kannada varnamale yestu aksharagalu | ಕನ್ನಡ ವರ್ಣಮಾಲೆ ಎಷ್ಟು ಅಕ್ಷರಗಳು
kannada varnamale yestu aksharagalu and ottu aksharagalu, kannada varnamale chart with types and words, ಕನ್ನಡ ವರ್ಣಮಾಲೆ ಎಷ್ಟು ಅಕ್ಷರಗಳು
ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ. ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
kannada varnamale yestu aksharagalu
ಸರಳ ಭಾಷೆಯಲ್ಲಿ, ವರ್ಣ ಅಥವಾ ಅಕ್ಷರಗಳ ಸಮೂಹವನ್ನು ವರ್ಣಮಾಲೆ ಎದು ಕರೆಯಲಾಗುತ್ತದೆ. ಇದರ ಹೆಸರೇ ಸೂಚಿಸುವಂತೆ ವರ್ಣ+ಮಾಲೆ ಅರ್ಥಾತ್ ವರ್ಣಗಳ ಮಾಲೆ ಅಥವಾ ಸಮೂಹ ಈ ವರ್ಣಮಾಲೆಯಾಗಿದೆ. ಪ್ರತಿಯೊಂದು ಭಾಷೆಯು ತನ್ನದೇ ಆದ ಪ್ರತ್ಯೇಕ, ವರ್ಣಗಳ (ಅಕ್ಷರಗಳ) ವ್ಯವಸ್ಥಿತ ಸಮೂಹ ವರ್ಣಮಾಲೆಯನ್ನು ಹೊಂದಿರುತ್ತವೆ.ವರ್ಣ ಅಥವಾ ಅಕ್ಷರ ಎಂದರೇನು?
ಮೂಲರೂಪದಲ್ಲಿ ಅಕ್ಷರಗಳು ಸಂಕೇತ ಗಳಾಗಿದ್ದು ನಮ್ಮ ಬಾಯಿಂದ ಹೊರಬರುವ ಧ್ವನಿಯ ಲಿಖಿತ ರೂಪ ವಾಗಿರುತ್ತವೆ. ಇವುಗಳಿಗೆ ಇಂಗ್ಲಿಷ್ನಲ್ಲಿ Letters ಎಂದು ಕರೆಯಲಾಗುತ್ತದೆ.ವರ್ಣಗಳ ವರ್ಗೀಕರಣ:
ನಾವು ಉಚ್ಚರಿಸುವ ರೀತಿ, ಹಾಗೆ ಪದ್ಧತಿ, ಉಚ್ಛರಿಸಲ್ಪಡುವ ಸ್ಥಳ, ಉಚ್ಚರಿಸಲು ಸಹಾಯ ಮಾಡುವ ಅಂಗಗಳು, ಹಾಗೂ ಇನ್ನೀತರವುಗಳ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ.ಸ್ವರಗಳು ಎಂದರೇನು? (Kannada swaragalu) :
ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಸ್ವರಗಳು ಎಂದು ಕರೆಯುತ್ತಾರೆ.ಸ್ವರಗಳು -13
ವ್ಯಂಜನಾಕ್ಷರಗಳು ಎಂದರೇನು?
