Bharatakke Yuropiyannara Agamana 10th class । ಭಾರತಕ್ಕೆ ಯುರೋಪಿಯನ್ನರ ಆಗಮನ

bharatakke yuropiyannara agamana 10th class । ಭಾರತಕ್ಕೆ ಯುರೋಪಿಯನ್ನರ ಆಗಮನ

Bharatakke yuropiyannara agamana 10th class , ಭಾರತಕ್ಕೆ ಯುರೋಪಿಯನ್ನರ ಆಗಮನ, Social Science History Chapter 1 Questions and Answers, Notes Pdf

Bharatakke yuropiyannara agamana 10th class । ಭಾರತಕ್ಕೆ ಯುರೋಪಿಯನ್ನರ ಆಗಮನ

ಭಾರತಕ್ಕರ ಯೂರೋಪಿಯನ್ನರ ಆಗಮನ

1. ಪ್ರಾಚೀನ ಕಾಲದಲ್ಲಿ ಪೂರ್ವದೇಶಗಳೊಡನೆ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದು ಪಶ್ಚಿಮ ಯೂರೋಪಿನ ದೇಶ ಯಾವುದು ?

ಇತಿಹಾಸ ಉ – ಇಟಲಿ

2. ವ್ಯಾಪಾರ ಉದ್ದೇಶದಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ಯೂರೋಪಿನ ನಾವಿಕ ಯಾರು ?

ಉ – ವಾಸ್ಕೋಡಗಾಮ

3 .ಅರೇಬಿಯನ್ ಸಮುದ್ರದ ಮೇಲೆ ಪೊರ್ಚುಗೀಸರು ಎಲ್ಲಿಯವರೆಗೆ ಏಕಸ್ವಾಮ್ಯತೆ ಹೊಂದಿದ್ದರು ?

ಉ -17 ನೇ ಶತಮಾನದವರೆಗೆ

4. ಕಲ್ಕತ್ತಾ ಸಮೀಪದ ಹಲವು ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ಮೊಘಲ್ ಚಕ್ರವರ್ತಿ ಯಾರು ?

ಉ – ಫರೂಕ್ ಸಿಯಾರ್ ,

5. ಬ್ರಿಟಿಷ್ ಮತ್ತು ಫೆಂಚರ ನಡುವಿನ ಸೆಣಸಾಟದಲ್ಲಿ ಕಾರ್ನಾಟಿಕ್ ಪ್ರದೇಶದಲ್ಲಿ ಯಾರನ್ನು ದಾಳವಾಗಿ ಬಳಸಿಕೊಂಡರು

ಉ – ನವಾಬ ಅನ್ವರುದ್ದೀನ್‌ನನ್ನು

6. ಕಾರ್ನಾಟಿಕ್ ಯುದ್ಧಗಳಲ್ಲಿ ಬ್ರಿಟಿಷರ ನೇತೃತ್ವವನ್ನು ವಹಿಸಿಕೊಂಡವರು ಯಾರು ?

ಉ – ರಾಬರ್ಟ ವ್

7. ಕರ್ನಾಟಿಕ್ ಯುದ್ಧಗಳಲ್ಲಿ ಬ್ರಿಟಿಷರು ಯಾರಿಗೆ ಬೆಂಬಲ ನೀಡಿದರು ?

ಉ – ಅನ್ವರುದ್ದೀನ್‌ನಿಗೆ

8. ಕಾರ್ನಾಟಿಕ್ ಯುದ್ಧಗಳಲ್ಲಿ ಫೆಂಚರು ಯಾರಿಗೆ ಬೆಂಬಲ ನೀಡಿದರು ?

ಉ – ಚಂದಾಸಾಹೇಬ

9 . 2 ನೇ ಕಾರ್ನಾಟಿಕ್ ಯುದ್ಧದಲ್ಲಿ ಫ್ರೆಂಚರ ನೇತೃತ್ವವನ್ನು ವಹಿಸಿಕೊಡವರು ಯಾರು ?

ಉ:ಡೂಪ್ಲೆ

10. ವಾಂಡಿವಾಷ್ ಯುದ್ಧದಲ್ಲಿ ಫೆಂಚರನ್ನು ಸೋಲಿಸಿದ ಬ್ರಿಟಿಷ ಸೇನಾನಾಯಕ ಯಾರು ?

ಉ – ಸರ್ ಐರ್ ಕೂಟ

II . ಪ್ಲಾಸಿಕದನ ಯಾವಾಗ ನಡೆಯಿತು ?

ಉ – ಕ್ರಿ.ಶ 1757

12. ಪ್ಲಾಸಿ ಕದನದಲ್ಲಿ ಬ್ರಿಟಿಷರೊಂದಿಗೆ ಕಾದಾಡಿದ ಬಂಗಾಳದ ನವಾಬ ಯಾರು ? ಉಸಿರಾಜುದೌಲ

13.ಪ್ಲಾಸಿ ಕದನದ ನಂತರ ಬಂಗಾಳದ ನವಾಬರಾದವರು ಯಾರು ?

ಉ – ಮೀರ್ ಜಾಫರ್

14 , ಪ್ಲಾಸಿ ಕದನದಿಂದ ಬ್ರಿಟಿಷರಿಗೆ ಆದ ಲಾಭವೇನು ?

ಉ -24 ಪರಗಣದ ಮೇಲಿನ ಜಮೀನ್ದಾರಿ ಹಕ್ಕನ್ನು ಪಡೆದರು

15. ಬಕ್ಸಾರ ಕದನ ಯಾವಾಗ ನಡೆಯಿತು ?

ಉ – ಕ್ರಿಶ 1764 16. ಕ್ರಿ.ಶ 1765 ರಲ್ಲಿ ಬ್ರಿಟಿಷ್ ಕಂಪನಿಯ ಗವರ್ನರ್ ಆಗಿ ನೇಮಕಗೊಂಡವರು ಯಾರು ?

ಉ – ರಾಬರ್ಟಕ್ಷ್ಯವ್

Bharatakke yuropiyannara agamana 10th class

ಎರಡು ಅಂಕದ ಪ್ರಶ್ನೆಗಳು

ಪಶ್ಚಿಮ ಯುರೋಪಿನ ದೇಶಗಳು ಭಾರತಕ್ಕೆ ಒಂದು ಪರ್ಯಾಯ ವ್ಯಾಪಾರ ಮಾರ್ಗವನ್ನು ಹುಡುಕುವ ಪ್ರಯತ್ನಕ್ಕೆ ಕಾರಣವೇನು?

ಉತ್ತರ:
1453 ರಲ್ಲಿ ಆಟೋಮನ್ ಟರ್ಕರು ಕಾನಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.
ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು.
ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರವಾದ ತೆರಿಗೆಯನ್ನು ವಿಧಿಸತೊಡಗಿದರು.
ವರ್ತಕರಿಗೆ ಈ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ.

ಕಾನ್ ಸ್ಟಾಂಟಿನೋಪಲ್ ನಗರವು ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದೇ ಪರಿಣಮಿಸಲ್ಪಟ್ಟಿತ್ತು ಈ ಹೇಳಿಕೆಯನ್ನು ಸಮರ್ಥಿಸಿ.
ಉತ್ತರ:
ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಕಾನಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು.
ಅಲ್ಲಿಂದ ಇಟಲಿಯ ವರ್ತಕರು ಅವುಗಳನ್ನು ಕೊಂಡು ಯುರೋಪಿನ ದೇಶಗಳಲ್ಲಿ ಮಾರುತ್ತಿದ್ದರು.

ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿಯಲು ಕಾರಣವಾದ ಅಂಶಗಳನ್ನು ಚರ್ಚಿಸಿರಿ.

ಉತ್ತರ:
ಸ್ಫೇನ್, ಪೋರ್ಚುಗಲ್ ಮೊದಲಾದ ಯುರೋಪಿನ ದೇಶಗಳ ರಾಜರು ಸಾಹಸಿ ನಾವಿಕರನ್ನು ಪ್ರೊತ್ಸಾಹಿಸಲಾರಂಭಿಸಿದರು.
ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ಆಸ್ಟ್ರೋಲೋಬ್, ಸಿಡಿಮದ್ದು ಮೊದಲಾದವುಗಳು ನೆರವಿಗೆ ಬಂದವು.

ವೈಜ್ಞಾನಿಕ ಆವಿಷ್ಕಾರಗಳು ಹೊಸ ಸಮುದ್ರ ಮಾರ್ಗಗಳ ಅನ್ವೇಷಣೆಗೆ ಸಹಕಾರಿಯಾದವು ಹೇಗೆ?

