ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ । Varadakshine Pidugu Prabandha In Kannada

ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ । Varadakshine Pidugu Prabandha In Kannada Best No1 Essay

Varadakshine Pidugu Prabandha In Kannada, ವರದಕ್ಷಿಣೆ ಸಾಮಾಜಿಕ ಪಿಡುಗು ಪ್ರಬಂಧ ಕನ್ನಡ, ವರದಕ್ಷಿಣೆ ಬಗ್ಗೆ ಮಾಹಿತಿ, ವರದಕ್ಷಿಣೆ ಪರಿಣಾಮಗಳು ಪ್ರಬಂಧ, ವರದಕ್ಷಿಣೆ ಕಿರುಕುಳ ಪ್ರಬಂಧ, ವರದಕ್ಷಿಣೆ ಪರಿಣಾಮಗಳು ಕನ್ನಡ, varadakshine pidugu essay in kannada, varadakshina prabandha in kannada, varadakshine ondu samajika pidugu essay in kannada, dowry is a social scourge essay in kannada, varadakshine pidugu essay in kannada language

Varadakshine Pidugu Prabandha In Kannada

ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧದ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಬಗ್ಗೆ ಪ್ರಬಂಧ

ಭಾರತದ ಇಂದಿನ ಸಾಮಾಜಿಕ ಪಿಡುಗುಗಳಲ್ಲಿ ವರದಕ್ಷಿಣೆ’ಯ ಸಮಸ್ಯೆಯು ಬೃಹದಾಕಾರದ ಪೆಡಂಭೂತವಾಗಿ ಬೆಳೆದು, ಜನ-ಜನತೆಯನ್ನು ಕಡುಕಷ್ಟ ರೀತಿಯಲ್ಲಿ ಕಾಡುತ್ತಿದೆ. ಅದರಲ್ಲೂ ಈ ಭೂತ ಅಸಹಾಯಕ ಸಂಕೀರ್ಣ ಸ್ಥಿತಿಯಲ್ಲಿರುವ, ಬಡತನದ ಬೇನೆಯಿಂದ ಬಳಲಿ, ಬೆಂಡಾಗಿರುವ ಬಡಕುಟಂಬಗಳನ್ನೇ ಕಬಳಿಸುತ್ತಿದೆ.

ಕಬಳಿಸಿದರೂ ಕೊರತೆ ಇಲ್ಲವೋ ಏನೋ! ಇತ್ತ ಸಾಯಲೂ ಬಿಡದೆ, ಅತ್ತ ಬದುಕಲೂ ಅವಕಾಶ ಕೊಡದೆ, ಅಂತರ್ಪಿಶಾಚಿಯ ದುಸ್ಥಿತಿಯನ್ನು ಈ ಬಡಕುಟುಂಬಗಳಿಗೆ ವರಪ್ರದಾನ ರೀತಿಯಲ್ಲಿ ನೀಡಿದೆ.

ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ । Varadakshine Pidugu Prabandha In Kannada Best No1 Essay
ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ । Varadakshine Pidugu Prabandha In Kannada Best No1 Essay

ಇದರ ವ್ಯಾಪಕತೆ ವಿಶ್ವಾದ್ಯಂತ ಇದೆ. ಆದರೆ ಬಹು ವ್ಯಾಪಕತೆಯ ದುಷ್ಟರಿಣಾಮ ಭಾರತೀಯ ಬಡಕುಟುಂಬಗಳ ಮೇಲೇ ಉಂಟಾಗುತ್ತಿರುವುದು ಸ್ಪಷ್ಟವೆನಿಸಿದೆ.
ಇದು ಇಷ್ಟೊಂದು ವ್ಯಾಪಕ ರೀತಿಯಲ್ಲಿ ಬೆಳೆದಿರುವುದಂತೂ ನಿಜ.

ಹಾಗಾದರೆ ಉಗಮ ಉಂಟಾದ ಬಗೆ ತಾನೇ ಹೇಗೆ? ತುಂಬ ಹಿಂದೆ ಅಂದರೆ ಪ್ರಾಚೀನ ಕಾಲದಲ್ಲಿ ಇದರ ಪ್ರಚಾರ ಇರಲಿಲ್ಲ, ಮಧ್ಯಕಾಲೀನ ಸಮಾಜದಲ್ಲಿ ಇದರ ಉಗಮ ಉಂಟಾದಂತೆ ಕಂಡುಬಂದಿದೆ.

ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ

ತಾಯ್ತಂದೆ ಯರಿಗೆ ತಮ್ಮ ಮಗಳನ್ನು ತೌರುಮನೆಯಿಂದ ಗಂಡನ ಮನೆಗೆ ಕಳುಹಿಸಿಕೊಡುವಾಗ ಅವರ ಪ್ರೀತಿ, ವಾತ್ಸಲ್ಯದ ಕುರುಹಿನ ರೀತಿಯಲ್ಲಿ ಸಾಕಷ್ಟು ಅಮೂಲ್ಯವಾದ ಉಡುಗೊರೆ ಗಳನ್ನು ಚಿನ್ನ, ಬೆಳ್ಳಿ, ವಜ್ರ-ವೈಡೂರ್ಯ ಮುತ್ತು-ರತ್ನಗಳ ಆಭರಣಗಳ ರೀತಿಯಲ್ಲಿ ಮನಸ್ಸಂತೋಷದಿಂದ, ಶುಭ ಹಾರೈಕೆಯೊಂದಿಗೆ ನೀಡಿ ಕಳುಹಿಸುತ್ತಿದ್ದರು.

ಈ ಉಡುಗೊರೆಗಳು ಮುಂದಿನ ಅವರ ಜೀವನದಲ್ಲಿ ದುರ್ವಿಧಿವಶಾತ್ ಎಡರು-ತೊಡರುಗಳು ಸಂಭವಿಸಿದಾಗ ಸಹಾಯವಾಗಲೆಂಬ ದೂರಾಲೋಚನೆಯೂ ಅಂದಿನ ಪೂರ್ವಿಕರಲ್ಲಿ ಇದ್ದಿರ ಬಹುದು.
ಅಲ್ಲದೆ ಮನೆಗೆ ಕರೆತಂದ ಅಳಿಯನನ್ನು ಅತ್ತೆ ಮಾವಂದಿರು ತಮ್ಮ ‘ಅಳಿಯ’ ಎನ್ನುವ ಅಭಿಮಾನಕ್ಕಿಂತಲೂ ಮಿಗಿಲಾಗಿ, ತಮ್ಮ ಮಗನೆಂಬ ಭಾವನೆ ಯಲ್ಲಿಯೇ ಬರಮಾಡಿಕೊಳ್ಳುತ್ತಿದ್ದರು.

ಅಂದಿನ ಕಾಲವೂ ಸಹ ಕಾಮ ಡಾಮರಗಳ ಕೊರತೆ ಇಲ್ಲದೆ ಸುಸ್ಥಿತಿಯಲ್ಲಿದ್ದುದರಿಂದ ಮಗಳು-ಅಳಿಯನ ದಾಂಪತ್ಯ ಜೀವನವು ಹಾಲು-ಜೇನಿನಂತೆ ಬೆರೆತಿರಲೆಂಬ ಭಾವನೆಯಿಂದ ಅಳಿಯನಿಗೂ ಅಮೂಲ್ಯಾಭರಣಾದಿಗಳನ್ನು, ವಸ್ತುಗಳ ಉಡುಗೊರೆಗಳನ್ನು ನೀಡುತ್ತಿದ್ದರು.

varadakshine ondu samajika pidugu essay in kannada

ಆದರೆ ಅಳಿಯನಾಗುವವನು ಇವ್ಯಾವುದನ್ನೂ ಸ್ವ ಇಚ್ಛೆಯಿಂದ ಬಯಸುತ್ತಿರಲಿಲ್ಲ. ಅವನಿಗೆ ಮಡದಿಯ ಮಮತೆ, ಪ್ರೀತಿಯೇ ಸಕಲಾಭರಣ ಗಳೂ ಆಗಿರುತ್ತಿದ್ದವು.
ಕಾಲಚಕ್ರ ಉರುಳಿದಂತೆ ಭಾರತವು ಆರ್ಥಿಕ ಸಂಪತ್ತುಗಳ ದೃಷ್ಟಿಯಲ್ಲಿ ಬರಡಾಗತೊಡಗಿತು. ಜೀವನ ನಿರ್ವಹಣೆಯೂ ಸಾಮಾಜಿಕ ಅನ್ಯಾಯ, ಅನೀತಿಗಳ ಕಾರಣ ಕಷ್ಟಸಾಧ್ಯ ಎನಿಸಿತು. ಜೊತೆಗೆ ಹೆಣ್ಣು ಮಕ್ಕಳ ಅತಿ ಸಂತಾನವೂ ಕಾರಣ ಆಗಿದ್ದಿರಬಹುದು. ನಾಗರೀಕತೆಯ, ಸಂಸ್ಕೃತಿ-ಸಭ್ಯತೆಯ

