samskrutha sandhi examples in kannada, ಸಂಸ್ಕೃತ ಸ್ವರ ಸಂಧಿಗಳು, samskrutha sandhi in kannada, ಸಂಸ್ಕೃತ ಸಂಧಿ ಎಂದರೇನು, FDA, SDA, KPSC, KSP,KEA
Samskrutha Sandhi Examples In Kannada
ನಾವು ದೇಶೀಯ ಶಬ್ದಗಳೊಂದಿಗೆ ಸಂಸ್ಕೃತ ಶಬ್ದಗಳನ್ನು ಬಳಸುತ್ತೇವೆ . ಪೂರ್ವಪದ ಮತ್ತು ಉತ್ತರಪದಗಳೆರಡೂ ಸಂಸ್ಕೃತ ಪದಗಳೇ ಇದ್ದ ಸಂಧಿಗಳನ್ನು ‘ ಸಂಸ್ಕೃತ ಸಂಧಿ ‘ ಎಂದು ಹೆಸರು.
ನಾವು ದೇಶೀಯ ಶಬ್ದಗಳೊಂದಿಗೆ ಸಂಸ್ಕೃತ ಶಬ್ದಗಳನ್ನು ಬಳಸುತ್ತೇವೆ . ಪೂರ್ವಪದ ಮತ್ತು ಉತ್ತರಪದಗಳೆರಡೂ ಸಂಸ್ಕೃತ ಪದಗಳೇ ಇದ್ದ ಸಂಧಿಗಳನ್ನು ‘ ಸಂಸ್ಕೃತ ಸಂಧಿ ‘ ಎಂದು ಹೆಸರು . ಸಂಸ್ಕೃತ ಸಂಧಿಗಳಲ್ಲಿ ಸ್ವರ , ವ್ಯಂಜನ ಸಂಧಿಗಳಿವೆ.
ಸಂಸ್ಕೃತ ಸ್ವರ ಸಂಧಿಗಳು:
ಸವರ್ಣಧೀರ್ಘ ಸಂಧಿ
ಗುಣ ಸಂಧಿ
ವೃದ್ಧಿಸಂಧಿ
ಯಣ್ ಸಂಧಿ
ಸವರ್ಣಧೀರ್ಘ ಸಂಧಿ:
ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
ಉದಾಹರಣೆ :
ಲಕ್ಷೀ + ಈಶ = ಲಕ್ಷ್ಮೀಶ
ದೇವ + ಅಸುರ = ದೇವಾಸುರ
ಸುರ + ಅಸುರ = ಸುರಾಸುರ
ಕವಿ + ಇಂದ್ರ = ಕವೀಂದ್ರ
ಗಿರಿ + ಈಶ = ಗಿರೀಶ
ಮಹಾ + ಆತ್ಮ = ಮಹಾತ್ಮ
ಗುಣ ಸಂಧಿ:
ಅ, ಆ ಕಾರಗಳಿಗೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಏ’ ಕಾರವು, ಉ, ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಓ’ ಕಾರವು, ಋ ಕರವು ಪರವಾದರೆ ಅವೆರಡರ ಸ್ಥಾನದಲ್ಲಿ ‘ಆರ್’ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ‘ಗುಣಸಂಧಿ’ ಎಂದು ಹೆಸರು.
ಉದಾಹರಣೆ :
ಸುರ + ಇಂದ್ರ = ಸುರೇಂದ್ರ
ಮಹಾ + ಋಷಿ = ಮಹರ್ಷಿ
ಧರಾ + ಇಂದ್ರ = ಧರೇಂದ್ರ
ಧರಾ + ಇಂದ್ರ = ಧರೇಂದ್ರ
ಮಹಾ + ಈಶ್ವರ = ಮಹೇಶ್ವರ
ದೇವ + ಋಷಿ = ದೇವರ್ಷಿ
ಚಂದ್ರ + ಉದಯ = ಚಂದ್ರೋದಯ
ವೃದ್ಧಿಸಂಧಿ:
ಅ, ಆ ಕಾರಗಳಿಗೆ ಏ, ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವು, ಓ, ಔ ಕಾರಗಳು ಪರವಾದರೆ ಅವೆರಡರ ಸಾಧನೆದಲ್ಲಿ ಔ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿಯೆನ್ನುವರು.
ಲೋಕ + ಏಕವೀರ = ಲೋಕೈಕವೀರ
ಜನ + ಐಕ್ಯ = ಜನೈಕ್ಯ
ವಿದ್ಯಾ + ಐಶ್ವರ್ಯ = ವಿದ್ಯೈಶ್ವರ್ಯ
ಘನ + ಔದಾರ್ಯ = ಘನೌದಾರ್ಯ
ಮಹಾ + ಔದಾರ್ಯ = ಮಹೌದಾರ್ಯ
ಸಂಸ್ಕೃತ ಸ್ವರ ಸಂಧಿಗಳು
ಯಣ್ ಸಂಧಿ:
ಸಂಧಿ ಮಾಡುವಾಗ ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ, ಕಾರಗಳಿಗೆ ‘ಯ್’ ಕಾರವು, ಉ, ಊ, ಕಾರಗಳಿಗೆ ‘ವ್’ ಕಾರವು, ಋ ಕಾರಕ್ಕೆ ‘ರ್’ ವು ಆದೇಶವಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯಾತೀತ
ಮನು + ಆದಿ = ಮನ್ವಾದಿ
ಕೋಟಿ + ಅಧೀಶ = ಕೋಟ್ಯಾಧೀಶ
ಗತಿ + ಅಂತರ = ಗತ್ಯಂತರ
ಪ್ರತಿ + ಉತ್ತರ = ಪ್ರತ್ಯುತ್ತರ
ಅತಿ + ಆಸೆ = ಅತ್ಯಾಸೆ
ಗುರು + ಆಜ್ಞೆ = ಗುರ್ವಾಜ್ಞೆ