Kannada Motivational Stories , ಕನ್ನಡ ಸ್ಪೂರ್ತಿದಾಯಕ ನುಡಿಮುತ್ತುಗಳು , inspirational stories in kannada , motivational story in kannada , inspiration story in kannada
Kannada Motivational Stories
ಸ್ಫೂರ್ತಿದಾಯಕ ಕಥೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ.
ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ
ಒಂದೂರಲ್ಲಿ ಒಬ್ಬ ಸಾಧು ಅವನು ದೇವರಲ್ಲಿ ತುಂಬಾ ಭಕ್ತಿ ಇಟ್ಟುಕೊಂಡಿದ್ದ ಇಟ್ಟುಕೊಂಡಿದ್ದ ದೇವರ ಧ್ಯಾನ ತಪಸ್ಸು ಮಾಡುತ್ತಾ ಜೀವನ ಕಳಿಯುತ್ತಿದ್ದ ಒಂದಿನ ಮರದ ಕೆಳಗಡೆ ತಪಸ್ಸಿಗೆ ಅಂತ ಕೂತ್ಕೊಂಡಿದ್ದ ಜೋರಾಗಿ ಪ್ರಳಯ ಬರೋಕೆ ಶುರುವಾಯಿತು.
ಜನ ಆ ಕಡೆಯಿಂದ ಈ ಕಡೆಗೆ ಗಾಬರಿ ಯಿಂದ ಓಡಾಡೋ ಶುರು ಮಾಡ್ತಾರೆ ಅಷ್ಟು ಜನರಲ್ಲಿ ಒಬ್ಬ ಸಾಧು ಅವರನ್ನ ನೋಡಿ ಅವ್ರ ಹತ್ರ ಬಂದು ಸ್ವಾಮಿಗಳೇ ಆ ಕಡೆ ಇಂದ ತುಂಬಾ ಜೋರಾಗಿ ನೀರು ಹರಿದು ಬರುತ್ತಿದೆ ನಿಮ್ಮ ನ್ನ ನೀವು ರಕ್ಷಿಸಿಕೊಳ್ಳಿ ನಮ್ಮ ಜೊತೆ ನೀವು ಬನ್ನಿ ನಿಮ್ಮ ಜೀವವನ್ನು ಕಾಪಾಡಿಕೊಳ್ಳಿ ಅಂತ ಹೇಳ್ತಾನೆ.
ಸಾದು ಅದಕ್ಕೆ ಏನು ಹೇಳುತ್ತಾರೆ ಗೊತ್ತಾ? ನನಗೇನೂ ಆಗಲ್ಲ. ಮಗು ನಾನು ದೇವರ ತಪಸ್ಸು ಮಾಡ್ತೀನಿ. ಪ್ರತಿ ದಿನ ನಾನು ದೇವರ ಧ್ಯಾನವನ್ನೂ ಮಾಡ್ತೀನಿ. ನನಗೆ ಏನು ಆಗಲ್ಲ ದೇವರು ನನ್ನ ಕಾಪಾಡ್ತಾರೆ ನನ್ನಲ್ಲಿ ಆ ವಿಶ್ವಾಸವಿದೆ ದೇವರ ಮೇಲೆ ನಮಗೆ ನಂಬಿಕೆ ಇದೆ ಅಂತ ಸಾಧು ಹೇಳುತ್ತಾರೆ. ಆಗ ಆ ಮನುಷ್ಯ ಅಲ್ಲಿಂದ ಓಡಿ ಹೋಗ್ತಾನೆ ನೀರು ಸಾದುಗಳ ಹತ್ರ ಬರುತ್ತೆ ಆದ್ರೂ ಸಾಧು ಅಲ್ಲಡದೆ ಅಲ್ಲಿ ಕೂತಿರ್ತಾರೆ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ.
ಆದರೂ ಸ್ವಾಮೀಜಿ ಅಲ್ಲಡದೆ ಅಲ್ಲಿ ಕೂತಿರ್ತಾರೆ. ಅಲ್ಲಿ ಮತ್ತೊಬ್ಬ ಮನುಷ್ಯನ ಬರ್ತಾನೆ. ಸ್ವಾಮೀಜಿ ನಾವೆಲ್ಲ ದೋಣಿಯಲ್ಲಿ ಮುಂದೆ ಹೋಗ್ತಾ ಇದ್ದೀವಿ. ನೀವು ನಮ್ಮ ಜೊತೆ ನಮ್ಮ ದೋಣಿಯಲ್ಲಿ ಇನ್ನು ಜಾಗ ಇದೆ. ದಯವಿಟ್ಟು ನನ್ನ ಜೊತೆ ಬನ್ನಿ ಅಂತ ಜನ ಕೇಳುತ್ತಾರೆ. ಆಗ ಸಾಧಿಸಿದ್ದಾರೆ. ಇಲ್ಲಾ ನೀವು ಹೋಗಿ ನನಗೆ ದೇವರು ಕಾಪಾಡ್ತಾನೆ.
