tatpurush samas examples in kannada | ತತ್ಪುರುಷ ಸಮಾಸ
ತತ್ಪುರುಷ ಸಮಾಸ
tatpurush samas examples in kannada
ಎರಡು ನಾಮಪದಗಳು ಸೇರಿ ಸಮಾಸವಾಗುವಾಗ , ಉತ್ತರಪದದ ಅರ್ಥವು ಪ್ರಧಾನವಾದರೆ ಅದನ್ನು ತತ್ಪುರುಷ ಸಮಾಸವೆನ್ನುತ್ತೇವೆ .
ಉದಾ : –
ಹಗಲುಗನಸು = ಹಗಲಿನಲ್ಲಿ + ಕನಸು .
ಸಂಜೆಗೆಂಪು = ಸಂಜೆಯ + ಕೆಂಪು
ತಲೆನೋವು = ತಲೆಯಲ್ಲಿ + ನೋವು
ಮರಗಾಲು = ಮರದ + ಕಾಲು
ಬೆಟ್ಟದಾವರೆ = ಬೆಟ್ಟದ + ತಾವರೆ
ಕಣ್ಣುರುಡ = ಕಣ್ಣಿನಿಂದ + ಕುರುಡ
ತೇರುಮರ = ತೇರಿಗೆ + ಮರ
ಕಲ್ಲು ಹಾಸಿಗೆ = ಕಲ್ಲಿನ + ಹಾಸಿಗೆ
ಕಾಲಿನ + ಬಳೆ = ಕಾಲುಬಳೆ -> ಷಷ್ಠಿ ತತ್ಪುರುಷ ಸಮಾಸ
ಸಂಜೆಯ + ಕೆಂಪು = ಸಂಜೆಗೆಂಪು -> ಷಷ್ಠಿ ತತ್ಪುರುಷ ಸಮಾಸ
ಬೆಟ್ಟದ + ತಾವರೆ = ಬೆಟ್ಟದಾವರೆ -> ಷಷ್ಠಿ ತತ್ಪುರುಷ ಸಮಾಸ
ಕಣ್ಣಿನಲ್ಲಿ + ಉರಿ = ಕಣ್ಣುರಿ -> ಸಪ್ತಮಿ ತತ್ಪುರುಷ ಸಮಾಸ
ಹಗಲಿನಲ್ಲಿ + ಕನಸು = ಹಗಲುಗನಸು -> ಸಪ್ತಮಿ ತತ್ಪುರುಷ ಸಮಾಸ
ಸಂಸ್ಕೃತ-ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ:
ಕವಿಗಳಿಂದ + ವಂದಿತ = ಕವಿವಂದಿತ (ತೃತೀಯಾತತ್ಪುರುಷ)
ವ್ಯಾಘ್ರದೆಸೆಯಿಂದ + ಭಯ = ವ್ಯಾಘ್ರಭಯ (ಪಂಚಮೀತತ್ಪುರುಷ)
ಉತ್ತಮರಲ್ಲಿ + ಉತ್ತಮ = ಉತ್ತಮೋತ್ತಮ (ಸಪ್ತಮೀತತ್ಪುರುಷ)
ದೇವರ + ಮಂದಿರ = ದೇವಮಂದಿರ (ಷಷ್ಠೀತತ್ಪುರುಷ)
ಧನದ + ರಕ್ಷಣೆ = ಧನರಕ್ಷಣೆ (ಷಷ್ಠೀತತ್ಪುರುಷ)
ವಯಸ್ಸಿನಿಂದ + ವೃದ್ಧ = ವಯೋವೃದ್ಧ (ತೃತೀಯಾತತ್ಪುರುಷ)
ಪುರುಷರಲ್ಲಿ + ಉತ್ತಮ = ಪುರುಷೋತ್ತಮ
ಮೇಲೆ ವಿವರಣೆ ಮಾಡಿರುವಂತಹ ಸಮಾಸವಾಗಿರುವ ಉದಾಹರಣೆಗಳಲ್ಲಿ ಮಳೆಗಾಲ, ಮರಗಾಲು,
ಬೆಟ್ಟದಾವರೆ-ಈ ಸಮಾಸಗಳಲ್ಲಿ ‘ಕಾಲ’ ಎಂಬಲ್ಲಿಯ ಕಕಾರಕ್ಕೆ ಗಕಾರವೂ, ‘ಕಾಲು’ ಎಂಬಲ್ಲಿ ಕಕಾರಕ್ಕೆ ಗಕಾರವೂ ತಾವರೆ ಎಂಬಲ್ಲಿ ತಕಾರಕ್ಕೆ ದಕಾರವೂ ಆದೇಶಗಳಾಗಿ ಬಂದಿರುವುದನ್ನು ಗಮನಿಸಿರಿ.
ಹೀಗೆ ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಕತಪ ವ್ಯಂಜನಗಳಿಗೆ ಕ್ರಮವಾಗಿ ಗದಬ ವ್ಯಂಜನಗಳೂ,
ಪಬಮ ವ್ಯಂಜನಗಳಿಗೆ ವಕಾರವೂ ಆದೇಶವಾಗಿ ಬರುವುದುಂಟು. ಬಾರದಿರುವುದೂ ಕೆಲವು ಕಡೆಗುಂಟು.
ಈ ವಿಚಾರವನ್ನು ಹಿಂದಿನ ಸಂಧಿಪ್ರಕರಣದಲ್ಲಿ ಆದೇಶ ಸಂಧಿಗಳು ಎಂಬಲ್ಲಿ ವಿಷದವಾಗಿ ಹೇಳಿದೆ. ಜ್ಞಾಪಿಸಿಕೊಳ್ಳಿ.
‘ಅರಮನೆ’ ಎಂಬ ಸಮಸ್ತಪದವನ್ನು ಬಿಡಿಸಿದಾಗ ಅರಸನ+ಮನೆ ಎಂದು ಆಗುವುದು. ಇಲ್ಲಿ ಅರಸನ ಎಂಬ ಪದದ ಅರ್ಥ ಮುಖ್ಯವೋ? ‘ಮನೆ’ ಎಂಬ ಪದದ ಅರ್ಥ ಮುಖ್ಯವೋ? ಎಂದರೆ-ಮನೆ ಎಂಬ ಪದದ ಅರ್ಥವೇ ಮುಖ್ಯ. ಯಾರ ಮನೆ? ಎಂಬ ಪ್ರಶ್ನೆಗೆ ‘ಅರಸನ’ ಸಂಬಂಧವಾದ ಮನೆ ಎಂದು ಗೊತ್ತಾಗುವುದು. ಆದುದರಿಂದ ‘ಮನೆ’ ಎಂಬ ‘ಪದ’ ಈ ಸಮಸ್ತಪದದಲ್ಲಿ ಮುಖ್ಯ.
‘ಕಾಲುಬಳೆ’ ಎಂಬ ಸಮಸ್ತಪದದಲ್ಲೂ ಹೀಗೆಯೆ ಕಾಲಿನ ಸಂಬಂಧವಾದ ‘ಬಳೆ’ ಎಂಬರ್ಥ ಬರುವುದು. ‘ಬಳೆ’ಗಳು ಅನೇಕ ವಿಧ. ಆದರೆ ‘ಕಾಲಿನ’ ಎಂಬ ಪದವು ಕಾಲಿಗೆ ಸಂಬಂಧಿಸಿದ ‘ಬಳೆ’ ಎಂಬ ಪದದ ಅರ್ಥವನ್ನು ಪ್ರಧಾನವೆಂದು ವ್ಯವಸ್ಥೆ ಮಾಡಿ ತೋರಿಸುವುದು.
ಅರಮನೆ, ಕಾಲುಬಳೆ ಈ ಸಮಸ್ತಪದಗಳಲ್ಲಿ ಎರಡೂ ಪದಗಳು ನಾಮಪದಗಳೇ ಆಗಿವೆ ಮತ್ತು ಉತ್ತರದಲ್ಲಿರುವ ಪದಗಳ ಅರ್ಥವೇ ಪ್ರಧಾನವಾಗಿದೆ. ಆದ್ದರಿಂದ ಇದರ ಸೂತ್ರವನ್ನು ಹೀಗೆ ಹೇಳಬಹುದು.
ಸಮಾಸ ಸಮಸ್ತ ಪದವಾಗುವಿಕೆಯನ್ನು ಎಂಟು ವಿಧಗಳಲ್ಲಿ ವಿಂಗಡಿಸುವುದು ಕನ್ನಡದಲ್ಲಿ ರೂಢಿ. ಅವುಗಳಿಗೆ ಬೇರೆ ಬೇರೆ ಹೆಸರುಗಳನ್ನು ಕೊಟ್ಟಿದ್ದಾರೆ.
ಸಮಾಸಗಳು ಒಟ್ಟು -8
(1) ತತ್ಪುರುಷ
(2) ಕರ್ಮಧಾರಯ
(3) ದ್ವಿಗು
(4) ಅಂಶಿ
(5) ದ್ವಂದ್ವ
(6) ಬಹುವ್ರೀಹಿ
(7) ಕ್ರಿಯಾ
(8) ಗಮಕ ಸಮಾಸವೆಂದು ಎಂಟು ವಿಧ.
tatpurush samas examples in kannada
samasa in kannada | Compound Words | ಸಮಾಸಗಳು