New Year Wishes in Kannada, ಹೊಸ ವರ್ಷದ ಶುಭಾಶಯಗಳು 2022, new year quotes in kannada and greetings with kavanagalu, hosa varshada shubhashayagalu
ಪರಿವಿಡಿ
new year wishes in kannada
ಸ್ಪರ್ಧಾವಾಣಿ ಹಳೆ ವರ್ಷದ ಸೋಲು ಎಲ್ಲವನ್ನೂ ಇಲ್ಲೇ ಬಿಟ್ಟು ಬಿಡಿ .
ಗೆಲವುಗಳಂತೂ ನೆನಪು ಇಟ್ಟುಕೊಳ್ಳಬೇಡಿ .
ಪ್ರತಿಯೊಂದು ಹಳೆ ವರ್ಷ ಮುಗಿದು ಹೊಸ ವರ್ಷ ಬರಬೇಕಾದರೆ ನಿಮಗೆ ನೀವೆ ಒಂದು ಚೂರು ಪ್ರಶ್ನೆ ಕೇಳಿಕೊಳ್ಳಿ ..
ಈ ಒಂದು ವರ್ಷದಲ್ಲಿ ನಾನು ಏನೇನು ಮಾಡಿದೆ ,
ಜನಕ್ಕೆ ಎಷ್ಟು ಒಳ್ಳೇದು ಮಾಡ್ಡೆ
ನಿಮಗೆ ಎಷ್ಟು ಜನ ಒಳ್ಳೇದು ಮಾಡಿದ್ರೂ ಅದನ್ನ ಮರಿಬೇಡಿ ..
ನಿಮ್ಮ ಹಿಂದೆಎಷ್ಟು ಜನ ಇದ್ರೂ ,
ವರ್ಷ ಮುಗಿಯುವಷ್ಟರಲ್ಲಿ ಎಷ್ಟು ಜನ ಇನ್ನೂ ಅಲ್ಲೇ ಇದ್ದಾರೆ
ಎಷ್ಟು ಜನ ದಾಟಿ ಹೋದರು .. ಎಷ್ಟು ಜನ ನಿಮ್ಮನ್ನ ಉಪಯೋಗಿಸಿಕೊಂಡು ಮುಂದೆ ಹೋದರು .
ಅದನ್ನು ಮರಿಬೇಡಿ .. ನಿಮಗೆ ನೀವೆ ಅಷ್ಟೇ ಶಾಶ್ವತ ,
ನಿಮಗೆ ನೀವೆ ರಾಜ , ರಾಣಿ . ಇದರ ಮಧ್ಯೆ ಒಂದಷ್ಟು ಜನಕ್ಕೆ ಗೌರವ ಕೊಡೋಣ ,
ಇನ್ನೊಂದಷ್ಟು ಜನರ ಗೌರವವನ್ನ ಸಂಪಾದನೆ ಮಾಡೋಣ….
ಎಲ್ಲರಿಗೂ ಹೊಸವರ್ಷದ ಶುಭಾಶಯಗಳು…….
ಹೊಸ ವರ್ಷದ ಶುಭಾಶಯಗಳು ,
ನಿಮ್ಮೆಲ್ಲರ ಬದುಕಲಿ ಜೇನುಹೊಳೆ ಹರಿಯಲಿ ..
ಬಾಳು ಎಂದೆಂದಿಗೂ ಬೆಳಗುತಿರಲಿ ..
ಜಗವನ್ನೇ ಗೆಲ್ಲುವ ಶಕ್ತಿ ನಿಮ್ಮದಾಗಲಿ ..
ವರ್ಷವಿಡೀ ಹರ್ಷದ ಸುಗ್ಗಿ ನಿಮ್ಮೊಟ್ಟಿಗಿರಲಿ ..
ಮುಕ್ತಾಯವೆಂದರೆ ಮುಕ್ತಾಯವಲ್ಲ ,
ಹೊಸದೊಂದು ಹೊಸತನದ ಆರಂಭ ,
ಹಳೆಯ ಕಹಿ ಕ್ಷಣಗಳೆಲ್ಲ ಅಳಿಯಲಿ ,
ಜಾರಿದ ಸಿಹಿ ಕ್ಷಣಗಳೆಲ್ಲ ಮರಳಿ ಕೈಸೇರಲಿ ,
ಎಲ್ಲರ ಬಾಳ ಅಂಧಕಾರ ಕಳೆಯಲಿ ,
ನವ ವಸಂತವು ಸರ್ವರ ಬಾಳು ಬೆಳಗಲಿ …
……………………………………………………………………..
