ಸಮಾಸಗಳು | Samasagalu in Kannada

samasa in kannada

Samasa in Kannada, Compound Words, ಸಮಾಸಗಳು, samasagalu in kannada, ಕನ್ನಡ ಸಮಾಸಗಳು Kannada Samasagalu grammar, ಸಮಾಸಗಳು ಕನ್ನಡ, Samasagalu in Kannada, Samasagalu Kannada Grammar, Kannada Samasagalu in Kannada, ಸಮಾಸಗಳು, Types of Samasaglu in Kannada Kannada Vyakarana Samasagalu Samasagalu Endarenu Samasagalu in Kannada Pdf ಕನ್ನಡ ಸಮಾಸಗಳು FDA, SDA, PDO,KPSC,

Samasa in Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram

Samasagalu in Kannada

ಕೆರೆಗಳ, ಕಟ್ಟೆಗಳ, ಬಾವಿಗಳ ಎಂಬ ಈ ಮೂರು ಪದಗಳಲ್ಲಿ ಇರುವ ‘ಅ’ ಎಂಬ ಷಷ್ಠೀವಿಭಕ್ತಿಯೂ, ಬಹುವಚನಗಳನ್ನು ಸೂಚಿಸುವ ‘ಗಳು’

ಎಂಬ ಆಗಮವೂ ಲೋಪವಾಗಿ ‘ಕೆರೆ, ಕಟ್ಟೆ, ಬಾವಿ’ ಎಂಬ ಪ್ರಕೃತಿ ಮಾತ್ರ ಉಳಿದು ‘ಕೆರೆಕಟ್ಟೆಬಾವಿ’ ಎಂಬ ಸಮಸ್ತಪದ ಸಿದ್ಧವಾಗುವುದು.

ಮುಂದೆ ಗಳು ಎಂಬ ಬಹುವಚನ ಸೂಚಕ ಆಗಮವೂ ಅ ಎಂಬ ಷಷ್ಠೀವಿಭಕ್ತಿಯೂ ಸೇರಿ ಕೆರೆಕಟ್ಟೆಬಾವಿಗಳ ಎಂಬ ಷಷ್ಠೀವಿಭಕ್ತ್ಯಂತ ಸಮಸ್ತಪದವು ಸಿದ್ಧವಾಗುವುದು.

ಮೇಲಿನ ವಿವರಣೆಯಿಂದ ಸಮಸ್ತಪದಗಳು ಹೇಗೆ ಸಿದ್ಧಿಸುತ್ತವೆಂಬುದರ ಕಲ್ಪನೆಯಾಗುವುದು. ಸೇರುವ ಪದಗಳು ಅರ್ಥಸಂಬಂಧ ಪಡೆದಿರಬೇಕು.

ಒಮ್ಮೊಮ್ಮೆ ಪ್ರಕೃತಿಗಳೂ ವಿಕಾರಗಳಾಗುವುದುಂಟು. ‘ಅರಸು’ ಎಂಬ ಪ್ರಕೃತಿಯು ‘ಅರ’ ಎಂದೂ, ‘ಹಿರಿದು’ ಎಂಬುದು ‘ಹೆದ್’ ಎಂದೂ ಉಳಿದಿರುವುದನ್ನು ತಿಳಿದಿದ್ದೀರಿ.

ಇಂಥ ಸಮಸ್ತ ಪದವನ್ನೇ ‘ಸಮಾಸ’ ಎಂದು ಹೇಳುತ್ತಾರೆ.

ಸಮಾಸಗಳು | Samasa in Kannada
ಸಮಾಸಗಳು | Samasa in Kannada

samasa in kannada

(೨) ಹಿರಿದಾದ ತೊರೆ – ಇವೆರಡೂ ಪದಗಳನ್ನು ಸೇರಿಸಿ ಒಂದು ಪದ ಮಾಡಿ ಹೇಳಿದಾಗ ‘ಹಿರಿದು’ ಎಂಬ ಪ್ರಕೃತಿಯು ‘ಹೆದ್’ ಎಂಬ ರೂಪ ಧರಿಸುವುದು. ‘ತೊರೆ’ ಎಂಬಲ್ಲಿಯ ಮೊದಲ ವ್ಯಂಜನವಾದ ‘ತ್’ ಕಾರವು ದಕಾರವಾಗಿ ‘ಹೆದ್ದೊರೆ’ ಎಂಬ ಸಮಸ್ತಪದವಾಯಿತು.

ಹೀಗೆಲ್ಲ ಮೂಲಪದಗಳು ರೂಪಾಂತರ ಹೊಂದಿ ಸಮಸ್ತಪದಗಳಾಗುವುದುಂಟು.

