Kannada Quotes About Life, ಜೀವನದ ನುಡಿಮುತ್ತುಗಳು, baduku kannada quotes , ಜೀವನದ ಹಿತನುಡಿಗಳು, ಜೀವನದ ನೋವಿನ ಕವನಗಳು, jeevanada quotes in kannada, jeevanada kavanagalu kannada
Kannada Quotes About Life
ಜೀವನಕ್ಕೆ ಸಂಬಂದಿಸಿದ ನುಡಿಮುತ್ತುಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಜೀವನದ ನುಡಿಮುತ್ತುಗಳು
ತಂದೆ ತಾಯಿ ನಮಗೆ ಏನೇ ಆಸ್ತಿ ಮಾಡಿದರೂ ಜೀವನ ನಮ್ಮ ಸ್ವಂತ ಕೆಲಸದ ಮೇಲೆ ನಿಂತಿರಬೇಕು, ಎಷ್ಟು ಸಂಬಳ ಬರುತ್ತೆ ಅನ್ನೋದು ಮುಖ್ಯವಲ್ಲ. ಕೆಲಸ ಮಾಡ್ತಾ ಇದ್ದೀವಾ ಅನ್ನೋದು ಮುಖ್ಯ. ಯಾಕೆಂದರೆ ಮನುಷ್ಯನಿಗೆ ಕೆಲಸ ಇಲ್ಲ ಅಂದ್ರೆ ಅವನಿಗೆ ಅವನದೇ ಆದ ಜೀವನದಲ್ಲಿ ತೃಪ್ತಿ ಇರಲ್ಲ..

‘ಬಾಗಿಲು’ ಅತಿಥಿಗಳನ್ನು ಸ್ವಾಗತಿಸು ಎಂದು ಹೇಳುತ್ತದೆ. ‘ಗಡಿಯಾರ’ ಕಾಲಚಕ್ರದ ಮರ್ಮವನ್ನು ಅರ್ಥ ಮಾಡಿಕೊ ಎಂದು ಹೇಳುತ್ತದೆ. ‘ಕಿಡಕಿಗಳು ದೂರ ದೃಷ್ಟಿ ಇರಲಿ, ಜಗತ್ತನ್ನು ಅರ್ಥ ಮಾಡಿಕೊಳ್ಳಲು ಎಂದು ಹೇಳುತ್ತವೆ. ‘ದೇವಸ್ಥಾನ’ ಹೇಳುತ್ತದೆ, ಪವಿತ್ರತೆಯನ್ನು ಇರಿಸಿಕೊ, ನಾಮ ಸ್ಮರಣೆ ಮಾಡಲು ಎಂದು. ‘ಮಾಳಿಗೆ ಹೇಳುತ್ತದೆ, ಉಚ್ಚ ವಿಚಾರ ಇರಿಸಿಕೊ, ಸಫಲತೆಯ ಶಿಖರ ಏರಲು ಎಂದು. ಆದರೆ..ಭೂಮಿ ಹೇಳುತ್ತದೆ, ನಿನ್ನ ಕಾಲುಗಳು ನನ್ನ ಮೇಲೇ..ಇರಲೆಂದು, ಕಾರಣ ಅಹಂಕಾರ ಬಾರದಿರಲಿ ಎಂದು.

ಕೆಲವೊಬ್ಬರು ಜೀವನವನ್ನು ಕಲಿಸುತ್ತಾರೆ. ಆದ್ರೆ ಜೀವನದ ಉದ್ದಕ್ಕೂ ಇರುವುದಿಲ್ಲ.

baduku kannada quotes
ಕೆಲವರಿಗೆ ನಮ್ಮನ್ನು ತುಳಿಯೋ ಚಟ.. ಆದರೆ ನನಗೆ ಅವರ ಮುಂದೆ ಬೆಳಿಯೋ ಹಠ…

ರಾತ್ರಿ ಮಲಗಿದರೆ ಬೆಳಗ್ಗೆ ಎಳುತ್ತೇವೆ ಎನ್ನುವ ಗ್ಯಾರಂಟಿ ಇಲ್ಲದ ಬದುಕುಗಳು ನಮ್ಮವು ಪ್ರಾಣ ಇದ್ದರೇನು, ಹೋದರೇನು ನಿಯತ್ತಾಗಿ ಒಂದು ದಿನ ಬದುಕಿದರೆ ಸಾಕು ಜೀವನದ ಅರ್ಥವೇ ಬದಲಾಗುತ್ತದೆ ..

ಕೋಪದಲ್ಲಿ ದೂರ ಹೋದವರು ಮರಳಿ ಬಂದರು ಬರಬಹುದು, ಆದರೆ ನೋವ ಮನದಲ್ಲಿ ಬಚ್ಚಿಟ್ಟು ನಗು ನಗುತ್ತಾ ದೂರ ಹೋದವರು ಎಂದಿಗೂ ಮರಳಿ ಬರುವುದಿಲ್ಲ!!

ಜೀವನದ ನೋವಿನ ಕವನಗಳು
ನೀನು ಒಳ್ಳೆಯವನಾಗಲು ಇಚ್ಛಿಸುವೆಯಾದರೆ, ನೀನು ಕೆಟ್ಟವನು ಎಂಬುದನ್ನು ಮೊದಲು ನಂಬಬೇಕು

ನಿಮ್ಮ ಮೇಲೆ ನೀವು ಅವಲಂಬಿಸಿ ಹಾಗೂ ಧೈರ್ಯ ನಿಮ್ಮೊಳಗೇ ಹುಟ್ಟಬೇಕೆಂಬುದನ್ನು ತಿಳದಿರಿ, ಅದು ಸಮಯ ತೆಗೆದುಕೊಳ್ಳುತ್ತದೆ ಆದರೆ ನೀವು ಅದಕ್ಕಾಗಿ ಕೆಲಸ ಮಾಡಲೇಬೇಕು

ವಿದ್ಯೆ ಗಳಿಸಿ ಪಂಡಿತನಾಗು, ಹಣ ಗಳಿಸಿ ಕೋಟ್ಯಾಧೀಶನಾಗು, ಪ್ರೀತಿ ಗಳಿಸಿ ಜನ ನಾಯಕನಾಗು, ಆದರೆ ಬಳಲಿ ಬಂದವರಿಗೆ ನೆರಳು ನೀಡದ ಮುಳ್ಳಿನ ಮರವಾಗಬೇಡ. `ಫಲಭರಿತ ವೃಕ್ಷದಂತಾಗು!!

ಬೇಡದ ಚಿಂತೆಗಳನ್ನ ತಲೆಯಲ್ಲಿ ತುಂಬಿಕೊಂಡರೆ, ಅದು ದೇಹವನ್ನು ಆವರಿಸಿ, ನೀನು ಮೇಲೇಳಲು ಸಾಧ್ಯವಾಗದಂತೆ ಮಾಡುತ್ತದೆ…!!

jeevanada quotes in kannada
ದುಃಖ ಯಾರಿಗೆ ಇಲ್ಲ ಹೇಳಿ ಆಗೋದೆಲ್ಲ ಒಳ್ಳೇಯದಕ್ಕೆ ನಗ್ತಾ ಇರು ಯಾವಾಗಲೂ, ಬೆವರಹನಿ ಭರವಸೆ ಕೊಡುತ್ತೆ ಕಣ್ಣೀರಹನಿ ಬದುಕು ಕಲಿಸುತ್ತೆ ಪ್ರತಿ ನೋವು ಒಂದು ಪಾಠ ಕಲಿಸುತ್ತೆ ಪ್ರತಿ ಪಾಠ ವ್ಯಕ್ತಿಯನ್ನ ಬದಲಿಸುತ್ತೆ…!

ಜೀವನದಲ್ಲಿ ಹಣದ ಕೊರತೆ ಇದ್ದರೂ, ಗುಣದ ಕೊರತೆ ಇರಬಾರದು,ಏಕೆಂದರೇ, ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ..!!

ದಾರಿ ತಪ್ಪಿದರೆ ಹಿಂದಿರುಗಿ ಸರಿ ದಾರಿಯನ್ನು ಕಂಡುಕೋಳ್ಬಹುದು. ಬಾಯಿ ತಪ್ಪಿದರೆ ಆಡಿದ ಮಾತು ಯಾವತ್ತು ಹಿಂತಿರುಗಿ ಬರುವುದಿಲ್ಲ.

jeevanada kavanagalu kannada
ಕಷ್ಟ ಸುಖ ಎರಡೂ ಪರಿಸ್ಥಿತಿಯಲ್ಲಿ ಬದುಕುವುದು ಜೀವನದ ಒಂದು ಭಾಗವಾದರೆ,ಎರಡೂ ಸನ್ನಿವೇಶಗಳಲ್ಲೂ ನಗು ನಗುತ್ತಿರುವುದಿದೆಯಲ್ಲಾ ಅದು ಬದುಕುವ ನೈಜ ಕಲೆ. ಈ ಕಲೆಯನ್ನು ನೀವು ಅಳವಡಿಸಿಕೊಳ್ಳಿ..

ನೀನು ಎಷ್ಟೇ ಒಳ್ಳೆಯವನಾಗಿರು ನಿನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿ ಇದ್ದೇ ಇರುತ್ತಾನೆ.

ಸಂಬಂದಿಸಿದ ಇತರೆ ವಿಷಯಗಳು
- ಗುಡ್ ಮಾರ್ನಿಂಗ್ ಕನ್ನಡ ಕವನಗಳು
- ಶುಭ ಮುಂಜಾನೆ ಸಂದೇಶಗಳು
- ಗುಡ್ ಮಾರ್ನಿಂಗ್ ಕನ್ನಡ ಕವನಗಳು
- ಕನ್ನಡ ರಾಜ್ಯೋತ್ಸವದ ಬಗ್ಗೆ ಕವನಗಳು
- ದೀಪಾವಳಿ ಹಬ್ಬದ ಶುಭಾಶಯಗಳು, ಕವನಗಳು
- ಕನ್ನಡ ರಾಜ್ಯೋತ್ಸವ ನುಡಿಮುತ್ತುಗಳು
- ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು
ಅತ್ಯಂತ ಉತ್ತಮ ಸರ್