karmadharaya samas examples in kannada | ಕರ್ಮಧಾರೆಯ ಸಮಾಸ

ಕರ್ಮಧಾರೆಯ ಸಮಾಸ

karmadharaya samas examples in kannada | ಕರ್ಮಧಾರಯ ಸಮಾಸ

karmadharaya samas in kannada, karmadharaya samas examples in kannada | ಕರ್ಮಧಾರಯ ಸಮಾಸ, Compound Words ಸಮಾಸಗಳು, Examples of karmadhareya

ಕರ್ಮಧಾರಯ ಸಮಾಸ:- “ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು.”
ಇದರಲ್ಲೂ ಉತ್ತರಪದದ ಅರ್ಥವೇ ಪ್ರಧಾನವಾಗಿರುವುದು.

ಉದಾ : –

ಕೆಂಪಾದ + ತಾವರೆ = ಕೆಂದಾವರೆ

ಕರಿದು + ಮೋಡ = ಕಾರ್ಮೋಡ

ಕೆಚ್ಚನೆ + ಪವಳ = ಕೆಂಬವಳ

ಮುಖವು + ಕಮಲದಂತೆ = ಕಮಲಮುಖ

ನಳನೆಯ + ರಾಜ = ನಳರಾಜ

ಹಿರಿದು + ಜೇನು = ಹೆಚ್ಚೇನು

ಇಪಾದ + ಸ್ವರ = ಇಂಚರ

ಇನಿದು + ಮಾವು = ಇಮ್ಮಾವು

ಮೇಲಿನ ಈ ಉದಾಹರಣೆಗಳನ್ನು ನೋಡಿದರೆ-ದೊಡ್ಡವನು, ದೊಡ್ಡವಳು, ಹಿರಿಯರು, ಚಿಕ್ಕವರು ಇತ್ಯಾದಿ ಪದಗಳು

ಕ್ರಮವಾಗಿ ಹುಡುಗನು, ಹೆಂಗಸು, ಮಕ್ಕಳು, ಮಕ್ಕಳಿಂದ-ಎಂಬ ಪದಗಳಿಗೆ ವಿಶೇಷಣಗಳಾಗಿವೆ. ನಾಲ್ಕು ಕಡೆಯಲ್ಲೂ ವಿಭಕ್ತಿಗಳು

ಸಮನಾಗಿವೆ. ಅಂದರೆ-ದೊಡ್ಡವರು ಎಂಬುದು ಪ್ರಥಮಾವಿಭಕ್ತಿಯಾದರೆ ಹುಡುಗನು ಎಂಬುದೂ ಪ್ರಥಮಾವಿಭಕ್ತಿಯಾಗಿದೆ.

ಚಿಕ್ಕವರಿಂದ ಎಂಬುದು ತೃತೀಯಾವಿಭಕ್ತಿಯಾದರೆ ಮಕ್ಕಳಿಂದ ಎಂಬದೂ ತೃತೀಯಾವಿಭಕ್ತಿಯೇ ಆಗಿದೆ. ವಚನಗಳೂ (ಏಕವಚನ, ಬಹುವಚನಗಳೂ)

ಸಮಾನವಾಗಿಯೇ ಇವೆ. ಅಲ್ಲದೆ ಲಿಂಗಗಳೂ ಸಮನಾಗಿವೆ. ಅಂದರೆ – ಪೂರ್ವೋತ್ತರ ಪದಗಳು ಲಿಂಗ, ವಚನ,

ವಿಭಕ್ತಿಗಳಿಂದ ಸಮನಾಗಿರುತ್ತವೆ ಎಂದು ಅರ್ಥ. ಈ ಸಮಾಸದ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಕನ್ನಡ ಕನ್ನಡ ಪದಗಳು ಸೇರಿ ಸಮಾಸವಾಗಿರುವುದಕ್ಕೆ:

ಹಳೆಯದು + ಕನ್ನಡ = ಹಳೆಗನ್ನಡ (ಕಕಾರಕ್ಕೆ ಗಕಾರಾದೇಶ)

ಹಿರಿದು + ಜೇನು = ಹೆಜ್ಜೇನು (ಕಕಾರಕ್ಕೆ ಗಕಾರಾದೇಶ)

ಹಿರಿದು + ಮರ = ಹೆಮ್ಮರ (ಸಕಾರಕ್ಕೆ ಚಕಾರಾದೇಶ)

ಇನಿದು + ಸರ = ಇಂಚರ (ಸಕಾರಕ್ಕೆ ಚಕಾರಾದೇಶ)

ಮೆಲ್ಲಿತು + ನುಡಿ = ಮೆಲ್ನುಡಿ (ಮಕಾರಕ್ಕೆ ವಕಾರಾದೇಶ)

ಮೆಲ್ಲಿತು + ಮಾತು = ಮೆಲ್ವಾತು (ಮಕಾರಕ್ಕೆ ವಕಾರಾದೇಶ)

ಬಿಳಿದು + ಕೊಡೆ = ಬೆಳ್ಗೊಡೆ (ಕಕಾರಕ್ಕೆ ಗಕಾರಾದೇಶ)

ಮೆಲ್ಲಿತು + ಪಾಸು = ಮೆಲ್ವಾಸು (ಪಕಾರಕ್ಕೆ ವಕಾರಾದೇಶ)

karmadharaya samas in kannada


ಮೇಲಿನ ಕನ್ನಡ ಸಮಾಸಗಳಲ್ಲೆಲ್ಲ ಪೂರ್ವಪದಗಳು ವಿಶೇಷಣಗಳಾಗಿದ್ದು ಉತ್ತರಪದಗಳು ವಿಶೇಷ್ಯಗಳಾಗಿವೆ. ಇವುಗಳಿಗೆ ವಿಶೇಷಣ ಪೂರ್ವಪದ ಕರ್ಮಧಾರಯ ಎಂದು ಸ್ಪಷ್ಟಪಡಿಸಿ ಹೇಳುವ ಪರಿಪಾಠವುಂಟು.

ಕರ್ಮಧಾರೆಯ ಸಮಾಸ

ಸಂಸ್ಕೃತ ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ

ಮತ್ತವಾದ + ವಾರಣ = ಮತ್ತವಾರಣ (ಮದ್ದಾನೆ)

ಶ್ವೇತವಾದ + ವಸ್ತ್ರ = ಶ್ವೇತವಸ್ತ್ರ (ಬಿಳಿಯವಸ್ತ್ರ)

ಶ್ವೇತವಾದ + ಛತ್ರ = ಶ್ವೇತಛತ್ರ (ಬಿಳಿಯಕೊಡೆ)

ಬೃಹತ್ತಾದ + ವೃಕ್ಷ = ಬೃಹದ್ವೃಕ್ಷ (ದೊಡ್ಡಗಿಡ)

ಕರ್ಮಧಾರಯ ಸಮಾಸ

ಮೇಲಿನ ಸಂಸ್ಕೃತ ಸಮಾಸಗಳಲ್ಲೆಲ್ಲ ಪೂರ್ವಪದಗಳು ವಿಶೇಷಣಗಳಾಗಿದ್ದು ಉತ್ತರಪದಗಳು ವಿಶೇಷ್ಯಗಳಾಗಿವೆ. ಇವುಗಳಿಗೆ ವಿಶೇಷಣ ಪೂರ್ವಪದ ಕರ್ಮಧಾರಯ ಎಂದು ಸ್ಪಷ್ಟಪಡಿಸಿ ಹೇಳುವ ಪರಿಪಾಠವುಂಟು.

ಕರ್ಮಧಾರಯ ಸಮಾಸದಲ್ಲಿ ಉಪಮಾನೋಪಮೇಯಭಾವ ಸಂಬಂಧದಿಂದಲೂ ಪೂರ್ವೋತ್ತರ ಪದಗಳಿರುತ್ತವೆ.
ತಾವರೆಯಂತೆ + ಕಣ್ಣು = ತಾವರೆಗಣ್ಣು (ಉಪಮಾನಪೂರ್ವಪದ ಕರ್ಮಧಾರಯ)
ಪುಂಡರೀಕದಂತೆ + ಅಕ್ಷಗಳು = ಪುಂಡರೀಕಾಕ್ಷಗಳು (ಉಪಮಾನಪೂರ್ವಪದ ಕರ್ಮಧಾರಯ)