ರಂಗದಲ್ಲಿ ಕುಹಕತೆ ಕಾಣಿಸಿಕೊಂಡಿತು. ಅದರಲ್ಲೂ ಆಂಗ್ಲ ಶಿಕ್ಷಣದ ವ್ಯಾಪಕತೆಯು ಹೆಚ್ಚಿದಂತೆಲ್ಲಾ, ಹೆಣ್ಣು ಹೆತ್ತ ತಾಯ್ತಂದೆಯರು ಅಂತಹ ಶಿಕ್ಷಿತರನ್ನು ಪುರಸ್ಕರಿಸುವ ಸಲುವಾಗಿ ತಮ್ಮ ಮಗಳನ್ನು ಕನ್ಯಾದಾನದ ರೂಪದಲ್ಲಿ ನೀಡುವುದರೊಂದಿಗೆ ಚರ-ಸ್ಥಿರ ಸಂಪತ್ತಿನ ರೂಪದಲ್ಲಿ ಅಳಿಯನನ್ನು ಸಂತೃಪ್ತಿಪಡಿಸಲು ತೊಡಗಿದರು.

Z

ಅದರಲ್ಲೂ ಶ್ರೀಮಂತ ಕುಟುಂಬದವರು ತಮ್ಮ ಶ್ರೀಮದ್ಭಾಂಭೀರ್ಯವನ್ನು ಉಳಿಸಿಕೊಳ್ಳುವ ಸಲುವಾಗಿ, ತಾವು (ನ್ಯಾಯದಿಂದಲೋ, ಅನ್ಯಾಯದಿಂದಲೋ) ಅರ್ಜಿಸಿದ ಸಂಪತ್ತಿನ ಸ್ವಲ್ಪ ಭಾಗವನ್ನು ಮಗಳ ಹಿತರಕ್ಷಣೆಯ ಸಲುವಾಗಿ, ಅಳಿಯನಾಗಿ ಬರುವವನಿಗೆ ನೀಡತೊಡಗಿದರು. ಈ ಸಂಪ್ರದಾಯವೇ ಅಳಿಯನಾಗುವವನನ್ನು ವರದಕ್ಷಿಣೆಯ ಲೋಭಕ್ಕೆ ನೂಕಿರಬಹುದು.

ಬಡ ಕುಟುಂಬದ ಕನೈಯರ ತಾಯ್ತಂದೆಯ ರಿಂದಲೂ ನಿರ್ದಾಕ್ಷಿಣ್ಯವಾಗಿ ಚಿನ್ನ, ಬೆಳ್ಳಿ, ಭೂಮಿ-ಕಾಣಿ ಯಥೇಚ್ಛವಾಗಿ ಪಡೆಯಲು ಶಿಕ್ಷಿತನೆನಿಸಿರುವ ಗಂಡಿನ ತಾಯ್ತಂದೆಯರು ಒತ್ತಾಯ ಪೂರ್ವಕವಾಗಿ ಪಡೆಯ ಬಯಸಿದರು.

