mulabhuta hakkugalu, ಮೂಲಭೂತ ಹಕ್ಕುಗಳು, fundamental rights in kannada, kannada fundamental rights kannada, Kannada Mulabhuta Hakkugalu, SDA FDA, ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು, ಮೂಲಭೂತ ಹಕ್ಕುಗಳ ವಿಧಿಗಳು
Mulabhuta Hakkugalu
ಭಾರತದಲ್ಲಿ ಮುಾಲಭುಾತ ಹಕ್ಕುಗಳನ್ನು ” ಭಾರತದ ಮ್ಯಾಗ್ನಾ ಕಾರ್ಟ್” ಎಂದು ಕರೆಯುತ್ತಾರೆ,
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು.
ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು ‘ಮೂಲಭೂತ’ ಹಕ್ಕುಗಳು ಎಂದು ಕರೆಯಲಾಗುತ್ತದೆ.
ಇವುಗಳನ್ನು ಭಾರತದ ಸಂವಿಧಾನದ ಭಾಗ 3 (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.
ಭಾರತೀಯ ಸಂವಿಧಾನದಿಂದ ಮಾನ್ಯತೆ ಪಡೆದ ಆರು ಮೂಲಭೂತ ಹಕ್ಕುಗಳು
ಸಮಾನತೆಯ ಹಕ್ಕು (ಲೇಖನಗಳು. 14-18)
ಸ್ವಾತಂತ್ರ್ಯದ ಹಕ್ಕು (ಲೇಖನಗಳು. 19-22)
ಶೋಷಣೆಯ ವಿರುದ್ಧದ ಹಕ್ಕು(ಲೇಖನಗಳು. 23-24)
ಧರ್ಮದ ಸ್ವಾತಂತ್ರ್ಯದ ಹಕ್ಕು (ಲೇಖನಗಳು. 25-28)
ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು (ಲೇಖನಗಳು. 29-30), ಮತ್ತು
ಸಾಂವಿಧಾನಿಕ ಪರಿಹಾರಗಳ ಹಕ್ಕು (ಲೇಖನಗಳು. 32-35)
1. ಸಮಾನತೆಯ ಹಕ್ಕು
14, 15, 16, 17, 18ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.
ವಿಧಿ 14- ಕಾನೂನಿನ ಮುಂದೆ ಸರ್ವರೂ ಸಮಾನರು, ಕಾನೂನಿಗಿಂತ ಶ್ರೇಷ್ಟರು ಯಾರೂ ಇಲ್ಲ.. ಹಾಗಾಗಿ ಕಾನೂನಿಗೆ ಸರ್ವರೂ ತಲೆಬಾಗಲೇಬೇಕು. ಕಾನೂನು ಯಾರಿಗೂ ಅಸಮಾನತೆಯನ್ನು ಬೆಂಬಲಿಸಿಲ್ಲ.. ೧೪ನೇ ವಿಧಿಯು ಇಂಗ್ಲೆಂಡಿನ ರೂಲ್ ಆಫ್ ಲಾ ಎಂಬುದಕ್ಕೆ ಹತ್ತಿರವಾಗಿದೆ.
14 ವಿಧಿ–ಕಾನೂನಿನ ಮುಂದೆ ಎಲ್ಲರು ಸಮಾನರು
15ವಿಧಿ–ತಾರತಮ್ಯವನ್ನು ನಿಶೆಧಿಸಿದೆ(ಜಾತಿ.ಲಿಂಗ.ಭಾಷೆ.ಹುಟ್ಟಿದಸ್ತಳದ ಆಧಾರದ ಮೆಲೆ)
16 ವಿಧಿ– ಸಾವ್ರಜನಿಕ ಹುದ್ದೆಗಳಲ್ಲಿ ಸಮಾನ ಅವಕಾಶ ನಿಡ ಬೆಕೆ೦ದು ತಿಳಿಸುತ್ತದೆ
17 ವಿಧಿ–ಅಸ್ಪಶ್ಯತೆ ನಿಷೇಧಿಸಲಾಗಿದೆ
18 ವಿಧಿ–ಬಿರುದುಗಳ ರದ್ಧತಿ ಎ೦ದು ತಿಳಿಸುತ್ತದೆ (ಮಿಲಿಟರಿ ಮತ್ತು ಸರ್ಕಾರಿ ಬಿರುದುಗಳನ್ನು ಬಿಟ್ಟು)
2. ಸ್ವಾತಂತ್ರ್ಯದ ಹಕ್ಕು:-
ವಿಧಿ 19 ರಿಂದ 22ರ ವರೆಗೆ ಸ್ವಾತಂತ್ರ್ಯದ ಹಕ್ಕನ್ನು ವಿವರಿಸುತ್ತದೆ.
19ನೇ ವಿಧಿಯು ಆರು ಸ್ವಾತಂತ್ರ್ಯಗಳನ್ನು ನೀಡಿದೆ.
19, 20, 21, 22ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.
ಸಂವಿದಾನದ 21 ರಿಂದ 22 ನೇ ವಿಧಿಗಳು ವ್ಯಕ್ತಿ ಸ್ವಾತಂತ್ರದ ಬಗ್ಗೆ ವಿವರಣೆಗಳನ್ನೂ ನೀಡಿವೆ ಈ ಹಕ್ಕಿಗೆ ಮೂಲಭೂತ ಹಕ್ಕುಗಳಲ್ಲೆ ಮಹತ್ವವಾದ ಸ್ಥಾನವಿದೆ.
19 ನೇ ವಿಧಿಯು ಆರು ಸ್ವಾತಂತ್ರ್ಯಗಳನ್ನು ನೀಡಿದೆ ಅವುಗಳು ಈ ಕೆಳಗಿನಂತಿವೆ:
mulabhuta hakkugalu
1.ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ.
2. ಅಸ್ತ್ರಗಳಿಲ್ಲದೆ ಶಾಂತಿಯುತವಾಗಿ ಒಂದೆಡೆ ಸೇರುವ ಸ್ವಾತಂತ್ರ್ಯ.
3. ಸಂಘ ಮತ್ತು ಸಂಸ್ಥೆಗಳನ್ನು ರಚಿಸುವ ಸ್ವಾತಂತ್ರ್ಯ
4. ಭಾರತದಾದ್ಯಂತ ಚಲಿಸುವ ಸ್ವಾತಂತ್ರ್ಯ
5. ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಮತ್ತು ಖಾಯಂ ನೆಲೆಸುವ ಸ್ವಾತಂತ್ರ್ಯ
6. ಯಾವುದೇ ವೃತ್ತಿಯನ್ನು ನಡೆಸುವ, ಅಥವಾ ಯಾವುದೇ ವಾಣಿಜ್ಯ ಅಥವಾ ವ್ಯವಹಾರದಲ್ಲಿ ತೊಡಗುವ ಹಕ್ಕು
3. ಶೋಷಣೆಯ ವಿರುದ್ಧ ಹಕ್ಕು
23, 24ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ
ಮಾನವ ಜೀವಿಗಳ ಮಾರಾಟ ಮತ್ತು ಅನೈತಿಕ ಕಾರ್ಯಗಳಿಗೆ ತಳ್ಳುವುದರ ನಿಷೇದ.
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ ಗಣಿಗಳಲ್ಲಿ ಹಾಗೂ ಇನ್ನಿತರ ಹಾನಿಕಾರಕ ವೃತ್ತಿಗಳಲ್ಲಿ ತೊಡಗಿಸುವುದರ ಮೇಲೆ ನಿಷೇದ.
4.ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
25, 26, 27, 28ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.
ಯಾವುದೇ ಧರ್ಮವನ್ನು ಸ್ವೀಕರಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕು
ಯಾವುದೇ ನಿರ್ದಿಷ್ಠ ಧರ್ಮವನ್ನು ಪ್ರಚಾರ ಮಾಡಲು ತೆರಿಗೆ ನೀಡುವಿಕೆಯಿಂದ ಸ್ವಾತಂತ್ರ್ಯ
ಧಾರ್ಮಿಕ ವಿಷಯಗಳ ನಿರ್ವಹಣೆಯ ಸ್ವಾತಂತ್ರ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಬೋದನೆ ಅಥವಾ ಪೂಜಾ ಸಮಾರಂಭಗಳಲ್ಲಿ ಹಾಜರಾಗುವಿಕೆಯಿಂದ ವಿನಾಯತಿ
5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು
mulabhuta hakkugalu
29, 30ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.
ಅಲ್ಪಸಂಖ್ಯಾತರ ಭಾಷೆ, ಹಸ್ತಾಕ್ಷರ ಮತ್ತು ಸಂಸ್ಕೃತಿಯ ರಕ್ಷಣೆ.
ಅಲ್ಪ ಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕು.
ಸರ್ಕಾರಿ ಅಥವಾ ಸರ್ಕಾರದಿಂದ ಧನ ಸಹಾಯ ಪಡೆಯುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಧರ್ಮ, ಜನಾಂಗ ಜಾತಿ ಅಥವಾ ಭಾಷಾ ಅಧಾರದ ಮೇಲೆ ಪ್ರವೇಶ ನಿರಾಕರಿಸುವುದರ ಮೇಲೆ ನಿಷೇದ.
6. ಸಂವಿಧಾನಾತ್ಮಕ ಪರಿಹಾರಗಳ ಹಕ್ಕು
(ವಿಧಿ 32)
ಈ ಹಕ್ಕು ಮೇಲಿನ ಎಲ್ಲಾ ಹಕ್ಕುಗಳು ಅನುಷ್ಥಾನಕ್ಕೆ ಸಂವಿಧಾನಿಕ ಪರಿಹಾರವನ್ನು ಪಡೆಯುವ ಅವಕಾಶವನ್ನು ಕಲ್ಪಸಿಕೊಡುತ್ತದೆ.
ಮತ್ತು ಡಾ/ಬಿ.ಆರ್.ಅಂಬೇಡ್ಕರ 32 ವಿಧಿಯನ್ನು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಕರೆದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂದಿಸಿದ ಇತರೆ ಲಿಂಕ್:
♦ ಕರ್ನಾಟಕದ 31 ಜಿಲ್ಲೆಗಳು ಮತ್ತು ವಿಭಾಗಗಳು