ಸ್ವರಗಳ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಹೆಸರು ವ್ಯಂಜನಗಳು -34
ಯೋಗವಾಹಗಳು-02
ಸ್ವರಗಳ ವಿಧ- 13
ಹೃಸ್ವ ಸ್ವರ – 06
ದೀರ್ಘ ಸ್ವರ0-07
ವ್ಯಂಜನಗಳು- 34
ವರ್ಗೀಯ ವ್ಯಂಜನಗಳು ಎಂದರೇನು? :
ಸ್ವರಗಳ ಸಹಾಯದಿಂದ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ವ್ಯಂಜನಾಕ್ಷರಗಳು ಅಥವಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಗಳು ಎಂದು ಕರೆಯುತ್ತಾರೆ.ವರ್ಗೀಯ ವ್ಯಂಜನಗಳು – 25
ಅಲ್ಪ ಪ್ರಾಣಕ್ಷರಗಳು ಎಂದರೇನು? :
ಕಡಿಮೆ ಉಸಿರಿನಿಂದ ಉಚ್ಛರಿಸಲ್ಪಡುವ ವ್ಯಂಜನಗಳಿಗೆ ಅಲ್ಪ ಪ್ರಾಣಗಳು ಎಂದು ಕರೆಯುತ್ತಾರೆ.ಅಲ್ಪ ಪ್ರಾಣಕ್ಷರಗಳು – 10
ಮಹಾ ಪ್ರಾಣಕ್ಷರಗಳು ಎಂದರೇನು? :
ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಾಕ್ಷರಗಳಿಗೆ ಮಹಾಪ್ರಾಣಗಳು ಎಂದು ಕರೆಯುತ್ತಾರೆ.ಮಹಾ ಪ್ರಾಣಕ್ಷರಗಳು- 10
ಅನುನಾಸಿಕಗಳು ಎಂದರೇನು? :
ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಅನುನಾಸಿಕಗಳು ಎಂದು ಕರೆಯುವರು.ಅನುನಾಸಿಕಗಳು – 05
ಅವರ್ಗೀಯ ವ್ಯಂಜನಗಳು ಎಂದರೇನು? :
ಹೆಸರೇ ಸೂಚಿಸುವಂತೆ ಈ ವ್ಯಂಜನಗಳಿಗೆ ವರ್ಗಗಳನ್ನು ಮಾಡಲು ಸಾಧ್ಯವಿಲ್ಲ. ವರ್ಗಗಳನ್ನು ಮಾಡಲು ಸಾಧ್ಯವಿಲ್ಲದ ವ್ಯಂಜನಾಕ್ಷರಗಳನ್ನು ಅವರ್ಗೀಯ ವ್ಯಂಜನಗಳು ಎಂದು ಕರೆಯುತ್ತಾರೆ.ಅವರ್ಗೀಯ ವ್ಯಂಜನಗಳು-09
ಯೋಗವಾಹಗಳು-02
ಅನುಸ್ವಾರ-೦-1
ವಿಸರ್ಗ-ಃ -01
ಸಂಯುಕ್ತಾಕ್ಷರಗಳು:ಸಂಯುಕ್ತಾಕ್ಷರಗಳು ಎಂದರೇನು?
ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು, ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎಂದು ಕರೆಯುತ್ತೇವೆ. ಕ್ + ತ್ + ಅ = ಕ್ತ ಪ್ + ರ್ + ಅ = ಪ್ರ ಸ್ + ತ್ + ರ್ + ಅ = ಸ್ತ್ರಸಂಯುಕ್ತಾಕ್ಷರಗಳನ್ನು ಪುನಃ ಎರಡು ವಿಧಗಳಾಗಿ ವಿಂಗಡಿಸಲಾಗುತ್ತದೆ.
ಸಜಾತಿಯ ಸಂಯುಕ್ತಾಕ್ಷರ ವಿಜಾತೀಯ ಸಂಯುಕ್ತಾಕ್ಷರಸಜಾತೀಯ ಸಂಯುಕ್ತಾಕ್ಷರಗಳು ಎಂದರೇನು?
ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು, ನಂತರ ಸ್ವರವೊಂದು ಬಂದರೆ ಅಂತ ಅಕ್ಷರಗಳನ್ನು ಸಜಾತೀಯ ಸಂಯುಕ್ತಾಕ್ಷರಗಳು ಎನ್ನುವರು. ಉದಾಹರಣೆಗೆ, ಕತ್ತೆ = ಕ್ + ತ್ + ತ್ + ಎ ಅಕ್ಕ = ಅ + ಕ್ + ಕ್ + ಅವಿಜಾತೀಯ ಸಂಯುಕ್ತಾಕ್ಷರಗಳು ಎಂದರೇನು?
ಯಾವುದೇ ಪದದಲ್ಲಿ ಎರಡು ಬೇರೆ-ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತಿಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ. capital of karnataka | ಕರ್ನಾಟಕದ ರಾಜಧಾನಿಕನ್ನಡ ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ ಅವು ಯಾವುವು
ಕನ್ನಡ ವರ್ಣಮಾಲೆಯನ್ನು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ.