Shivaji Maharaj Jayanti in Kannada | ಛತ್ರಪತಿ ಶಿವಾಜಿ ಜಯಂತಿ

Shivaji Maharaj Jayanti in Kannada | ಛತ್ರಪತಿ ಶಿವಾಜಿ ಜಯಂತಿ

Shivaji Maharaj Jayanti in Kannada, ಛತ್ರಪತಿ ಶಿವಾಜಿ ಜಯಂತಿ, shivaji maharaj jayanti date of birth, CAPTION, QUOTES, IMAGES, chhatrapati, PDF

Shivaji Maharaj Jayanti in Kannada

ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯ ಶುಭಾಶಯಗಳು ..

ಭಾರತದ ಇತಿಹಾಸ ಕಂಡ ವೀರಾಧಿವೀರರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕೂಡ ಪ್ರಮುಖರು. ಮಹಾರಾಷ್ಟ್ರದ ಮರಾಠ ಸಾಮ್ರಾಟರೆನಿಸಿದ ಶಿವಾಜಿ ಅವರ ಜನ್ಮದಿನವನ್ನು ಇವತ್ತು ಆಚರಿಸಲಾಗುತ್ತಿದೆ.

ದೇಶಾದ್ಯಂತ ಶಿವಾಜಿ ಜಯಂತಿಯನ್ನು ಅಲ್ಲಲ್ಲಿ ಆಚರಿಸಲಾಗುತ್ತದೆಯಾದರೂ ಮಹಾರಾಷ್ಟ್ರದಲ್ಲಿ ಇದು ದೊಡ್ಡದು. ಈ ರಾಜ್ಯದಲ್ಲಿ ಇವತ್ತು ಸಾರ್ವಜನಿಕ ರಜೆ ಇದೆ.

ಛತ್ರಪತಿ ಶಿವಾಜಿ ಜಯಂತಿ

ಛತ್ರಪತಿ ಶಿವಾಜಿ ಜನನ 1630, ಫೆ. 19 ರಂದು ಪುಣೆ ಬಳಿಯ ಶಿವನೇರಿ ಕೋಟೆಯಲ್ಲಿ.

ತಂದೆ: ಶಹಾಜಿ ಭೋಂಸ್ಲೆ – ಅವರು ಸುಲ್ತಾನರ ಸೇನೆಯಲ್ಲಿ ಸೇನಾಪತಿಯಾಗಿದ್ದವು.

ತಾಯಿ : ಜೀಜಾಬಾಯಿ – ಅವರು ಮೊಘಲ್ ದೊರೆಯ ಜೊತೆ ಗುರುತಿಸಿಕೊಂಡ ಯೋಧನ ಮಗಳು. ಜೀಜಾಬಾಯಿ ಅವರ ಪ್ರೇರಣಾತ್ಮಕ ಮಾತುಗಳಿಂದಾಗಿ ಶಿವಾಜಿ ಬಾಲ್ಯದಲ್ಲೇ ಮರಾಠ ಸಾಮ್ರಾಜ್ಯದ ಕನಸು ಕಂಡವರು.

ಶಿವಾಜಿ ಇನ್ನೂ ಹದಿಹರೆಯದಲ್ಲೇ ಇವರು ಬಿಜಾಪುರ ಸುಲ್ತಾನರ ವಶದಲ್ಲಿದ್ದ ತೋಮಾ, ರಾಯಗಡ ಮತ್ತು ಕೊಂಡಾನ ಕೋಟೆಗಳನ್ನ ಜಯಿಸಿದ ವೀರರೆನಿಸಿದ್ದರು.

ಆಗ ದೇಶದಲ್ಲಿ ಪ್ರಬಲರೆನಿಸಿದ್ದ ಮೊಗಲ್ ಸಾಮ್ರಾಜ್ಯ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರದಲ್ಲಿ ಪ್ರಬಲರಾಗಿದ್ದ ಸುಲ್ತಾನರು ಹಾಗೂ ದಿನೇ ದಿನೇ ಶಕ್ತಿ ವೃದ್ಧಿಸಿಕೊಳ್ಳುತ್ತಿದ್ದ ಬ್ರಿಟಿಷರು ಇವರೆಲ್ಲರನ್ನೂ ಎದುರಿಸಿ ಶಿವಾಜಿ ಮಹಾರಾಜ್ ಸಾಮ್ರಾಜ್ಯ ಕಟ್ಟಿದವರು.

1870ರಲ್ಲಿ ಮಹಾತ್ಮ ಜ್ಯೋತಿರಾವ್ ಫುಲೆ ಅವರು ಮೊದಲ ಬಾರಿ ಶಿವಾಜಿ ಜಯಂತಿ ಆಚರಣೆ ನಡೆಸಿದರು. ಬಾಲ ಗಂಗಾಧರ ತಿಲಕ್ ಅವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ಶಿವಾಜಿ ಜಯಂತಿ ಆಚರಣೆಯನ್ನು ಬಳಸಿಕೊಂಡದ್ದೂ ಇತಿಹಾಸ. ಮಹಾರಾಷ್ಟ್ರದಲ್ಲಿ ಈಗಲೂ ಶಿವಾಜಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಸ್ವರಾಜ್ಯ, ಸುಶಾಸನದ ಪರಂಪರೆ ನೀಡಿದ ಶಿವಾಜಿ ಮಹಾರಾಜ್

ಜ್ಯೇಷ್ಠ ಶುದ್ಧ ತ್ರಯೋದಶಿಯಂದು ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ಸಮಾರಂಭವು ರಾಯಗಡ ದುರ್ಗದಲ್ಲಿ ಜರುಗಿತು. ಅದು ದಿ. 6 ಜೂನ್ 1674. ಈ ಘಟನೆ ನಡೆದು ಮುನ್ನೂರ ನಲ್ವತ್ತು ವರ್ಷಗಳಾಗುತ್ತಿದೆ.

ಶಿವಾಜಿ ಮಹಾರಾಜರ ರಾಜ್ಯಾಭಿಷೇಕವು ಒಂದು ಯುಗಪ್ರವರ್ತಕ ಘಟನೆಯಾಗಿತ್ತು. ಮಹಾರಾಜ ಪೃಥ್ವೀರಾಜಸಿಂಗ್ ಚೌಹಾಣ್ ಬಳಿಕ ಭಾರತದಿಂದ ಹಿಂದೂ ಆಡಳಿತವು ಬಹುಮಟ್ಟಿಗೆ ಕೊನೆಗೊಂಡಿತ್ತು. ದಿಲ್ಲಿಯಲ್ಲಿ ಮೊಗಲರ ರಾಜ್ಯಭಾರವಿತ್ತು, ಮತ್ತು ದಕ್ಷಿಣದಲ್ಲಿ ಆದಿಲಶಾಹಿ, ಕುತುಬಶಾಹಿ ಮುಂತಾದ ಮುಸ್ಲಿಂ ರಾಜರು ರಾಜ್ಯವಾಳುತ್ತಿದ್ದರು.

