Badami Chalukya in Kannada, ಬಾದಾಮಿ ಚಾಲುಕ್ಯರ ಇತಿಹಾಸ, badami chalukya kannada, badami chalukya dynasty in kannada, information, pdf, dynasty, badami chalukya history in kannada
Badami Chalukya in Kannada
- ಪ್ರಸ್ತುತ ಬಾದಮಿಯು – ಇಂದಿನ ಬಾಗಲಕೋಟ ಜಿಲ್ಲೆಯಲ್ಲಿದೆ
- ಚಾಲುಕ್ಯರ ರಾಜಧಾನಿ – ಬಾದಾಮಿ
- ಬಾದಾಮಿಯ ಪ್ರಾಚೀನ ಹೆಸರು – ವಾತಾಪಿ
- ಬಾದಾಮಿ ಚಾಲುಕ್ಯರ ರಾಜ್ಯ ಲಾಂಛನ – ವರಾಹ
- ಬಾದಾಮಿ ಚಾಲುಕ್ಯರು ರಾಜ್ಯ ಭಾರ ಮಾಡಿದ್ದ ಅವಧಿ ಕ್ರಿ.ಶ. 6 – 8 ಶತಮಾನದವರೆಗೆ
- ಬಾದಾಮಿ ಚಾಲುಕ್ಯರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ವಾಸ್ತುಶಿಲ್ಪ ಶೈಲಿಯ ಹೆಸರು – ವೇಸರ ಶೈಲಿ ( ಕರ್ನಾಟಕ ಶೈಲಿ )
- ಬಾದಾಮಿ ಚಾಲುಕ್ಯರ ಕಲೆ ಬೆಳವಣಿಗೆಯನ್ನು “ಸುವರ್ಣ ಯುಗ ” ಎಂದು ಹೇಳಿದವರು – ಡಾ//.ಶಿವರಾಮ
- ಕರ್ನಾಟಕವನ್ನಾಳಿದ ಮೊಟ್ಟಮೊದಲ ವಿಶಾಲ ಸಾಮ್ರಾಜ್ಯ
- ಸ್ಥಾಪಕರು – ಜಯಸಿಂಹ ಮತ್ತು ರಣರಾಗ
- ರಾಜಧಾನಿ – ವಾತಾಪಿ ( ಬಾದಾಮಿ )
- ಲಾಂಛನ – ವರಾಹ
badami chalukya information in kannada
- ಒಂದನೆಯ ಪುಲಿಕೇಶಿ (ಕ್ರಿ.ಶ. ೫೪೩ – ೫೬ ೬ )
- ಒಂದನೆಯ ಕೀರ್ತಿವರ್ಮ (ಕ್ರಿ.ಶ. ೫೬ ೬ – ೫೯ ೭ )
- ಮಂಗಳೇಶ (ಕ್ರಿ.ಶ. ೫೯ ೭ – ೬ ೦೯ )
- ಇಮ್ಮಡಿ ಪುಲಿಕೇಶಿ (ಕ್ರಿ.ಶ. ೬ ೦೯ – ೬ ೪೨ )
- ಒಂದನೆಯ ವಿಕ್ರಮಾದಿತ್ಯ (ಕ್ರಿ.ಶ. ೬ ೫೫ – ೬ ೮೦ )
- ವಿನಯಾದಿತ್ಯ (ಕ್ರಿ.ಶ. ೬ ೮೦ – ೬ ೯ ೬ )
- ವಿಜಯಾದಿತ್ಯ (ಕ್ರಿ.ಶ. ೬ ೯ ೬ – ೭೩೩ )
- ಎರಡನೆಯ ವಿಕ್ರಮಾದಿತ್ಯ (ಕ್ರಿ.ಶ. ೭೩೩ – ೭೪೬ )
- ಎರಡನೆಯ ಕೀರ್ತಿವರ್ಮ (ಕ್ರಿ.ಶ. ೭೪೬ – ೭೫೩ )
- ಕ್ರಿ.ಶ. ೭೫೩ರಲ್ಲಿ ರಾಷ್ಟ್ರಕೂಟರ ದಂತಿದುರ್ಗನು ಕೀರ್ತಿವರ್ಮನ್ನು ಸೋಲಿಸುವುದರೊಂದಿಗೆ ಈ ಚಾಲುಕ್ಯ ಸಾಮ್ರಾಜ್ಯಕ್ಕೆ ತೆರೆ ಬಿದ್ದಿತು.
Badami Chalukya in Kannada history
1 ನೇ ಪುಲಿಕೇಶಿ ( ಕ್ರಿ.ಶ. 540/547 ರಿಂದ 566/567 )
- ಚಾಲುಕ್ಯರ ನಿಜವಾದ ಸಂಸ್ಥಾಪಕ
- ಕದಂಬರ ಸಾಮಂತಿಕೆಯನ್ನು ಕಿತ್ತೊಗೆದು ಸ್ವತಂತ್ರ ಘೋಷಿಸಿದ ಮೊದಲ ಅರಸು
- ಬಾದಾಮಿಯನ್ನು ರಾಜಧಾನಿಯಾಗಿ ನಿರ್ಮಿಸಿದ .
- ಇವನ ಬಿರುದುಗಳು – ಶ್ರೀ ವಲ್ಲಭ , ಸತ್ಯಾಶ್ರಯ , ಧರ್ಮಮಹಾರಾಜ , ರಣವಿಕ್ರಮ .
- ಮಂಗಳೇಶನ ಮಹಾಕೂಟ ಸ್ತಂಭಶಾಸನದಲ್ಲಿ ‘ ಪ್ರಿಯತನುಜ ಎಂದು ವರ್ಣನೆ
- ಇವನ ರಾಣಿ ದುರ್ಲಬ ದೇವಿ ಮತ್ತು ಇಂದುಕಾಂತಿ
- ಮಕ್ಕಳು – ಕೀರ್ತಿವರ್ಮ ಮತ್ತು ಮಂಗಳೇಶ .
Badami Chalukya in Kannada
1 ನೇ ಕೀರ್ತಿವರ್ಮ : ( ಕ್ರಿ.ಶ. 567-598 ) .
- ಕೊಡಚಿಯ ತಾಮ್ರಪಟದಲ್ಲಿ ಕತ್ತಿಯರಸನೆಂದು ಇವನನ್ನು ಉಲ್ಲೇಖಿಸಿದೆ .
- ಮಹಾಕೂಟ ಸ್ತಂಭಶಾಸನವು ಇವರ ಸೈನಿಕ ದಿಗ್ವಿಜಯ ತಿಳಿಸುತ್ತದೆ .
- ಐಹೊಳೆ ಶಾಸನವು ಇವನನ್ನು ” ನಳರ ಮೌರ್ಯರ ಕದಂಬರ ಕಾಳರಾತ್ರಿ ” ಎಂದು ವರ್ಣಿಸಿದೆ .
- ಬಾದಾಮಿಯ ವೈಷ್ಣವ ಗುಹಾಲಯ ಇವನ ಆಜ್ಞೆಯಂತೆ ನಿರ್ಮಾಣವಾಯಿತು .
- ಇವನ ಮಕ್ಕಳು -2 ನೇ ಪುಲಿಕೇಶಿ , ವಿಷ್ಣುವರ್ಧನ , ಧಾರಾಶಯ , ಜಯಸಿಂಹ ಮತ್ತು ಬುದ್ಧ ವರಸ .
- ಬಳ್ಳಾರಿಯ ನಳರು , ಶಿವಮೊಗ್ಗದ ಸೇಂದ್ರಕರು , ಕೊಂಕಣದ ಮೌರ್ಯರು ಬನವಾಸಿ ಕದಂಬರು ಇವನಿಂದ ಸೋತರು .
Badami Chalukya in Kannada Histroy
ಮಂಗಳೇಶ ( ಕ್ರಿ.ಶ. 598-603 ) .
- ಕೀರ್ತಿವರ್ಮನ ತಮ್ಮ
- ಕ್ರಿ.ಶ. 602 ರಲ್ಲಿ ಕಳಚೂರ್ಯರ ರಾಜ ಬದ್ದ ರಾಜನನ್ನು ಸೋಲಿಸಿ ಗುಜರಾತ್ ಮತ್ತು ಖಾಂದೇಶಗಳನ್ನು ಗೆದ್ದು ಉತ್ತರದಲ್ಲಿ ಮಹಾನದಿವರೆಗೆ ರಾಜ್ಯವನ್ನು ವಿಸ್ತರಿಸಿದೆ .
- ಸತತ 18 ಯುದ್ಧಗಳಲ್ಲಿ ಜಯಶಾಲಿ ವೀರನಾದ ರತ್ನಗಿರಿ ಸಮೀಪದ ಲೇವಾದ್ವೀಪದ ರಾಜ – ಸ್ವಾರಾಜರನನ್ನು ಸೋಲಿಸಿದ .
- ಬಾದಾಮಿ ಬೆಟ್ಟದಲ್ಲಿ ವೈಷ್ಣವ ಗುಹಾಲಯವನ್ನು ತನ್ನ ಅಣ್ಣ ಕೀರ್ತಿವರ್ಮನ ಆಣತಿಯಂತೆ ನಿರ್ಮಿಸಿದ .
Badami Chalukya in Kannada dynasty
ಇಮ್ಮಡಿ ಪುಲಿಕೇಶಿ ( ಕ್ರಿ.ಶ. 609-642 ) .
- ಬಾದಾಮಿ ಚಾಲುಕ್ಕದಲ್ಲಿ ಅತ್ಯಂತ ಪ್ರಸಿದ್ಧ ರಾಜ .
- ಕ್ರಿ.ಶ. 609 ರಲ್ಲಿ ತನ್ನ ಚಿಕ್ಕಪ್ಪ ಮಂಗಳೇಶನನ್ನು ಕೊಂದು ಅಧಿಕಾರಕ್ಕೆ ಬಂದ ಬಿರುದುಗಳು – ಪರಮೇಶ್ವರ ಶ್ರೀ ಪದ್ಧಿವಲ್ಲಭ ಪರಮಭಸ್ಮಾರಕ , ಸಾಹಸರಸಿಕ , ಸಮಸ್ತ ಭುವನಾಶ್ರಯ , ಶಿಲಾದಿತ್ಯ ಮಹಾರಾಜ ,
- ಐಹೊಳೆ ಶಾಸನವು ಇವನ ದಿಗ್ವಿಜಯ ಮತ್ತು ಚಾಲುಕ್ಯ ಸಂತತಿಯ ಪೂರ್ಣಾಂಶದ ವಿವರಗಳನ್ನು ತಿಳಿಸಲು ಸಹಕಾರಿಯಾಗಿದೆ ,
- ಐಹೊಳೆ ಶಾಸನವು ಐಹೊಳೆಯ ಮೆಗತಿ ಜಿನಾಲಯದ ಗೋಡೆಯ ಮೇಲೆ ಜೈನಕವಿ ರವಿಕೀರ್ತಿಯಿಂದ ರಚಿತವಾಗಿದೆ .
- ಬಳೆ ಶಾಸನವು ಕ್ರಿ.ಶ. 643 ರಲ್ಲಿ ಸಂಸ್ಕೃತ ಭಾಷೆಯಲ್ಲಿ ಆದರೆ ಕನ್ನಡ ಬರಹದಲ್ಲಿ ಕೆತ್ತಲ್ಲದೆ ,
- ರವಿಕೀರ್ತಿಯು ತನ್ನನ್ನು ಕಾಳಿದಾಸ ಮತ್ತು ಭಾರವಿಗಳಿಗೆ ಹೋಲಿಸಿಕೊಂಡಿದ್ದಾನೆ
- ಇಮ್ಮಡಿ ಪುಲಿಕೇಶಿಯಿಂದ ಸೋತವರು ರಾಷ್ಟ್ರಕೂಟರಾದ ಅಪಾಯಕ ಮತ್ತು ಗೋವಿಂದ , ಬನವಾಸಿಯ ಕದಂಬರು , ಚೇಳರು , ಜಾಟರು , ಮಾಳರು , ಗೂರ್ಜರು , ಚೇಳದು ಚೋರರು , ಪಾಂಡರು , ಕೊಂಕಣದ ಮರು , ಪಲ್ಲವರು ಕಳಿಂಗ ರಾಜ್ಯ ವೆಂಗಿರಾ ಇತ್ಯಾದಿ
- ಗುಜರಾತ್ ಅನ್ನು ಜಯಿಸಿ ಅಲ್ಲಿ ತನ್ನ ತಮ್ಮ ಜಯಸಿಂಹನನ್ನು ಮಾಂಡಲಿಕನನ್ನಾಗಿ ಮಾಡಿದ . ಹಾಗೆಯೇ ಪೂರ್ವದ ವೆಂಗಿಮಂಡಲವನ್ನು ಗೆದ್ದು ಮತ್ತೊಬ್ಬ ತಮ್ಮ ಕುಬ್ಬ ವಿಷ್ಣುವರ್ಧನನ್ನು ಅದರ ಮುಖ್ಯಸ್ಥನನ್ನಾಗಿ ಮಾಡಿದ ಮುಂದೆ ಕುಬ್ಬ ವಿಷ್ಣುವರ್ಧನ ಸ್ವತಂತ್ರ ವೆಂಗಿ ಚಾಲುಕ್ಯ ವಂಶಕ್ಕೆ ಅಸ್ತಿಭಾರ ಹಾಕಿದನು .
- ಇಮ್ಮಡಿ ಪುಲಿಕೇಶಿಯ ಅತ್ಯಂತ ಪ್ರಮುಖ ಯುದ್ಧವೆಂದರೆ ಉತ್ತರಾಪಥೇಶ್ವರನಾದ ಹರ್ಷವರ್ಧನ ವಿರುದ್ಧ ಕ್ರಿ.ಶ. 630-634ರಲ್ಲಿ ನಡೆಯಿತು .
- ಇಮ್ಮಡಿ ಪುಲಿಕೇಶಿ ಮತ್ತು ಹರ್ಷವರ್ಧನ ನಡುವಿನ ಯುದ್ಧವನ್ನು ಐಹೊಳೆ ಶಾಸನ ಮತ್ತು ಹೂಯಾನ್ ತ್ಸಾಂಗ್ ಬರವಣಿಗೆಗಳು ತಿಳಿಸುತ್ತದೆ .
- ಇವರೀರ್ವರ ನಡುವಣ ಯುದ್ಧ ನರ್ಮದೆಯ ದಂಡೆಯಲ್ಲಿ ನಡೆಯಿತು .
- ಹರ್ಷವರ್ಧನ ಸೋತು , ಸ್ನೇಹಸು ಬೆಳಸಿದ ನರ್ಮದಾ ನದಿ ಇವರಿಬ್ಬರ ನಡುವಣ ಗಡಿಯಾಯಿತು
- ಹರ್ಷವರ್ಧನನ ವಿರುದ್ಧ ಜಯದಿಂದಾಗಿ ” ಪರಮೇಶ್ವರ ಎಂಬ ಬಿರುದು ಧರಿಸಿದ ,
- ಪರ್ಶಿಯಾದ ದೊರೆ ಖಸ್ತು ಪುಲಿಕೇಶಿಯ ಆಸ್ಥಾನಕ್ಕೆ ಕಾರ್ಯಭಾರಿಯೊಬ್ಬನನ್ನು ಕಳುಹಿಸಿದ ಇದಕ್ಕೆ ಸಾಕ್ಷಿ ಅಜಂತಾದ ಗುಹೆಯಲ್ಲಿನ ಮತ್ತು ಅರಬ್ ಇತಿಹಾಸಕಾರ ತಬರಿಯ ದಾಖಲೆ
- ಪ್ರಸಿದ್ಧ ಚೀನಿಯಾತ್ರಿಕ ಹ್ಯಾನ್‌ತಾಂಗ ಇವನ ಆಸ್ಥಾನಕ್ಕೆ ಬಂದಿದ್ದನು .
- ಈತ ಪಲ್ಲವ ದೊರೆ ಮಹೇಂದ್ರವರ್ಮನನ್ನು ಎರಡು ಭಾರಿ ಸೋಲಿಸಿದ .
- ಪಲ್ಲವ ದೊರೆ ಒಂದನೇ ನರಸಿಂಹವರ್ಮನು ಇಮ್ಮಡಿ ಪುಲಿಕೇಶಿಯನ್ನು ಪಾರಿಯಾತ್ರ , ಮಣಿಮಂಗಲ , ಸುರಮಾರ ಕದನಗಳಲ್ಲಿ ಸಂಪೂರ್ಣವಾಗಿ ಸೋಲಿಸಿದ ಪಲ್ಲವರು ಕ್ರಿ.ಶ. 642 ರಲ್ಲಿ ಬಾದಾಮಿಗೆ ಮುತ್ತಿಗೆ ಹಾಕಿದರು . ಪುಲಿಕೇಶಿ ಹೋರಾಡುತ್ತಲೇ ಮಡಿದ .
- ಇಮ್ಮಡಿ ಪುಲಿಕೇಶಿ ಸಾವಿನಿಂದ ಕ್ರಿ.ಶ. 642 ರಿಂದ 655 ರವರೆಗೆ 13 ವರ್ಷಗಳು ಪಲ್ಲವರು ಬಾದಾಮಿ ಮತ್ತು ಸಾಮ್ರಾಜ್ಯದ ದಕ್ಷಿಣ ಭಾಗಗಳನ್ನು ತಮ್ಮಲ್ಲಿ ಇಟ್ಟುಕೊಂಡಿದ್ದರು .
- ಇಮ್ಮಡಿ ಪುಲಿಕೇಶಿಯ ಮಕ್ಕಳು – ಆದಿತ್ಯವರ್ಮ , ಚಂದ್ರಾದಿತ್ಯ , 1 ನೇ ವಿಕ್ರಮಾದಿತ್ಯ , ಜಯಸಿಂಹ ,
Badami Chalukya in Kannada pdf
1 ನೇ ವಿಕ್ರಮಾದಿತ್ಯ ( ಕ್ರಿ.ಶ. 655-682 )
- ಪುಲಿಕೇಶಿಯ ಮೂರನೆ ಮಗನಾದ ಈತನು ಪಲ್ಲವರ ವಶವಾಗಿದ್ದ ಬಾದಾಮಿಯನ್ನು ಮತ್ತೆ ವಶಪಡಿಸಿಕೊಂಡು ಸಾಮ್ರಾಜ್ಯವನ್ನು ಮರಳಿ ಪಡೆದ
- ಪಲ್ಲವ ದೊರೆಗಳಾದ ನರಸಿಂಹವರ್ಮ , ಮಹೇಂದ್ರವರ್ಮ -2 ಮತ್ತು ಪರಮೇಶ್ವರಮ ಈ ಮೂವರ ವಿರುದ್ಧ ಹೋರಾಡಿದ
- ಇವನ ಅತ್ತಿಗೆ ಅಂದರೆ ಚಂದ್ರಾದಿತ್ಯನ ಮಡದಿ ವಿಜಯಾಂಕಾ ಹೊರಡಿಸಿದ ನೆರೂರು ತಾಮ್ರ ಪಟವು ಈತನು ಪಟ್ಟವೇರಿದ ವರ್ಷ ಕ್ರಿ.ಶ. 635 ಎಂದು ತಿಳಿಸುತ್ತದೆ .
- ಗಂಗರ ಶಾಸನಗಳ ಪ್ರಕಾರ ಕ್ರಿ.ಶ. 670 ರಲ್ಲಿ ಇವನು ಪಲ್ಲವ ಪರಮೇಶ್ವರವರ್ಮನನ್ನು ವಿಳಂದ ಎಂಬಲ್ಲಿ ಸೋಲಿಸಿ ಆಗೋದಯ ಎಂಬ ಕಂಠಿ ಹಾರವನ್ನು ಪಡೆದನು .
- ದಂಡಯಾತ್ರೆಗಳಿಗೆ ತನ್ನ ಮಗ ವಿನಯಾದಿತ್ಯ ಮತ್ತು ಮೊಮ್ಮಗ ವಿಜಯಾದಿತ್ಯ ನೆರವು ನೀಡಿದರು .
- ಇವನ ತಮ್ಮ ಗುಜರಾತಿನ ಮಾಂಡಲಿಕನಾದ ಜಯಹನು ಮೈತ್ರಿಕ ವಂಶದ ವಲ್ಲಭಿಯ ಅರಸನಾದ ವಚ್ಚವ ಅಥವಾ 3 ನೇ ಶಿಲಾದಿತ್ಯನನ್ನು ಸೋಲಿಸಿದೃಮ ಇಮ್ಮಡಿಪುಲಿಕೇಶಿಯು ಕನೂಜಿನ ಜಯವರ್ಧನನ್ನು ಸೋಲಿಸಿದಷ್ಟೇ ಮಹತ್ವವನ್ನು ಈ ಘಟನೆಗೆ ನೀಡಲಾಗಿದೆ
- ಇವನಸೋದರ ಚಂದ್ರಾದಿತ್ಯನ ರಾಣಿ ವಿಜಯಾಂಕ ಸಂಸ್ಕೃತ ಕವಿಯತ್ರಿ ಆಗಿದ್ದಳು ಜೊತೆಗೆ ಸತಾರಾ ಪ್ರದೇಶ ಮಾಂಡಳಿಕಳೂ ಆಗಿದ್ದಳು .
- ಇವನ ಬಿರುದುಗಳು : – ಶ್ರೀವಲ್ಲಭ , ರಾಣರಸಿಕ ಅನಿವಾರಿತ ರಾಜಮಲ್ಲ ಇತ್ಯಾದಿ .
Badami Chalukya in Kannada
ವಿನಯಾದಿತ್ಯ ( ಕ್ರಿ.ಶ. 682-696 )
- 1 ನೇ ವಿಕ್ರಮಾದಿತ್ಯ ಮಗನಾದ ಇವನ ಕನೂಜಿನ ದೊರೆ ಯಶೋವರ್ಮನನ್ನು ಸೋಲಿಸಿದನೆಂದು ಹೇಳಲಾಗಿದೆ .
- ತನ್ನ ತಂದೆಯಷ್ಟೇ ಪರಾಕ್ರಮಿಯಾಗಿದ್ದ ಈತನು ಪಲ್ಲವ , ಕಳಭ್ರ , ಕೇರಳ ಹೈಹಯರೊಡನೆ ಹೋರಾಡಿ ಪಾರಸಿಕ ಕಮೇರ ( ಕಾಂಬೋಡಿಯ ) ಮತ್ತು ಸಿಂಹಳದಿಂದ ಕಪ್ಪವನ್ನು ವಸೂಲಿ ಮಾಡಿದ
- ಇವನು ಕಾಂಬೋಡಿಯಾದ ಮೇಲೂ ದಂಡೆತ್ತಿ ಹೋಗಿರಬಹುದೆಂದು ನಂಬಲಾಗಿದೆ .
- ಕ್ರಿ.ಶ. 692 ರಲ್ಲಿ ಚೀನಾಕ್ಕೆ ಒಂದು ರಾಯಾಭಾರ ನಿಯೋಗವನ್ನು ಕಳುಹಿಸಿದ್ದನು .
- ಇವನ ಮೊದಲ ಮಗ ವಿಜಯಾದಿತ್ಯನು ಉತ್ತರ ಭಾರತದ ಮೇಲೆ ದಂಡೆತ್ತಿ ಹೋಗಿ ಕನೂಜಿನ ಯಶೋವರ್ಮನನ್ನು ಸೋಲಿಸಿದನು ಆದರೆ ಸೆರೆಸಿಕ್ಕಿದ , ಇದರಿಂದ ದುಃಖತಪ್ತನಾದ ವಿಜಯಾದಿತ್ಯ ಇದೇ ನೋವಿನಲ್ಲಿ ಸಾವನ್ನಪ್ಪಿದ .
- ಮುಂದೆ ವಿಜಯಾದಿತ್ಯ ಸೆರೆಯಿಂದ ತಪ್ಪಿಸಿಕೊಂಡು ಬಂದು ಪಟ್ಟಾಭಿಷಿಕ್ತನಾದ ( ಕ್ರಿ.ಶ. 696-734 )
- ವಿಜಯಾದಿತ್ಯನ ಎರಡನೇ ಮಗ ಅರಿಕೇಸರಿಯು ವೇಮುಲವಾಡದ ಚಾಲುಕ್ಯ ಮನೆತನದ ಸ್ಥಾಪಕ .
Badami Chalukya in Kannada notes
ವಿಜಯಾದಿತ್ಯ ( ಕ್ರಿ.ಶ. 696-764 )
- ಚಾಲುಕ್ಯ ಸಾಮ್ರಾಜ್ಯದ ಪುನರ್ ಸ್ಥಾಪನೆಯ ಕಾರ್ಯದಲ್ಲಿ ತನ್ನ ತಾತ ವಿಕ್ರಮಾದಿತ್ಯನಿಗೆ ಮತ್ತು ತಂದೆ ವಿನಯಾದಿತ್ಯನಿಗೆ ನೆರವು ನೀಡಿದ್ದನು .
- ಬಾದಾಮಿಯಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದನು .
- ಪಟ್ಟದಕಲ್ಲಿನ ವಿಜಯೇಶ್ವರ ಅಥವಾ ಇಂದಿನ ಸಂಗಮೇಶ್ವರ ದೇವಾಲಯ ನಿರ್ಮಿಸಿದ
- ಇವನ ಮಗಳಾದ ವಿಜಯ ಮಹಾದೇವಿ ಗಂಗದೊರೆ ಶ್ರೀಪುರುಷನನ್ನು ವಿವಾಹವಾದಳು .
- ಇವನ ಎರಡನೇ ಮಗ ಭೀಮನೆಂಬಾತನು ಕಲ್ಯಾಣಿ ಚಾಲುಕ್ಯರ ಮೂಲಪುರುಷನೆಂದು ಹೇಳಲಾಗುತ್ತದೆ .
Badami Chalukya in Kannada Notes
ಎರಡನೇ ವಿಕ್ರಮಾದಿತ್ಯ ( ಕ್ರಿ.ಶ. 734-746 )
- ವಿಜಯಾದಿತ್ಯನ ಮಗನಾದ ಇವನು ತನ್ನ ತಂದೆಯ ಕಾಲದಲ್ಲೇ ಕಂಚಿಯ ಮೇಲೆ ದಾಳಿ ಮಾಡಿದ ನಂತರ ಕ್ರಿ.ಶ. 735 ರಲ್ಲಿ ಕಂಚಿಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡನು . ಆದರೆ ಈತ ಹಿಂದೆ ಪಲ್ಲವರು ಬಾದಾಮಿಯನ್ನು ಸೂರೆಗೊಂಡತ ಕಂಚಿಯನ್ನು ಸೂರೆಮಾಡಲಿಲ್ಲ , ರಾಜಧಾನಿ ಕಂಚಿಗೆ ಯಾವುದೇ ಹಾನಿ ಮಾಡದೇ ಔದಾರ್ಯದಿಂದ ನಡೆದುಕೊಂಡು ಅಲ್ಲಿನ ರಾಜ ಸಿಂಹೇಶ್ವರ ಅಥವಾ ಕೈಲಾಸನಾಥ ದೇವಾಲಯಕ್ಕೆ ಅಪಾರ ಧನವನ್ನು ದಾನಮಾಡಿದನು .
- ಆ ದೇವಾಲಯದ ಕಂಬದ ಮೇಲೆ ತನ್ನ ವಿಜಯದ ಸ್ಮಾರಕವಾಗಿ ಕನ್ನಡ ಶಾಸನವೊಂದನ್ನು ಅವನು ಬರೆಸಿದ್ದಾನೆ
- ಕದಿಯ ಮೇಲಿನ ವಿಜಯದ ನೆನಪಿಗಾಗಿ ಈತನ ರಾಣಿಯರಾದ ಹೈಹಯ ವಂಶದ ಲೋಕಮಹಾದೇವಿ ಮತ್ತು ತೈಲೋಕ್ಷ ಮಹಾದೇವಿಯವರು ಪಟ್ಟದಕಲ್ಲಿನಲ್ಲಿ ಲೋಕೇಶ್ವರ ಮತ್ತು ಲೋಳೇಶ್ವರ ದೇವಾಲಯವನ್ನು ನಿರ್ಮಿಸಿದರು .
- ಇವನು ಪಾಂಡ್ಯ , ಚೋಳ ಕಳಭ್ರರನ್ನು ಸೋಲಿಸಿ ದಕ್ಷಿಣದ ಮಹಾಸಾಗರದಲ್ಲಿ ಮಹಾಸ್ತಂಭವೊಂದನ್ನು ನಿರ್ಮಿಸಿರವೆಂದು ಕಂಚಿಯ ಶಾಸನ ತಿಳಿಸುತ್ತದೆ .
- ಇವನ ಕಾಲದ ಮತ್ತೊಂದು ಸಾಧನೆಯೆಂದರೆ ಗುಜರಾತಿನ ಮೇಲೆ ದಂಡೆತ್ತಿ ಬಂದ ( ಕ್ರಿ.ಶ. 739 ) ಅರಬ್ಬರನ್ನು ( ತೈಜಿಕರು ) ಹಿಮ್ಮೆಟ್ಟಿಸಲಾಯಿತು . ( ಗುಜರಾತಿನ ಮಂಡಲಕನಾದ ಅವನಿಜಾಶ್ರಯ ಪುಲಿಕೇಶಿಯು ಈ ಸಾಧನೆ ಮಾಡಿದೆ )
Badami Chalukya in Kannada history questions and answers
2ನೇ ಕೀರ್ತಿವರ್ಮ ( ಕ್ರಿ.ಶ. 746-753 )
- ಎರಡನೇ ವಿಕ್ರಮಾದಿತ್ಯನ ಮಗನಾದ ಈತ ಬಾದಾಮಿ ಚಾಲುಕ್ಯರ ಕೊನೆಯ ರಾಜ .
- ಕಂಚಿಯ ದಂಡಯಾತ್ರೆಯ ಕಾಲದಲ್ಲಿ ತನ್ನ ತಂದೆಗೆ ನೆರವಾಗಿದ್ದನು .
- ಕ್ರಿ.ಶ. 753 ರಲ್ಲಿ ರಾಷ್ಟ್ರಕೂಟ 1 ನೇ ಕೃಷ್ಣನು ಈತನನ್ನು ಸಂಪೂರ್ಣವಾಗಿ ಸೋಲಿಸಿ ಬಾದಾಮಿ ಚಾಲುಕ್ಯ ಮನೆತನವನ್ನು ಅಂತ್ಯಗೊಳಿಸಿದನು .
ಕೊಡುಗುಗಳು ( ಮುಖ್ಯಾಂಶಗಳು ) .
- ಕದಂಬರು ಮತ್ತು ಗುಪ್ತರ ಆಡಳಿತದ ಉತ್ತಮ ಅಂಶಗಳನ್ನು ಪಡೆದು ತಮ್ಮದೇ ಆದ ಆಡಳಿತ ವ್ಯವಸ್ಥೆಯನ್ನು ರೂಪಿಸಿದ್ದರು .
- ಗುಪ್ತರ ಬಿರುದಾದ ರಾಜಾಧಿರಾಜ ಎಂಬ ಬಿರುದು ಧರಿಸಿದ್ದರು .
- ಆಡಳಿತದಲ್ಲಿ ರಾಜನಿಗೆ ಸಲಹೆ ನೀಡುತ್ತಿದ್ದ ವಿದ್ವಾಂಸ ಗುರುಗಳೆಂದರೆ ಇಮ್ಮಡಿ ಪುಲಿಕೇಶಿ ಕಾಲದಲ್ಲಿ ನಾಗವರ್ಧನಾ ಚಾರ್ಯರು , 1 ನೇ ವಿಕ್ರಮಾದಿತ್ಯನ ಕಾಲದಲ್ಲಿ ಸುದರ್ಶನಚಾರ್ಯರು , 1 ನೇ ಕೀರ್ತಿವರ್ಮನ ಕಾಲದಲ್ಲಿ ವ್ಯಾಘ್ರಸ್ವಾಮಿ ಮುಂತಾದವರು .
- ಚಾಲುಕ್ಯರ ಸೇನೆಯನ್ನು ” ಕರ್ಣಾಟ ಬಲ ” ಎಂದು ಕರೆಯಲಾಗಿತ್ತು .
- ಯುದ್ಧದ ಆನೆಗಳಿಗೆ ಮದ್ಯ ಕುಡಿಸಿ ಉತ್ತೇಜಿಸಲಾಗುತ್ತಿತ್ತೆಂದು ಹ್ಯಾಂಗ ತಿಳಿಸಿದ್ದಾನೆ .
- ರಾಜ್ಯಕ್ಕೆ ಆದಾಯದ ಮೂಲ ಭೂಕಂದಾಯವಾಗಿದ್ದು ಇದನ್ನು ಸಿದ್ಧಾಯ ಎನ್ನುತ್ತಾರೆ .
- ಚಾಲುಕ್ಯರ ಸೇನಾ ಶಿಬಿರಗಳನ್ನು ವಿಜಯ ಸೃಂದಾವಾರ ಎನ್ನುವರು .
ಪ್ರಮುಖ ತೆರಿಗೆಗಳು
ಪನ್ನೆಯ – ವೀಳ್ಯದೆಲೆ ಮೇಲಿನ ಸುಂಕ
ಹೇರ್ಜುಂಕ – ಭಾರದ ಮೇಲೆ ಅಥವಾ ಹೇರುಗಳ ಮೇಲಿನ ತೆರಿಗೆ
ಕಿರುಕುಳ – ವಸ್ತುಗಳ ಮೇಲಿನ ತೆರಿಗೆ
ವಡ್ಡಾರಾವುಲ – ರಾಜನ ಪರಿವಾರದವರ ವೆಚ್ಚಕ್ಕಾಗಿ ಹಾಕುತ್ತಿದ್ದ ತೆರಿಗೆ
ಬಳ್ಳಾರಿಯ ಕುರುಗೋಡಿನಲ್ಲಿ ಭೂ ಅಳತೆಮಾಡುವ ಅಳತೆಗೋಲನ್ನು ಕೆತ್ತಲಾಗಿದೆ .
ಚಾಲುಕ್ಯರ ನಾಣ್ಯಗಳನ್ನು ಮೊದಲಿಗೆ ಗದ್ಯಾಣ ಎಂತಲು ನಂತರ ವರಾಹಗಳೆಂದು ಕರೆಯಲಾಯಿತು ( ಇವುಗಳ ತೂಕ 120 ಗ್ರೇನ ) .
ಚಾಲುಕ್ಯರ ಪ್ರಮುಖ ಮಾಂಡಲಿಕ ಅರಸುಗಳೆಂದರೆ- ಗಂಗರು , ಅಳುಪರು , ಸೇಂದ್ರಕರು , ಬಾಣರು .
ಗಣಿಕೆಯರು ಅಥವಾ ವೇಶೈಯರು ಸಮಾಜದಲ್ಲಿ ಉತ್ತಮ ಸ್ಥಾನ ಹೊಂದಿದ್ದರು . ದಾನಧರ್ಮಗಳಿಗೆ ಇವರು ಹೆಸರಾಗಿದ್ದರು
Badami Chalukya Dynasty in Kannada vastu shilpa
ಕಲೆ ಮತ್ತು ವಾಸ್ತುಶಿಲ್ಪ
- ಚಾಲುಕ್ಯರನ್ನು ಕರ್ನಾಟಕ ದೇವಾಲಯದ ವಾಸ್ತುಶಿಲ್ಪದ ಪ್ರವರ್ತಕರೆಂದು ವರ್ಣಿಸಲಾಗಿದೆ .
- ಚಾಲುಕ್ಯರು ಕಲಾಕ್ಷೇತ್ರಕ್ಕೆ ಮಹತ್ವಪೂರ್ಣ ಕೊಡುಗೆ ನೀಡಿದ್ದು 100 ಕ್ಕೂ ಹೆಚ್ಚಿನ ಕಲಾ ರಚನೆಗಳು ಮಲಪ್ರಭಾ ಕಣಿವೆಯಲ್ಲಿ ಹರಡಿಕೊಂಡಿವೆ .
- ಹೊಸ ಕಲಾಶೈಲಿಯ ನಿರ್ಮಾಪಕರಾದ ಇತರ ಶೈಲಿಯನ್ನು ವೇಸರ ಶೈಲಿ ಅಥವಾ ಚಾಲುಕ್ಯ ಶೈಲಿಯೆಂದು ಕರೆಯಲಾಗುತ್ತದೆ . ಇದು ಉತ್ತರದ ನಾಗರಶೈಲಿ ಮತ್ತು ದಕ್ಷಿಣದ ದ್ರಾವಿಡ ಶೈಲಿಗಳ ಸಂಗಮ ಶೈಲಿಯಾಗಿದೆ ,
ಚಾಲುಕ್ಯರ ದೇಹದ ಶೈಲಿಯ ಲಕ್ಷಣಗಳು
- ಚಿಕ್ಕದಾದ ಮತ್ತು ಸಾದಾ ತಳವಿನ್ಯಾಸ , ಕೆಲವು ದೇವಾಲಯಗಳಲ್ಲಿ ಲಾಳಾಕಾರದ ತಳವಿನ್ಯಾಸ , ಚೌಕಾಕಾರದ ಗರ್ಭಗುಡಿ ಮತ್ತು ಶಿಬಿರ
- ಸಭಾಮಂಟಪ , ಸುಕನಾಸಿ , ಮುಖಮಂಟಪ
- ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣಾ ಪಥವಿದೆ .
- ನದಿತೀರ , ಕೊಳ , ಬಾವಿ , ಗುಡ್ಡದ ಮೇಲೆ ನಿರ್ಮಾಣ ,
- ಗೋಡೆಗಳು , ಮುಂಬಾಗಿಲು ಮತ್ತು ಭಾವಣಿ ಮೇಲೆ ಅಲಂಕೃತ ಕೆತ್ತನೆ
- ಗುಜರಾತ್ ಮತ್ತು ಮೆಗಿ ಚಾಲುಕ್ಯರ ಕಲೆಯ ಮೇಲು ಇವರ ಪ್ರಭಾವವಿದೆ .
- ಡಾ . ಎಂ . ಶೇಷಾದ್ರಿಯವರು “ ಚಾಲುಕ್ಯರು ರಾಕ್ಷಸರಂತೆ ಕಡಿದು ರತ್ನಗಾರರಂತೆ ಮುಗಿಸಿದ್ದಾರೆ ”ಎಂದು ವರ್ಣಿಸಿದ್ದಾರೆ .
Badami Chalukya in Kannada shasana information in kannada
ಗುಹಾಂತರ ದೇವಾಲಯಗಳು
1.ನೆಯದು ಶೈವಗುಹೆ
23 ವಿಷ್ಣು ಗುಹೆ
3.ಜೈನ ಗುಹೆ
ಆಧುನಿಕ ಕರ್ನಾಟಕ ಇತಿಹಾಸ
ದೇವಾಲಯಗಳು
- ಐಹೊಳೆ : – ಇಲ್ಲಿ 70 ಕ್ಕೂ ಹೆಚ್ಚು ಚಾಲುಕ್ಯರ ದೇವಾಲಯಗಳು ರಚನೆಯಾಗಿದೆ .
- ಕಲಾವಿಮರ್ಶಕ ಪರ್ಸಿಬ್ರೌನ್ ” ಐಹೊಳೆಯನ್ನು ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ” ಎಂದು ವರ್ಣಿಸಿದ್ದಾರೆ .
ಚಿತ್ರಕಲೆ :
- ಬಾದಾಮಿಯ ಒಂದು ಮತ್ತು ಎರಡನೇ ಗುಹೆಗಳಲ್ಲಿ ಹಾಗೂ ಅಜರಿತಾದ ಒಂದನೇ ಗುಹೆಯಲ್ಲಿ ಇವರ ಚಿತ್ರಕಲೆಗಳನ್ನು ಕಾಣಬಹುದು ,
- ಅಜಂತಾದ 1 ನೇ ಗುಹೆಯಲ್ಲಿನ ವರ್ಣಚಿತ್ರದಲ್ಲಿ ಇಮ್ಮಡಿ ಪುಲಿಕೇಶಿಯು ಪರ್ಶಿಯಾದ ದೊರೆ ಖುಸ್ರುವಿನ ರಾಯಭಾರಿಯನ್ನು ಬರಮಾಡಿಕೊಳ್ಳುತ್ತಿರುವ ದೃಶ್ಯವಿದೆ .
- ಬಾದಾಮಿಯ 2 ನೆಯ ಗುಹೆಯಲ್ಲಿ ನಾಲ್ಕು ಸುಂದರ ವರ್ಣ ಚಿತ್ರಗಳನ್ನು ಕಾಣಬಹುದು ಇವುಗಳನ್ನು ಸ್ವಲ್ಪಾ ಕ್ಯಾಮರಿಶ್ ಎಂಬ ವಿದೇಶಿ ಮಹಿಳೆ ಪತ್ತೆ ಹಚ್ಚಿದಳು .
Badami Chalukya in Kannada Karnataka
- ಪ್ರಥಮ ವಾತಾಪಿ ನಿರ್ಮಾಪಕ – ಒಂದನೇ ಕೀರ್ತಿ ವರ್ಮ
- ಐಹೋಳೆಶಾಸನವು ನಿರ್ಮಾಣವಾದುದು – ಕ್ರಿ.ಶ.634
- ಐಹೋಳೆಶಾಸನವನ್ನು – ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
- ಐಹೋಳೆ ಶಾಸನವು – ಕನ್ನಡ ಭಾಷೆ ಹಾಗೂ ಸಂಸ್ಕೃತ ಲಿಪಿಯಲ್ಲಿದೆ
- ಐಹೋಳೆ ಶಾಸನವು ಪುರಿ ಬಂದರನ್ನು – ಪಶ್ಚಿಮ ಕರಾವಳಿಯ ಲಕ್ಷ್ಮೀ ಎಂದು ಬಣ್ಣಿಸಲಾಗಿದೆ
- ವೆಂಗಿ ಚಾಲುಕ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು – ವಿಷ್ಣುವರ್ಧನ
- ಯುದ್ಧ ಮಲ್ಲ ಎಂಬ ಬಿರುದನ್ನು ಹೊಂದಿದ್ದವನು – ವಿನಯಾದಿತ್ಯ
- ರನ್ನನು ತನ್ನ ಗಾದಯುದ್ದ ಕೃತಿಯಲ್ಲಿ ವಿನಯಾದಿತ್ಯನನ್ನ – ದುರ್ಧರ ಮಲ್ಲ ಎಂದು ವರ್ಣಿಸಿದ್ದಾನೆ
- ಪಟ್ಟದ ಕಲ್ಲಿನ ವಿಜಯೇಶ್ವರ ( ಸಂಗಮೇಶ್ವರ ) ದೇವಾಲಯದ ನಿರ್ಮಾತೃ – ವಿಜಯಾದಿತ್ಯ
- ಸಂಪೂರ್ಣ ಕರ್ನಾಟಕವನ್ನು ಒಂದೇ ಮನೆತನದ ಆಳ್ವಿಕೆಗೊಳಪಡಿಸಿದ ಮೊದಲ ರಾಜ ಮನೆತನ
- ಮೂಲ ಪುರುಷ – ಒಂದನೇ ಜಯಸಿಂಹ
- ರಾಜಧಾನಿ – ವಾತಾಪಿ ( ಬಾದಾಮಿ )
- ಅತ್ಯಂತ ಪ್ರಸಿದ್ದ ದೊರೆ – ಇಮ್ಮಡಿ ಪುಲಕೇಶಿ ( ಕ್ರಿ.ಶ. 609-42 ) ಈತನಿಗೆ “ ಪಕ್ಷಿಣ ಪಥೇಶ್ವರ ‘ ಬಿರುದು ಇತ್ತು
- ಈತ ಹರ್ಷವರ್ಧನನ ( ಉತ್ತರ ಪಥೇಶ್ವರ ) ಸಮಕಾಲೀನ
- ಇವನ ಆಸ್ಥಾನಕ್ಕೆ ‘ ನ್ಯೂಯನ್ ತ್ಸಾಂಗ್ ‘ ಭೇಟಿ ನೀಡಿದ್ದ
- ನರ್ಮರಾ ಕದನ – ಇಮ್ಮಡಿ ಪುಲಿಕೇಶಿ ಮತ್ತು ಹರ್ಷವರ್ಧನನ ನಡುವೆ ನಡೆಯಿತು ,
- ಐಹೋಳೆ ಶಿಲಾಶಾಸನ ( ಕ್ರಿ . ಶ . 634 ) ರವಿಕೀರ್ತಿಯು ಸಂಸ್ಕೃತ ಭಾಷೆಯಲ್ಲಿದ್ದು ಇಮ್ಮಡಿ ಪುಲಿಕೇಶಿಯ ಸಾಧನೆಗಳ ಬಗ್ಗೆ ಮಾಹಿತಿ
- ಪಲ್ಲವ ದೊರೆ 1 ನೇ ನರಸಿಂಹವರ್ಮನು ಇಮ್ಮಡಿ ಪುಲಕೇಶಿಯನ್ನು ಸೋಲಿಸಿ ‘ ವಾತಾಪಿಕೊಂಡ ಎಂಬ ಬಿರುದು ಪಡೆಯುತ್ತಾನೆ .
- ಪಟ್ಟದಕಲ್ಲು – ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿರುವ ಐತಿಹಾಸಿಕ ತಾಣವಾಗಿದೆ
Badami Chalukya in Kannada PDF Notes
FAQ
ಪ್ರಸ್ತುತ ಬಾದಮಿಯು ಯಾವ ಜಿಲ್ಲೆಯಲ್ಲಿದೆ?
ಇಂದಿನ ಬಾಗಲಕೋಟ ಜಿಲ್ಲೆಯಲ್ಲಿದೆ
ಬಾದಾಮಿ ಚಾಲುಕ್ಯರ ರಾಜ್ಯ ಲಾಂಛನ?
ವರಾಹ
ಪ್ರಬಂಧಗಳ ಪಟ್ಟಿ
- ಶಬ್ದ ಮಾಲಿನ್ಯ ಕುರಿತು ಪ್ರಬಂಧ
- ಭೂ ಮಾಲಿನ್ಯ ಕುರಿತು ಪ್ರಬಂಧ
- ಆರ್ಟಿಕಲ್ 370 ಕುರಿತು ಪ್ರಬಂಧ
- ರೈತರ ಆತ್ಮಹತ್ಯೆ ಕುರಿತು ಪ್ರಬಂಧ
- ಜಲ ಮಾಲಿನ್ಯ ಬಗ್ಗೆ ಪ್ರಬಂಧ
Very nice history I like it