ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಪ್ರಶ್ನೆ ಉತ್ತರ, Bhougolika Lakshanagalu Haagu Charitre Purva Bharata Questions and Answers, pdf, 8th
ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಪ್ರಶ್ನೆ ಉತ್ತರ
ಕೆಳಕಂಡ ವಾಕ್ಯಗಳನ್ನು ಪೂರ್ಣಗೊಳಿಸಿ ,
1. ಭಾರತವು ಒಂದು…………… ದ್ವೀಪವಾಗಿದೆ .
2. ಬೂದಿಯ ಕುರುಹುಗಳು-…………….. ಗವಿಗಳಲ್ಲಿ ದೊರೆತಿವೆ .
3. ಮಧ್ಯಶಿಲಾಯುಗದ ಪರಿಕರಗಳನ್ನು ……………..ಎಂದು ಕರೆಯುತ್ತಾರೆ .
ಉತ್ತರ : – 1 ) ಪರ್ಯಾಯ , 2 ) ಕರ್ನೂಲಿನ , 3 ) ಸ್ಥಿತ್ಯಂತರ ಸೂಕ್ಷ್ಮ ಶಿಲಾಯುಗ
II . ಸಂಕ್ಷಿಪ್ತವಾಗಿ ಉತ್ತರಿಸಿ .
1. ಭಾರತದ ಭೂ ಮೇಲೆ ರಚನೆಯನ್ನು ಸ್ಕೂಲವಾಗಿ ತಿಳಿಸಿ . ಭಾರತದ ಭೂ ಮೇಲ್ಮ ರಚನೆಯ ಲಕ್ಷಣಗಳು
- ಉತ್ತರದಲ್ಲಿ ಹಿಮಾಲಯದ ಪರ್ವತಶ್ರೇಣಿಗಳನ್ನು
- ಸಮತಟ್ಟಾದ ಸಿಂಧೂ , ಗಂಗಾ ಬಯಲು ಪ್ರದೇಶವನ್ನು
- ದಕ್ಷಿಣದ ದಖನ್ ಪ್ರಸ್ಥಭೂಮಿಯನ್ನು ಹಾಗೂ
- ಕರಾವಳಿ ತೀರ ಪ್ರದೇಶವನ್ನು ಹೊಂದಿದೆ .
8ನೇ ತರಗತಿ ಸಮಾಜ ವಿಜ್ಞಾನ ಪಾಠ 1 ನೋಟ್ಸ್ :- ಆಧಾರಗಳು ಪಾಠದ ಪ್ರಶ್ನೆ ಉತ್ತರ
2. ಯಾವ ಕಣಿವೆಗಳ ಮೂಲಕ ಭಾರತದ ಮೇಲೆ ದಾಳಿಗಳು ಸಂಭವಿಸಿವೆ .
ವಾಯವ್ಯ ಭಾರತದಲ್ಲಿನ ಬೊಲಾನ್ ಮತ್ತು ಬೈಬರ್ ಕಣಿವೆಮಾರ್ಗಗಳ ಮೂಲಕವೇ ಭಾರತದ ಮೇಲೆ ದಾಳಿಗಳು ಸಂಭವಿಸಿವೆ .
3. ಪ್ರಾಗೈತಿಹಾಸಿಕ ಕಾಲ ಎಂದರೇನು ?
ಮಾನವರು ಲೇಖನ ಕಲೆಯನ್ನು ಕಂಡು ಹಿಡಿಯುವುದಕ್ಕೆ ಮೊದಲಿನ ಕಾಲವನ್ನು ಪ್ರಾಗೈತಿಹಾಸಿಕ ಕಾಲವೆನ್ನುತ್ತೇವೆ . ಈ ಕಾಲಘಟ್ಟದಲ್ಲಿ ಭಾಷೆಯ ಬಳವಣಿಗೆ ಹಾಗೂ ಲಿಪಿಯ ಬಳಕೆಯ ಬಗ್ಗೆ ನಮಗೆ ಆಧಾರಗಳು ಸಿಗದೆ ಇರುವುದರಿಂದ ಇದನ್ನು ಚರಿತ್ರೆಯ ಪೂರ್ವಕಾಲವೆಂದು ಕರೆಯುತ್ತೇವೆ
4. ಪಶುಸಂಗೋಪನೆ ಮತ್ತು ಹೈನುಗಾರಿಕೆಯು ಹೇಗೆ ಪ್ರಾರಂಭವಾಯಿತು ?
ಸುಮಾರು 12,000 ವರ್ಷಗಳ ಹಿಂದೆ ಭೂ ಮಂಡಲದ ತಾಪಮಾನವು ಮತ್ತಷ್ಟು ಹೆಚ್ಚಿತು . ಹಲವೆಡೆ ಇದು ಹುಲ್ಲುಗಾವಲಿನ ಬೆಳವಣಿಗೆಗೆ ಕಾರಣವಾಯಿತು .
ಪ್ರಾಣಿ ಪಕ್ಷಿಗಳ ಸಂತತಿಯು ಹೆಚ್ಚಾಗತೊಡಗಿದವು . ಈ ಸಂಕುಲಗಳ ಜೊತೆಯಲ್ಲಿಯೇ ಜಿಂಕೆ , ಕಡವೆ , ಮೇಕೆ , ಕುರಿ ಹಾಗೂ ಇನ್ನಿತರ ಪ್ರಾಣಿಗಳು ಹುಲ್ಲುಗಾವಲು ಪ್ರದೇಶದಲ್ಲಿ ಸಮೃದ್ಧಿಯಿಂದ ಬೆಳೆದವು .
ಕ್ರಮೇಣವಾಗಿ ಈ ಕೆಲಪ್ರಾಣಿಗಳನ್ನು ಹಿಡಿದು ತಂದು ಮಾನವರು ಪೋಷಿಸತೊಡಗಿದರು . ಹೀಗೆ ಪಶುಸಂಗೋಪನೆ ಮತ್ತು ಹೈನುಗಾರಿಕೆಯು ಪ್ರಾರಂಭವಾಯಿತು .
5. ಪ್ರಾಗೈತಿಹಾಸಿಕ ಕಾಲಘಟ್ಟವನ್ನು ವಿದ್ವಾಂಸರು ವಿವಿಧ ಹೆಸರುಗಳಿಂದ ಕರೆದಿದ್ದಾರೆ . ಅವು ಯಾವುವು ? ಪ್ರಾಗೈತಿಹಾಸದ ವಿವಿಧ ಕಾಲಘಟ್ಟಗಳು
1 ) ಹಳೆ ಶಿಲಾಯುಗ
- ಆದಿ ಹಳೆ ಶಿಲಾಯುಗ
- ಆ ) ಮಧ್ಯೆ ಹಳೆ ಶಿಲಾಯುಗ
- ಅಂತ್ಯ ಹಳೆ ಶಿಲಾಯುಗ
2 ) ಮಧ್ಯ ಶಿಲಾಯುಗ
3 ) ನವ ಶಿಲಾಯುಗ
ಭಾರತವು ಒಂದು…………… ದ್ವೀಪವಾಗಿದೆ ?
ಪರ್ಯಾಯ
ಮಧ್ಯಶಿಲಾಯುಗದ ಪರಿಕರಗಳನ್ನು ……………..ಎಂದು ಕರೆಯುತ್ತಾರೆ?
ಸ್ಥಿತ್ಯಂತರ ಸೂಕ್ಷ್ಮ ಶಿಲಾಯುಗ
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ
ಕನ್ನಡ
ಇತಿಹಾಸ
ಭೂಗೋಳಶಾಸ್ತ್ರ
ಭಾರತದ ಸಂವಿಧಾನ
ವಿಜ್ಞಾನ
ಅರ್ಥಶಾಸ್ತ್ರ
ಮಾನಸಿಕ ಸಾಮರ್ಥ್ಯ
ಇಂಗ್ಲೀಷ್ ವ್ಯಾಕರಣ
ಪ್ರಚಲಿತ ವಿದ್ಯಮಾನ
ಸಾಮಾನ್ಯ ಜ್ಞಾನ
ಎಲ್ಲಾ ಉದ್ಯೋಗಗಳು | WCD ಚಿತ್ರದುರ್ಗ ನೇಮಕಾತಿ 2022