kannada vyakarana list, ಕನ್ನಡ ಗ್ರಾಮರ್ , ಕನ್ನಡ ವ್ಯಾಕರಣ ಮಾಹಿತಿ, kannada grammar list in kannada, vyakarana kannada grammar chart and list
kannada vyakarana list
ಕನ್ನಡ ಭಾಷೆಯು ಸುಮಾರು 2000 ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ. ಅಂತೆಯೇ ಅದಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನವೂ ದೊರೆತಿದೆ.
ಸಂಸ್ಕೃತದಿಂದ ಆಧುನಿಕ ಯುಗದ ಆಂಗ್ಲ ಭಾಷೆಯ ವರೆಗೂ ಹಲವಾರು ಭಾಷೆಗಳ ಪ್ರಭಾವ ಪ್ರೇರಣೆಗೆ ಒಳಗಾಗಿ ಪುಟಕ್ಕಿಟ್ಟ ಚಿನ್ನದಂತೆ ಹೊಳಪನ್ನೂ ಘನತೆಯನ್ನೂ ಪಡೆದುಕೊಂಡಿದೆ.
ಕವಿರಾಜ ಮಾರ್ಗಕಾರನಿಂದ ಪ್ರಸ್ತುತ ಆಧುನಿಕ ಸಾಹಿತ್ಯದವರೆಗೂ ಸಾವಿರಾರು ಕವಿ-ಸಾಹಿತಿ-ವಿದ್ವಾಂಸರಿಂದ ಸಮೃದ್ಧವಾಗಿ ಬೆಳೆದು ನಿಂತಿದೆ. ಇದನ್ನು ಬಳಸಿ-ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಈ ಕೆಳಗೆ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಪಯುಕ್ತ ಆಗುವಂತೆ ಮಾಹಿತಿಯನ್ನು ಈ ಲೇಖನದಲ್ಲಿ ಕೊಟ್ಟಿದ್ದೇವೆ.
ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗ ಮಾಡಬೇಕಾದರೆ ಆ ಭಾಷೆಯ ವ್ಯಾಕರಣ ಪರಿಚಯ ಅತ್ಯಾವಶ್ಯಕ. ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು.
ಭಾಷೆಯ ಅಧ್ಯಯನದ ಆರಂಭದಲ್ಲಿ ಪ್ರಯೋಗಗಳ ಮೂಲಕ ವ್ಯಾಕರಣದ ಅರಿವನ್ನುಂಟುಮಾಡಿದರೂ ಮುಂದೆ ಸಕ್ರಮವಾಗಿ ವ್ಯಾಕರಣ ಶಾಸ್ತ್ರದ ಪರಿಚವನ್ನು ಮಾಡಿಸುವ ಅವಶ್ಯಕತೆಯಿದೆ. ಈ ದೃಷ್ಟಿಯಿಂದ ನಮ್ಮ ಪ್ರೌಢ ಶಾಲೆಗಳ ಪಠ್ಯಕ್ರಮದಲ್ಲಿ ವ್ಯಾಕರಣ ಶಾಸ್ತ್ರದ ಮುಖ್ಯ ವಿಷಯಗಳನ್ನು ಅಳವಡಿಸಲಾಗಿದೆ.
ಕನ್ನಡ ಗ್ರಾಮರ್
ನೀವು ಈ ಕೆಳಗೆ ಕಾಣಿಸಿದ ಕೆಂಪು ಬಣ್ಣದ ಗುಂಡಿಯನ್ನು ಒತ್ತುವ ಮೂಲಕ ನಿಮಗೆ ಬೇಕಾದ ವಿಷಯದ ಮಾಹಿತಿಯನ್ನು ಓದಬಹುದು.
ವ್ಯಾಕರಣ ಎಂದರೇನು ?
ಭಾಷೆಯನ್ನು ಸರಿಯಾದ ವಿಧಾನದಲ್ಲಿ ಬಳಸಲು ಹಾಗೂ ಸಾರ್ವತ್ರೀಕರಣಗೊಳಿಸಲು ಇರುವ ಮಾರ್ಗದರ್ಶಿಯನ್ನು ವ್ಯಾಕರಣ ಎನ್ನುತ್ತಾರೆ.
ಸರ್ ನನಗೆ ಸಮಾಜ ನೋಟ್ಸ್ pdf ಬೇಕು