ಹೊಸ ವರುಷ ಮೂಡುತಿದೆ ಸವಿ ಕನಸ ತೋರುತಿದೆ
ಮನ ಕುಣಿದು ನಲಿಯುತಿದೆ ತನು ಒಲಿದು ಮಿಡಿಯುತಿದೆ
ದಿನ ಸರಿದು ನಡೆಯುತಿದೆ ಹೊಸ ವರುಷ ಮೂಡುತಿದೆ !
ಪುಟಿದೇಳುತಿದೆ ಹೊಸ ಉತ್ಸಾಹ ಮರೆತು ಸಾಗುವ ಹಳೆ
ಮಾತ್ಪರ್ಯ ಏಳು ಬೀಳಿನ ನಡುವೆ ಸಂಸಾರ ಪ್ರೀತಿ ಅರಳಿದ
ದಿನವೆ ಸುಖಸಾರ ! ವರುಷ ಹೊಸತಾಗಲಿ ವಿರಸಕೆ ಸೋಲಾಗಲಿ
ಹರುಷದ ಮಳೆ ಹೊಯ್ಯಲಿ ಸರಸದ ಸವಿ ಹರಿಯಲಿ ಹಸಿರಿನ
ಸಿರಿ ಚಿಮ್ಮಲಿ ವರುಷ ಹೊಸತಾಗಲಿ …
new year wishes in kannada
…………………………………………………..
ಹೊಸ ಕ್ಯಾಲೆಂಡರಗೆ ಅಷ್ಟೆ ಹೊಸ ವರುಷ
ಇಂದು ನಮ್ಮಲ್ಲಿ ಹೊಸ ವರುಷದ ಸಿರಿ
ಯುಗಾದಿಯಂದು ಸಕಾರಾತ್ಮಕ ಆಲೋಚನೆ
ಸಾಕಾರಗೊಂಡು ಸ್ಥಿರಗೊಂಡ ದಿನದಂದು
ನನ್ನ ಬಾಳಲಿ ಹೊಸ ವರುಷದ ಆಚರಣೆ .
ಹೊಸ ವರುಷ ಹೊಸ ಹರುಷವ ತರಲಿ
ಹೊಸ ನಾಳೆಗಳು ನೆನ್ನೆಯ ನೋವ ಕಳೆಯಲಿ
ಪ್ರತಿದಿನ ನಗುವಾಗಲಿ ಶುಭದಿನವಾಗಲಿ ಹೊಸತನದ
ಹುರುಪು ಹಾರೈಕೆಯಾಗಲಿ
……………………………………………………………..
ಹೊಸ ವರುಷದ ಶುಭಾಶಯಗಳು
ಯುಗಾದಿಯೂ ಹೊಸವರ್ಷವು
ಹೌದು ಮತ್ತು ಜನೆವರಿ 1 ಕೂಡಾ ಹೊಸವರ್ಷ
ಹೌದು ಎರಡೂ ಎಣ್ಣೆ ಹಬ್ಬಗಳು
ಒಂದು ತಲೆಗೆ ಎಣ್ಣೆ ಹಚ್ಚಿಕೊಳ್ಳುವ
ಇನ್ನೊಂದು ಬಾಯಿಗೆ ಹಾಕಿಕೊಳ್ಳುವ
ಹಬ್ಬಗಳಾಗಿವೆ , 2 ನಮ್ ದೇಹಕ್ಕೆ ಬೇಕಾಗಿವೆ .
ಭೇದಭಾವ ಬೇಡ .
Enjoy your Day .. Happy New Year 2022
ಹೊಸ ವರ್ಷದ ಶುಭಾಶಯಗಳು
ನಮ್ಮ ಸೈನಿಕರಿಗೆ ಮತ್ತು ನಮಗೆ ಅನ್ನ
ನೀಡುವ ರೈತರಿಗೆ .
ಸದಾ ನಿಮ್ಮ ಜೀವನದಲ್ಲಿ 2022 ರಿಂದ ಹೊಸ ಹರುಷ ತುಂಬಿರಲಿ ,
ಹೊಸ ವರ್ಷದ ಶುಭಾಶಯಗಳು ,
ಎಲ್ಲಾರಿಗೂ ನನ್ನ ಕಡೆಯಿಂದಲೂ
ಹೊಸ ವರ್ಷದ ಹಾರ್ದಿಕ್ ಶುಭಾಶಯಗಳು
ಪ್ರತಿ ಕ್ಷಣವೂ ಹೊಸಕ್ಷಣವೇ ಪ್ರತಿದಿನವೂ
ಹೊಸದಿನವೇ ಏಕೆಂದರೆ ಕಳೆದ ಒಂದು ಕ್ಷಣವೂ ಮರಳಿ ಸಿಗಲ್ಲ
ವರ್ಷ ಬದಲಾಯಿತೇ ಹೊರತು
ಮನುಷ್ಯನಲ್ಲಿದ್ದ ಅಸೂಯೆ ,
ಅಹಂಕಾರಗಳು ಬದಲಾಗಲಿಲ್ಲ
ಅವುಗಳು ಬದಲಾದಾಗಲೇ ಹೊಸವರ್ಷಕ್ಕೊಂದು ಅರ್ಥ .
new year wishes in kannada
……………………………
ಹಳೆ ನೆನಪು ಹೊಸ ಹುಮ್ಮಸ್ಸು ,
ಹೊಸ ಹುರುಪು ಅರಳಲಿ ಮೊಗದ ತೇಜಸ್ಸು
ಜೊತೆಗೆ ಸಿಗಲಿ ಬದುಕಿಗೆ ಯಶಸ್ಸು .. !
ಹಳೆ ನೆನಪು ಹೊಸ ಹುಮ್ಮಸ್ಸು ,
ಹೊಸ ಹುರುಪು ಅರಳಲಿ ಮೊಗದ
ತೇಜಸ್ಸು ಜೊತೆಗೆ ಸಿಗಲಿ ಬದುಕಿಗೆ ಯಶಸ್ಸು .. !
NEW YEAR 2022
ನಮ್ ಕಡೆ ” New Year ” ಅಷ್ಟ ನೋಡ್ರಿ ಪಾ .
Happy ಇರುದು , Sad ಇರುದು , ಅದ ನಿಮಗ ಬಿಟ್ಟಿದ್ದ .
ನಾವೆಂಗ್ ಹೇಳಾಕ ಬರ್ತೇತಿ ? ಹೌದ್ದೋ
ಮತ್ತೆ ಹೊಸಾ ವರ್ಷದಾಗ ಜೀವೃದ್ದ ಪುಟ ,
ನೀ ಹಗರ್ಕ ತಿರುವಿರ Turn ಆಕ್ಕೇತಿ , ಜೋರ್ಸೆ ತಿರುವಿರ Torn ಆಕ್ಕೇತಿ .
……………………………..
ನನ್ನ ಎಲ್ಲಾ ಪ್ರೀತಿಯ ಸ್ನೇಹಿತರಿಗೂ ಹಾಗೂ ಸಹೋದರ ,
ಸಹೋದರಿಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು .
ಹೊಸತನವ ಸಂತಸದಿ ಸ್ವಾಗತಿಸುತ್ತ ನಗುತ್ತ ಎಲ್ಲರ ನಗಿಸುತ್ತ
ಬಾಳೋಣ ಹೊಸ ಭರವಸೆಯೊಂದಿಗೆ ಜೀವಿಸೋಣ .
HAPPY NEW YEAR 2022
ಹೊಸ ವರುಷ ತರಲಿ ಎಲ್ಲರ ಬಾಳಲ್ಲಿ ಹರುಷ
ಕಹಿ ಘಟನೆಗಳನ್ನು ಮರೆಯೋಣ ಸಿಹಿ ಪುಟಗಳನ್ನು
ತೆರೆಯೊಣ ಹೊಸ ವರ್ಷದಿ ಹೊಸ ಸಂಕಲ್ಪ ತೊಡೋಣ
ಹೊಸ ವರ್ಷವ ಅರ್ಥಪೂರ್ಣವಾಗಿ ಆಚರಿಸೋಣ
……………………………………
ಹೊಸ ವರ್ಷದ ಶುಭಾಶಯಗಳು ,
ಹಳೆ ನಂಟು ಹೊಸ ಗಂಟು ಇನ್ನೊಂದು ವರ್ಷಕ್ಕೆ
ಪಾದಾರ್ಪಣೆ ಭಾಗ್ಯ ನಮಗುಂಟು ,,
ಹಳೆ ವರಸೆಯ ಹೊಸ ಭರವಸೆಯೊಂದಿಗೆ ಮುನ್ನಡೆಯೋಣ …….
ಹಳೆ ನೆನಪು ಹೊಸ ಹುಮ್ಮಸ್ಸು ,
ಹಳೆಯ ನೆನಪುಗಳನ್ನು ಉಳಿತಾಯ ಖಾತೆಯಲ್ಲಿ ಜಮೆ ಮಾಡಿರುವೆ ..
ಹೊಸ ಹುಮ್ಮಸ್ಸನ್ನು ಇಂದು ರಾತ್ರಿ ಹನ್ನೆರಡು
ಗಂಟೆಗೆ ಖರ್ಚು ಮಾಡುವೆ .
ಹೊಸ ವರ್ಷದ ಶುಭಾಶಯಗಳು ,
ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆರೋಗ್ಯ ಐಶ್ವರ್ಯ ,
ನೆಮ್ಮದಿ , ನೀಡಲಿ ಹೊಸ ವರುಷದ ಹೊಸ ಕನಸುಗಳು ನೆರವೇರಲಿ ,,,,
ಹೊಸ ವರ್ಷದ ಶುಭಾಶಯಗಳು
ದ್ವೇಷದ ಕಿಚ್ಚು ಶಾಂತವಾಗಲಿ ಅಹಂ
ಇಂದೇ ಸುಟ್ಟು ಹೋಗಲಿ ಅಸೂಯೆ
ಎಂದಿಗೂ ಬೆಳೆಯದಿರಲಿ ಪ್ರೀತಿಯ ಬಳ್ಳಿ
ಹಬ್ಬುತಿರಲಿ ನಂಬಿಕೆ ಬೆಳೆದು ಹೆಮ್ಮರವಾಗಲಿ
ಸಂಬಂಧಗಳ ಬೆಸುಗೆ ಗಟ್ಟಿಯಾಗಲಿ ಹೊಸವರ್ಷ
ಎಂದಿಗೂ ಹರುಷವಾಗಿರಲಿ ಸಮಸ್ತ
ಕನ್ನಡ ನಾಡಿನ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು
ಹೊಸ ವರ್ಷ
ವರುಷದಿ೦ದ ಗೋಡೆಯ ಮೊಳೆಗೆ ನೇತಾಡಿಕೊಂಡು
ತಿಂಗಳಿಗೊಮ್ಮೆ ಮಗ್ಗಲು ಬದಲಿಸಿಕೊಂಡಿದ್ದ
ಕ್ಯಾಲೆಂಡರ್ಗೆ ವಿಶ್ರಾಂತಿ ನೀಡುವ ಸಮಯ ಬಂದೆಬಿಡ್ತು
ಹೊಸ ಕ್ಯಾಲೆಂಡರ್ ಜೊತೆಗೆ ನಮ್ಮ ಯೋಚನೆಗಳು
ಯೋಜನೆಗಳು ಹೊಸತಾಗಿರಲಿ ಬದುಕಿಗೆ ಭರವಸೆ ಬೆಳಕಾಗಿರಲಿ ..
ಶುಭಾಶಯಗಳು
ಹೊಸ ವರ್ಷದ ಶುಭಾಶಯಗಳು ,
ಹೊಸ ವರ್ಷ ಪ್ರತೀ ಬಾರಿಯೂ ಬರುತ್ತೇ …
ಸಂಕಲ್ಪ ಬದಲಾಗಲೀ ನಮ್ಮಲ್ಲಿನ ಕೆಟ್ಟದ್ದೂ ಬಿಟ್ಟುಹೋಗಲೀ …. !!
ಒಳ್ಳೇದ್ದು ಅಳವಡಿಸಿಕೊಳ್ಳೋ ಯೋಚನೆ ಬರಲೀ … !!
