Greek Roman and American Civilization Notes, ಗ್ರೀಕ್ ರೋಮನ್ ಹಾಗೂ ಅಮೆರಿಕದ ನಾಗರಿಕತೆ, Social Science History Chapter 5, Questions and Answers, Pdf
Greek Roman and American Civilization Notes
II . ಕೆಳಕಂಡ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ .
1. ಗ್ರೀಕರ ಸಾಹಿತ್ಯಕ್ಕೆ ಹೋಮರನ ಕೊಡುಗೆಯನ್ನು ವಿವರಿಸಿ .
- ಹೋಮರ್ ಎಂಬ ಅಂಧ ಕವಿಯು ‘ ಈಲಿಯಾಡ ‘ ಮತ್ತು ‘ ಓಡಿಸಿ ‘ ಎಂಬ ಮಹಾಕಾವ್ಯಗಳನ್ನು ರಚಿಸಿದನು .
- ಈ ಎರಡು ಮಹಾಕಾವ್ಯಗಳು ಗ್ರೀಕರ ಅಂದಿನ ಜೀವನ ವಿಧಾನ , ಸಾಮಾಜಿಕ , ಧಾರ್ಮಿಕ ವ್ಯವಸ್ಥೆಗಳ ಬಗ್ಗೆ ವಿವರಗಳನ್ನು ನೀಡುತ್ತವೆ .
- ಈಲಿಯಾಡ್ ಗ್ರೀಕರು ಟಾಯ್ ನಗರದ ಮೇಲೆ ವಿಜಯ ಸಾಧಿಸಿದ್ದನ್ನು ತಿಳಿಸುತ್ತದೆ .
- ಮತ್ತು ಒಡಿಸ್ಸಿಯು ಗ್ರೀಕ್ ವೀರ ಒಡಿಸ್ಕೊಸನು ಟ್ರಾಯ್ನಿಂದ ಹಿಂತಿರುಗಿ ಬರುವಾಗಿನ ಸಾಹಸದ ಚಿತ್ರಣವನ್ನು ನೀಡುತ್ತದೆ .
2. ಗ್ರೀಕರ ನಗರ ರಾಜ್ಯಗಳನ್ನು ಹೆಸರಿಸಿ . . .
ಅಥೇನ್ , ಸ್ಪಾರ್ಟಾ , ಮ್ಯಾಸಿಡೋನಿಯಾ , ಥೇಟ್ಸ್ ,
3. ರೋಮನ್ನರ ಗಣರಾಜ್ಯದ ಅಂಶಗಳನ್ನು ತಿಳಿಸಿ
- ರೋಮ್ನಲ್ಲಿ ಸಾ.ಶ.ಪೂ. 6 ನೆಯ ಶತಮಾನದಲ್ಲಿ ರಾಜತ್ವವನ್ನು ಆಳಿಸಿ ಗಣರಾಜ್ಯವನ್ನು ಸ್ಥಾಪಿಸಲಾಯಿತು .
- ಸಾ.ಶ.ಪೂ 3 ನೆಯ ಶತಮಾನದ ಅವಧಿಗೆ ಸಮಗ್ರ ಇಟಲಿಯ ಆಡಳಿತವು ಗಣರಾಜ್ಯಗಳ ಕೈಗೆ ಬಂದಿತು .
- ರೋಮನ್ ಗಣರಾಜ್ಯದಡಿಯಲ್ಲಿ ಸೆನೆಟ್ ಹಾಗೂ ಅಸೆಂಬ್ಲಿ ಸಲಹಾ ಸಂಸ್ಥೆಗಳಾಗಿ ಮುಂದುವರಿದವು .
- ಈ ಸಂಸ್ಥೆಗಳ ಸದಸ್ಯರುಗಳೇ ಯುದ್ಧಗಳಲ್ಲಿ ಸೇನೆಯನ್ನು ನಡೆಸಿದರು .
- ಇವರು ಕಾನೂನನ್ನು ನಿಭಾಯಿಸಿದರು ಹಾಗೂ ನ್ಯಾಯವನ್ನು ಪ್ರತಿಪಾದಿಸಿದರು .
4. ಪ್ರಾಚೀನ ಕೊಲಂಬಿಯಾದ ನಾಗರಿಕತೆಗಳಾವವು ?
ಮಾಯ , ಆಸ್ಪಕ್ ಮತ್ತು ಇಂಕಾ ಇವು ಅಮೆರಿಕದಲ್ಲಿನ ಪ್ರಾಚೀನ ಕೊಲಂಬಿಯಾದ ನಾಗರಿಕತೆಗಳು .
5. ‘ ಮಾಯ’ನ್ನರು ಯಾರು ?
- ಮೆಕ್ಸಿಕೊದ ಯುಕಟೆನ್ ಪ್ರದೇಶದಲ್ಲಿನ ಅಮೆರಿಕದ ಇಂಡಿಯನ್ ಮೂಲನಿವಾಸಿಗಳಿಗೆ ಮಾಯ ಎನ್ನುವರು .
- ಸಾಮಾನ್ಯವಾಗಿ ದೈಹಿಕವಾಗಿ ಮಾಯದ ಜನ ಗಿಡ್ಡವಾಗಿದ್ದು , ಕಂದುಬಣ್ಣ , ನೇರಕೂದಲನ್ನು ಹಾಗೂ ಬಹುತೇಕ ಗುಂಡನೆಯ ತಲೆಯನ್ನು ಹೊಂದಿದವರಾಗಿದ್ದಾರೆ .
6. ಆಸ್ಟೆಕರು ಪ್ರಕೃತಿಯ ಆರಾಧಕರು . ಹೇಗೆ ?