ದೋಣಿ ಕೂಡ ಅಲ್ಲಿದ್ದವರು ಹೋಗುತ್ತೆ ಸಮಯ ಇನ್ನಷ್ಟು ಮೀರಿ ಹೋಗುತ್ತೆ. ನೀರು ಸಾಧುವಿನ ಹತ್ತಿರ ಬರುತ್ತೆ. ಅಲ್ಲಿಗೆ ಜನರನ್ನ ಕಾಪಾಡೋಕ್ಕೆ ಅಂತ ಒಂದು ಹೆಲಿಕಾಪ್ಟರ್ ಬರುತ್ತೆ. ಸಾಧು ಹತ್ತಿರ ಬಂದು ಸ್ವಾಮಿ ಸ್ವಾಮಿ ಇದು ಕೊನೆಯ ಹೆಲಿಕಾಪ್ಟರ್ ಈ ಹಗ್ಗವನ್ನ ಹಿಡ್ಕೊಳ್ಳಿ ಅಂತ ಒಂದು ದೊಡ್ಡ ಹಗ್ಗವನ್ನು ಹೆಲಿಕಾಪ್ಟರ್ ಮೇಲಿಂದ ಎಸೆಯಲಾಗತ್ತೆ ಹಗ್ಗವನ್ನು ನೋಡಿದ ಸಾಧುಗಳು ಏನು ಹೇಳ್ತಾರೆ ಗೊತ್ತ ಈ ಹಗ್ಗವನ್ನು ಮೇಲಕ್ಕೆ ಎತ್ತಿ ಕೊಳ್ಳಿ ನನ್ನ ಕಾಪಾಡೋಕೆ ದೇವರಿದ್ದಾರೆ.
ಕನ್ನಡ ಸ್ಪೂರ್ತಿದಾಯಕ ನುಡಿಮುತ್ತುಗಳು
ನನಗೆ ದೇವರ ಮೇಲೆ ತುಂಬಾ ನಂಬಿಕೆ ಇದೆ. ನನ್ನ ನಂಬಿಕೆ ಎಂದಿಗೂ ಸುಳ್ಳಾಗಲ್ಲ. ದೇವರು ನನ್ನ ಕಾಪಾಡೇ ಕಾಪಾಡ್ತಾರೆ ನೀವು ಇಲ್ಲಿಂದ ಹೊರಟು ಹೋಗಿ ಅಂತ ಸಾಧು ಅವರನ್ನ ಕೂಡ ಕಳಿಸುತ್ತಾರೆ. ನೀರು ತುಂಬಾ ಹೆಚ್ಚಾಗಿ ಸಾಧು ನೀರಲ್ಲಿ ಮುಳುಗಿ ಕೊನೆಗೆ ಸಾವನೊಪ್ಪುತ್ತಾರೆ.
ನಂತರ ಅವರು ದೇವರ ಹತ್ರ ಹೋಗ್ತಾರೆ ಅಲ್ಲಿ ಹೋಗಿ ದೇವರನ್ನ ಕೇಳ್ತಾರೆ ದೇವರೇ ನನ್ನ ಇಡೀ ಜೀವನ ನಿನ್ನಭಕ್ತಿಯಲ್ಲಿ ಕಳೆದೆ ನನ್ನ ಜೀವನಾವೇ ನಿನ್ನ ಸಲುವಾಗಿ ಮುಡುಪಾಗಿಟ್ಟೆ ನಾನು ನನ್ನ ಧ್ಯಾನ ತಪಸ್ಸು ಅಂತ ನಿನ್ನ ಆರಾಧನೆಯಲ್ಲಿ ತೊಡಗಿಕೊಂಡಿದೆ.
ನಿಮ್ಮ ಮೇಲೆ ಇಷ್ಟೊಂದು ನಂಬಿಕೆ ಇದ್ದ ನನಗೆ ಕೊನೆಗೆ ಸಿಕ್ಕಿದ್ದೇನು? ನನ್ನ ಕಾಪಾಡೋಕೆ ನೀನು ಬರಲೇ ಇಲ್ಲ. ಕೊನೆಗೆ ನನ್ನ ಸಾವು ಕೂಡ ಆಯಿತು ಆಯಿತು ಯಾಕೆ ಹೀಗೆ ಮಾಡಿದೆ? ಭಗವಂತ ಸಾಧು ಭಗವಂತನಲ್ಲಿ ಕೇಳ್ತಾರೆ ಅದಕ್ಕೆ ದೇವರು ಉತ್ತರ ಹೇಗಿತ್ತು ನೋಡಿ ಅಯ್ಯೋ ಮೂರ್ಖ ಒಂದು ಸಲ ಅಲ್ಲ, ಎರಡು ಸಲ ಅಲ್ಲ ಮೂರು ಸಲ ನಾನು ನಿನ್ನ ಕಾಪಾಡಕ್ಕೆ ಬಂದಿದ್ದೆ ನಿನ್ನ ಸಹಾಯಕ್ಕೆ ಅಂತ ಬಂದಿದ್ದೆ ಮೊದಲನೇ ಸಲ ಮನುಷ್ಯನ ರೂಪದಲ್ಲಿ ಬಂದಿದೆ.