ಎಲ್ಲ ಕಡೆಗಳಲ್ಲಿಯೂ ಇವರ ಸರ್ದಾರ-ಸೇನಾಪತಿಗಳು ಹಿಂದುಗಳೇ ಆಗಿರುತ್ತಿದ್ದರು. ಎಂದರೆ, ಹಿಂದೂ ಸೇನಾಪ್ರಮುಖರೇ ಹಿಂದುಗಳನ್ನು ಗುಲಾಮರನ್ನಾಗಿಸಿದರು, ಅವರ ಮೇಲೆ ಪರಕೀಯ ಮುಸಲ್ಮಾನರ ಸುಲ್ತಾನಿಕೆ ಹೇರಿದರು.
ಶಿವಾಜಿ ಮಹಾರಾಜರು ಆ ಕಾಲದಲ್ಲಿ ಒಬ್ಬ ವಿಶಿಷ್ಟ ಯುಗಪುರುಷರಾಗಿದ್ದರು. ಅವರು ಪರಕೀಯ ಸುಲ್ತಾನಿಕೆಯಿಂದ ತಮ್ಮನ್ನು ಪ್ರತ್ಯೇಕವಾಗಿಟ್ಟು, ತಮ್ಮ ಸ್ವತಂತ್ರ ರಾಜ್ಯವನ್ನು ಕಟ್ಟಿದರು.

ಅವರ ಸಮಕಾಲೀನರಾದ ಪ್ರಾಜ್ಞರ ಅಭಿಪ್ರಾಯದಂತೆ, ಭಾರತದೆಲ್ಲೆಡೆ ಮ್ಲೇಚ್ಛ ರಾಜರುಗಳಿದ್ದರು, ಶಿವಾಜಿಯು ಅವರಿಗೆ ಸವಾಲೊಡ್ಡಿ ತನ್ನ ಸ್ವತಂತ್ರ ರಾಜ್ಯವನ್ನು ನಿರ್ಮಿಸಿದ.

ಈ ಘಟನೆಯು ಸಾಮಾನ್ಯವಾಗಿರಲಿಲ್ಲ.

ದೇಶವು ಪಾರತಂತ್ರ್ಯಕ್ಕೀಡಾದಾಗ ಜನರು ರಾಜ್ಯಕರ್ತ ಮಂದಿಯ ಅನುಕರಣೆ ಮತ್ತು ಅನುಸರಣೆ ಮಾಡುವುದುಂಟು. ಸಮಾಜದ ನೇತೃತ್ವ ವಹಿಸುವ ವಿದ್ವಜ್ಜನರು, ಸೇನಾನಿಗಳು, ರಾಜದುರಂಧರರು ಪರಾನುಕರಣೆಯಲ್ಲಿ ಧನ್ಯತೆ ಕಾಣುವರು.

ಸಮಾಜವೂ ಈ ಮಂದಿಯನ್ನು ಅನುಕರಣೆ ಮಾಡುತ್ತಿರುತ್ತದೆ. ಧರ್ಮಕ್ಕೆ ಗ್ಲಾನಿಯುಂಟಾಗುತ್ತದೆ, ಪರಧರ್ಮಕ್ಕೆ ಹೋಗುವವರ ಸಂಖ್ಯೆ ಅಧಿಕವಾಗುತ್ತದೆ. ತಮ್ಮ ಜೀವನಾದರ್ಶಗಳಿಂದ ಜನ ದೂರವಾಗುತ್ತಾರೆ. ದಿಲ್ಲೀಶ್ವರನೇ ಜಗದೀಶ್ವರನೆಂಬ ನಂಬಿಕೆ ಬೆಳೆಯುತ್ತದೆ.

ಭಾಷೆಯ ವಿಕಾಸ ಕುಂಠಿತವಾಗುತ್ತದೆ. ಪರಕೀಯ ಭಾಷೆಯು ಹುಲುಸಾಗುತ್ತದೆ. ಮುಸಲ್ಮಾನರ ಆಳ್ವಿಕೆಯ ಕಾಲದಲ್ಲಿ ಅರಬೀ, ಪಾರ್ಸಿ, ತುರ್ಕಿ ಭಾಷೆಗಳ ಬಳಕೆ ಅಧಿಕವಾಯಿತು.

ರಾಜ್ಯವ್ಯವಹಾರವೂ ಇದೇ ಭಾಷೆಗಳಲ್ಲಿ ನಡೆಯುತ್ತಿತ್ತು. ಈ ಪರಾನುಕರಣೆ ಪ್ರವೃತ್ತಿಯ ಬಗ್ಗೆಸಮರ್ಥ ರಾಮದಾಸರು ಹೇಳಿದ್ದಾರೆ: ಸ್ವಇಚ್ಛೆಯಿಂದ ಹಲವರು ಪೀರಭಕ್ತರಾಗಿದ್ದರೆ, ಕೆಲವರು ಮುಸಲ್ಮಾನರಾಗುತ್ತಿದ್ದಾರೆ.

ಸಮಾಜಕ್ಕೆ ಬೌದ್ಧಿಕ ನೇತೃತ್ವವನ್ನು ಬ್ರಾಹ್ಮಣರು ವಹಿಸಬೇಕು, ಆದರೆ ಅವರು ಭ್ರಷ್ಟರಾಗಿದ್ದಾರೆ. ರಾಜ್ಯಾಡಳಿತವು ಮ್ಲೇಚ್ಛರ ಕೈಗೆ ಹೋಗಿದೆ, ಹಾಗೂ ಸಮಾಜದ ಗುರುಗಳು ಅಪಾತ್ರ ವ್ಯಕ್ತಿಗಳಾಗಿದ್ದಾರೆ, ಮತ್ತು ನಮ್ಮ ಸ್ಥಿತಿಯು ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬಂತಾಗಿದೆ.

ಭಾರತಕ್ಕೆ ಆಂಗ್ಲರ ಆಡಳಿತ ಬಂದಾಗಲೂ ಇದೇ ಪರಿಸ್ಥಿತಿಯುಂಟಾಯಿತು. ಆಂಗ್ಲರ ಕಾಲದಲ್ಲಿ ಆಂಗ್ಲ ಭಾಷೆಯ ಪ್ರಭಾವ ಬೆಳೆಯಿತು, ಕ್ರೈಸ್ತಮತದ ಪ್ರಭಾವವೂ ಬೆಳೆಯಿತು, ಹಾಗೂ ಸಮಾಜದ ಗಣ್ಯರು ಕ್ರೈಸ್ತರಾಗತೊಡಗಿದರು. ಸ್ವಾತಂತ್ರ್ಯದ ಬಳಿಕವೂ ಬಿಳಿಯ ಆಂಗ್ಲರು ಹೋದರು ಮತ್ತು ಕರಿಯ ಆಂಗ್ಲರ ಆಡಳಿತ ಶುರುವಾಯಿತು.

