ottakshara words in kannada , kannada ottakshara words list/ kannada alphabets, provided simple table of Ottakshara of all letters in Kannada alphabets withexamples for each letters, which is very important in kannada, ಕನ್ನಡ ಒತ್ತಕ್ಷರಗಳು ಪದಗಳು 100, ಕನ್ನಡ ಒತ್ತಕ್ಷರಗಳು ಪದಗಳು 50, ಕನ್ನಡ ಒತ್ತಕ್ಷರಗಳು PDF
Ottakshara Words In Kannada
ಒತ್ತಕ್ಷರ ಪದಗಳು ಮತ್ತು ಉದಾಹರಣೆಗಳು
ಒತ್ತಕ್ಷರಗಳಲ್ಲಿ ಎರಡು ವಿಧ. ಸಜಾತಿಯ ಒತ್ತಕ್ಷರ ಹಾಗೂ ವಿಜಾತಿಯ ಒತ್ತಕ್ಷರಗಳು. ಸಜಾತಿಯ ಒತ್ತಕ್ಷರಗಳಲ್ಲಿ ವ್ಯಂಜನಾಕ್ಷರದ ತಳ ಬಲ ಮೂಲೆಯಲ್ಲಿ ಮೇಲಿನ ವ್ಯಂಜನಾಕ್ಷರವನ್ನು ಪ್ರತಿನಿಧಿಸಲಾಗುತ್ತದೆ. ವಿಜಾತಿಯ ಒತ್ತಕ್ಷರಗಳಲ್ಲಿ ಪೂರ್ಣ ಅಕ್ಷರದ ಒತ್ತಕ್ಷರವಾಗಿ ಬೇರೆ ವ್ಯಂಜನಾಕ್ಷರಗಳನ್ನು ಬರೆಯಲಾಗುತ್ತದೆ.
ಪರಿವಿಡಿ
ಸಜಾತೀಯ ಸಂಯುಕ್ತಾಕ್ಷರಗಳು
ಒಂದೇ ಜಾತಿಯ (ಸಜಾತೀಯ) ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರವು ಸಜಾತೀಯ ಸಂಯುಕ್ತಾಕ್ಷರವೆನಿಸುವುದು. ಇದಕ್ಕೆ ದ್ವಿತ್ವವೆಂದೂ ಹೆಸರು
ವಿಜಾತೀಯ ಸಂಯುಕ್ತಾಕ್ಷರ
Ottakshara Words In Kannada PDF
ಬೇರೆಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಸೇರಿ ಆಗುವ ಅಕ್ಷರಕ್ಕೆ ವಿಜಾತೀಯ ಸಂಯುಕ್ತಾಕ್ಷರ ಎನ್ನುತ್ತಾರೆ.
ಸಜಾತೀಯ ಸಂಯುಕ್ತಾಕ್ಷರಗಳು
ಕ್ಕ ಖ್ಖ ಗ್ಗ ಘ್ಘ
ಚ್ಚ ಛ್ಛ ಜ ಝ್ಝ
ಟ್ಟ ಠ್ಠ ಡ್ಡ ಢ್ಢ ಣ್ಣ
ತ್ತ ಥ್ಥ ದ್ದ ಧ್ಧ ನ್ನ
ಪ್ಪ ಫ್ಫ ಬ್ಬ ಭ್ಭ ಮ್ಮ
ಯ್ಯ ರ್ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ
ಕ್ + ಕ್ ಕ್ಕ
ಣ್ + ಣ್ ಣ್ಣ
ಜ್ + ಜ್ ಜ್ಜ
ಟ್ + ಟ್ ಟ್ಟ
ತ್ + ತ್ ತ್ತ
ಉದಾ:
(ಅಮ್ಮ) ಮ್+ಮ್+ಅ=ಮ್ಮ
(ಅಕ್ಕ) ಕ್+ಕ್+ಅ=ಕ್ಕ
(ಅಣ್ಣ) ಣ್+ಣ್+ಅ=ಣ್ಣ
ವಿಜಾತೀಯ ಸಂಯುಕ್ತಾಕ್ಷರ
ಸ್ತ್ರ (ಸ್ + ತ್ + ರ್)
ಕ್ಷ (ಕ್ + ಷ್)
ಜ್ಞಾ (ಜ್ + ಞ)
ಸ್ವಾರ್ಥ (ಸ್ + ವ್; ರ್ + ಥ್)
ಕ್ತಿ (ಕ್ + ತ್)
ಮೇಲಿನ ಉದಾಹರಣೆಗಳಿಗಿಂತ ಭಿನ್ನವಾಗಿ ಕನ್ನಡದಲ್ಲಿ ಹ ಅಕ್ಷರದ ಒತ್ತಕ್ಷರವನ್ನು ಎಲ್ಲಿಯೂ ನಾವು ಬಳಸುವುದಿಲ್ಲ. ಯಾವುದೇ ವ್ಯಂಜನಕ್ಕೆ ಹಕಾರದ ಒತ್ತಕ್ಷರದ ರೂಪವನ್ನು ಉಚ್ಛರಿಸಿದರೂ ಬರವಣಿಗೆಯಲ್ಲಿ ಇದನ್ನು ತಿರುವು ಮುರುವು ಮಾಡಿ ಅಕ್ಷರ ಹಕ್ಕೇ ಉಚ್ಛಾರಣೆಯ ಅರ್ಧ ವ್ಯಂಜನವನ್ನು ಒತ್ತಕ್ಷರವನ್ನಾಗಿ ಬಳಸುತ್ತೇವೆ. ಹಾಗೆಯೇ ಉಚ್ಛಾರಣೆಯಲ್ಲಿ ಹ್ಕಾರವನ್ನು ಹೋಲುವ ವಿಸರ್ಗ (ಅಃ)ದ ಜಾಗದಲ್ಲಿ ಹಕಾರವನ್ನು ಉಪಯೋಗಿಸಬಾರದು. ಇದೂ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವವನ್ನು ತೋರಿಸುತ್ತದೆ. ಏಕೆಂದರೆ ಸಂಸ್ಕೃತದಲ್ಲಿ ಎಲ್ಲಿಯೂ ಹ ವನ್ನು ಅರ್ಧ ಅಕ್ಷರವಾಗಿ ಹಾಗೂ ವಿಸರ್ಗ(ಃ)ವನ್ನು ಒತ್ತಕ್ಷರವನ್ನಾಗಿ ಉಪಯೋಗಿಸುವುದಿಲ್ಲ.
