ಇತಿಹಾಸ
Prachina Bharata Itihasa in Kannada, Ancient India, Ancient India, ancient india map, ancient india timeline, ancient india facts, notes, pdf
Prachina Bharata Itihasa in Kannada
ಪ್ರಾಚೀನ ಭಾರತ (Ancient India)
ಪ್ರಾಗೈತಿಹಾಸಿಕ ಕಾಲದಿಂದ – ಸಿಂಧೂಕೋಳ್ಳದ ನಾಗರಿಕತೆಯೆಡೆಗೆ
♦ ಭಾರತದಲ್ಲಿ ಪ್ರಾಚೀನ ಮಾನವನ ಅಸ್ತಿತ್ವವನ್ನು ಕ್ರಿ ಪೂ 3 ಲಕ್ಷ ಮತ್ತು ಕ್ರಿ ಪೂ 2 ಲಕ್ಷ ವರ್ಷಗಳೆಂದು ಗುರ್ತಿಸಲಾಗಿದೆ. ಭಾರತದಲ್ಲಿ ಇದಕ್ಕೆ ಆಧಾರ ಸೋನ್ ನದಿ ಕಣಿವೆ ಮತ್ತು ದಕ್ಷಿಣ ಭಾರತದಲ್ಲಿ ಕಂಡು ಬರುವಂತಹ ಪುರಾತನ ಶಿಲಾಯುಧಗಳು
♦ ಪ್ರಪಂಚದ ಎಲ್ಲಾ ಇಂದಿನ ಆಧುನಿಕ ಮಾನವರು ಹೋಮೋಸೇಫಿಯನ್ ಪಂಗಡಕ್ಕೆ ಸೇರಿದವರು.
♦ ಕ್ರಿ.ಪೂ. 36,000 ವರ್ಷಗಳ ಹಿಂದೆ ಮೊದಲ ಬಾರಿಗೆ ಹೋಮೋಸೇಪಿಯನ್ ಮಾನವ ಗೋಚರಿಸಿದ.
ಭಾರತದಲ್ಲಿ ಮಾನವ ಇತಿಹಾಸದ ಸಂಸ್ಕೃತಿಯ ಯುಗಗಳು
♦ ಪ್ರಾಚೀನ ಶಿಲಾಯುಗ ಕ್ರಿ. ಪೂ. 3,00000 – 8000) (Paleolithic Age)
♦ ಮಧ್ಯ ಶಿಲಾಯುಗ ಕ್ರಿ.ಪೂ. 8000 – 4000) (Mesolithic Age)
♦ ನವ ಶಿಲಾಯುಗ ಕ್ರಿ.ಪೂ. 4,000 – 1,800) (Neolithic Age)
♦ ತಾಮ್ರ ಶಿಲಾಯುಗ (ಚಾಲೋಲಿಥಿಕ್ ಯುಗ) ಕ್ರಿ.ಪೂ. 1800-1000/800 (Chalcolilithic age)
♦ ಕಬ್ಬಿಣ ಯುಗ ಕ್ರಿ. ಪೂ. 800ರ ನಂತರ (Iron Age)