ಕನ್ನಡ ನುಡಿಗಟ್ಟುಗಳು ಭಾಗ -03 

ಕನ್ನಡ ನುಡಿಗಟ್ಟುಗಳು ಭಾಗ -03 

ನೆಲಸಮಮಾಡು : ನಾಶಮಾಡು .   ನೊಗಕ್ಕೆ ತಲೆಕೊಡು : ಭಾರ ವಹಿಸಿಕೊಳ್ಳು   ನೊಣಹೊಡೆ : ಕೆಲಸವಿಲ್ಲದೆ ಸೋಮಾರಿಯಾಗಿ ಕುಳಿತಿರು .

ಕನ್ನಡ ನುಡಿಗಟ್ಟುಗಳು ಭಾಗ -03 

ಪಂಚಪ್ರಾಣ : ಅತಿಪ್ರಿಯ ವಸ್ತು ಅಥವಾ ವ್ಯಕ್ತಿ .  ಪಂಚಾಂಗ ಓದು : ಒಣಹರಟೆ ಹೊಡೆ .   ಪಂಚಾಂಗ ಬಿಚ್ಚು : ಒಣಹರಟೆಗೆ ಪ್ರಾರಂಭಿಸು .

ಕನ್ನಡ ನುಡಿಗಟ್ಟುಗಳು ಭಾಗ -03 

ಪಾಠಕಲಿಸು : ಬುದಿಕಲಿಸು    ಪಾತಾಳಕ್ಕಿಳಿದು ಹೋಗು : ದುಃಖದಿಂದ ಕುಸಿದು ಹೋಗು .  ಪಾಷಾಣ ಹೃದಯ : ಕಠಿಣ ಮನಸ್ಸು . 

ಕನ್ನಡ ನುಡಿಗಟ್ಟುಗಳು ಭಾಗ -03 

ಪಿಷ್ಟಪೇಷಣ : ಹೇಳಿದ್ದನ್ನೇ ತಿರುಗಿ ತಿರುಗಿ ಹೇಳುವುದು ಪುಕ್ಕ ಕತ್ತರಿಸು : ಗರ್ವ ಇಳಿಸು ; ಹತೋಟಿಯಲ್ಲಿಡು . 

ಕನ್ನಡ ನುಡಿಗಟ್ಟುಗಳು ಭಾಗ -03 

ಪುಸ್ತಕದ ಬದನೆಕಾಯಿ : ಪುಸ್ತಕದಲ್ಲಿ ಹೇಳಿದ್ದು ಮಾತ್ರ ಅನುಭವಕ್ಕೆ ಬಾರದ್ದು : ವ್ಯವಹಾರ ಜ್ಞಾನ ಇಲ್ಲದ . ಪ್ರಪಂಚ ಕಾಣದವ : ಅನುಭವವಿಲ್ಲದವ .   ಪ್ರಾಣ ಹಿಂಡು : ಬಹಳವಾಗಿ ಪೀಡಿಸು ; ಕಾಟಕೊಡು . 

ಕನ್ನಡ ನುಡಿಗಟ್ಟುಗಳು ಭಾಗ -03 

ಪ್ರಾಣಹೋಗು : ಬಹಳ ಕಷ್ಟವಾಗು .   ಬಡಪಟ್ಟಿಗೆ : ಸುಲಭವಾಗಿ  ಬಣ್ಣ ಕಟ್ಟಿ ಹೇಳು : ಉಪ್ಪೇಕ್ಷಿಸಿ ಹೇಳು .

ಕನ್ನಡ ನುಡಿಗಟ್ಟುಗಳು ಭಾಗ -03 

ಬಣ್ಣ ಕಟ್ಟು : ಕಳೆಯೇರಿಸು ; ಇಲ್ಲದ್ದನ್ನು ಸೇರಿಸು . ಬಣ್ಣದ ಚಿಟ್ಟೆ : ಸೊಗಸುಗಾತಿ , 

ಕನ್ನಡ ನುಡಿಗಟ್ಟುಗಳು ಭಾಗ -03 

ಬಣ್ಣ ಬದಲಾಯಿಸು : ಸ್ವಭಾವ ಅಥವಾ ಧೋರಣೆ ಯನ್ನು ಬದಲಾಯಿಸು ; ಒಂದೊಂದು ಸಲ ಒಂದೊಂದು ತೆರನಾಗಿರು .   ಬಣ್ಣ ಬಯಲಿಗೆ ಬರು : ಒಳಗುಟ್ಟು ಗೊತ್ತಾಗು ; ರಹಸ್ಯ ಬಯಲಾಗು .

ಕನ್ನಡ ನುಡಿಗಟ್ಟುಗಳು ಭಾಗ -03 

ಬದ್ಧಕಂಕಣನಾಗು : ಸಂಕಲ್ಪ ಮಾಡಿದವನಾಗು .   ಬಲವಂತ ಮಾಘಸ್ನಾನ : ಒತ್ತಾಯದ ಕೆಲಸ . ಬಲಿಯಾಗು : ನಾಶಕ್ಕೆ ಗುರಿಯಾಗು . 

ಕನ್ನಡ ನುಡಿಗಟ್ಟುಗಳು ಭಾಗ -03 

ಬಲೆಗೆ ಬೀಳು : ವಶಕ್ಕೆ ಸಿಕ್ಕು .   ಬಳೆ ತೊಡಿಸು : ಬಂಧಿಸು ; ಕೋಳ ಹಾಕು ; ಅವಮಾನ ಪಡಿಸು .   ಬಳಗೂಡು : ಹೇಡಿಯಾಗು . 

ಕನ್ನಡ ನುಡಿಗಟ್ಟುಗಳು ಭಾಗ -03 

ಬಾದರಾಯಣ ಸಂಬಂಧ : ಸುತ್ತು ಬಳಸಿನ ಸಂಬಂಧ .  ಬಾಯಿಕಟ್ಟು : ಮಾತನಾಡದಿರು ; ದಾಕ್ಷಿಣ್ಯಕ್ಕೆ ಸಿಕ್ಕು ; ದಾಕ್ಷಿಣ್ಯಕ್ಕೆ ಸಿಕ್ಕಿಸು .

ಕನ್ನಡ ನುಡಿಗಟ್ಟುಗಳು ಭಾಗ -03 

ಬಾದರಾಯಣ ಸಂಬಂಧ : ಸುತ್ತು ಬಳಸಿನ ಸಂಬಂಧ .  ಬಾಯಿಕಟ್ಟು : ಮಾತನಾಡದಿರು ; ದಾಕ್ಷಿಣ್ಯಕ್ಕೆ ಸಿಕ್ಕು ; ದಾಕ್ಷಿಣ್ಯಕ್ಕೆ ಸಿಕ್ಕಿಸು .