” ಬರಹ ಬೇರೆಯವರಿಗಲ್ಲ ” ನಮ್ಮ ಬದುಕು ಬೇರೆಯವರಿಗೂ ”
ಮಾದರಿಯಂತಿರಲಿ ” ಅಷ್ಟನ್ನೇ ಬೇಡುವೆ ಈ ವರ್ಷ ನನ್ನ ರಾಮನಲ್ಲಿ … !!
…………………………………………………………………
ಹೊಸ ವರುಷದ ಹಾರ್ದಿಕ ಶುಭಾಶಯಗಳು .
ನೋವುಗಳ ಊರಿನಲ್ಲಿ ಅಲೆದಾಡಿ ಬಂದ ಜೀವಿಗಳಿಗೆ ,
ಇನ್ನಾದರೂ ನೆಮ್ಮದಿಯ ಸಂತಸ ,
ಆರೋಗ್ಯ ಭಾಗ್ಯವು ನವ ವರ್ಷದಲ್ಲಿ ಪ್ರಾಪ್ತಿಯಾಗಲಿ
ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ .
…………………………………………………………………
ನಡುವೆ ಅಂತರವಿರಲಿ ಹೊಸ ವರ್ಷದ ಹುಮ್ಮಸ್ಸಿನಲ್ಲಿ
ರೋಗದ ವಾಸ್ತವ ಮರೆತರೆ ಕರೆಯುವುದು ಕರೋನ
ಕೊಂಡೊಯ್ಯುವುದು ನಿಮ್ಮನ್ನ ಇರಲಿ ಹೊಸ ವರುಷದ
ಹರುಷ ಮನದಲ್ಲಿ ಪರಿಸರ ರಕ್ಷಣೆ ಕೂಡ ತಲೆಯಲ್ಲಿ ಮರೆಯದಿರಿ .
…………………………………………………………………
ಕಹಿ ನೆನಪುಗಳನ್ನ ಅಳಿಸೋಣ ,
ಸಿಹಿ ನೆನಪುಗಳನ್ನ ಅರಸೋಣ .
new year kannada
ಹೊಸ ವರ್ಷದ ಶುಭಾಶಯಗಳು ,
ಬೆಳಗಲೀ ಪ್ರತಿಯೊಬ್ಬರ ಬಾಳು ಹರಡಲೀ ಸಮರಸದ
ಜೀವನ ಸಾಗುತಿರಲಿ ಹೀಗೆಯೇ ನಮ್ಮಯ ಪಯಣ …
ಹೊಸ ವರ್ಷದ ಶುಭಾಶಯಗಳು ..
new year in kannada
ಈ ದಿನ ಹಳೆ ಕಹಿ ಹೊಸ ವರುಷದ
ಘಟನೆಗಳ ಸುದಿನ ನಿಮ್ಮ ಬಾಳನ್ನು ಬೆಳಗಿಸಲಿ
ಪ್ರತಿದಿನ ಅದೇ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ
ನ್ಯೂ ಇಯರ್ ನ ಮೊದಲ ದಿನ
all Happy new year
happy new year kannada 2022
ಹೊಸ ವರ್ಷದ ಶುಭಾಶಯಗಳು ,
ಬದಲಾವಣೆ ಜಗದ ನಿಯಮ ಬದುಕಿನಲ್ಲಿ ಬದಲಾವಣೆ ತರೋಣ …
ಹೊಸ ವರ್ಷದ ಹಾದಿಯಲ್ಲಿ ನಾವೆಲ್ಲ ಸಂಕಲ್ಪ ಮಾಡೋಣ ..
ಅಭಿವೃದ್ಧಿ ಮಾರ್ಗದಲ್ಲಿ ಸಂಚಾರಿಸೋಣ ….
happy new year 2022 kannada
ಹೊಸ ವರ್ಷದ ಶುಭಾಶಯಗಳು ,
ಅಂಕಿ ಬದಲಾದಂತೆ ಅದರ ಮಹತ್ವ ಬದಲಾಗತ್ತೋ ಇಲ್ಲವೋ ಗೊತ್ತಿಲ್ಲ ಆದರೆ ,,,,
ಕಾಲದ ಪರಿಸ್ಥಿತಿ , ಜನರ ಮನಸ್ಥಿತಿ …..
ಬದುಕಿನ ಸ್ಥಿತಿಗತಿ ಬದಲಾಗೆ ಆಗುತ್ತದೆ ಎಲ್ಲರಿಗೂ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು