ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು Krushi Mattu Malege Sambandisida Gadegalu 

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಆರಿದ್ರೆ ಇಲ್ಲಿದ್ರೆ ದರಿದ್ರ ಖಂಡಿತ ತಗ್ಗು ಗದ್ದೆಗೆ ಮಾರು ಬೆಳೆ , ಎತ್ತರ ಗದ್ದೆಗೆ ಒಂದೇ ಬೆಳೆ ಕೊಟ್ಟ ಸಾಲ ಕೇಳದೆ ಹೋಯಿತು

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಮಾಡಿದ ಆರಂಬ ನೋಡದೆ ಹೋಯಿತು ಉತ್ತರೆ ಮಳೆ ಹುಯ್ದರೆ ಉತ್ತೆತ್ತು ನೀರಿಗೆ ಬೀಳ್ತಾದೆ   ಆರಿದ್ರೆ ಮಳೆಯಲ್ಲಿ ಆಗಿರುವ ಉಕ್ಕೆ ಬಿತ್ತಿಬಿಡು 

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಮಿಕ್ಕ ಎಳ್ಳು ಮೃಗಶಿರೇಲಿ ಚೆಲ್ಲು  ಸ್ವಾತಿಮಳೆ ಬಂದ್ರೆ ಮುತ್ತಿನಂಥ ಜೋಳ   ಕೃತ್ತಿಕೆ ನಕ್ಷತ್ರ ಕಾದರೆ ಗದ್ದೇಗೆ ಒಳ್ಳೆಯದು

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಉಡಿಯೊಳಗಿನದು ಹಿಂದೆ , ಹಿಡಿಯೊಳಗಿನದು ಮುಂದೆ   ಕಾಲ ಮೀರುವ ಮುನ್ನ ಬಿತ್ತನೆಯಾಗಬೇಕು   ಹಸ್ತದ ಮಳೆ ಬೀಳದಿದ್ದರೆ ಹೆತ್ತ ತಾಯಿ ಹಿಟ್ಟು ಕೊಡೊಲ್ಲ

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಅಂಗೈ ಹಾಗೆ ಹೊಲ ಮಾಡಿದರೆ ಮುಂಗೈ ತುಂಬ ತುಪ್ಪ   ಉತ್ತು ಬಾಳುವವನ ಬದುಕು ಎತ್ತಲೂ ಲೇಸು  ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು 

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಉತ್ತರೆ ಮಳೆ ಹುಯ್ದರೆ ಉತ್ತೆತ್ತು ಉಕ್ಕೆ  ದೋಣೀಲಿ ನೀರು ಕುಡೀತದೆ   ಎತ್ತು ಮಾರು ಮಿಂಚಿದರೆ ಕುರ್ತೆಟು ಮಳೆ 

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಅನುರಾಧೆ ಮಳೆ ಬಂದ್ರೆ ನಮ್ಮ ರಾಗಿ ನಮ್ಮದು   ಮಳೆಯಿಲ್ಲದ ಪೈರು , ಮಾತೆ ಇಲ್ಲದ ಕೂಸು ಸಮ   ಮಳೆಗೆ ಹೆದರಿ , ಹೊಳೇಲಿ ಹಾರಿದ ಹಾಗೆ 

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಮಳೆ ತಡಿಸದ ಕೊಡೆ ಸಿಡಿಲ ತಡಿಸೀತೇ ? ಮಳೆ ನೀರು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದ ಹಾಗೆ   ಅಸಲೇ ಮಳೆ ಕೈತುಂಬ ಬೆಳೆ 

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಆದರೆ ಒಂದು ಅಡಿಕೆಮರ , ಹೋದರೆ ಒಂದು ಗೋಟಡಿಕೆ   ತಗ್ಗು ಗದ್ದೆಗೆ ಮೂರು ಬೆಳೆ , ಎತ್ತರ ಗದ್ದೆಗೆ ಒಂದೇ ಬೆಳೆ   ನವಧಾನ್ಯ ಬೆಳೆದವನಿಗೆ ವ್ಯವಧಾನವಿಲ್ಲ 

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಬೆಳೆಯುವ ಪೈರು ಮೊಳಕೆಯಲ್ಲಿ   ಫಲಕ್ಕೆ ತಕ್ಕ ಬೀಜ , ನೆಲಕ್ಕೆ ತಕ್ಕ ನೀರು   ಫಲವಿಲ್ಲದ ಮರ ಹೊಲದಲ್ಲಿದ್ದರೇನು ?   ಫಲಾ ನೋಡದೆ ಕೆಟ್ಟಿತು , ಹೊಲಾ ಹೂಡದೆ ಕೆಟ್ಟಿತು . 

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಬೇಸಾಯದವನಾದರೂ ಜನ ಸಹಾಯ ಬೇಕು   ಉಬ್ಬೇ ಮಳೇ ಗುಬ್ಬಿ ತಲೆ ನೆನೆಯುವುದಿಲ್ಲ   ಕೆಬ್ಬೆ ಹೊಲ ಮಾಡಿದರೆ ಕಿಬ್ಬೊಟ್ಟೆಗೂ ಹಿಟ್ಟು ಸಿಗಲ್ಲ

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಬಾಳೆ ಬಗೆದು ಹಾಕು , ತೆಂಗು ತೇಲಿ ಹಾಕು   ಅಡಕೆ ಆಳಕ್ಕೆ ಹಾಕು , ತೆಂಗು ತೇಲಿಸಿ ಹಾಕು  ಕಡಲೆಕಾಯಿ ಬಿತ್ತಿ , ಕಾಗೆ ಕಾವಲು ಹಾಕಿದ ಹಾಗೆ

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಬಾಳೆಗೆ ಗೊನೆ , ಚೇಳಿಗೆ ಬಸಿರು   ಕೀರೆಸೊಪ್ಪಿಗೂ ನಾಚಿಕೆಯಿಲ್ಲ , ಕುಡ್ಲಿಗೂ ನಾಚಿಕೆಯಿಲ್ಲ .   ಕೆರೆ ಕಿತ್ತರೆ ಬೈಲು ಮೇಲೆ  ಕುಂಟೆಯಾಡಿದ ಹೊಲ ಚೆಂದ , ದಂಟು ಆಡಿದ ಹೆಣ್ಣು ಚೆಂದ 

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು 

ಬಾಳೆಗೆ ಗೊನೆ , ಚೇಳಿಗೆ ಬಸಿರು   ಕೀರೆಸೊಪ್ಪಿಗೂ ನಾಚಿಕೆಯಿಲ್ಲ , ಕುಡ್ಲಿಗೂ ನಾಚಿಕೆಯಿಲ್ಲ .   ಕೆರೆ ಕಿತ್ತರೆ ಬೈಲು ಮೇಲೆ  ಕುಂಟೆಯಾಡಿದ ಹೊಲ ಚೆಂದ , ದಂಟು ಆಡಿದ ಹೆಣ್ಣು ಚೆಂದ