(೩) ಕಾಲಿನ ಬಳೆ – ಇವೆರಡು ಪದಗಳನ್ನು ಸೇರಿಸಿ ಸಮಸ್ತ ಪದ ಮಾಡಿ ಹೇಳುವಾಗ ‘ಕಾಲು’ ಎಂಬ ಪ್ರಕೃತಿಯ ಮುಂದೆ ಬಂದ ‘ಅ’ ವಿಭಕ್ತಿಯೂ,

ಆ ವಿಭಕ್ತಿಯ ನಿಮಿತ್ತವಾಗಿ ಬಂದ ‘ನ’ ಕಾರಾಗಮವೂ ಲೋಪವಾಗಿ ‘ಕಾಲು’ ಎಂಬ ಪ್ರಕೃತಿ ಮಾತ್ರ ಉಳಿದು ‘ಕಾಲುಬಳೆ’ ಎಂಬ ಸಮಸ್ತಪದ ಸಿದ್ಧವಾಯಿತು.

(೧) ಅರಸನ ಮನೆ – ಇವೆರಡೂ ಪದಗಳನ್ನೂ ಕೂಡಿಸಿ ಒಂದೇ ಪದ ಮಾಡಿ ಹೇಳಿದಾಗ ಅರಸು ಪ್ರಕೃತಿಯ ಮುಂದೆ ಇರುವ ‘ಅ’ ಎಂಬ ಷಷ್ಠೀ ವಿಭಕ್ತಿಯೂ,

ಅದರ ನಿಮಿತ್ತವಾಗಿ ಬಂದ ‘ನ’ ಕಾರಾಗಮವೂ, ಹೋಗುವುವು. ಇದೂ ಅಲ್ಲದೆ ಒಮ್ಮೊಮ್ಮೆ ಪ್ರಕೃತಿಯಲ್ಲಿರುವ ‘ಸ’ ಕಾರವೂ ಹೋಗುವುದುಂಟು.

ಹೀಗೆ ಇವೆಲ್ಲ ಲೋಪವಾಗಿ ‘ಅರ’ ಎಂಬ ಪ್ರಕೃತಿಯ ಒಂದು ಭಾಗವುಳಿದು ‘ಅರಮನೆ’ ಎಂಬ ಅರಸನ ಸಂಬಂಧವಾದ ಮನೆ ಎಂಬ ಅರ್ಥ ಬರುವ ಸಮಸ್ತಪದವು ಸಿದ್ಧವಾಯಿತು.

(೧) ಅರಸನ-ಮನೆಯಲ್ಲಿ – ಸಂಭ್ರಮ ಬಹಳ ಈ ವಾಕ್ಯದಲ್ಲಿ ಕೆಳಗೆ ಗೆರೆ ಹಾಕಿರುವ ‘ಅರಸನ’ ಎಂಬ ಪದದ, ‘ಮನೆಯಲ್ಲಿ’ ಎಂಬ ಪದದ ಅರ್ಥಗಳೂ ಬೇರೆಬೇರೆ.

ಆದರೆ ಅದೇ ಅರ್ಥವೇ ಬರುವಂತೆ ಅವೆರಡು ಪದಗಳನ್ನು ‘ಅರಮನೆಯಲ್ಲಿ’ ಎಂಬ ಒಂದೇ ಪದ ಮಾಡಿ ಹೇಳಬಹುದು.

Samasa in Kannada

ಹೀಗೆ ಒಂದೇ ಪದ ಮಾಡಿ ಹೇಳಿದುದರಿಂದ ಸ್ವಲ್ಪ ಕಾಲವೂ, ಧ್ವನಿಯೂ, ಬರೆಯುವ ಶ್ರಮವೂ ಕಡಿಮೆಯಾಯಿತಲ್ಲವೆ? ಅರ್ಥವೂ ಕೆಡುವುದಿಲ್ಲ. (೨) ಹಿರಿದಾದ ತೊರೆಯು ಹರಿಯುತ್ತಿತ್ತು- ಈ ವಾಕ್ಯದಲ್ಲೂ, ‘ಹಿರಿದಾದ’ ‘ತೊರೆಯು’ ಎಂಬೆರಡು ಪದಗಳಿವೆ. ಇವನ್ನು ಮೇಲಿನಂತೆ ‘ಹೆದ್ದೊರೆ’ ಹರಿಯುತ್ತಿತ್ತು ಎನ್ನಬಹುವುದು. (೩) ಕಾಲಿನ ಬಳೆಗಳನ್ನು ತಂದನು- ಈ ವಾಕ್ಯದಲ್ಲೂ ‘ಕಾಲಿನ’ ‘ಬಳೆಗಳನ್ನು’ ಎಂಬೆರಡು ಪದಗಳನ್ನು ‘ಕಾಲುಬಳೆಗಳನ್ನು’ ತಂದನು-ಎಂದು ಹೇಳಬಹುದು. (೪) ಈ ಊರ ಜನರು ಕೆರೆಗಳ, ಕಟ್ಟೆಗಳ, ಬಾವಿಗಳ, ಸೌಲಭ್ಯ ಪಡೆದಿದ್ದಾರೆ.- ಇಲ್ಲಿ ಕೆರೆಗಳ, ಕಟ್ಟೆಗಳ, ಬಾವಿಗಳ ಎಂಬ ಈ ಮೂರು ಪದಗಳನ್ನು ‘ಕೆರೆಕಟ್ಟೆಬಾವಿಗಳ’ ಎಂದು ಒಂದು ಪದ ಮಾಡಿ ಹೇಳಬಹುದು.