ಉತ್ತರ: ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರಿಗೆ ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ಆಸ್ಟ್ರೋಲೋಬ್, ಸಿಡಿಮದ್ದು ಮೊದಲಾದವುಗಳು ಸಹಕಾರಿಯಾದವು.

ವಾಸ್ಕೋ-ಡ-ಗಾಮನು ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿಯುವಲ್ಲಿ ಹೇಗೆ ಯಶಸ್ವಿಯಾದನು?

ಉತ್ತರ: ಲಿಸ್ಟನ್ ನಿಂದ ಹೊರಟ ಪೋರ್ಚುಗಲ್ ನಾವಿಕ ವಾಸ್ಕೋಡಗಾಮನು 1498 ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ‘ಕಾಪ್ಪಡ್’ ಎಂಬಲ್ಲಿಗೆ ಬಂದು ತಲುಪಿದನು.

Bharatakke yuropiyannara agamana 10th class

ಡಚ್ಚರು ಪೋರ್ಚುಗೀಸರ ಏಕ ಸ್ವಾಮ್ಯವನ್ನು ಹೇಗೆ ಮುರಿದರು?

ಉತ್ತರ:
ಸಾ.ಶ. 1602 ರಲ್ಲಿ ಡಚ್ಚರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು.
ಭಾರತದಲ್ಲಿ ಸೂರತ್, ಬ್ರೋಚ್, ಕ್ಯಾಂಬೆ, ಕೊಚ್ಚಿನ್, ನಾಗಪಟ್ಟಣ, ಮಚಲೀಪಟ್ಟಣ, ಚಿನ್ಸೂರ್ ಮೊದಲಾದ ಕಡೆಗಳಲ್ಲಿ ತಮ್ಮ ಕೋಠಿಗಳನ್ನು ಸ್ಥಾಪಿಸಿಕೊಂಡರು.

ರಾಬರ್ಟ್ ಕ್ಲೈವನು ಪ್ಲಾಸೀ ಕದನದಲ್ಲಿ ಯಶಸ್ಸುಗೊಳಿಸಲು ರೂಪಿಸಿದ ಕಾರ್ಯ ತಂತ್ರಗಳೇನು?

ಉತ್ತರ:
ನವಾಬನ ವಿರೋಧಿಗಳಾದ ಮಾಣಿಕ್ ಚಂದ್, ಓಮೀಚಾಂದಾ, ಜಗತ್ ಸೇಠ್ ಮೊದಲಾದ ಶ್ರೀಮಂತರನ್ನು ತನ್ನತ್ತ ಸೆಳೆದುಕೊಂಡನು.
ಸಿರಾಜನ ಸೇನಾಪತಿಯಾದ ಮೀರ್ ಜಾಫರನಿಗೆ ನವಾಬನನ್ನಾಗಿ ಮಾಡುವ ಆಮಿಷವೊಡ್ಡಿ ಯುದ್ಧದಲ್ಲಿ ತಟಸ್ಥವಾಗಿರಲು ರಾಜ್ಯವನ್ನು ಒಪ್ಪಿಸಿದನು.

ಬ್ರಿಟಿಷರು ಮೀರ್ ಜಾಫರನನ್ನು ಬಂಗಾಳದ ನವಾಬನನ್ನಾಗಿ ಮಾಡಲು ಕಾರಣವೇನು?

ಉತ್ತರ:
ಸಿರಾಜನ ಸೇನಾಪತಿಯಾದ ಮೀರ್ ಜಾಫರನಿಗೆ ಬ್ರಿಟಿಷರು ಯುದ್ಧದಲ್ಲಿ ತಟಸ್ಥವಾಗಿದ್ದರೆ ಬಂಗಾಳದ ನವಾಬನನ್ನಾಗಿ ಮಾಡುವುದಾಗಿ ಆಮಿಷವೊಡ್ಡಿದ್ದರು, ಅದರಂತೆ ಯುದ್ಧದ ನಂತರ ಬಂಗಾಳದ ನವಾಬನನ್ನಾಗಿ ಮಾಡಿದರು.

ಬ್ರಿಟಿಷರು ಮೀರಕಾಸಿಂನನ್ನು ನವಾಬ ಹುದ್ದೆಯಿಂದ ಕೆಳಗಿಳಿಸಲು ಕಾರಣವೇನು?

ಉತ್ತರ:

ಮೀರ್ ಖಾಸಿಂ ತನ್ನನ್ನು ಸ್ವತಂತ್ರ ರಾಜನೆಂದು ಭಾವಿಸಿದನು.
ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕಮುಕ್ತ ಎಂದು ಘೋಷಿಸಿದನು.
ಭಾರತೀಯರು ಸುಂಕವಿಲ್ಲದೆ ವ್ಯಾಪಾರ ನಡೆಸುವ ಮೂಲಕ ಬ್ರಿಟಿಷರೊಡನೆ ನೇರ ಸ್ಪರ್ಧೆಗಿಳಿದರು.
ಬ್ರಿಟಿಷರ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿತು.

ಬ್ರಿಟಿಷರು ಭಾರತದಲ್ಲಿ ನೆಲೆಯೂರಲು ಬಕ್ಸಾರ ಕದನ ಹೇಗೆ ಸಹಾಯಕವಾಯಿತು?

haratakke yuropiyannara agamana 10th class । ಭಾರತಕ್ಕೆ ಯುರೋಪಿಯನ್ನರ ಆಗಮನ

ಉತ್ತರ:
ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ‘ದಿವಾನಿ’ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.
ಷಾ ಆಲಂ ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟುಕೊಡಬೇಕಾಯಿತು.
ಯುದ್ಧ ನಷ್ಟ ಪರಿಹಾರವಾಗಿ ಷೂಜ್-ಉದ್-ದೌಲನು 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.
ಮೀರ್ ಜಾಫರ್ನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಆಡಳಿತ ಕಂಪನಿಯು ನಿರ್ವಹಿಸತೊಡಗಿತು.

ದ್ವಿ ಪ್ರಭುತ್ವ ಪದ್ಧತಿ ಎಂದರೇನು? ಯಾರು ಜಾರಿಗೊಳಿಸಿದರು?

ಉತ್ತರ:

ಬ್ರಿಟಿಷರು ಭೂಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದ್ದರು. ನವಾಬನು ಆಡಳಿತ, ನ್ಯಾಯ ಮೊದಲಾದ ಆಡಳಿತಾತ್ಮಕ ಕಾರ್ಯ ನಿರ್ವಹಿಸುತ್ತಿದ್ದನು.
ರಾಬರ್ಟ್ ಕ್ಲೈವ್

ಬಂಗಾಳ ಪ್ರಾಂತ್ಯದ ಮೇಲೆ ಬ್ರಿಟಿಷರು ಹೇಗೆ ರಾಜಕೀಯ ನಿಯಂತ್ರಣವನ್ನು ಸಾಧಿಸಿದ್ದರು?

ಉತ್ತರ:

ಬಕ್ಸಾರ್ ಕದನವು ಬ್ರಿಟಿಷರು ಬಂಗಾಳದ ನಿಜವಾದ ಒಡೆಯರೆಂದು ದೃಢೀಕರಿಸಿತು.
ಔದ್ ಕೂಡ ಅವರ ಅಧೀನದಲ್ಲಿ ಉಳಿಯುವಂತಾಯಿತು.
ರಾಬರ್ಟ್ ಕ್ಲೈವ್ ಬಂಗಾಳದಲ್ಲಿ ‘ದ್ವಿ ಪ್ರಭುತ್ವ’ ಪದ್ಧತಿಯನ್ನು ಜಾರಿಗೊಳಿಸಿದನು.
ಬ್ರಿಟಿಷರು ತಮ್ಮ ವಾಣಿಜ್ಯ ಹಿತಾಸಕ್ತಿ ಕಾಪಾಡಿಕೊಳ್ಳುವ ಸಲುವಾಗಿ ರಾಜಕೀಯ ಪರಮಾಧಿಕಾರ ಸ್ಥಾಪಿಸಿದರು.

ಇನ್ನಷ್ಟು ಓದಿ …….

ಇತರೆ ಪ್ರಮುಖ ವಿಷಯಗಲಮಾಹಿತಿ

ಚಂಪೂ ಸಾಹಿತ್ಯದ ಕೃತಿಗಳು

ಜ್ಞಾನಪೀಠ ಪ್ರಶಸ್ತಿ ವಿಜೇತರು

9ನೇ ತರಗತಿ ಕನ್ನಡ

ನುಡಿಗಟ್ಟುಗಳು ಮತ್ತು ಅದರ ಅರ್ಥ

BUSINESS INFORMATION

Leave a Reply

Your email address will not be published. Required fields are marked *