ಪರಿಸ್ಥಿತಿಯಲ್ಲಿ ಯಾವ ವೌಲಿಕ ಪರಿವರ್ತನೆಯೂ ಆಗಲಿಲ್ಲ. ಆಂಗ್ಲ ಭಾಷೆಯ ಪ್ರಭಾವ ಹಾಗೆಯೇ ಮುಂದುವರಿಯಿತು, ಮತ್ತು ಕ್ರೈಸ್ತರಾಗುವ ಪ್ರವೃತ್ತಿ ಮುಂಚಿನಂತೆಯೇ ಉಳಿಯಿತು.
ಯುಗ ಪರಿವರ್ತನೆಯ ಶಿಲ್ಪಿ
ತ್ರಪತಿ ಶಿವಾಜಿ ಮಹಾರಾಜರು 340 ವರ್ಷಗಳ ಹಿಂದೆ ಸ್ವರಾಜ್ಯ, ಸ್ವಧರ್ಮ, ಸ್ವಭಾಷೆ ಮತ್ತು ಸ್ವದೇಶದ ಪುನರುತ್ಥಾನಕ್ಕಾಗಿ ಮಾಡಿದ್ದ ಕಾರ್ಯಕ್ಕೆ ತುಲನೆಯಿಲ್ಲ.

ಅವರ ರಾಜ್ಯಾಭಿಷೇಕವು ಒಬ್ಬ ವ್ಯಕ್ತಿಯನ್ನು ರಾಜಸಿಂಹಾಸನದಲ್ಲಿ ಕೂರಿಸುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಶಿವಾಜಿ ಮಹಾರಾಜರು ಒಬ್ಬ ವ್ಯಕ್ತಿಯಾಗಿರಲಿಲ್ಲ, ಅವರು ಒಂದು ಕಲ್ಪನೆಯಾಗಿದ್ದರು, ಒಂದು ವಿಚಾರವಾಗಿದ್ದರು, ಒಂದು ಯುಗಪರಿವರ್ತನೆಯ ಶಿಲ್ಪಿಯಾಗಿದ್ದರು.

ಶಿವಾಜಿ ಮಹಾರಾಜ

ಭಾರತವು ಒಂದು ಸನಾತನ ದೇಶ, ಇದು ಹಿಂದುಸ್ಥಾನ, ತುರ್ಕಸ್ಥಾನವಲ್ಲ, ಮತ್ತು ಇಲ್ಲಿ ನಮ್ಮ ರಾಜ್ಯವಿರಬೇಕು. ನಮ್ಮ ಧರ್ಮದ ವಿಕಾಸವಾಗಬೇಕು, ನಮ್ಮ ಜೀವನವೌಲ್ಯಗಳನ್ನು ಅಭಿವೃದ್ಧಿಪಡಿಸಬೇಕು.

ಶಿವಾಜಿ ಮಹಾರಾಜರು ಜೀವನಸಂಘರ್ಷ ಮಾಡಿದ್ದು ಈ ಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿಯೇ. ಅವರು ಮತ್ತೆ ಮತ್ತೆ ಹೇಳುತ್ತಿದ್ದರು, ‘‘ಈ ರಾಜ್ಯವಾಗಬೇಕೆಂಬುದು ಪರಮೇಶ್ವರನ ಇಚ್ಛೆ.

Shivaji Maharaj Jayanti in Kannada

ಎಂದರೆ ಸ್ವರಾಜ್ಯ ಸಂಸ್ಥಾಪನೆಯು ಈಶ್ವರೀ ಕಾರ್ಯವಾಗಿದೆ. ನಾನು ಈಶ್ವರೀ ಕಾರ್ಯದ ಕೇವಲ ಒಬ್ಬ ಸಿಪಾಯಿಯಷ್ಟೇ.’’
ಈಶ್ವರೀ ಕಾರ್ಯದ ಪ್ರೇರಣೆಯನ್ನು ಅವರು ತಮ್ಮೆಲ್ಲ ಸಹಕಾರಿಗಳಲ್ಲೂ ಮೂಡಿಸಿದರು. ನಾವು ಹೋರಾಡಬೇಕು, ಯುದ್ಧ ಗೆಲ್ಲಬೇಕು, ಇದೇನೂ ಒಬ್ಬ ವ್ಯಕ್ತಿಯ ಸನ್ಮಾನಕ್ಕಾಗಿಯೇನಲ್ಲ, ಈಶ್ವರೀ ಕಾರ್ಯವನ್ನು ಪೂರ್ಣಗೊಳಿಸಲು ನಾವು ಹೋರಾಡಬೇಕು.

ಈ ಭಾವನೆಯು ಜೀವನದ ಒಂದು ಅವಿಭಾಜ್ಯ ಅಂಗವಾದಾಗಲೇ ಪ್ರತಿ ವ್ಯಕ್ತಿಯಲ್ಲೂ ಸಹಸ್ರ ಆನೆಯ ಬಲವುಂಟಾಗುತ್ತದೆ.

ಪನ್ಹಾಳಗಡದಿಂದ ಶಿವಾಜಿ ಮಹಾರಾಜರು ಸಿದ್ಧಿ ಜೌಹರ್‌ನ ಕಣ್ತಪ್ಪಿಸಿ ವಿಶಾಲಗಡದ ಕಡೆ ಹೋಗುತ್ತಿದ್ದರು. ಸಿದ್ಧಿ ಜೌಹರ್‌ನಿಗೆ ಇದರ ಸುಳಿವು ಸಿಕ್ಕಿತು, ಆತ ಅವರನ್ನು ಹಿಂಬಾಲಿಸಿದ.

ಮಾರ್ಗದಲ್ಲಿ ಒಂದು ದುರ್ಗಮ ದಾರಿಯಿತ್ತು, ಅದನ್ನು ಮರಾಠಿಯಲ್ಲಿ ಖಿಂಡ್ (ಖಿಂಡಿ) ಎನ್ನುತ್ತಾರೆ. ಅದರ ಮೂಲಕ ಇಬ್ಬರು-ಮೂವರಷ್ಟೇ ಹೋಗಬಹುದು.

ಆ ಘಾಟಿಯಲ್ಲಿ ಬಾಜಿಪ್ರಭು ದೇಶಪಾಂಡೆಯು ತನ್ನ ಕೆಲ ಸಂಗಡಿಗರೊಂದಿಗೆ ನಡೆಸಿದ ಸೆಣಸಾಟವನ್ನು ಮತ್ತಾವ ಕದನದೊಂದಿಗೂ ಹೋಲಿಸಲು ಸಾಧ್ಯವಿಲ್ಲ.