ಹೀಗೆ ಎರಡು, ಮೂರು ಅಥವಾ ಹೆಚ್ಚು ಪದಗಳನ್ನು ಒಂದೇ ಪದ ಮಾಡಿ ಹೇಳಿದಾಗ ನಮಗೆ ಕಾಲದ ಉಳಿತಾಯವಾಗುತ್ತದೆ; ಬರೆಯುವುದಕ್ಕೆ ಉಪಯೋಗಿಸುವ ಶಕ್ತಿಯ ಉಳಿತಾಯವಾಗುತ್ತದೆ. ಅನ್ನುವುದಕ್ಕೆ (ಹೇಳುವುದಕ್ಕೆ) ಉಪಯೋಗಿಸುವ ಧ್ವನಿಶಕ್ತಿಯ ಉಳಿತಾಯವಾಗುತ್ತದೆ.

download 2
ಸಮಾಸಗಳು | Samasa in Kannada

ಮನುಷ್ಯನು ಯಾವಾಗಲೂ ಸೌಲಭ್ಯಾಕಾಂಕ್ಷಿಯಲ್ಲವೆ? ಭಾಷೆಯಲ್ಲೂ ಈ ತರದ ಸೌಲಭ್ಯಗಳನ್ನು ಮನುಷ್ಯ ಮಾಡಿಕೊಳ್ಳುತ್ತಾನೆ.

ಆದರೆ ಹೀಗೆ ಎಲ್ಲ ಕಡೆಗೂ ಮೂರು ಪದಗಳನ್ನು ಕೂಡಿಸಿ ಒಂದು ಪದ ಮಾಡಿ ಹೇಳಲು ಶಕ್ಯವಿಲ್ಲ. ಎರಡು ಪದಗಳು ಸೇರಿ ಸಮಸ್ತಪದವಾಗುವುದೇ ಹೆಚ್ಚು.

ಕೆಲವು ಕಡೆ ಮೂರು ನಾಲ್ಕು ಪದಗಳೂ ಸೇರಿ ಸಮಸ್ತಪದವಾಗುವುದು.

ಸಮಾಸ-ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾಗುವುದೇ ಸಮಾಸ.”
ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವಪದವೆಂದೂ, ಎರಡನೆಯ ಪದವು ಉತ್ತರಪದವೆಂದೂ ಕರೆಯಿಸಿಕೊಳ್ಳುವುದು.

Samasa in Kannada

ಸಮಸ್ತ ಪದವನ್ನು ಬಿಡಿಸಿ ಬರೆಯುವುದಕ್ಕೆ ‘ವಿಗ್ರಹವಾಕ್ಯ’ ಎನ್ನುವರು. samasa in kannada

ಪೂರ್ವಪದ + ಉತ್ತರಪದ = ಸಮಸ್ತಪದ (ಸಮಾಸ)

ಮಳೆಯ + ಕಾಲ = ಮಳೆಗಾಲ

ಮರದ + ಕಾಲು = ಮರಗಾಲು

ಮೂರು + ಕಣ್ಣು (ಉಳ್ಳವ) = ಮುಕ್ಕಣ್ಣ (ಶಿವ)

ಕಾಲಿನ + ಬಳೆ = ಕಾಲುಬಳೆ

ದೇವರ + ಮಂದಿರ = ದೇವಮಂದಿರ

ಚಕ್ರವು + ಪಾಣಿಯಲ್ಲಿ (ಆವಂಗೋ) = ಚಕ್ರಪಾಣಿ (ವಿಷ್ಣು)

ಹಿರಿದು + ತೊರೆ = ಹೆದ್ದೊರೆ

ಹಿರಿದು + ಜೇನು = ಹೆಜ್ಜೇನು

ಕೈಯ + ಮುಂದು = ಮುಂಗೈ

ಕಾಲಿನ + ಹಿಂದು = ಹಿಂಗಾಲ್

ದೊಡ್ಡದಾದ + ಕಲ್ಲು= ದೊಡ್ಡಕಲ್ಲು

psi question paper in kannada

ಪ್ರಬಂಧಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *