bhamini shatpadi in kannada
bhamini shatpadi in kannada | ಕನ್ನಡ ಭಾಮಿನಿ ಷಟ್ಪದಿ | bhamini shatpadi examples, SSLC Important Grammar | Bhamini Shatpadi | ಭಾಮಿನಿ ಷಟ್ಪದಿ
ಆರು ಪಾದಗಳುಳ್ಳ ಪದ್ಯ. ೧, ೨, ೪, ೫ ನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮತ್ತು ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿರುತ್ತವೆ. (ಮೊದಲು ಮೂರು ಮಾತ್ರೆಯ ಗಣ ಅನಂತರ ೪ ಮಾತ್ರೆಯ ಗಣ ಈ ಕ್ರಮದಲ್ಲಿ ಒಟ್ಟು ನಾಲ್ಕು ಗಣಗಳಿರುತ್ತವೆ.) ೩ನೆಯ ೬ನೆಯ ಸಾಲುಗಳು ಒಂದು ಸಮನಾಗಿದ್ದು, ಮೂರು ಮತ್ತು ನಾಲ್ಕು ಮಾತ್ರೆಗಳ ಆರುಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ. ಮೂರು ಮತ್ತು ಆರನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುತ್ತದೆ. ಈ ಜಾತಿಯ ಪದ್ಯದಲ್ಲಿ “U _ U” ಈ ರೀತಿಯ ಮಧ್ಯ ಗುರುವುಳ್ಳ ಗಣವು ಎಲ್ಲಿಯೂ ಬರಕೂಡದು. ಇಂಥ ಲಕ್ಷಣವುಳ್ಳವು ಭಾಮಿನೀ ಷಟ್ಪದಿಗಳೆನಿಸುವುವು.
ಉದಾ : –
bhamini shatpadi in kannada
ಕೇಳು ಜನಮೇ ಜಯ ಧ ರಿತ್ರೀ = 3 : 4 , 3 : 4 ವಾಲ ಕಾರವ ನೃಪನ ತಂದು ಕೃ = 3 : 4 , 3 : 4 ಪಾಳುವಿನ ಚರಣಾಗ್ರದಲ್ಲಿ ಕೆಡಹಿದನು ಕಲಿ ಪಾರ್ಥ = 3 : 4 : 3 : 4 : 3 : 4 : –
ವೇದಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ಮಾವನನತುಳಭುಜಬಲದಿ
ಕಾದು ಗೆಲಿದನನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿಮೂರುತಿ ಸಲಹೊ ಗದುಗಿನ ವೀರನಾರಯಣ
ಈ ಪದ್ಯವನ್ನು ಗಣಗಳಾಗಿ ವಿಂಗಡಿಸಿದಾಗ ಹೀಗೆ ಕಾಣುವುದು:
ವೇದ| ಪುರುಷನ | ಸುತನ| ಸುತನ ಸ
ಹೋದ|ರನ ಹೆ|ಮ್ಮಗನ| ಮಗನ ತ
ಳೋದ|ರಿಯ ಮಾ|ತುಳನ| ಮಾವನ|ನತುಳ|ಭುಜಬಲ|ದಿ
ಕಾದು| ಗೆಲಿದನ|ನಣ್ಣ|ನವ್ವೆಯ
ನಾದಿ|ನಿಯ ಜಠ|ರದಲಿ| ಜನಿಸಿದ
ನಾದಿ|ಮೂರುತಿ | ಸಲಹೊ| ಗದುಗಿನ | ವೀರ|ನಾರಯ|ಣ
ಲಕ್ಷಣ
ಛಂದಸ್ಸಿನಲ್ಲಿ ವಾರ್ಧಕ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಮುದ್ದಣ ವಿರಚಿತ ಶ್ರೀರಾಮ ಪಟ್ಟಾಭಿಷೇಕ ಇರುವುದು ವಾರ್ಧಕ ಷಟ್ಪದಿಯಲ್ಲಿಯೇ. ವಾರ್ಧಕ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. ೧(1),೨,೪,೫ನೆಯ ಸಾಲುಗಳು ಸಮನಾಗಿದ್ದು, ೫ ಮಾತ್ರೆಯ ನಾಲ್ಕು ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೫ ಮಾತ್ರೆಯ ಆರು ಗಣಗಳಗಳಿದ್ದು, ಕೊನೆಯಲ್ಲಿ ಒಂದು ಗುರು ಇರುತ್ತದೆ. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ.ಇದರಲ್ಲಿ ಪ್ರತಿ ಪಾದದಲ್ಲಿಯೂ ಆರಂಭದ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವಿರುವುದು. ಇದು ಆದಿ ಪ್ರಾಸ.
ಉದಾಹರಣೆ:
ಬಲ್ಗಯ್ಯ ನೃಪರಂಜಿ ತಡೆಯದೆರಘೂದ್ವಹನ
ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ
ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು
ಪುಲ್ಗಳ ಪಸುರ್ಗೆಳಸಿ ಪೊಕ್ಕಡಾ ತೋಟಗಾ
ವಲ್ಗೆ ತನ್ನೊಡನಾಡಿಗಳಕೂಡಿ ಲೀಲೆ ಮಿಗೆ
ಬಿಲ್ಗೊಂಡು ನಡೆತಂದವಂ ಕಂಡನರ್ಚಿತ ಸುವಾಜಿಯಂ ವೀರಲವನು
ಇದರ ಛಂದಸ್ಸಿನ ಪ್ರಸ್ತಾರ
bhamini shatpadi in kannada
ಬಲ್ಗಯ್ಯ | ನೃಪರಂಜಿ | ತಡೆಯದೆರ | ಘೂದ್ವಹನ
ಸೊಲ್ಗೇಳಿ | ನಮಿಸಲಿಳೆ | ಯೊಳ್ ಚರಿಸು | ತಧ್ವರದ
ನಲ್ಗುದುರೆ | ಬಂದು ವಾ | ಲ್ಮೀಕಿಯನಿ | ಜಾಶ್ರಮದ | ವಿನಿಯೋಗ | ದು ಪವನದೊ| ಳು
ಪುಲ್ಗಳಪ | ಸುರ್ಗೆಳಸಿ | ಪೊಕ್ಕಡಾ | ತೋಟಗಾ
ವಲ್ಗೆತ | ನ್ನೊಡನಾಡಿ | ಗಳಕೂಡಿ | ಲೀಲೆಮಿಗೆ
ಬಿಲ್ಗೊಂಡು | ನಡೆತಂದ | ವಂಕಂಡ | ನರ್ಚಿತಸು | ವಾಜಿಯಂ | ವೀರಲವ | ನು
‘|’ ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:
ಮೊದಲ ಸಾಲಿನ ಗಣದ ಲೆಕ್ಕ:
–U| UU-U|UUUUU|-UUU
೫|೫|೫|೫
೫|೫|೫|೫
೫|೫|೫|೫|೫|೫|-
೫|೫|೫|೫
೫|೫|೫|೫
೫|೫|೫|೫|೫|೫|-
shatpadi in kannada | ಷಟ್ಪದಿ – ಕನ್ನಡ ವ್ಯಾಕರಣ
Related