ಜ್ಞಾನ ಅಥವಾ ಅಜ್ಞಾನದ ಕುರುಹಿನ ನಾಮ ಪ್ರಕೃತಿಯನ್ನು ' ಲಿಂಗ ' ಎನ್ನುವರು . ಇದು ಗಂಡಸು , ಹೆಂಗಸರನ್ನು ಸೂಚಿಸುವ ಶಬ್ದಗಳಾಗಿವೆ . ಕನ್ನಡದಲ್ಲಿ ಪುಲ್ಲಿಂಗ ಸ್ತ್ರೀಲಿಂಗ ನಪುಂಸಕಲಿಂಗಗಳೆಂದು ಮೂರು ವಿಧಗಳಿವೆ
ಪುಲ್ಲಿಂಗ
ಪುರುಷರನ್ನು ಸೂಚಿಸುವ ನಾಮಪದಗಳಿಗೆ ಮಾತ್ರ ' ಪುಲ್ಲಿಂಗ ' ಶಬ್ದಗಳು ಎಂದು ಹೆಸರು .
ಸ್ತ್ರೀಲಿಂಗ
ಸ್ತ್ರೀಯರನ್ನು ಸೂಚಿಸುವ ನಾಮಪದಗಳು ಮಾತ್ರ “ ಸ್ತ್ರೀಲಿಂಗ ' ಶಬ್ದಗಳು ಎಂದು ಹೆಸರು .
ನಪುಂಸಕಲಿಂಗ
ಪ್ರಾಣಿವರ್ಗ ಹಾಗೂ ನಿರ್ಜಿವ ವಸ್ತುಗಳನ್ನು ಸೂಚಿಸುವ ನಾಮಪದಗಳು ' ನಪುಂಸಕಲಿಂಗ ಶಬ್ದಗಳು ಎಂದು ಹೆಸರು .
ದ್ವಿಲಿಂಗ ಪದಗಳು
ಪು - ಸ್ತ್ರೀಲಿಂಗ ಶಬ್ದಗಳು
ಇವು ಪುಲ್ಲಿಂಗ , ಸ್ತ್ರೀಲಿಂಗ ಎರಡೂ ಲಿಂಗಗಳ ಅರ್ಥಕೊಡು ವಂತಹ ಶಬ್ದಗಳಾಗಿವೆ
ದ್ವಿಲಿಂಗ ಪದಗಳು
ಪುನ್ನಪುಂಸಕಲಿಂಗ ಶಬ್ದಗಳು
ಈ ಶಬ್ದಗಳು ಪುಲ್ಲಿಂಗ , ನಪುಂಸಕಲಿಂಗ ಎರಡೂ ಲಿಂಗಗಳ ಅರ್ಥಕೊಡುವ ಶಬ್ದಗಳು
ದ್ವಿಲಿಂಗ ಪದಗಳು
ಸ್ತ್ರೀ - ನಪುಂಸಕಲಿಂಗ ಶಬ್ದಗಳು
ಸ್ತ್ರೀಲಿಂಗ - ನಪುಂಸಕಲಿಂಗ ಎರಡೂ ಲಿಂಗಗಳ ಅರ್ಥ ಕೊಡುವ ಶಬ್ದಗಳು
ತ್ರಿಲಿಂಗಗಳು
ಇವು ಮೂರು ಲಿಂಗಗಳಲ್ಲಿ ನಡೆಯುವ ಶಬ್ದಗಳು . ಈ ಶಬ್ದಗಳು ಸರ್ವನಾಮ , ಪರಿಮಾಣವಾಚಕ , ಸಂಖ್ಯಾವಾಚಕ ಮುಂತಾದ ಶಬ್ದಗಳಿಗೆ ವಿಶೇಷಣಗಳಾಗುವುದರಿಂದ ಇವನ್ನು “ ವಿಶೇಷ್ಯಾದೀನಲಿಂಗ ' ಗಳೆಂದೂ ಕರೆಯುವರು.