kannada ekavachana bahuvachana | ekavachana bahuvachana | ವಚನಗಳು

kannada ekavachana bahuvachana

kannada ekavachana bahuvachana | ekavachana bahuvachana | ವಚನಗಳು

kannada ekavachana bahuvachana, ekavachana bahuvachana, singular and plural in kannada, ಬಹುವಚನ ರೂಪ, ಏಕವಚನ ರೂಪ , FDA, SDA, KAS, PDO, KPSC

spardhavani telegram
spardhavani telegram

ವಚನಗಳು

ವಸ್ತು , ಪ್ರಾಣಿ ಅಥವಾ ವ್ಯಕ್ತಿಗಳ ಸಂಖ್ಯೆಯ ತಿಳಿಸುವ ಶಬ್ದಗಳನ್ನು ‘ ವಚನ ‘ ಎಂದು ಕರೆಯುತ್ತೇವೆ . ಇದು ಸಂಖ್ಯೆಯನ್ನು ಬೋಧಿಸುವ ಪ್ರತ್ಯಯವಾಗಿದೆ . ವಚನಗಳಲ್ಲಿ

1 ) ಏಕವಚನ ಮತ್ತು

2 ) ಬಹುವಚನ  ಎಂದು ಎರಡು ಪ್ರಕಾರಗಳು

1 ) ಏಕವಚನ ಮತ್ತು

ಒಂದು ವಸ್ತು ಎಂದು ಹೇಳುವ ಶಬ್ದಗಳೆಲ್ಲ ಏಕವಚನಗಳು. ಒಂದಕ್ಕಿಂತ ಹೆಚ್ಚಾದ ವಸ್ತುಗಳೆಂದು ತಿಳಿಸುವ ಶಬ್ದಕ್ಕೆ ಬಹುವಚನವೆನ್ನುತ್ತೇವೆ.

2 ) ಬಹುವಚನ

ಒಂದಕ್ಕಿಂತ ಹೆಚ್ಚು ವಸ್ತು , ಸ್ಥಳ ಅಥವಾ ವ್ಯಕ್ತಿಗಳನ್ನು ಸೂಚಿಸುವುದಕ್ಕೆ ಬಹುವಚನ ‘ ಎನ್ನುವರು . ಇದು ಬಹುತ್ವವನ್ನು ಸೂಚಿಸುತ್ತದೆ . ಉದಾ : ರಾಣಿಯರು , ಗೆಳತಿಯರು , ಮರಗಳು , ಮಕ್ಕಳು , ಇತ್ಯಾದಿಗಳು

ಏಕವಚನ           ಬಹುವಚನ

ಕಿವಿ                ಕಿವಿಗಳು (ಕಿವಿ+ಗಳು)

ತಾಯಿ            ತಾಯಿಯರು (ತಾಯಿ+ಅರು)

ನಾನು             ನಾವು (ನಾನು+ವು)

ಅರಸು            ಅರಸರು (ಅರಸು+ಅರು)

ನೀನು             ನೀವು (ನೀನು+ವು)

ಮರ               ಮರಗಳು (ಮರ+ಗಳು)

ಅರಸಿ             ಅರಸಿಯರು (ಅರಸಿ+ಅರು)

ತಂದೆ             ತಂದೆಗಳು (ತಂದೆ+ಗಳು)

ಮನೆ              ಮನೆಗಳು (ಮನೆ+ಗಳು)

ಅಣ್ಣ               ಅಣ್ಣಂದಿರು (ಅಣ್ಣ+ಅಂದಿರು)

ಈ ಉದಾಹರಣೆಗಳ ಮೇಲಿಂದ ತಿಳಿದುಬರುವುದೇನೆಂದರೆ ಮೇಲೆ ಹೇಳಿದ ಬಹುವಚನ ಸೂಚಕ ಆಗಮಗಳು ಪ್ರಕೃತಿಗೂ ಪ್ರತ್ಯಯಕ್ಕೂ

(ನಾಮವಿಭಕ್ತಿಪ್ರತ್ಯಯಕ್ಕೂ) ಮಧ್ಯದಲ್ಲಿ ಬರುವುವೆಂಬಂಶ. ಹಾಗಾದರೆ ಮುಖ್ಯವಾಗಿ ಬರುವ ಈ ಆಗಮಗಳ ವಿಚಾರವನ್ನು ಕ್ರಮವಾಗಿ ತಿಳಿಯೋಣ.
ಬಹುವಚನದಲ್ಲಿ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ* ಅರು, ಗಳು, ಅರುಗಳು, ಅಂದಿರು, ಅಂದಿರುಗಳು, ಇರು, ವಿರು, ವು, ಅವು, ಕಳು, ವರು-ಇತ್ಯಾದಿ ಆಗಮಗಳು ಬರುತ್ತವೆ.

ಮೇಲಿನ ಬಹುವಚನ ಉದಾಹರಣೆಗಳನ್ನು ಗಮನಿಸಿದಾಗ ಮುಖ್ಯವಾಗಿ ಗೊತ್ತಾಗುವ ವಿಷಯವೇನೆಂದರೆ –

ನಾಮಪ್ರಕೃತಿಗಳನ್ನು ಬಹುವಚನದಲ್ಲಿ ಹೇಳಿದಾಗ ಅವುಗಳ ಮುಂದೆ ಅರು, ವು, ಗಳು, ಅಂದಿರು-ಇತ್ಯಾದಿ ಬಹುವಚನಸೂಚಕ ಆಗಮಗಳು ಬಂದಿರುವುವು. ಈ ಬಹುವಚನಸೂಚಕ ಆಗಮಗಳು ಯಾವ ಸ್ಥಳದಲ್ಲಿ ಬರುತ್ತವೆ ಎಂಬುದನ್ನು ಗಮನಿಸಿರಿ:-

ಪ್ರಕೃತಿ + ಆಗಮ + ಪ್ರತ್ಯಯ = ನಾಮಪದ

ಅರಸು + ಗಳು + ಅನ್ನು = ಅರಸುಗಳನ್ನು

ತಂದೆ + ಅರುಗಳು + ಅನ್ನು = ತಂದೆಯರುಗಳನ್ನು

ಅರಸು + ಗಳು + ಉ = ಅರಸುಗಳು

ಅರಸು + ಗಳು + ಇಂದ = ಅರಸುಗಳಿಂದ

ಅಣ್ಣ + ಅಂದಿರು + ಇಗೆ = ಅಣ್ಣಂದಿರಿಗೆ

ಅಣ್ಣ + ಅಂದಿರುಗಳು + ಇಗೆ = ಅಣ್ಣಂದಿರುಗಳಿಗೆ

ಅರಸು + ಅರುಗಳು + ಇಂದ = ಅರಸರುಗಳಿಂದ

ತಾಯಿ + ಅರುಗಳು + ಇಗೆ = ತಾಯಿಯರುಗಳಿಗೆ

ಈ ಉದಾಹರಣೆಗಳ ಮೇಲಿಂದ ತಿಳಿದುಬರುವುದೇನೆಂದರೆ ಮೇಲೆ ಹೇಳಿದ ಬಹುವಚನ ಸೂಚಕ ಆಗಮಗಳು ಪ್ರಕೃತಿಗೂ ಪ್ರತ್ಯಯಕ್ಕೂ

(ನಾಮವಿಭಕ್ತಿಪ್ರತ್ಯಯಕ್ಕೂ) ಮಧ್ಯದಲ್ಲಿ ಬರುವುವೆಂಬಂಶ. ಹಾಗಾದರೆ ಮುಖ್ಯವಾಗಿ ಬರುವ ಈ ಆಗಮಗಳ ವಿಚಾರವನ್ನು ಕ್ರಮವಾಗಿ ತಿಳಿಯೋಣ.
ಬಹುವಚನದಲ್ಲಿ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ* ಅರು, ಗಳು, ಅರುಗಳು, ಅಂದಿರು, ಅಂದಿರುಗಳು, ಇರು, ವಿರು, ವು, ಅವು, ಕಳು, ವರು-ಇತ್ಯಾದಿ ಆಗಮಗಳು ಬರುತ್ತವೆ.

kannada ekavachana bahuvachana
kannada ekavachana bahuvachana

ಬಹುವಚನದ ಪ್ರತ್ಯಯಗಳು ಸೇರುವ ಸಂದರ್ಭಗಳು .

ಪುಂ  , ಸ್ತ್ರೀ , ಪ್ರಕೃತಿಗಳ ಮೇಲೆ ಬಹುಮಟ್ಟಿಗೆ ‘ ಅರು ಪ್ರತ್ಯಯ ಸೇರಿಸಬೇಕು .

ಉದಾ : – { ಗಂಡಸರು , ರಾಜರು , ಹೆಂಗಸರು …….. }

2. ಅಕಾರಾಂತ ಬಿಂದುವಾಚಕಗಳ ಮೇಲೆ ಅಂದಿರು ಪ್ರತ್ಯಯ ಸೇರಿಸಬೇಕು .

ಉದಾ : { ಸೊಸೆಯಂದಿರು , ಅಕ್ಕಂದಿರು , ಮಾವಂದಿರು , ತಮ್ಮಂದಿರು . }

ಅಕಾರಾಂತವಲ್ಲದ ಪುಂ , ಸ್ತ್ರೀ , ಪ್ರಕೃತಿಗಳಲ್ಲಿ ‘ ಗಳು ‘ ಪ್ರತ್ಯಯವೂ ಸೇರಿಸಬೇಕಾಗುತ್ತದೆ .

ಉದಾ : { ಮರಗಳು , ಗುರುಗಳು , ಋಷಿಗಳು …….. }

4 , ನಪುಂಸಕಲಿಂಗದ ಸರ್ವನಾಮ ಗುಣವಾಚಕಗಳ ಮೇಲೆ ‘ ವು ‘ “ ಉವು ‘ ‘ ಅವು ‘ ಪ್ರತ್ಯಯಗಳು ಸೇರುತ್ತವೆ .

ಉದಾ : { ಅವು , ಇವು , ಯಾವುವು , ಚಿಕ್ಕವು , ದೊಡ್ಡವು

5. ‘ ಆರು ‘ ಪ್ರತ್ಯಂತದ ಮೇಲೆಯೂ ‘ ಗಳು ‘ ಹತ್ತುವುದುಂಟು

ಉದಾ : { ರಾಜರುಗಳು , ದೇವರುಗಳು ………… }

ಸ್ಪರ್ಧಾವಾಣಿ ಕನ್ನಡ

Leave a Reply

Your email address will not be published. Required fields are marked *