ಸಹಸ್ರಾರು ಸಂಖ್ಯೆಯ ಸೈನ್ಯವನ್ನು ಆತ ತಡೆಗಟ್ಟಿದ, ಕೊನೆಯಲ್ಲಿ ಆತ ಧರೆಗುರುಳಿದ. ವಿಶಾಲಗಡಕ್ಕೆ ಶಿವಾಜಿ ಮಹಾರಾಜರು ಕ್ಷೇಮವಾಗಿ ತಲಪಿದ ಸದ್ದು ಬರುವವರೆಗೂ ಆತ ತನ್ನ ಪ್ರಾಣವನ್ನು ಹಿಡಿದಿಟ್ಟುಕೊಂಡ.

ಒಬ್ಬ ವ್ಯಕ್ತಿ ಮತ್ತು ಅವನ ಸಂಗಡಿಗರು ಹತ್ತು ಸಹಸ್ರ ಸೈನಿಕರೊಂದಿಗೆ ಸೆಣಸುವ ಈ ಕಾರ್ಯವು ದೈವೀ ನಿಷ್ಠೆಯಿಂದಾಗಿಯೇ ಸಾಧ್ಯವಾಯಿತು.

ಪ್ರಜೆಗಳ ಆಡಳಿತ

ಛತ್ರಪತಿ ಶಿವಾಜಿ ಮಹಾರಾಜರ ಆಡಳಿತವು ಭೋಂಸ್ಲೆ ಮನೆತನದ ಆಡಳಿತವಾಗಿರಲಿಲ್ಲ. ಅವರು ವಂಶವಾದಕ್ಕೆ ರಾಜಕಾರಣದಲ್ಲಿ ಅವಕಾಶ ನೀಡಲಿಲ್ಲ.

ಅವರ ಆಡಳಿತವು ನೈಜ ಅರ್ಥದಲ್ಲಿ ಪ್ರಜೆಗಳ ಆಡಳಿತವಾಗಿತ್ತು. ಆಡಳಿತದಲ್ಲಿ ಎಲ್ಲರ ಸಹಭಾಗಿತ್ವವಿತ್ತು.

ಸಾಮಾನ್ಯ ಬೆಸ್ತನಿಂದ ಹಿಡಿದು ವೇದಶಾಸ್ತ್ರ ಪಂಡಿತರ ವರೆಗೆ ಎಲ್ಲರೂ ಅವರ ರಾಜ್ಯಾಡಳಿತದಲ್ಲಿ ಪಾಲ್ಗೊಂಡಿದ್ದರು. ಅಸ್ಪೃಶ್ಯತೆಗೆ ಯಾವ ಸ್ಥಾನವೂ ಇರಲಿಲ್ಲ.

ಪನ್ಹಾಳಗಡದ ಮುತ್ತಿಗೆಯಲ್ಲಿ ನಕಲಿ ಶಿವಾಜಿಯಾಗಿದ್ದವನ ಹೆಸರು ಶಿವಾ ಕಾಶಿದ್. ಆತ ಜಾತಿಯಲ್ಲಿ ಕ್ಷೌರಿಕ. ಅಫ್ಜಲ್‌ಖಾನನೊಂದಿಗೆ ಕದನ ಪ್ರಸಂಗದಲ್ಲಿ ಶಿವಾಜಿಯ ಪ್ರಾಣರಕ್ಷಣೆ ಮಾಡುತ್ತಿದ್ದವನು ಜೀವಾ ಮಹಾಲಾ.

ಆಗ್ರಾದ ಸೆರೆಯಲ್ಲಿ ಅವರ ಸೇವೆ ಮಾಡುತ್ತಿದ್ದವನು ಮದಾರಿ ಮೆಹತರ್, ಒಬ್ಬ ಮುಸಲ್ಮಾನ. ಆತನ ಕೋಟೆ ಮುಖ್ಯಸ್ಥರು ಎಲ್ಲ ಜಾತಿಗಳಿಗೆ ಸೇರಿದವರಾಗಿದ್ದರು. ಮಹಾರಾಜರ ಒಂದು ನಿಯಮವಿತ್ತು,

ಸೂರ್ಯ ಮುಳುಗಿದ ಬಳಿಕ ಕೋಟೆಯ ದ್ವಾರ ಮುಚ್ಚಬೇಕು, ಅಲ್ಲದೆ ಯಾವ ಪರಿಸ್ಥಿತಿಯಲ್ಲೂ ಕೋಟೆಯೊಳಗೆ ಪ್ರವೇಶ ನೀಡಬಾರದು. ಬಹು ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸಲಾಗುತ್ತಿತ್ತು.

ಗಡಿಭಾಗದ ರಕ್ಷಣೆಯನ್ನು ಈ ರೀತಿ ನಿರ್ವಹಿಸಬೇಕಾಗುತ್ತಿತ್ತು. ಅನಪೇಕ್ಷಿತ ಜನರಿಗೆ ಪ್ರವೇಶಿಸಲು ಬಿಡಬಾರದು. ಇಂದು ಭಾರತದಲ್ಲಿ ಬಾಂಗ್ಲಾದೇಶಿಗಳು ಸ್ವೇಚ್ಛೆಯಾಗಿ ಅಕ್ರಮಪ್ರವೇಶ ಮಾಡುತ್ತಾರೆ ಹಾಗೂ ಗಡಿ ರಕ್ಷಿಸುವವರೇ ಅವರಿಗೆ ಸಹಾಯ ಮಾಡುತ್ತಾರೆ.
ಮಹಾರಾಷ್ಟ್ರದ ಶ್ರೇಷ್ಠ ಇತಿಹಾಸಕಾರ ನ. ರ. ಫಾಟಕ್ ಅವರು ಒಂದು ಪ್ರಸಂಗ ಹೇಳಿದ್ದರು. ಪುಣೆ ಸಮೀಪದ ಕೋಟೆಗೆ ಕೆಲವು ಯುವಕರು ಹೋಗಿದ್ದರು. ಕೋಟೆಯ ಮುಖ್ಯಸ್ಥ ವೃದ್ಧನಾಗಿದ್ದ.

ಆತ ಬುರುಜಿನ ಮೇಲೆ ನಿಂತುಕೊಂಡು ಮೇಲಿನಿಂದ ಅಕ್ಕಿಯ ಕಾಳುಗಳನ್ನು (ಅಕ್ಷತೆ)ಕೆಳಕ್ಕೆ ಹಾಕುತ್ತಿದ್ದ.

ಯುವಕರು ಅವನಿಗೆ ಕೇಳಿದರು, ‘‘ಚಾಚಾಜಿ, ನೀವು ಇದೇನು ಮಾಡುತ್ತಿದ್ದೀರಾ?’’ ಕಿಲೇದಾರ ಹೇಳಿದ, ‘‘ಕೆಳಕ್ಕೆ ಊರಿನಲ್ಲಿ ನನ್ನ ಮೊಮ್ಮಗನ ಲಗ್ನವಿದೆ, ಅದಕ್ಕಾಗಿ ಮೇಲಿನಿಂದ ಮಂಗಳ ಅಕ್ಷತೆ ಹಾಕುತ್ತಿದ್ದೇನೆ.