ಹಿಡಿಸುತ್ತಿರಲಿಲ್ಲ. ಕ್ರಮೇಣ ಅವರಲ್ಲಿ “ಅಳಿಯ, ಮನೆ ತೊಳಿಯ’ ಎಂಬ ದುರ್ಭಾವನೆ ಉಲ್ಬಣಿಸತೊಡಗಿತು.ನಿರುದ್ಯೋಗ ಸಮಸ್ಯೆಯೂ ಸಹ ಶಿಕ್ಷಿತ ಅವಿವಾಹಿತ ಯುವಕರನ್ನೂ “ವರದಕ್ಷಿಣೆಯ ಕಡೆ ಆಕಾಡೆಗಿತು. ಬಡಕುಟುಂಬದವರು, ನವಿಲು ಕುಣಿಯಿತೆಂದು ಕೆಂದಕ್ಕಿ ಪುಕ್ಕ ಕಿತ್ತುಕೊಂಡ ಹಾಗೆ ಮುಂದಿನ ದುರ್ಗತಿಯ ಕಡೆ ದೂರಾಲೋಚಿಸದೆ, ಮಗಳ ಮೇಲಿನ ಮಮಕಾರ ದಿಂದ ಸಾಲ-ಸೋಲ ಮಾಡಿ, ಧನವನ್ನು ವರದಕ್ಷಿಣೆಯ ರೂಪದಲ್ಲಿ ನೀಡಿ, ತಮ್ಮ ಬಾಳನ್ನೇ ಬರಡು ಮಾಡತೊಡಗಿದರು.

Dowry is a social scourge essay in kannada

images?q=tbn:ANd9GcTY0rSpzAuw1hf9FDASDiilLu1ycw1Jkw3yuw&usqp=CAU

ಇದರಿಂದ ಧನದ ದುರಾಸೆ ವರನಿಗೂ, ವರನ ತಾಯ್ತಂದೆಯರಿಗೂ ಹೆಚ್ಚಿತು. ಕನ್ಯಾಪಿತೃಗಳನ್ನು ಧನದ ದುರಾಸೆಯ ಫಲವಾಗಿ ಶೋಷಿಸ ತೊಡಗಿದರು. ಕನ್ನೆಯ ರೂಪ-ಲಾವಣ್ಯ, ಗುಣ-ಲಕ್ಷಣಗಳ ಬೆಲೆ ಈ ವರದಕ್ಷಿಣೆಯ ಪ್ರಾಬಲ್ಯದ ಮುಂದೆ ದುಗ್ಗಾಣಿಗೂ ಬೆಲೆ ಇಲ್ಲದಂತಾಯಿತು. ‘ವರದಕ್ಷಿಣೆ’ಯು `ವರವಿಕ್ರಯ’ದ ರೂಪ ತಾಳಿರುವುದೇನೋ! ಎನ್ನುವಂತಹ ಅಧೋಗತಿಗೆ ಇಳಿಯಿತು.
ಈಗಂತೂ ವರನ ಕಡೆಯವರು ಕಕ್ಕಸು ಡಬ್ಬವನ್ನು ಕೊಡದಿದ್ದರೂ ಕನ್ಯಾಪಿತೃಗಳೊಂದಿಗೆ ಜಗಳಕ್ಕೆ ಕಾಲೆಗೆಯುವುದು ಪ್ರಾರಂಭವಾಗಿದೆ. ಕೆಲವರು ನಗದು ಹಣ ಅಪೇಕ್ಷಿಸಿದರೆ, ಇನ್ನು ಕೆಲವರು ಅಷ್ಟೇ ಬೆಲೆಯ ಟಿ.ವಿ.,

ರೆಫ್ರಿಜಿರೇಟರ್ ಮೊದಲಾದ ಬೆಲೆಬಾಳುವ ಸಾಮಗ್ರಿಗಳ ಬಗ್ಗೆ ಒತ್ತಾಸೆ ತರುತ್ತಿರುವುದನ್ನು ದಿನಬೆಳಗಾದರೆ ನಾವು ನೋಡುತ್ತಲೇ ಇದ್ದೇವೆ.
ಸರ್ಕಾರ ವರದಕ್ಷಿಣೆಯ ವಿರುದ್ಧವಾಗಿ ಕಾನೂನು ಮಾಡಿದೆ. ಕೇವಲ ಕಾನೂನಿನಿಂದ ಈ ಪಿಡುಗನ್ನು ದೂರಮಾಡಲು ಸಾಧ್ಯವಿಲ್ಲ. ವರ ಹಾಗೂ ಅವನ ತಾಯಿತಂದೆಯರಲ್ಲಿ ಹೃದಯವಂತಿಕೆ ಮೊಳೆಯಬೇಕು. ವರದಕ್ಷಿಣೆಯನ್ನು ಕೊಟ್ಟ ನಂತರವೂ ಮತ್ತು ಮತ್ತಷ್ಟು ತರಲು ವಿವಾಹಿತೆಯನ್ನು ತಾಯಿಯ ಮನೆಗೆ ಅಟ್ಟಿ, ಇಲ್ಲದ ಅನಾಹುತಗಳಿಗೆ ಎಡೆಮಾಡಿಕೊಡುತ್ತಿರುವ ಪ್ರಸಂಗಗಳೂ ಈಗೀಗ ಹೆಚ್ಚುತ್ತಿವೆ.