ಉದಾ: ಬ್+ರ್+ಅ+ಮ್+ಹ್+ಅ = ಬ್ರಮ್ಹ (ಬ್ರಂಹ) ಆದರೆ ಬರವಣಿಗೆಯ ರೂಪ ಬ್ರಹ್ಮ.
ದ್+ಉ+ಹ್+ಖ್+ಅ = ದುಃಖ (ದುಹ್ಖ ಅಥವಾ ದುಖ್ಹ ಬರವಣಿಗೆಯ ಸರಿಯಾದ ಕ್ರಮವಲ್ಲ)
ಮೂಲ ವ್ಯಂಜನ ವರ್ಣಗಳಿಗೆ ಸ್ವರಗಳು ಸೇರಿದಂತೆ ಅದರ ಬರವಣಿಗೆಯ ರೀತಿ ಹಾಗೂ ಉಚ್ಛಾರಣೆಯನ್ನು ಆವರಣದಲ್ಲಿ ಸೂಚಿಸಲಾಗಿದೆ. ಉದಾಹರಣೆಗೆ ಕ್ ವರ್ಣದ ಸ್ವರಗುಣಿತ ಪಟ್ಟಿಯನ್ನು ಗಮನಿಸಿ:
ಕ್+ಅ=ಕ (ಕ್ ಗೆ ತಲಕಟ್ಟು ಕ); ಕ್+ಆ=ಕಾ (ಕ್ ಗೆ ತಲಕಟ್ಟಿನ ದೀರ್ಘ ಕಾ); ಕ್+ಇ=ಕಿ (ಕ್ ಗೆ ಗುಡಿಸು ಕಿ);
ಕ್+ಈ=ಕೀ (ಕ್ ಗೆ ಗುಡಿಸಿನ ದೀರ್ಘ ಕೀ); ಕ್+ಉ=ಕು (ಕ್ ಗೆ ಕೊಂಬು ಕು); ಕ್+ಊ=ಕೂ (ಕ್ ಗೆ ಕೊಂಬಿನ ದೀರ್ಘ ಕೂ); ಕ್+ಋ=ಕೃ (ಕ್ ಗೆ ವಟ್ರಸುಳಿ ಕೃ); ಕ್+ಎ=ಕೆ (ಕ್ ಗೆ ಎತ್ವ ಕೆ); ಕ್+ಏ=ಕೇ (ಕ್ ಗೆ ಎತ್ವದ ದೀರ್ಘ ಕೇ); ಕ್+ಐ=ಕೈ (ಕ್ ಗೆ ಐತ್ವ ಕೈ); ಕ್+ಒ=ಕೊ (ಕ್ ಗೆ ಒತ್ವ ಕೊ); ಕ್+ಓ=ಕೋ (ಕ್ ಗೆ ಒತ್ವದ ದೀರ್ಘ ಕೋ);
ಕ್+ಔ=ಕೌ (ಕ್ ಗೆ ಔತ್ವ ಕೌ); ಕ್+ಅಂ=ಕಂ (ಕ ಗೆ ಒಂದು ಸೊನ್ನೆ ಕಂ); ಕ್+ಅಃ=ಕಃ (ಕ ಗೆ ಎರಡು ಸೊನ್ನೆ ಕಃ).
ಇದೇ ರೀತಿ ಎಲ್ಲಾ ವ್ಯಂಜನ ಸ್ವರಗಳಿಗೂ ಕಾಗುಣಿತ ಪಟ್ಟಿಯನ್ನು ರಚಿಸಬಹುದು.