ಆಡಳಿತ ಎಂದರೇನು ? ಸರಕಾರ ನಡೆಸುವುದು ಮತ್ತು ಜನರನ್ನು ನೋಡಿಕೊಳ್ಳುವುದೇ ಆಡಳಿತ.ಆಡಳಿತದ ಮೂಲಪದಗಳು ಯಾವುವು ? ಲ್ಯಾಟೀನ್ ಭಾಷೆಯ ' Ad ' ಮತ್ತು ' Ministiare ಎಂಬ ಪದಗಳು Administration - ಆಡಳಿತದ ಮೂಲ ಪದಗಳು
ಕೇಂದ್ರಾಡಳಿತ ಮುಖ್ಯಸ್ಥ ಯಾರು ?ರಾಷ್ಟ್ರಪತಿಗಳು ಕೇಂದ್ರಾಡಳಿತ ಮುಖ್ಯಸ್ಥರು . ರಾಜ್ಯಾಡಳಿತ ಮುಖ್ಯಸ್ಥ ಯಾರು ? ರಾಜ್ಯಾಡಳಿತ ಮುಖ್ಯಸ್ಥರು ರಾಜ್ಯಪಾಲರು . ಜಿಲ್ಲಾಡಳಿತ ಮುಖ್ಯಸ್ಥ ಯಾರು ? ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಮುಖ್ಯಸ್ಥರು
CAT ವಿಸ್ತರಿಸಿ ?ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ - Central Administrative Tribunal.KAT ವಿಸ್ತರಿಸಿ . ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ Karnataka Administrative Tribunal.UPSC ವಿಸ್ತರಿಸಿ . ಕೇಂದ್ರೀಯ ಲೋಕಸೇವಾ ಆಯೋಗ Union Public Service commission.
KPSC ವಿಸ್ತರಿಸಿ . ಕರ್ನಾಟಕ ಲೋಕಸೇವಾ ಆಯೋಗ - Karnataka Public Service commission .JPSC ವಿಸ್ತರಿಸಿ . ಜಂಟಿ ಲೋಕಸೇವಾ ಆಯೋಗ joint public Service commission.IAS ವಿಸ್ತರಿಸಿ .ಭಾರತೀಯ ಆಡಳಿತ ಸೇವೆಗಳುindian administrative Services.
IPS ವಿಸ್ತರಿಸಿ . ಕರ್ನಾಟಕ ಆಡಳಿತ ಸೇವೆಗಳು indian police Services.KAS ವಿಸ್ತರಿಸಿ . ಕರ್ನಾಟಕ ಆಡಳಿತ ಸೇವೆಗಳು - karnataka administrative service.
ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ ? ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ ? ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಕರ್ನಾಟಕದ ರಾಜ್ಯಪಾಲರು ನೇಮಿಸುತ್ತಾರೆ.