Varnamala in Kannada, ಕನ್ನಡ ವರ್ಣಮಾಲೆ ಅಕ್ಷರಗಳು, Letters in Kannada, Kannada Varnamala, Kannada Varnamaale Aksharagalu, Kannada Alphabets, PDF, Kannada Alphabets , Kannada varnamale is the list of Kannada alphabets or letters or words.How many letters are there in Kannada?
Varnamala in Kannada
ಕನ್ನಡ ವರ್ಣಮಾಲೆ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ ಇದು ಸಂಪೂರ್ಣ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
Kannada Alphabets
ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ.
ಅವುಗಳನ್ನು ಸ್ವರಗಳು, ವ್ಯಂಜನಗಳು ಹಾಗೂ ಯೋಗವಾಹಗಳೆಂದು 3 ವಿಧಗಳಾಗಿ ವಿಂಗಡಿಸಲಾಗಿದೆ.
Swaragalu In Kannada
ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳು (vowels) ಎನ್ನುತ್ತಾರೆ.
ಕನ್ನಡದಲ್ಲಿ ಒಟ್ಟು13 ಸ್ವರಗಳಿವೆ.
ಇದನ್ನು ಓದಿ : ಕನ್ನಡ ಗ್ರಾಮರ್
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
Kannada Varnamale Swaragalu
ಸ್ವರಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ :
1) ಹ್ರಸ್ವಸ್ವರಗಳು
2) ಧೀರ್ಘಸ್ವರಗಳು
Hrasva Swaragalu In Kannada ( ಹ್ರಸ್ವ ಸ್ವರಗಳು )
ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಎಂದು .
ಕನ್ನಡದಲ್ಲಿ ಒಟ್ಟು 6 ಹ್ರಸ್ವ ಸ್ವರಗಳಿವೆ.
ಅವುಗಳು :
ಅ ಇ ಉ ಋ ಎ ಒ
Deergha Swaragalu in Kannada (ಧೀರ್ಘಸ್ವರಗಳು)
ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಧೀರ್ಘಸ್ವರ ಎನ್ನುವರು.
ಕನ್ನಡದಲ್ಲಿ ಒಟ್ಟು 7 ಧೀರ್ಘಸ್ವರಗಳಿವೆ
ಅವುಗಳು :
ಆ ಈ ಊ ಏ ಐ ಓ ಔ
Vyakarana In Kannada (ವ್ಯಂಜನಗಳು)
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
Vyanjanagala Vidhagalu in Kannada (ವ್ಯಂಜನಗಳಲ್ಲಿ ಎರಡು ವಿಧ)
ವರ್ಗೀಯ ವ್ಯಂಜನಗಳು – 25
ಅವರ್ಗೀಯ ವ್ಯಂಜನಗಳು – 9
ವರ್ಗೀಯ ವ್ಯಂಜನಗಳು (Grouped Consonants) :
ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) 25 ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ,
ಕ-ವರ್ಗ = ಕ, ಖ, ಗ, ಘ, ಙ.
ಚ-ವರ್ಗ = ಚ, ಛ, ಜ, ಝ, ಞ.
ಟ-ವರ್ಗ = ಟ, ಠ, ಡ, ಢ, ಣ.
ತ-ವರ್ಗ = ತ, ಥ, ದ, ಧ, ನ.
ಪ-ವರ್ಗ= ಪ, ಫ, ಬ, ಭ, ಮ.
Vargiya Vyanjana Galu ( ವರ್ಗೀಯ ವ್ಯಂಜನದ ವಿಧಗಳು )
ಅಲ್ಪ ಪ್ರಾಣಗಳು – 10
ಮಹಾಪ್ರಾಣಗಳು – 10
ಅನುನಾಸಿಕಗಳು – 5
Alpaprana Aksharalu in Kannada (ಅಲ್ಪ ಪ್ರಾಣಗಳು)
ಕಡಿಮೆ ಉಸಿರಿನಿಂದ ಉಚ್ಛರಿಸಲ್ಪಡುವ ವ್ಯಂಜನಗಳಿಗೆ ಅಲ್ಪ ಪ್ರಾಣಗಳು ಎಂದು ಕರೆಯುತ್ತಾರೆ.
ಇವು ಒಟ್ಟು ಸಂಖ್ಯೆಯಲ್ಲಿ ೧೦ (10 ) ಇವೆ.
ಕ,ಚ,ಟ,ತ,ಪ
ಗ,ಜ,ಡ,ದ,ಬ
Mahaprana Aksharagalu in Kannada (ಮಹಾಪ್ರಾಣಗಳು)
ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಾಕ್ಷರಗಳಿಗೆ ಮಹಾಪ್ರಾಣಗಳು ಎಂದು ಕರೆಯುತ್ತಾರೆ. ಇವು ಸಂಖ್ಯೆಯಲ್ಲಿ ೧೦ (10 ) ಇವೆ,
ಖ,ಛ,ಠ,ಥ,ಫ
ಘ,ಝ,ಢ,ಧ,ಭ
Anunasikagalu in Kannada (ಅನುನಾಸಿಕಗಳು)
ಇವು ಕನ್ನಡದಲ್ಲಿ ಒಟ್ಟು ೫ (5) ಇದ್ದು, ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುತ್ತವೆ.
