ತೆರಿಗೆ ಬಗ್ಗೆ ಮಾಹಿತಿ

ತೆರಿಗೆ ಬಗ್ಗೆ ಮಾಹಿತಿ

ಅರ್ಥ ವ್ಯವಸ್ಥೆಯನ್ನು ವಿಸ್ತರಿಸುವ ಯೋಜನೆ ಗಳನ್ನು ಕೈಗೊಳ್ಳಲು ಬೇಕಾದ ಆದಾಯವನ್ನು ಸಂಗ್ರಹಿಸಲು ಮತ್ತು ತನ್ನ ಜನಗಳ ಜೀವನ ಮಟ್ಟವನ್ನು ಹೆಚ್ಚಿಸಲು, ಸರ್ಕಾರಕ್ಕೆ ಹಣ ಬೇಕಾಗುತ್ತದೆ. ಇದನ್ನು ನಾವು ಸಾರ್ವಜನಿಕ ಆದಾಯ ಎಂದು ಕರೆಯುತ್ತೇವೆ.  

ಸಾರ್ವಜನಿಕ ಆದಾಯವನ್ನು ಎರಡು ಮೂಲಗಳಿಂದ ಸರ್ಕಾರಗಳು ಪಡೆಯುತ್ತವೆ, 

– ತೆರಿಗೆ ಆದಾಯ  – ತೆರಿಗೆಯೇತರ ಆದಾಯ

ಭಾರತದಲ್ಲಿ ತೆರಿಗೆ ವಿಧಿಸುವ ಅಧಿಕಾರವನ್ನು ಸಂವಿಧಾನವು ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೀಡಿದೆ.  

ಸಂವಿಧಾನದ 265 ನೇ ವಿಧಿಯ ಪ್ರಕಾರ, ಕಾನೂನಿನ ಬೆಂಬಲವಿಲ್ಲದೇ, ಯಾವುದೇ ತೆರಿಗೆಯನ್ನು ವಿಧಿಸುವಂತಿಲ್ಲ ಮತ್ತು ಸಂಗ್ರಹಿಸುವಂತಿಲ್ಲ, 

https://spardhavani.com/tax-information-in-kannada/

ಸಂಸತ್ತು ಅಥವಾ ವಿಧಾನಸಭೆಯಲ್ಲಿ ಅಂಗೀಕಾರವಾದ ಕಾನೂನಿನ ಸಹಾಯದಿಂದ ಮಾತ್ರ ತೆರಿಗೆ ಸಂಗ್ರಹಿಸಬಹುದು. 

ತೆರಿಗೆ ಎಂದರೆ ದೇಶದ ಪ್ರಜೆಯು ಸರ್ಕಾರಕ್ಕೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಸಲ್ಲಿಸಬೇಕಾದ ಕಡ್ಡಾಯ ವಂತಿಕೆ ಆಗಿದೆ .  

ಮುಂದೆ ಓದಿರಿ