ವೆರ್ಮೀಲಿಯನ್ ಬಾರ್ಡರ್ ಎಂದರೇನು ? (What is a Vermilion Border?)
ನಮ್ಮ ತುಟಿಗಳ ಅಂಚನ್ನು ( ಬಾರ್ಡರ್ ) ವರ್ಮಿಲಿಯನ್ ಬಾರ್ಡರ್ ಎನ್ನುತ್ತಾರೆ . ಇದು ಸಹಜ ಬಣ್ಣದಲ್ಲಿರುವ ಉಳಿದ ಚರ್ಮವನ್ನು ತುಟಿಗಳ ಮೇಲಿರುವ ಕೆಂಪು ಬಣ್ಣವನ್ನು ಬೇರ್ಪಡಿಸುತ್ತದೆ .
ಇದು ಹೆಚ್ಚು ಕೆರೋಟಿನ್ನಿಂದ ಕೂಡಿದ ಬಾಹ್ಯ ಚರ್ಮಕ್ಕೂ , ಕಡಿಮೆ ಕೆರೋಟಿನ್ನಿಂದ ಕೂಡಿದ ಅಂತರ್ ಚರ್ಮಕ್ಕೂ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ . ಸಾಮಾನ್ಯ ಚರ್ಮದ ಮೇಲೆ ಇರುವಂತೆ ತುಟಿಗಳ ಮೇಲಿರುವ ಚರ್ಮದಲ್ಲಿ ಸ್ವೇದ ಗ್ರಂಥಿಗಳು , ಕೂದಲು ಇರುವುದಿಲ್ಲ .
ಈ ವ್ಯತ್ಯಾಸ ವೆರ್ಮೀಲಿಯನ್ ಬಾರ್ಡರ್ ನಿಂದ ಪ್ರಾರಂಭವಾಗುತ್ತದೆ . ದಂತ , ಬಾಯಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಂದಾಜಿಸಲು ವರ್ಮಿಲಿಯನ್ ಬಾರ್ಡರ್ ಅನ್ನು ವೈದ್ಯರು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ . ಈ ಬಾರ್ಡರ್ ಅನ್ನು ತೊಲಗಿಸಲು ಮಾಡುವ ಶಸ್ತ್ರ ಚಿಕಿತ್ಸೆಯನ್ನು ವೆರ್ಮಿಲಿಯೋ ನೆಕ್ಟಮಿ ಎನ್ನುತ್ತಾರೆ .