stutva sandhi in kannada , ಷ್ಟುತ್ವ ಸಂಧಿ , SDA , FDA , PDO , KAS , KPSC , KSP, ಕನ್ನಡ ಸಂಧಿಗಳು ಮತ್ತು ಸಂಸ್ಕೃತ ಸಂಧಿಗಳು, ALL COMPETITIVE EXAMS NOTES
Stutva Sandhi In Kannada
‘ ಸ’ಕಾರ ತ ವರ್ಗಗಳು ‘ ಷ ‘ ಕಾರ ಟ ವರ್ಗಗಳು . ಮುಂದೆ ಬಂದರೆ ಆಯಾ ವ್ಯಂಜನದ ಅನುನಾಸಿಕವು ಆದೇಶವಾಗುವುದು .
ಉದಾ : – ತಪಷಡ್ವಾಗ = ತಪಸ್ + ಷಡ್ಡಾಗ
ಉಡ್ಡಯನ = ಉತ್ + ಡಯನ
ಷ್ಟುತ್ವ ಸಂಧಿ
stutva sandhi in kannada
samskrutha vyanjan sandhi in kannada | ಸಂಸ್ಕೃತ ವ್ಯಂಜನ ಸಂಧಿಗಳ ವಿಧಗಳು
ಜಶ್ವಸಂಧಿ
ಪೂರ್ವಪದದ ಕೊನೆಯಲ್ಲಿರುವ ವರ್ಗದ ಪ್ರಥಮಾಕ್ಷರಗಳಿಗೆ ಯಾವ ವರ್ಣ ( ಕ , ಚ , ಟ , ತ , ಪ ) ಎದುರಾದರೂ ಅದೇ ವರ್ಗದ ಮೂರನೇ ಅಕ್ಷರ ( ಗ , ಜ , ಡ , ದ , ಬ ) ಆದೇಶವಾಗಿ ಬಂದು ಜಶ್ನ ಸಂಧಿಯಾಗುವುದು . ಪ್ರತಿ ವರ್ಗದ ಮೂರನೇ ಅಕ್ಷರ ಎಂದರ್ಥ .
( 1 ) ದಿಗಂತದಲ್ಲಿ ಪಸರಿಸಿತು .
( 2 ) ಅಜಂತ ಎಂದರೆ ಸ್ವರಾಂತ ಎಂದು ಸಂಜ್ಞೆ
( 3 ) ಷಣ್ಮುಖನಿಗೆ ಷಡಾನನ ಎಂಬ ಹೆಸರೂ ಉಂಟು.
( 4 ) ಆ ಹುಡುಗನ ಹೆಸರು ಸದಾನಂದ ಎಂದು.
( 5 ) ಅಬ್ದ ಎಂದರೆ ಸಾಗರಕ್ಕೆ ಹೆಸರು .
6 ) ವಾಗೇವಿ = ವಾಕ್ + ದೇವಿ .
7 ) ಷಡಂಗ = ಷಟ್ + ಅಂಗ .
8 ) ಸದ್ಭಾವ = ಸತ್ + ಭಾವ
9 ) ಚಿದಾನಂದ = ಚಿತ್ + ಆನಂದ
ಈ ವಾಕ್ಯಗಳಲ್ಲಿ ಬಂದಿರುವ ‘ ದಿಗಂತ ‘ , ‘ ಅಜಂತ ‘ , ‘ ಷಡಾನನ ‘ , ‘ ಸದಾನಂದ ‘ , ‘ ಅಜ್ಜಿ ‘
ಈ ಶಬ್ದಗಳನ್ನು ಬಿಡಿಸಿ ಬರೆದರೆ-
ದಿಕ್ + ಅಂತ = ದಿಗ್ + ಅಂತ = ದಿಗಂತ ( ಪೂರ್ವದ ಕಕಾರಕ್ಕೆ ಗಕಾರಾದೇಶ )
( ಕ್ + ಅ = ಗ್ಅ )
ಅಚ್ + ಅಂತ = ಅಜ್ + ಅಂತ = ಅಜಂತ ( ಚಕಾರಕ್ಕೆ ಜಕಾರಾದೇಶ )
( ಚ್ + ಆ = ” ಜ್ಅ ) .
ಷಟ್ + ಆನನ = ಷಡ್ + ಆನನ = ಷಡಾನನ ( ಟಕಾರಕ್ಕೆ ಡಕಾರಾದೇಶ )
( ಟ್ + ಅ = ಡ್ಅ )
ಸತ್ + ಆನಂದ = ಸದ್ + ಆನಂದ = ಸದಾನಂದ ( ತಕಾರಕ್ಕೆ ದಕಾರಾದೇಶ )
( ತ್ + ಆ = ದ್ಆ )
ಅಪ್ + ಧಿ = ಅಬ್ + ಧಿ = ಅದ್ದಿ ( ಪಕಾರಕ್ಕೆ ಬಕಾರಾದೇಶ )
( ಪ್ + ಧಿ = ” ಬ್ ಧಿ )
samskrutha vyanjan sandhi in kannada
ಶ್ಚುತ್ವ ಸಂಧಿ
‘ ಶ್ಚು ‘ ಎಂದರೆ ಶಕಾರ ಚವರ್ಗಾಕ್ಷರಗಳು . ( ಶ್ = ಶಕಾರ , ಚು = ಚ ಛ ಜ ಝು ಇ ) ಈ ಆರು ಅಕ್ಷರಗಳೇ ‘ ಶ್ಚು ‘ ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ . ಇವುಗಳು ಆದೇಶವಾಗಿ ಬರುವುದೇ ಶ್ಚುತ್ವಸಂಧಿ ಎನಿಸುವುದು .
ಹಾಗಾದರೆ ಇವು ಯಾವ ಅಕ್ಷರಗಳಿಗೆ ಯಾವಾಗ ಆದೇಶವಾಗಿ ಬರುತ್ತವೆಂಬುದನ್ನು ಯೋಚಿಸೋಣ .
ಮನಸ್ + – ಶುದ್ಧಿ = ಮನಶ್ + ಶುದ್ಧಿ = ಮನಶುದ್ಧಿ
( ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ )
ಯಶಸ್ + ಚಂದ್ರಿಕೆ = ಯಶಶ್ + ಚಂದ್ರಿಕೆ = ಯಶಶ್ಚಂದ್ರಿಕೆ
( ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ )
ಲಸತ್ + ಚಿತ್ರ = ಲಸಚ್ + ಚಿತ್ರ = ಲಸಚ್ಚಿತ್ರ
( ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ )
ಸತ್ + ಚಿತ್ರ = ಸಚ್ + ಚಿತ್ರ = ಸಚ್ಚಿತ್ರ
( ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ )
ಬೃಹತ್ + ಛತ್ರ = ಬೃಹಜ್ + ಛತ್ರ = ಬೃಹಕೃತ್ರ
( ತಕಾರಕ್ಕೆ ಛಕಾರ ಪರವಾಗಿ , ತಕಾರಕ್ಕೆ ಚಕಾರಾದೇಶ )
ಅನುನಾಸಿಕ ಸಂಧಿ
ಸೂತ್ರ – ವರ್ಗದ ಪ್ರಥಮಾಕ್ಷರಗಳಿಗೆ (ಕ್ ಚ್ ಟ್ ತ್ ಪ್) ಯಾವುದೇ ಅನುನಾಸಿಕ ಅಕ್ಷರಗಳು ಪರವಾದರೂ, ಅವುಗಳಿಗೆ ಅಂದರೆ ವರ್ಗದ ಪ್ರಥಮಾಕ್ಷರಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳು ( ಙ,ಞ, ಣ, ನ, ಮ) ಆದೇಶವಾಗಿ ಬರುತ್ತವುದಕ್ಕೆ ಅನುನಾಸಿಕ ಸಂಧಿ ಎನ್ನುತ್ತಾರೆ..
( 1 ) ವಾಕ್ + ಮಯ = ವಾಙ್ಮಯ(ಕ್ + ಮ = ಙ್ಮ)
( ಇಲ್ಲಿ ಕಕಾರಕ್ಕೆ ಮಕಾರ ಪರವಾಗಿ ಕಕಾರಕ್ಕೆ ಬಕಾರಾದೇಶವಾಗಿದೆ )
( 2 ) ಷಟ್ + ಮುಖ = ಷಣ್ + ಮುಖ = ಷಣ್ಮುಖ
( ಇಲ್ಲಿ ಟಕಾರಕ್ಕೆ ಮಕಾರ ಪರವಾಗಿ ಟಕಾರಕ್ಕೆ ಣಕಾರಾದೇಶವಾಗಿದೆ )
( 3 ) ಸತ್ + ಮಾನ = ಸನ್ + ಮಾನ = ಸನ್ಮಾನ
( ಇಲ್ಲಿ ತಕಾರಕ್ಕೆ ಮಕಾರ ಪರವಾಗಿ ತಕಾರಕ್ಕೆ ನಕಾರಾದೇಶವಾಗಿದೆ )
( 4 ) ಅಪ್ + ಮಯ = ಅಮ್ + ಮಯ = ಅಮ್ಮಯ
( ಇಲ್ಲಿ ಪಕಾರಕ್ಕೆ ಮಕಾರ ಪರವಾಗಿ ಪಕಾರಕ್ಕೆ ಮಕಾರಾದೇಶವಾಗಿದೆ )
ಮೇಲಿನ ಈ ಉದಾಹರಣೆಗಳನ್ನು ಅವಲೋಕಿಸಿದಾಗ ಪೂರ್ವಶಬ್ದದ ಕೊನೆಯಲ್ಲೆಲ್ಲ ವರ್ಗದ ಮೊದಲನೆಯ ಅಕ್ಷರಗಳಾದ ಕ್ , ಟ್ , ತ್ , ಪ್ ಇತ್ಯಾದಿ ಅಕ್ಷರಗಳಿವೆ . ಎದುರಿಗೆ ಅನುನಾಸಿಕಾಕ್ಷರ ಬಂದಿದೆ . ಆದ ಕಾರಣದಿಂದ ಈ ವರ್ಗದ ಮೊದಲನೆಯ ಅಕ್ಷರಗಳಾದ ಕ ಟ ತ ಪ ಇತ್ಯಾದಿ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕಾಕ್ಷರ ( ಐದನೆಯ ವರ್ಣ ) ಆದೇಶವಾಗಿ ಬಂದಿದೆಯೆಂದು ತಿಳಿಯಬೇಕು . ಅಂದರೆ ವರ್ಗದ ಮೊದಲನೆಯ ವ್ಯಂಜನಕ್ಕೆ ಅದರದೇ ಆದ ಅನುನಾಸಿಕಾಕ್ಷರ ಬರುವಿಕೆಯೇ ಅನುನಾಸಿಕ ಸಂಧಿಯೆನಿಸುವುದು .
ವಿಸರ್ಗಸಂಧಿ
‘ ಅ ‘ ಕಾರದ ಮುಂದಿನ ವಿಸರ್ಗಕ್ಕೆ
1 ) ‘ ಅ ‘ ಕಾರವಾಗಲಿ
2 ) ಮೃದು ವ್ಯಂಜನವಾಗಲಿ ಪರವಾದರೆ ವಿಸರ್ಗದ ಸ್ಥಳದಲ್ಲಿ ‘ ಉ ‘ ಕಾರಾದೇಶವಾಗುತ್ತದೆ . ಬಳಿಕ ‘ ಉ’ಕಾರವು ತನ್ನ ಹಿಂದಿನ ‘ ಅ ‘ ಕಾರದೊಡನೆ ಕೂಡಿ ಗುಣಸಂಧಿಯಂತೆ ಓ ಕಾರವಾ ಗುತ್ತದೆ . ಈ ‘ ಓ ‘ ಕಾರದ ಮುಂದೆ ‘ ಅ ‘ ಕಾರವಿದ್ದರೆ ‘ ಅ ‘ ಲೋಪವಾಗುತ್ತದೆ .
ಉದಾ : –
ಮನಃ + ಅನುರಾಗ = ಮನೋನುರಾಗ
ಮನಃ + ಗಮನ =ಮನೋಗಮನ