ಎರಡನೇ ಸಲ ದೋಣಿ ಮುಖಾಂತರ ಹಾಗೂ ಮೂರನೇ ಸಲ ಹೆಲಿಕಾಪ್ಟರ್ ಮೂಲಕ ನಿನ್ನ ಸಹಾಯಕ್ಕೆ ಅಂತ ಬಂದೆ. ಆದರೆ ನೀನು ಆ ಯಾವುದೇ ಅವಕಾಶವನ್ನು ಉಪಯೋಗ ಮಾಡಿಕೊಳ್ಳಲಿಲ್ಲ. ನನ್ನ ಕಾಪಾಡೋಕೆ ದೇವರು ಬರ್ತಾರೆ. ದೇವರು ಬರ್ತಾರೆ ಅಂತ ಬಂದ ಅವಕಾಶಗಳನ್ನ ಮಿಸ್ ಮಾಡ್ಕೊಂಡೆ ಅಂತ ದೇವರು ಅವರಿಗೆ ಹೇಳಿದಾಗ ಆಗ ಅವನಿಗೆ ಅರ್ಥ ಆಗುತ್ತೆ , ನಮಗೆ ದೇವರು ಅನೇಕ ಸಲ ಅವಕಾಶಗಳನ್ನ ಕೊಡ್ತಾರೆ ಆದ್ರೆ ನಾವು ನಮ್ಮ ಹಠ ಮತ್ತು ಮೊಂಡುತನದಿಂದ ಅದನ್ನು ದೂರ ಮಾಡ್ತಾನೆ. ಇರ್ತೀವಿ ನನಗೆ ಅದು ಬೇಡ ಇದು ಬೇಡ ನನಗೆ ಅದು ಬೇಕು ಇದು ಬೇಕು ನಾನು ಅಂದುಕೊಂಡಿದ್ದೆ ನನಗೆ ಬೇಕು ಅಂತ ಹಠ ಹಿಡಿದು ಬಂದ ಅವಕಾಶಗಳನ್ನ ಕಳಕೋತೀವಿ.
inspirational stories in kannada
ಕೊನೆಗೆ ಆ ಎಲ್ಲ ಅವಕಾಶಗಳು ಕೈತಪ್ಪಿ ಹೋದ ಮೇಲೆ ನಮಗೆ ನಮ್ಮ ತಪ್ಪಿನ ಅರಿವಾಗುತ್ತದೆ. ನನಗೆ ಸಿಕ್ಕ ಸಣ್ಣ ಅವಕಾಶಗಳನ್ನು ನಾವು ಯೂಸ್ ಮಾಡ್ಕೊ ಬೇಕು, ಮುಂದೆ ಒಂದಿನ ಸಣ್ಣ ಸಣ್ಣ ಅವಕಾಶಗಳು ನಮ್ಮನ್ನ ದೊಡ್ಡ ಸ್ಥಾನಕ್ಕೆ ಕೊಂಡೊಯ್ಯುತ್ತೆ.
ನಿಮ್ಮ ಇವತ್ತಿನ ಪರಿಶ್ರಮ ನಾಳೆ ಯಶಸ್ಸಿನ ಗುಟ್ಟು ನಿಮ್ಮ ಕನಸುಗಳು ಕಠಿಣ ಪರಿಶ್ರಮ ದಿಂದ ಸಿಕ್ಕ ಸಣ್ಣ ಅವಕಾಶಗಳನ್ನು ಉಪಯೋಗಿಸಿಕೊಂಡು ಒಂದೊಂದು ಗೆಲುವಿನ ಮೆಟ್ಟಿಲನ್ನು ಏರುತ್ತ ಹೋಗಿ ನೀವು ನಿಮ್ಮ ಕೊನೆಯ ಮೆಟ್ಟಿಲನ್ನು ಏರಿದಾಗ ನಿಮಗಾಗುವ ಖುಷಿ ಹಾಗೂ ಸಂತೋಷಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ.
ಇತರೆ ಪ್ರಬಂಧಗಳನ್ನು ಓದಿ
- ಬೆಳವಡಿ ಮಲ್ಲಮ್ಮ ಜೀವನ ಚರಿತ್ರೆ
- ಕೆಳದಿ ಚೆನ್ನಮ್ಮ ಇತಿಹಾಸ
- ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ
- ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ
- ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ
- ಸಿದ್ದಲಿಂಗಯ್ಯ ಅವರ ಪರಿಚಯ
- ಭಗತ್ ಸಿಂಗ್ ಅವರ ಬಗ್ಗೆ
- ನಾಡಪ್ರಭು ಕೆಂಪೇಗೌಡ ಬಗ್ಗೆ