- ಆಸ್ಪೆಕರು ಪ್ರಕೃತಿಯ ಆರಾಧಕರಾಗಿದ್ದರು .
- ದೇವರನ್ನು ಹಲವು ವಿಧಗಳಲ್ಲಿ ಸಂತೃಪ್ತಿಪಡಿಸಲು ಅವರು ಧಾರ್ಮಿಕ ವಿಧಿಗಳನ್ನು ಅನುಸರಿಸುತ್ತಿದ್ದರು . ಅವುಗಳಲ್ಲಿ ಮಾನವರ ಬಲಿಯೂ ಒಂದು .
- ಆಸ್ಪೆಕರ ಸಾಮ್ರಾಜ್ಯವು ವಿಸ್ತರಿಸಿದಂತೆಲ್ಲ ದೇವರನ್ನು ಸಂತೈಸಲು ಇನ್ನು ಹೆಚ್ಚು ಹೆಚ್ಚು ಆಹುತಿಗಳ ನೀಡುತ್ತಿದ್ದರು
- ಟೆನೊಟಟಲಾನಿನ ಪಿರಿಮಿಡ್ ದೇವಾಲಯವನ್ನು ಸಮರ್ಪಿಸುವಾಗ ಸುಮಾರು 20,000 ಕೈದಿಗಳನ್ನು ಆಹುತಿಯಾಗಿ ನೀಡಿದರು ಎನ್ನಲಾಗಿದೆ .
ಕೆಳಕಂಡ ವಾಕ್ಯಗಳನ್ನು ಪೂರ್ಣಗೊಳಿಸಿ .
1. ಹೋಮರನು ರಚಿಸಿದ ಮಹಾಕಾವ್ಯಗಳು ಈಲಿಯಡ್ ಮತ್ತು ………………….
2. ಗ್ರೀಕರು ಸರ್ವಾಧಿಕಾರಿಗಳನ್ನು……….. ಎಂದು ಕರೆದರು
3. ವೈದ್ಯಕೀಯ ಅಧ್ಯಯನಕ್ಕೆ ಬುನಾದಿಯನ್ನು ಹಾಕಿದವನು ……………
4. ಚರಿತ್ರೆಯ ಮೊದಲ ವಿಶ್ಲೇಷಣಾಕಾರ ……………………..ಎಂದು ಅಭಿಪ್ರಾಯ ಪಡಿಸಲಾಗಿದೆ .
5. ` ಏನ್ಸೆಪ್ ‘ ಎಂದರೆ …………..
6. ರೋಮನ್ನರ ಭಾಷೆ ……………….
7. ಮಾಯ ನಾಗರಿಕತೆಯ ಕಲ್ಲಿನ ಕಲಾಕೃತಿಗಳನ್ನು …………….ಎಂದು ಕರೆಯುತ್ತಾರೆ .
8. ಟೆಕ್ಸ್ಕೊಕೊ ಎಂಬುದು ಮೆಕ್ಸಿಕೋದಲ್ಲಿನ ಒಂದು ………………….
9. ಇಂಕಾ ಜನರ ಪ್ರಸಿದ್ಧ ನಾಯಕ ………………….
10 , ಇಂಕಾಗಳ ಆರಾಧ್ಯ ದೈವ ………………
1 ಉತ್ತರಗಳು : – 1 ) ಒಡಿಸ್ಸೆ , 2 ) ಟೈರಾಂಟ್ಸ್ 3 ) ಹಿಪ್ಪಾಕ್ರಿಟಿಸ್ 4 ) ಹೆರೋಡೋಟಸ್ 5 ) ರಾಜ್ಯದ ಮೊದಲ ಪ್ರಜೆ 6 ) ಲ್ಯಾಟಿನ್ 7 ) ಸ್ಟೇಟ್ಸ್ 8 ) ಸರೋವರ 9 ) ಪೆಕ್ ( Tupac 10 ) ಸೂರ್ಯ ದೇವರು
8ನೇ ತರಗತಿ ಸಮಾಜ ವಿಜ್ಞಾನ ಪಾಠದ ನೋಟ್ಸ್:
ಅದ್ಯಾಯ -೧ –ಆಧಾರಗಳು ಪಾಠದ ಪ್ರಶ್ನೆ ಉತ್ತರ
ಅದ್ಯಾಯ -೨ – ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಪ್ರಶ್ನೆ ಉತ್ತರ
ಅಧ್ಯಾಯ -೩-ಭಾರತದ ಪ್ರಾಚೀನ ನಾಗರಿಕತೆಗಳು ಪಾಠದ ಪ್ರಶ್ನೆ ಉತ್ತರ
ಅಧ್ಯಾಯ -೪- ಜಗತ್ತಿನ ಪ್ರಾಚೀನ ನಾಗರಿಕತೆಗಳು ಪ್ರಶ್ನೋತ್ತರಗಳು
ಅದ್ಯಾಯ -೬- ಜೈನ ಮತ್ತು ಬೌದ್ಧ ಧರ್ಮಗಳ ಉದಯ Notes
ವೈದ್ಯಕೀಯ ಅಧ್ಯಯನಕ್ಕೆ ಬುನಾದಿಯನ್ನು ಹಾಕಿದವನು ……………?
ಹಿಪ್ಪಾಕ್ರಿಟಿಸ್
ಗ್ರೀಕರು ಸರ್ವಾಧಿಕಾರಿಗಳನ್ನು……….. ಎಂದು ಕರೆದರು?
ಟೈರಾಂಟ್ಸ್