ನಾನು ಕೋಟೆಯ ಕಿಲೇದಾರ. ಕಿಲೇದಾರನು ಅನುಮತಿಯಿಲ್ಲದೆ ತನ್ನ ಕೋಟೆಯನ್ನು ಬಿಡಬಾರದೆಂದು ಮಹಾರಾಜರ ಆಜ್ಞೆಯಿತ್ತು.

Shivaji Maharaj Jayanti in Kannada

ಈಗ ಮಹಾರಾಜರಿಲ್ಲ, ಅನುಮತಿ ಯಾರಿಂದ ಕೇಳಲಿ? ಆದರೆ ಮಹಾರಾಜರ ನಿಯಮವನ್ನು ನಾನು ಮುರಿಯಲಾರೆ.’’ ಶಿವಾಜಿ ಮಹಾರಾಜರು ಯಾವ ಪರಿವರ್ತನೆ ಮಾಡಿದರು, ಎಂತಹ ನಿಷ್ಠೆ ಮೂಡಿಸಿದರು ಎಂಬುದಕ್ಕೆ ಇದೊಂದು ಸುಂದರ ಉದಾಹರಣೆ.

ಹಿಂದು ರಾಜನೀತಿಯ ಪುನರುಜ್ಜೀವನ

ಶಿವಾಜಿ ಮಹಾರಾಜರು ಮುಸಲ್ಮಾನರ ಆಡಳಿತಕಾಲದಲ್ಲಿ ಲುಪ್ತವಾಗುತ್ತಿದ್ದ ಹಿಂದೂ ರಾಜನೀತಿಯನ್ನು ಮತ್ತೆ ಪುನರುಜ್ಜೀವನಗೊಳಿಸಿದರು. ಹಿಂದೂ ರಾಜನೀತಿಯ ವಿಶೇಷತೆಯೇನು? ಮೊದಲ ವಿಶೇಷತೆಯೆಂದರೆ, ಈ ರಾಜನೀತಿಯು ಧರ್ಮವನ್ನು ಅವಲಂಬಿಸಿದೆ.

ಇಲ್ಲಿ ಧರ್ಮ ಎಂದರೆ ರಾಜಧರ್ಮ. ರಾಜನ ಧರ್ಮವು ಪ್ರಜೆಗಳ ಪಾಲನೆ, ರಕ್ಷಣೆ ಹಾಗೂ ಯೋಗಕ್ಷೇಮ ನೋಡಿಕೊಳ್ಳುವುದು.ರಾಜನು ಹಿಂದೂ ರಾಜನೀತಿಯ ಸಿದ್ಧಾಂತಗಳ ಪ್ರಕಾರ ಉಪಭೋಗಶೂನ್ಯ ಒಡೆಯನು.

ಪ್ರಜೆಗಳು ಅವನ ದೃಷ್ಟಿಯಲ್ಲಿ ತನ್ನ ಮಕ್ಕಳಿಗೆ ಸಮಾನರು. ರಾಜ್ಯದಲ್ಲಿ ಯಾರೂ ಹಸಿದಿರಬಾರದು, ಯಾರ ಮೇಲೂ ಅನ್ಯಾಯವಾಗದಂತೆ ಅವರ ಬಗ್ಗೆ ಕಾಳಜಿ ವಹಿಸಬೇಕು.

ಪ್ರಜೆಗಳು ತಮ್ಮ ತಮ್ಮ ನಂಬಿಕೆಗನುಸಾರ ಉಪಾಸನಾ ಪದ್ಧತಿಯನ್ನು ಅನುಸರಿಸುತ್ತಾರೆ, ರಾಜನು ಪ್ರಜೆಗಳಿಗೆ ಎಲ್ಲ ರೀತಿಯ ಉಪಾಸನಾ ಸ್ವಾತಂತ್ರ್ಯವನ್ನು ನೀಡಬೇಕು.

ಪ್ರಜೆಗಳ ಧಾರ್ಮಿಕ ಕರ್ಮಕಾಂಡಗಳಿಗೆ ರಾಜ್ಯದ ವತಿಯಿಂದ ಯಥಾಶಕ್ತಿ ಸಹಾಯವನ್ನೂ ಮಾಡಬೇಕು.

ನ್ಯಾಯವು ಎಲ್ಲರಿಗೂ ಸಮಾನವಾಗಿರಬೇಕು. ಉಚ್ಚಪದಸ್ಥರಿಗೆ ಒಂದು ನ್ಯಾಯ ಮತ್ತು ಸಾಮಾನ್ಯರಿಗೆ ಇನ್ನೊಂದು ನ್ಯಾಯ, ಇದು ಅಧರ್ಮವಾಗಿದೆ.

ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ರಾಜನೀತಿಯ ಸಿದ್ಧಾಂತ ಮತ್ತು ತಮ್ಮ ರಾಜ್ಯವ್ಯವಹಾರವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರು.

ಅವರ ಮಾವ ಭ್ರಷ್ಟಾಚಾರ ಮಾಡಿದರು. ಆಗ ಶಿವಾಜಿ ಮಹಾರಾಜರು ಅವರನ್ನು ಅವರ ಹುದ್ದೆಯಿಂದ ವಜಾ ಮಾಡಿದರು, ಅಲ್ಲದೆ ತಮ್ಮ ರಾಜ್ಯದಿಂದ ಹೊರಹಾಕಿದರು.

ಮಗ ಸಂಭಾಜಿಯು ಏನೋ ಅಪರಾಧ ಮಾಡಿದಾಗ, ಅವನನ್ನು ಸೆರೆಹಿಡಿದು ಪನ್ಹಾಳಗಡದಲ್ಲಿಟ್ಟರು. ರಾಂಝಾದ ಪಾಟೀಲನು ಒಬ್ಬ ಯುವತಿಯ ಮೇಲೆ ಅತ್ಯಾಚಾರವೆಸಗಿದಾಗ, ಅವನ ಕೈಕಾಲು ಕಡಿಯುವ ಶಿಕ್ಷೆ ವಿಧಿಸಿದರು.

ವಿಜಯದುರ್ಗದ (ಸಮುದ್ರದಲ್ಲಿ ದುರ್ಗ ನಿರ್ಮಿಸುವ ಕಾರ್ಯ ನಡೆಯುತ್ತಿತ್ತು) ಕಾರ್ಯದಲ್ಲಿ ಒಬ್ಬ ಬ್ರಾಹ್ಮಣ ಆಡಳಿತಾಧಿಕಾರಿಯು ಸಾಮಗ್ರಿಗಳನ್ನು ಕಳುಹಿಸಲು ವಿಳಂಬಿಸಿದನು.

ಮಹಾರಾಜರು ಅವನಿಗೆ ಪತ್ರ ಬರೆದು, ‘‘ನೀವು ಬ್ರಾಹ್ಮಣರೆಂದು ನಿಮಗೆ ಶಿಕ್ಷೆಯಾಗದೆಂದು ಭ್ರಮಿಸಬೇಡಿ.

ಸರ್ಕಾರದ ಕಾರ್ಯವನ್ನು ಚೆನ್ನಾಗಿ ಮಾಡಿಲ್ಲವೆಂದು ನಿಮಗೆ ಶಿಕ್ಷೆಯಾಗುವುದು’’ ಎಂದು ತಿಳಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ತಾವು ಗೋಬ್ರಾಹ್ಮಣ ಪ್ರತಿಪಾಲಕರೆಂದು ಹೇಳಿಕೊಳ್ಳುತ್ತಿದ್ದರು. ಬ್ರಾಹ್ಮಣ ಜಾತಿಯ ಪ್ರತಿಪಾಲಕರೆಂದು ಇದರರ್ಥವಲ್ಲ.

Shivaji Maharaj Jayanti in Kannada

ಇಲ್ಲಿ ಬ್ರಾಹ್ಮಣ ಶಬ್ದದ ಅರ್ಥವು, ಧರ್ಮದಂತೆ ನಡೆಯುವವನು, ಧಾರ್ಮಿಕ ವಿಧಿಗಳನ್ನು ತಿಳಿದವನು. ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ, ರಾಜ್ಯವು ಕಾನೂನಿಗನುಸಾರವಾಗಿ ನಡೆಯುವುದು, ಎಂದು ಮಹಾರಾಜರು ಹೇಳುತ್ತಿದ್ದರು.

ಕುರಾನನ್ನು ಅವಮಾನಿಸಲಿಲ್ಲ

ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮದ ರಕ್ಷಣೆಯ ಪಣ ತೊಟ್ಟಿದ್ದರು. ಇಸ್ಲಾಂಮತದ ವೈರಿಗಳೆಂದು ಇದರರ್ಥವಲ್ಲ. ಅವರೆಂದೂ ಕುರಾನನ್ನು ಅವಮಾನಿಸಲಿಲ್ಲ, ಯಾವ ಮಸೀದಿಯನ್ನೂ ಕೆಡವಲಿಲ್ಲ, ಯಾವ ಫಕೀರನನ್ನೂ ಗಲ್ಲಿಗೇರಿಸಲಿಲ್ಲ.

ಅವರ ನೌಕಾಪಡೆಯ ಪ್ರಮುಖನು ಮುಸಲ್ಮಾನನಾಗಿದ್ದ. ಆದರೆ ಧರ್ಮದ ಮರೆಯಲ್ಲಿ ಯಾರಾದರೂ ಹಿಂದೂ ಧರ್ಮದ ಮೇಲೆ ಘಾತವೆಸಗಿದ್ದು ಕಂಡರೆ, ಅವನನ್ನೆಂದೂ ಬಿಡುತ್ತಿರಲಿಲ್ಲ.

ಶೇಜ್ವಲ್ಕರ್ ಎಂಬ ಖ್ಯಾತ ಇತಿಹಾಸಕಾರರು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ.

ಗೋವಾ ಮೇಲೆ ಶಿವಾಜಿ ಮಹಾರಾಜರು ದಂಡೆತ್ತಿ ಹೋದಾಗ, ಕೆಲವು ಕ್ರೈಸ್ತ ಮಿಶನರಿಗಳು ಬಂಧಿಸಲ್ಪಟ್ಟರು. ಈ ಮಿಶನರಿಗಳು ಹೆದರಿಸಿ ಬೆದರಿಸಿ ಹಿಂದುಗಳನ್ನು ಮತಾಂತರ ಮಾಡುತ್ತಿದ್ದರು.

ನೀವು ಈ ಕಾರ್ಯವನ್ನು ಬಿಟ್ಟುಬಿಡಿ, ಎಂದು ಶಿವಾಜಿ ಮಹಾರಾಜರು ಅವರಿಗೆ ಹೇಳಿದರು. ಆಗ ಅವರು, ಮತಾಂತರ ಮಾಡುವುದು ನಮ್ಮ ಧರ್ಮಾಜ್ಞೆಯಾಗಿದೆ ಎಂದರು.

ಮಹಾರಾಜರು ಹೇಳಿದರು – ಹೀಗಿದ್ದರೆ ಮತಾಂತರ ಮಾಡುವವನ ಕತ್ತು ಕತ್ತರಿಸಬೇಕೆಂದು ನಮ್ಮ ಧರ್ಮಾಜ್ಞೆಯಿದೆ.

ಅದೇ ರೀತಿ ಶಿವಾಜಿ ಮಹಾರಾಜರು ಇಬ್ಬರು ಮಿಶನರಿಗಳ ಕತ್ತು ಕತ್ತರಿಸಿದರು. ಸರ್ವಧರ್ಮ ಸಮಭಾವ ಎಂದರೆ ಭೋಳೆ ಹಿಂದುಗಳನ್ನು ಹೆದರಿಸಿ ಬೆದರಿಸಿ ಮುಸಲ್ಮಾನರನ್ನಾಗಿ ಮಾಡುವುದಲ್ಲ, ಇದು ಅಧರ್ಮದ ಕಾರ್ಯ.

ಹಿಂದೂ ಧರ್ಮದ ವಿರುದ್ಧ ಕಾರ್ಯವಾಗಿದ್ದು, ಅದಕ್ಕಾಗಿ ಈ ಕಾರ್ಯ ಮಾಡುವವರೊಂದಿಗೆ ಯಾವ ರೀತಿ ವ್ಯವಹರಿಸಬೇಕೆಂದು ಛತ್ರಪತಿ ಶಿವಾಜಿ ಒಂದು ಉದಾಹರಣೆ ನೀಡಿದ್ದಾರೆ.

ಶಿವಾಜಿ ಸಿದ್ಧಪಡಿಸಿದ ನೀಲಿನಕ್ಷೆ

ಶಿವಾಜಿ ಮಹಾರಾಜರ ಕದನಗಳು ನಮಗೆ ಗೊತ್ತಿದೆ. ಆದರೆ ಅವರು ಸುಮಾರು 36 ವರ್ಷಗಳವರೆಗೆ ರಾಜ್ಯಭಾರ ಮಾಡಿದ್ದು, ಅದರಲ್ಲಿ ಕೇವಲ ಆರು ವರ್ಷ ಅವರು ವಿವಿಧ ಕದನಗಳಲ್ಲಿ ಕಳೆದಿದ್ದು ನಮಗೆ ಗೊತ್ತಿಲ್ಲ.

ಮೂವತ್ತು ವರ್ಷಗಳವರೆಗೆ ಅವರು ಒಂದು ಆದರ್ಶ ಆಡಳಿತಕ್ಕೆ ಬುನಾದಿ ಹಾಕುವ ಕಾರ್ಯದಲ್ಲಿ ತೊಡಗಿದ್ದರು.

ಇಂದಿನ ಪರಿಭಾಷೆಯಲ್ಲಿ ಸುರಾಜ್ಯ, ಅಭಿವೃದ್ಧಿ, ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ, ರಾಷ್ಟ್ರೀಯ ಸಂಪತ್ತಿನ ಸಮಾನ ವಿತರಣೆ, ದುರ್ಬಲರ ಸಬಲೀಕರಣ ಇತ್ಯಾದಿ.

ಶಿವಾಜಿ ಮಹಾರಾಜರು ಈ ಕಾರ್ಯವನ್ನು ಮಾಡುವ ಬಗೆ ಹೇಗೆಂಬ ಒಂದು ನೀಲಿನಕ್ಷೆ (ಬ್ಲೂಪ್ರಿಂಟ್) ನಮ್ಮೆದುರಿಟ್ಟಿದ್ದಾರೆ, ಎನ್ನಬಹುದು.

ಇದುವರೆಗಿನ ಆಡಳಿತ ಕಾಲದಲ್ಲಿ ಈ ನಿಟ್ಟಿನಲ್ಲಿ ಅದೆಷ್ಟು ಗಮನ ಹರಿಸಬೇಕೋ, ಎಷ್ಟು ಅಧ್ಯಯನ ಮಾಡಬೇಕೋ ಅದೆಲ್ಲ ಆಗದಿರುವುದು ದುರ್ಭಾಗ್ಯಕರ.

ಆದರೆ ಇಂದು ಶಿವಾಜಿ ಮಹಾರಾಜರ ಈ ನೀಲಿನಕ್ಷೆಯನ್ನು ರಾಷ್ಟ್ರಜೀವನದಲ್ಲಿ ಅಳವಡಿಸುವ ಸಮಯ ಬಂದಿದೆ.

ರಾಷ್ಟ್ರದ ಶಕ್ತಿಯ ಅನೇಕ ಅಂಗಗಳಿದ್ದು, ಅವುಗಳಲ್ಲಿ ಎಲ್ಲಕ್ಕೂ ಮಹತ್ವದ ಅಂಗವೆಂದರೆ ಸಾಮಾಜಿಕ ಐಕ್ಯದ ಭಾವನೆ. ಎರಡನೆ ಮಹತ್ವದ ಅಂಗವೆಂದರೆ ಅದರ ಅರ್ಥನೀತಿ.

ಮೂರನೇ ಮಹತ್ವದ ಅಂಗವು ವಿದೇಶಾಂಗ ನೀತಿ ಹಾಗೂ ನಾಲ್ಕನೇ ಮಹತ್ವದ ಅಂಗವು ಅದರ ಸೈನ್ಯಶಕ್ತಿ. ಶಿವಾಜಿ ಮಹಾರಾಜರು ಆ ಕಾಲದ ಶಬ್ದಾವಳಿಯ ಪ್ರಕಾರ ‘ಮರಾಠಾ ತಿತುಕಾ ಮೇಳವಾವಾ, ಆಪುಲಾ ಮಹಾರಾಷ್ಟ್ರ ಧರ್ಮ ವಾಢವಾವಾ’ ಎಂಬ ಉಕ್ತಿಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

Shivaji Maharaj Jayanti in Kannada

ಇಲ್ಲಿ ಮರಾಠಾ ಎಂದರೆ ಹಿಂದೂ ಎಂದರ್ಥ. ಮಹಾರಾಷ್ಟ್ರ ಧರ್ಮ ಎಂದರೆ ಹಿಂದೂ ಧರ್ಮ.

ನಮ್ಮ ಸ್ವರಾಜ್ಯವು ಆರ್ಥಿಕ ದೃಷ್ಟಿಯಿಂದ ಸ್ವಾವಲಂಬಿ ಮತ್ತು ಸಶಕ್ತವಾಗುವ ನಿಟ್ಟಿನಲ್ಲಿ ಸದಾ ಶಿವಾಜಿ ಮಹಾರಾಜರ ಗಮನವಿರುತ್ತಿತ್ತು. ಕೃಷಿಕರಿಗೆ ಅವರು ಸಹಾಯ ನೀಡುತ್ತಿದ್ದರು.

ಈ ಸಹಾಯವನ್ನು ಎಂದೂ ನಗದು ಮೊತ್ತದ ರೂಪದಲ್ಲಿ ನೀಡುತ್ತಿರಲಿಲ್ಲ. ಕೃಷಿಕರಿಗೆ ಸಲಕರಣೆಗಳು, ಬೀಜ, ಎತ್ತು ಇತ್ಯಾದಿ ಸಾಧನಗಳ ರೂಪದಲ್ಲಿ ಸಹಾಯ ನೀಡಲಾಗುತ್ತಿತ್ತು.

ಸೇನಾಪಡೆಯು ತಮಗೆ ಬೇಕಾಗುವ ವಸ್ತುಗಳು, ಆಹಾರಧಾನ್ಯ ಇತ್ಯಾದಿಗಳನ್ನು ಪೇಟೆಗೆ ಹೋಗಿ ಖರೀದಿಸಬೇಕೆಂದು ಮಹಾರಾಜರ ಕಡಕ್ ಆದೇಶವಿರುತ್ತಿತ್ತು.

ರೈತರಿಂದ ಬಲವಂತವಾಗಿ ವಸೂಲು ಮಾಡುವಂತಿಲ್ಲ. ಯಾರಾದರೂ ಈ ಸಾಹಸ ಮಾಡಿದಲ್ಲಿ ಅವನಿಗೆ ಕಠಿಣ ಶಿಕ್ಷೆ ಕಾದಿರುತ್ತಿತ್ತು.

ಇಂದು ನಾವು ನೋಡುತ್ತೇವೆ, ಚೌಕಿಯಲ್ಲಿ ನಿಂತಿರುವ ಪೊಲೀಸನು ಗೂಡಂಗಡಿಯಿಂದ, ಅಂಗಡಿಯ ಚಾಯ್‌ವಾಲಾನಿಂದ, ಹೊಟೇಲಿನಿಂದ ಪುಕ್ಕಟೆ ಕೊಳ್ಳುತ್ತಾನೆ, ಅದರ ಬೆಲೆಯನ್ನೂ ತೆರುವುದಿಲ್ಲ. ಶಿವಾಜಿ ಮಹಾರಾಜರು ಇಂತಹ ಸುಲಿಗೆಯನ್ನು ಸಹಿಸುತ್ತಿರಲಿಲ್ಲ.