ಇನ್ನು ಕೆಲವು ಕಡೆ ಸಂಭಾವನೆ ಮಾಡಿದಾಗ ಅಂದರೆ ಊಹೆ ಮಾಡಿದಾಗ (ಇಂಥ ಹೆಸರಿದೆ ಎಂದು ಊಹೆ ಮಾಡಿ ಹೇಳಿದಾಗ) ಕರ್ಮಧಾರಯ ಸಮಾಸವಾಗುವುದು. ಇವು ಸಂಭಾವನಾಪೂರ್ವಪದ ಕರ್ಮಧಾರಯ ಸಮಾಸಗಳೆನಿಸುವುವು.
ಕಾವೇರೀ ಎಂಬ ನದಿ = ಕಾವೇರೀನದಿ.
ನಳನೆಂಬರಾಜ = ನಳರಾಜ.
ಸ್ತ್ರೀ ಎಂಬ ದೇವತೆ = ಸ್ತ್ರೀದೇವತೆ.
ಭೂಮಿಯೆಂಬ ಮಾತೆ = ಭೂಮಾತೆ.
ವಿಂಧ್ಯವೆಂಬ ಪರ್ವತ = ವಿಂಧ್ಯಪರ್ವತ.
ಈಗ ಕೆಳಗೆ ಕೆಲವೊಂದು ಕರ್ಮಧಾರಯ ಸಮಸ್ತಪದಗಳ ಪಟ್ಟಿಯನ್ನೇ ಕೊಟ್ಟಿದೆ. ಇವೆಲ್ಲ ಹಳಗನ್ನಡಕಾವ್ಯಗಳಲ್ಲಿ ವಿಶೇಷವಾಗಿ

ಪ್ರಯೋಗಿಸಲ್ಪಡುತ್ತವೆ. ಅಲ್ಪ ಸ್ವಲ್ಪ ಹಳಗನ್ನಡ ಗದ್ಯ ಪದ್ಯ ಭಾಗಗಳನ್ನು ಓದುವ ನೀವು ಇವುಗಳ ಸ್ಥೂಲಪರಿಚಯ ಮಾಡಿಕೊಂಡರೆ ಸಾಕು.

ಕರ್ಮಧಾರೆಯ ಸಮಾಸ

 ಚೆಂಗಣಗಿಲೆ, ಕೆಂಗಣಗಿಲೆ, ಚೆಂದೆಂಗು, ಕೆಂದೆಂಗು, ಚೆಂಬವಳ್, ಚೆಂದಳಿರ್, ಕೆಂದಳಿರ್, ಕೇಸಕ್ಕಿ, ಪೆರ್ಮರ್, ಪೆರ್ಬಾಗಿಲ್,

ಕೆಮ್ಮಣ್ಣು, ಕೆಂಜೆಡೆ, ನಿಡುಗಣ್, ನಿಟ್ಟುಸಿರ್, ನಿಟ್ಟೋಟ, ಕೆಮ್ಮುಗಿಲ್, ಕೆನ್ನೀರ್, ಬೆನ್ನೀರ್, ಬೆಂಬೂದಿ, ಬೆಂಗದಿರ್, ತಂಗದಿರ್,

ಪೇರಾನೆ, ಪೇರಡವಿ, ಪೇರಾಲ, ತೆಳ್ವಸಿರ್, ಕಿಸುಮಣ್, ಪೆರ‍್ವಿದಿರ್, ಪರ‍್ವೊದರ್, ತೆಳ್ಗದಂಪು, ಒಳ್ಗನ್ನಡ, ಬೆಳ್ಮುಗಿಲ್, ಬಲ್ಮುಗುಳ್, ಬೆಳ್ದಾವರೆ, ಕಟ್ಟಿರುಳ್, ಕಟ್ಟಿರುವೆ,

ಕಟ್ಟಾಳ್, ತಣ್ಣಿಳಲ್, ತಂಬೆಲರ್, ತಂಗಾಳಿ

karmadharaya samas

Leave a Reply

Your email address will not be published. Required fields are marked *