varadakshine pidugu essay in kannada

ಇಂದು ಈ ಪಿಡುಗಿನಿಂದ ಪಾರಾಗಲು ಹೆಣ್ಣುಮಕ್ಕಳು ಸುಶಿಕ್ಷಿತರಾಗಿ, ಉದ್ಯೋಗಶೀಲೆಯರೆನಿಸಬೇಕು, ತಮ್ಮ ಕಾಲಮೇಲೆ ತಾವು ಜೀವನ ನಿರ್ವಹಣೆಯ, ದಾರಿಯಲ್ಲಿ ನಿಲ್ಲಬೇಕು, ಸಮಾಜದ ಸಭ್ಯರು ವರದಕ್ಷಿಣೆ’ಯ ಹೆಸರೆತ್ತುವವರನ್ನು ಕಂಡಲ್ಲಿಯೇ ತೇಜೋವಧೆ ಮಾಡಬೇಕು, ಜೊತೆಗೆ ಶಿಕ್ಷಿತ ಯುವಕರನ್ನೇ ಬಯಸದೆ, ಸ್ವಾವಲಂಬನೆಯ ಮಾರ್ಗದಲ್ಲಿ ನಡೆಯುತ್ತಿರುವ ಅಶಿಕ್ಷಿತ ಅಂದರೆ ಅಷ್ಟಾಗಿ ಓದದೆ ಇರುವವರನ್ನೂ, ಗುಣಶೀಲರೆನಿಸಿದ್ದರೆ ಮದುವೆ ಆಗಲು ಕನ್ನೆಯರು ಸ್ವತಃ ಮುಂದೆ ಬರಬೇಕು.

ಸ್ವಲ್ಪಮಟ್ಟಿಗೆ ಅಂತರ್ಜಾತೀಯ ವಿವಾಹವೂ ಸಹ ವರದಕ್ಷಿಣೆಯ ಪಿಡುಗನ್ನು ಹೋಗಲಾಡಿಸಲು ಸಹಾಯ ಮಾಡುವುದು. ವರ್ಣಸಂಕರತೆಗೆ ವರ, ಕನ್ನೆ ಎರಡೂ ಕಡೆಯವರ, ಬಲಿ ಆಗದಿರುವುದೂ ಸಹ ಈ ನಿಟ್ಟಿನಲ್ಲಿ ಅನುಕೂಲವೇ.
ಒಟ್ಟಾರೆ ಹೇಳುವುದಾದರೆ ಪ್ರಸ್ತುತ ಸ್ಥಿತಿಯಲ್ಲಿ ವಿದ್ಯಾವಂತರು, ಸಭ್ಯರು

ಸಾಕಷ್ಟು ಸುವ್ಯವಸ್ಥಿತ, ಸ್ವಯಂಚಾಲಿತ ಸಂಘಗಳನ್ನು ಸ್ಥಾಪಿಸಿಕೊಂಡು, ನಿರ್ವಂಚನೆಯಿಂದ ಕಾರ್ಯರೂಪಕ್ಕಿಳಿದರೂ ಸಹ, ಬಹುಮಟ್ಟಿಗೆ, ಈ ಪಿಡುಗಿನಲ್ಲಿ ಸಿಕ್ಕಿರುವವರನ್ನು ಪಾರು ಮಾಡಬಹುದು. ಆಗ ಸರ್ಕಾರದ ಕಾನೂನೂ ಸಹ ಫಲಪ್ರದ ಆಗುವುದು. ದೇಶದ ಏಳೆಗೂ ದಾರಿ ಆಗುವುದು.

ಇನ್ನಷ್ಟು ಓದಿ……

Leave a Reply

Your email address will not be published. Required fields are marked *