ಸ್ವಾವಲಂಬಿ ಸೇನಾಪಡೆ

ತಮ್ಮ ಸೇನಾಪಡೆಯು ಸ್ವಾವಲಂಬಿಯಾಗಿರುವಂತೆ ಶಿವಾಜಿ ಮಹಾರಾಜರು ತುಂಬ ನಿಗಾ ವಹಿಸುತ್ತಿದ್ದರು. ಫಿರಂಗಿಗಳನ್ನು ತಯಾರಿಸುವ ಕಾರ್ಖಾನೆಯನ್ನು ಅವರು ಸ್ಥಾಪಿಸಿದ್ದರು. ಮದ್ದುಗುಂಡು ತಯಾರಿಸುವ ಉಪಕ್ರಮವನ್ನು ಅವರು ಪ್ರಾರಂಭಿಸಿದ್ದರು.

ಒಳ್ಳೆಯ ಕುದುರೆಗಳು ಹುಟ್ಟುವಂತೆ ಅವರ ಗಮನವಿರುತ್ತಿತ್ತು. ಆ ಕಾಲದ ಕಬ್ಬಿಣದ ಶಸ್ತ್ರಗಳು ನಮ್ಮ ದೇಶದಲ್ಲೇ ತಯಾರಾಗುವಂತೆ ಅವರು ಪ್ರಯತ್ನಿಸಿದ್ದರು. ಒಳ್ಳೆಯ ನಾಣ್ಯಗಳನ್ನು (ಮೆಟಾಲಿಕ್ ಕಾಯಿನ್ಸ್) ತಯಾರಿಸುವ ಒಂದು ಸಲಹೆಯನ್ನು ಇಂಗ್ಲಿಷರು ಅವರಿಗೆ ನೀಡಿದ್ದರು.

ಮಹಾರಾಜರು ಈ ಸಲಹೆಯನ್ನು ತಿರಸ್ಕರಿಸಿದರು. ನಮ್ಮ ಸ್ಥಳೀಯ ಮಜೂರರೇ ನಾಣ್ಯಗಳನ್ನು ತಯಾರಿಸುವರೆಂದು ಹೇಳಿದರು.

ರಾಜ್ಯವ್ಯವಹಾರ ಭಾಷೆಯ ಕೋಶವನ್ನು ಅವರು ತಯಾರಿಸಿ ರಾಜ್ಯ ವ್ಯವಹಾರದಿಂದ ಪಾರ್ಸಿ, ಅರಬೀ ಭಾಷೆಗಳನ್ನು ಉಚ್ಚಾಟಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕದ ಸ್ಮರಣೆಯು ಕೇವಲ ಇತಿಹಾಸದ ಸ್ಮರಣೆಯಲ್ಲ.

ನಮ್ಮ ರಾಷ್ಟ್ರವು ಈಗ ಎಚ್ಚೆತ್ತುಕೊಂಡಿದೆ. ಒಂದು ನವ ಜಾಗೃತಿ ಮತ್ತು ನವಚೈತನ್ಯದ ಕಾಲಖಂಡ ಬಂದಿದೆ. ನಮ್ಮ ರಾಷ್ಟ್ರವು ಸನಾತನ ರಾಷ್ಟ್ರ. ನಮ್ಮದೇ ವಿಶೇಷತೆಗಳಿವೆ.

ನಮ್ಮದೇ ಜೀವನದರ್ಶನವಿದೆ, ನಮ್ಮದೇ ರಾಜಕೀಯ ಪರಿಕಲ್ಪನೆಯಿದೆ. ಇವೆಲ್ಲವನ್ನೂ ಪುನರುಜ್ಜೀವನಗೊಳಿಸುವ ಕಾಲಖಂಡ ಬಂದಿದೆ.

Shivaji Maharaj Jayanti in Kannada

ಸಹಸ್ರಾರು ವರ್ಷಗಳವರೆಗೆ ನಾವು ಪರಕೀಯರ ಪ್ರಭಾವದಲ್ಲಿದ್ದೆವು. ಸ್ವಾತಂತ್ರ್ಯ ಬಂದನಂತರವೂ ನಾವು ನಮ್ಮ ಸತ್ಯವನ್ನೆಂದೂ ಶೋಧನೆ ಮಾಡಿಲ್ಲ, ನಾವು ಸ್ವತಂತ್ರಗೊಂಡರೂ ತಂತ್ರದಿಂದ ಪರತಂತ್ರರು.

ಈಗ ನಾವು ನೈಜ ಅರ್ಥದಲ್ಲಿ ‘ಸ್ವ’ದ ಬೋಧೆ ಪಡೆಯಬೇಕು, ಸ್ವ-ತಂತ್ರವನ್ನು ಶೋಧನೆ ಮಾಡಬೇಕು.

ಕಾಲ ಬದಲಾಯಿಸುತ್ತದೆ, ಸಂದರ್ಭಗಳು ಬದಲಾಯಿಸುತ್ತವೆ, ಪರಿಸ್ಥಿತಿ ಬದಲಾಯಿಸುತ್ತದೆ.

ಹೀಗಾಗಿ ಛತ್ರಪತಿ ಶಿವಾಜಿಯನ್ನು ಅನುಕರಣೆ ಮಾಡಲು ಸಾಧ್ಯವಿಲ್ಲ, ಅನುಕರಣೆ ಮಾಡುವ ಅವಶ್ಯಕತೆಯೂ ಇಲ್ಲ, ಆದರೆ ಶಿವಾಜಿ ಮಹಾರಾಜರ ತಂತ್ರವನ್ನು ನಾವು ಅಧ್ಯಯನ ಮಾಡಬಲ್ಲೆವು.

ತಂತ್ರದ ಮೂಲಭೂತ ಸಿದ್ಧಾಂತಗಳು ಎಂದೂ ಬದಲಾಗುವುದಿಲ್ಲ. ಆ ಸಿದ್ಧಾಂತಗಳನ್ನು ಇಂದಿನ ಪರಿಸ್ಥಿತಿಯಲ್ಲಿ ಕಾರ್ಯರೂಪಕ್ಕೆ ತರುವ ಬಗೆ ಹೇಗೆಂದು ಆಲೋಚಿಸಬೇಕಾಗಿದೆ, ಮತ್ತು ಅವನ್ನು ಜಾರಿಗೆ ತರಬೇಕು.

ಸ್ವರಾಜ್ಯ ಮತ್ತು ಸುಶಾಸನದ ಪರಂಪರೆಯನ್ನು ಶಿವಾಜಿ ಮಹಾರಾಜರು ನಮಗೆ ನೀಡಿದ್ದಾರೆ, ಈ ಪರಂಪರೆಯನ್ನು ನಾವೀಗ ನಮ್ಮ ರಾಷ್ಟ್ರಜೀವನದಲ್ಲಿ ಮೈಗೂಡಿಸಿಕೊಳ್ಳಬೇಕ

ಇದನ್ನು ಓದಿ : ಚೆನ್ನವೀರ ಕಣವಿಯವರ ಪರಿಚಯ

ನಕ್ಷತ್ರಗಳ ಬಗ್ಗೆ ಮಾಹಿತಿ

All Competitive Exams Important Notes

ವೆಬ್ಸೈಟ್

Leave a Reply

Your email address will not be published. Required fields are marked *