದೆ . ಸ್ವಲ್ಪ ಸಮಯಕ್ಕೆ ಅದು ಸಹಜ ಸ್ಥಿತಿಯಲ್ಲಿ ಕಾಣಿಸುತ್ತದೆ . ಈ ಕಾರಣದಿಂದಲೇ ಸೂರ್ಯಗ್ರಹಣ ಮೊದಲು ಪಶ್ಚಿಮ ದಿಕ್ಕಿನಲ್ಲಿರುವವರಿಗೆ ಗೋಚರಿಸುತ್ತದೆ .
ವಾಸ್ತವಕ್ಕೆ ಯಾವ ಗ್ರಹಣವಾದರೂ , ಆರಂಭದಲ್ಲೇ ಎಲ್ಲಾ ಪ್ರದೇಶಗಳ ಜನರಿಗೂ ಕಾಣಿಸುವುದಿಲ್ಲ , ನಿಧಾನವಾಗಿ ಆಯಾ ಪ್ರದೇಶದವರಿಗೆ ಗೋಚರವಾಗುತ್ತದೆ . ಕೆಲವು ಪ್ರದೇಶಗಳಲ್ಲಿ ಭಾಗಶಃ ಮಾತ್ರ ಗೋಚರಿಸುತ್ತದೆ .
ಭೂಮಿ , ಸೂರ್ಯರ ಮಧ್ಯೆ ಭೂಮಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರ ಗ್ರಹಣವಾಗುತ್ತದೆ . ಇದನ್ನು ಸಹ ಎಲ್ಲಾ ಪ್ರದೇಶದವರು ಏಕಕಾಲಕ್ಕೆ ನೋಡಲು ಅಸಾಧ್ಯ.