ರಾಷ್ಟ್ರೀಯ ಭಾವೈಕ್ಯತೆ

ರಾಷ್ಟ್ರೀಯ ಭಾವೈಕ್ಯತೆ

ರಾಷ್ಟ್ರೀಯ ಭಾವೈಕ್ಯತೆ ನಮ್ಮ ಭಾರತದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಎಂಬುದು ಇಂದು ಹಿಂದೆಂದಿಗಿಂತಲೂ ಹೆಚ್ಚು ಹೆಚ್ಚಾಗಿ ಪ್ರಸ್ತಾಪವಾಗುತ್ತಿರುವ ಸಂಗತಿಯಾಗಿರುವುದು .  

ರಾಷ್ಟ್ರೀಯ ಭಾವೈಕ್ಯತೆ

ಸಾಮಾನ್ಯವಾಗಿ ಒಂದು ರಾಷ್ಟ್ರವು ಭಾವನಾತ್ಮಕವಾಗಿ ಐಕ್ಯತೆಯಿಂದಿರುವುದನ್ನು ರಾಷ್ಟ್ರೀಯ ಭಾವೈಕ್ಯತೆ ಎನ್ನುತ್ತೇವೆ  

ರಾಷ್ಟ್ರೀಯ ಭಾವೈಕ್ಯತೆ

ವಿವಿಧತೆಯಲ್ಲಿ ಏಕತೆ ಕಂಡ ದೇಶ ನಮ್ಮ ಭಾರತ.  ವಿವಿಧ ತರಹದ ಸಂಸ್ಕೃತಿ ಗಳಿದ್ದು ಮತಗಳಿಂದ ಆದರೆ ಆ ಸ್ಥಳ ವಿವಿಧತೆಯಲ್ಲಿ ಏಕತೆ ; ನಾವೆಲ್ಲ ಭಾರತಿಯರು , ಭಾರತ ಮಕ್ಕಳೆಂಬ ಒಂದು ಬಾಂಧವ್ಯ ನಮ್ಮಲ್ಲಿ ಇದೆ. 

ರಾಷ್ಟ್ರೀಯ ಭಾವೈಕ್ಯತೆ

ಭಾರತ ವಿಶಾಲವಾದ ರಾಷ್ಟ್ರವಾಗಿದೆ ಮತ್ತು ವಿಶಿಷ್ಟ ಸಂವಿಧಾನ ಹೊಂದಿದೆ ಈ ಸಂವಿಧಾನದ ದೃಷ್ಟಿಯಲ್ಲಿ ಬಡವ - ಬಲ್ಲಿದ ಎಲ್ಲರೂ ಸಮಾನರು. 

ರಾಷ್ಟ್ರೀಯ ಭಾವೈಕ್ಯತೆ

ನಮ್ಮ ದೇಶದ ರಾಷ್ಟ್ರಗೀತೆ ರಾಷ್ಟ್ರ ಭಾಷೆ , ರಾಷ್ಟ್ರಮುದ್ರೆ ಇವು ನಮ್ಮ ಏಕತೆಯ ಸಂಕೇತಗಳಾಗಿದೆ. 

ರಾಷ್ಟ್ರೀಯ ಭಾವೈಕ್ಯತೆ

ವಂದೇ ಮಾತರಂ , ಸಾರೇ ಜಹಾಂಸೆ ಅಚ್ಚಾ , ಜನಗಣಮನ ಅಧಿನಾಯಕ ದಂತಹ ದೇಶ ಭಕ್ತಿಗೀತೆಗಳು ನಮ್ಮಲ್ಲಿ ದೇಶಪ್ರೇಮ , ದೇಶಾಭಿಮಾನವನ್ನು ಹುಟ್ಟಿಸುತ್ತವೆ .  

ರಾಷ್ಟ್ರೀಯ ಭಾವೈಕ್ಯತೆ

ಹಾಕಿ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯಾಗಿದೆ .   ಭಾರತದ ಹಾಕಿ ಮಾಂತ್ರಿಕ ಧ್ಯಾನಚಂದ , ಇವರ ಹುಟ್ಟಿದ್ದು ಆಗಸ್ಟ್ ೨೯ ಪ್ರತಿ ವರ್ಷ ಭಾರತದಲ್ಲಿ ಈ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುವುದು.  

ರಾಷ್ಟ್ರೀಯ ಭಾವೈಕ್ಯತೆ

ಇಡೀ ದೇಶವೇ ವೈವಿದ್ಯಮಯದ ಸಂಸ್ಕೃತಿಕ ಆಚರಣೆಯಲ್ಲಿರುವಾಗ ನಾವು ಒಂದೇ ಮನೆಯವರಂತೆ ಕೂಡಿ ಬಾಳುತ್ತಿರುವುದು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಬಹುದು . 

ರಾಷ್ಟ್ರೀಯ ಭಾವೈಕ್ಯತೆ

ಎಲ್ಲರೂ ಎಲ್ಲರಿಗಾಗಿ ಎಂಬ ಮಂತ್ರದಿಂದ ಕಣ್ಣು ಬೇರೆಯಾದರೂ ನೋಟ ಒಂದೇ ಭಾಷೆ ಬೇರೆಯಾದರೂ ಜಾತಿ ಒಂದೇ ಜಾತಿ , ಕುಲ , ಧರ್ಮ ಬೇರೆಯಾದರೂ ದೇಶ ಒಂದೇಯಾಗಿದೆ .