ಙ, ಞ, ಣ, ನ, ಮ
ಅವರ್ಗೀಯ ವ್ಯಂಜನಗಳು (Miscellaneous Consonants) :
ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು (9) ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ,
ಯ ರ ಲ ವ ಶ ಷ ಸ ಹ ಳ
Samyuktha Aksharagalu in Kannada (ಸಂಯುಕ್ತಾಕ್ಷರ)
ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ/ಒತ್ತಕ್ಷರ ಎಂದು ಕರೆಯುತ್ತೇವೆ.
ಉದಾ:
ಕ್ + ತ್ + ಅ = ಕ್ತ
ಪ್ + ರ್ + ಅ = ಪ್ರ
ಗ್ + ಗ್ + ಅ = ಗ್ಗ
ಸ್ + ತ್ + ರ್ + ಅ = ಸ್ತ್ರ
Samyuktha Aksharagalu Types in Kannada (ಸಂಯುಕ್ತಾಕ್ಷರಗಳ ವಿಧಗಳು)
ಸಂಯುಕ್ತಾಕ್ಷರಗಳಲ್ಲಿ ಎರಡು ವಿಧಗಳು ಈ ಕೆಳಗಿನಂತಿವೆ
Sajati Vijati Samyuktakshar in Kannada
ಸಜಾತಿಯ ಸಂಯುಕ್ತಾಕ್ಷರಗಳು
ವಿಜಾತೀಯ ಸಂಯುಕ್ತಾಕ್ಷರಗಳು
Sajathi Samyuktakshara in Kannada ( ಸಜಾತಿಯ ಸಂಯುಕ್ತಾಕ್ಷರಗಳು )
ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ.
ಸಜಾತೀಯ ಸಂಯುಕ್ತಾಕ್ಷರ ಉದಾಹರಣೆ
ಕತ್ತೆ – ಕ್ + ತ್ + ತ್ + ಎ
ಅಕ್ಕ – ಅ + ಕ್ + ಕ್ + ಅ
ಹಗ್ಗ , ಅಜ್ಜ , ತಮ್ಮ , ಅಪ್ಪ
Vijati Samyuktakshar in Kannada ( ವಿಜಾತಿಯ ಸಂಯುಕ್ತಾಕ್ಷರಗಳು )
ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ.
ಉದಾ:
- ಅಗ್ನಿ- ಆ + ಗ್ + ನ್ + ಇ
- ಆಪ್ತ – ಆ + ಪ್ + ತ್ + ಅ
ಸೂರ್ಯ, ಮಗ್ನ , ಸ್ವರ, ಪ್ರಾಣ
ಸಂಧ್ಯಾಕ್ಷರಗಳು:
ಏ, ಐ, ಒ, ಔ
Yogavahagalu in Kannada ( ಯೋಗವಾಹಗಳು )
ಯೋಗವಾಹಗಳು ಸ್ವತಂತ್ರವಾಗಿ ಪ್ರಯೋಗಿಸಲಾಗದೆ, ಯಾವುದಾದರು ಸ್ವರದೊಂದಿಗೆ ಮಾತ್ರ ಪ್ರಯೋಗ ಮಾಡಬಹುದಾದ ಅಕ್ಷರಗಳು.ಅನುಸ್ವಾರ ಮತ್ತು ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುತ್ತವೆ.
ಅನುಸ್ವಾರ : ಅಂ
ವಿಸರ್ಗ : ಅಃ
FAQ
ಹ್ರಸ್ವಸ್ವರ ಎಂದರೇನು?
ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರ
ಸ್ವರಗಳು (vowels) ಎಂದರೇನು?
ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳು (vowels) ಎನ್ನುತ್ತಾರೆ.
ಪ್ರಬಂಧಗಳ ಪಟ್ಟಿ
- ಶಬ್ದ ಮಾಲಿನ್ಯ ಕುರಿತು ಪ್ರಬಂಧ
- ಭೂ ಮಾಲಿನ್ಯ ಕುರಿತು ಪ್ರಬಂಧ
- ಆರ್ಟಿಕಲ್ 370 ಕುರಿತು ಪ್ರಬಂಧ
- ರೈತರ ಆತ್ಮಹತ್ಯೆ ಕುರಿತು ಪ್ರಬಂಧ
- ಜಲ ಮಾಲಿನ್ಯ ಬಗ್ಗೆ ಪ್ರಬಂಧ
ಇತರೆ ಪ್ರಮುಖ ವಿಷಯಗಳನ್ನು ಓದಿ
ಚಾವುಂಡರಾಯ ನನ್ನು ಕುರಿತು ಬರೆಯಿರಿ
ಪ್ಲೂ ತ ಸ್ವರ : ಐ ,ಔ ನೀವು ಕೊಟ್ಟ ಮಾಹಿತಿ ತಪ್ಪಾಗಿದೆ ಅದನ್ನು ಸರಿಪಡಿಸಿರಿ