Tulasi Pooja Story in Kannada, ತುಳಸಿ ಪೂಜೆ ಮಾಡುವ ವಿಧಾನ, ತುಳಸಿ ವಿವಾಹ ಕಥೆ, tulasi pooja maduva vidhana kannada , tulasi habba in kannada , ತುಳಸಿ ಹಬ್ಬ, tulasi habba
Tulasi Pooja Story in Kannada
ಈ ಲೇಖನದಲ್ಲಿ ತುಳಸಿ ವಿವಾಹ ಕಥೆ ಮತ್ತು ಪೂಜೆ ಮಾಡುವ ವಿಧಾನದ ಕುರಿತು ಮಾಹಿತಿಯನ್ನು ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬಹದುದು.
ತುಳಸಿ ವಿವಾಹ ಕಥೆ
tulasi pooja in kannada
ಹಿಂದೂ ಸಂಪ್ರದಾಯ ದಲ್ಲಿ ತುಳಸಿ ಗಿಡಕ್ಕೆ ಇರುವ ಪ್ರತ್ಯೇಕತೆ ಏನೆಂದು ಎಲ್ಲರಿಗೂ ಗೊತ್ತು. ಇನ್ನು ಮಹಿಳೆಯರು ದಿನನಿತ್ಯ ತುಳಸಿ ಗಿಡಕ್ಕೆ ಪೂಜೆ ಮಾಡಿ ಮನೆಯಲ್ಲಿ ಸುಖ, ಶಾಂತಿ ಕರುಣಿ ಸಲೆಂದು ಬೇಡುತ್ತಾರೆ. ಹಾಗೆ ಸಾಯುವ ವ್ಯಕ್ತಿಯ ಬಾಯಿಯಲ್ಲಿ ತುಳಸಿ ತೀರ್ಥ ಹಾಕುತ್ತಾರೆ.
ಏಕೆಂದರೆ ಸತ್ತ ಮೇಲೆ ಆ ವ್ಯಕ್ತಿ ಆತ್ಮ ನೇರವಾಗಿ ಸ್ವರ್ಗಕ್ಕೆ ತಲುಪುತ್ತದೆ ಎಂದು ನಂಬಿಕೆ. ಅದು ಮಾತ್ರವಲ್ಲದೆ ನಾವು ತುಳಸಿ ಗಿಡದಿಂದ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಸಹ ನಿವಾರಿಸಬಹುದು. ಆದರೆ ನಿಮಗೆ ಈ ತುಳಸಿಗಿಡ ಯಾರೆಂದು ಗೊತ್ತ ಎತಾಕ್ಕಾಗಿ ಯಾವ ಗಿಡಕ್ಕೂ ಇಲ್ಲದಿರುವ ಪ್ರಾಧಾನ್ಯತೆ ತುಳಸಿ ಗಿಡಕ್ಕಿದೆ ಎಂದು ತಿಳಿಯೋಣ. ನಮ್ಮ ಹಿಂದೂ ಪುರಾಣಗಳ ಪ್ರಕಾರ ಒಂದು ಬಾರಿ ವಿನಾಯಕ ಗಂಗಾನದಿಯ ದಡದಲ್ಲಿ ತಪಸ್ಸು ಮಾಡುತ್ತಿರುವಾಗ ಅದೇ ಸಮಯದಲ್ಲಿ ತುಳಸಿ ಎನ್ನುವ ಮಹಿಳೆ ಅಲ್ಲಿಗೆ ಧಾವಿಸಿ ಗಣೇಶನನ್ನು ಮೋಹಿಸುತ್ತಾಳೆ.
ಒಡನೆ ಗಣೇಶನ ಬಳಿ ಹೋಗಿ ತನ್ನನ್ನು ವಿವಾಹವಾಗುವಂತೆ ಬೇಡುತ್ತಾಳೆ. ಆದರೆ ಅದಕ್ಕೆ ವಿನಾಯಕ ವಿವಾಹ ವಾದರೆ ನನ್ನ ಬ್ರಹ್ಮಚರ್ಯ ಹಾಳಾಗಿ ನನ್ನ ತಪಸ್ಸಿಗೆ ಭಂಗವಾಗುತ್ತದೆ ಎಂದು ನಿರಾಕರಿಸುತ್ತಾರೆ. ಅದರಿಂದ ಕೋಪಗೊಂಡ ತುಳಸಿ ವಿ ನಾಯಕರನ್ನು ನೀನು ಯಾವ ರೀತಿ ನನ್ನ ಬಯಕೆ ಈಡೇರಿಸ ಲಿಲ್ಲ ವು ಹಾಗೆಯೇ ನಿನ್ನ ವಿವಾಹವು ಸಹ ಇಷ್ಟವಿಲ್ಲದೆ ಬಲವಂತವಾಗಿ ನಡೆಯುತ್ತದೆ ಎಂದು ಶಪಿಸುತ್ತಾಳೆ.
ತುಳಸಿ ಹಬ್ಬ
ಅದರಿಂದ ಕೋಪಗೊಂಡ ವಿನಾಯಕ ನೀನು ಮುಂಬರುವ ಜನ್ಮದಲ್ಲಿ ಒಬ್ಬ ಅಸುರರನ್ನು ವಿವಾಹವಾಗಿ ಬೇರೊಬ್ಬ ಪುರುಷನಿಂದ ಪಾತಿವ್ರತ್ಯ ಕಳೆದು ಕೊಳ್ಳುತ್ತಿಯ ಎಂದು ಶಪಿಸುತ್ತಾರೆ. ನಂತರ ಆ ತುಳಸಿಯೇ ಮುಂದಿನ ಜನ್ಮ ದಲ್ಲಿ ಕಾಲನೇಮಿ ಎನ್ನುವ ರಾಕ್ಷಸನಿಗೆ ವೃಂದ ಎನ್ನುವ ಹೆಸರಿನಿಂದ ಜನಿಸುತ್ತಾಳೆ.
1 ದಿನ ಶಿವ ಹಾಗು ಇಂದ್ರನ ನಡುವೆ ನಡೆದ ಗಲಾಟೆಯಲ್ಲಿ ಶಿವ ಇಂದ್ರನನ್ನು ಭಸ್ಮವಾಗಿ ಸಲು ತನ್ನ ಮೂರನೇ ಕಣ್ಣನ್ನು ತೆರೆಯುತ್ತಾರೆ. ಆದರೆ ಅದೇ ಸಮಯದಲ್ಲಿ ಇಂದ್ರ ಶರಣು ಬೇಡಿದ ಕಾರಣ ಮೂರನೇ ಕಣ್ಣಿನಿಂದ ಉಕ್ಕಿ ಬರುತ್ತಿರುವ ಜ್ವಾಲೆ ದಿಕ್ಕನ್ನು ಸಮುದ್ರ ದೆಡೆಗೆ ಬದಲಾಯಿಸುತ್ತಾರೆ. ಶಿವ ಆ ಜ್ವಾಲೆಯಿಂದ ಜಲಂಧರ ಎನ್ನುವ ಅಸುರ ಜನಿಸುತ್ತಾನೆ.
ಶಿವನ ಕಣ್ಣಿನಿಂದ ಜನಿಸಿದ ಈ ಜಲಂಧರನಿಗೆ ಅಪಾರವಾದ ಶಕ್ತಿ ಇರುತ್ತದೆ. ಇನ್ನು ವೃಂದಾಳ ಬಗ್ಗೆ ನೋಡೋದಾದ್ರೆ ಈಕೆ ವಿಷ್ಣುವಿನ ಪರಮ ಭಕ್ತೆ ಅತಿ ಸೌಂದರ್ಯವತಿ, ಅವಳ ಅಂದ ಕ್ಕೆ ಭಕ್ತಿ, ಶ್ರದ್ಧೆಗೆ ಆಕರ್ಷಿತ ನಾದ ಜಲಂಧರ ಆಕೆಯನ್ನು ಪ್ರೀತಿಸಿ ವಿವಾಹವಾಗುತ್ತಾನೆ. ವೃಂದಾಳ, ಪವಿತ್ರತೆ, ಭಕ್ತಿ, ಶ್ರದ್ಧೆಯಿಂದ ಜಲಂಧರನ ಬಲ ಪರಾಕ್ರಮ ಶಕ್ತಿ ಇನ್ನಷ್ಟು ಹೆಚ್ಚಾಗುತ್ತದೆ.
ಒಂದು ಬಾರಿ ಜಲಂಧರ ದೇವತೆಗಳೊಡನೆ ಹೋರಾಡುತ್ತಿರುವಾಗ ವಿಷ್ಣು ದೇವತೆಗಳನ್ನು ರಕ್ಷಿಸಲು ಬರುತ್ತಾರೆ. ಆದರೆ ಜಲಂಧರನ ಶಕ್ತಿ ಸಾಮರ್ಥ್ಯ ಗಳನ್ನು ಮೆಚ್ಚಿ ತನ್ನನ್ನು ಸಹ ಕ್ಷೀರ ಸಾಗರದಲ್ಲಿ ನಿವಾಸ ವಿರುವಂತೆ ಅನುಗ್ರಹಿಸುತ್ತಾರೆ.
tulasi habba
ಆಗ ಜಲಂಧರ ನಾರದರ ಮುಖಾಂತರ ಪಾರ್ವತಿಯ ಸೌಂದರ್ಯದ ಬಗ್ಗೆ ತಿಳಿದು ಆಕೆಯನ್ನು ಮೋಹಿಸಿ ಪಾರ್ವತಿ ಗಾಗಿ ಶಿವನೊಂದಿಗೆ ಹೋರಾಟಕ್ಕೆ ಇಳಿಯುತ್ತಾನೆ. ಆದರೆ ಜಲಂಧರನನ್ನು ಸೋಲಿಸಲು ಶಿವನಿಂದಲೂ ಆಗುವುದಿಲ್ಲ. ಇಬ್ಬರದ್ದು ಸಮಾನವಾದ ಶಕ್ತಿ. ಅದರೊಂದಿಗೆ ವೃಂದಾಳ ಪಾತಿವ್ರತ್ಯ, ಶಕ್ತಿ ಬೇರೆ ಸೇರಿ ಜಲಂಧರ ಎಲ್ಲರಿಗಿಂತಲೂ ಬಲಶಾಲಿಯಾಗಿರುತ್ತಾನೆ.
ಅದು ಮಾತ್ರವಲ್ಲ,ದೆ ವೃಂದಾಳಿಗೆ ತನ್ನ ಪಾತಿವ್ರತ್ಯ ಇರುವ ವರೆಗೂ ತನ್ನ ಗಂಡನ ಪ್ರಾಣಕ್ಕೆ ಏನೂ ಆಗುವುದಿಲ್ಲವೆಂದು ಬ್ರಹ್ಮ ದೇವರು ಬೇರೆ ವರ ನೀಡಿರುತ್ತಾರೆ. ಆಗ ವಿಧಿಯಿಲ್ಲದೆ ವೃಂದಾಳ ಪಾತಿವ್ರತ್ಯ ಹಾಳು ಮಾಡಬೇಕೆಂದು ನಿರ್ಧರಿಸಿದ ವಿಷ್ಣು ಜಲಂಧರನ ರೂಪದಲ್ಲಿ ವೃಂದಾಳ ಒಂದಿಗೆ ಶೃಂಗಾರ ನಡೆಸುತ್ತಾರೆ.
ನಂತರ ವಿಷ್ಣು ತನ್ನ ನಿಜರೂಪಕ್ಕೆ ಬದಲಾದಾಗ ತಾನೆ ಷ್ಟು ಭಕ್ತಿಯಿಂದ ಪೂಜಿಸುವ ವಿಷ್ಣು ತನ್ನನ್ನು ಮೋಸ ಮಾಡಿರುವುದು ವೃಂದಾಳಿಂದ ಸಹಿಸ ಲಾಗುವುದಿಲ್ಲ. ಅದಕ್ಕೆ ವೃಂದ ವಿಷ್ಣುವನ್ನು ನಿನಗೆ ಮನಸಾಕ್ಷಿ ಇಲ್ಲ. ನೀನು ಕಲ್ಲಾಗು ಎಂದು ಶಪಿಸುತ್ತಾಳೆ. ವಿಷ್ಣು ಅವಳ ವೇದನೆ ಅರ್ಥ ಮಾಡಿಕೊಂಡು ವೃಂದಾಳ ಶಾಪ ಸ್ವೀಕರಿಸಿ ನಡೆದ ವಿಷಯವನ್ನೆಲ್ಲ ವಿವರಿಸುತ್ತಾರೆ.
tulasi pooja maduva vidhana kannada
ಆಗ ವೃಂದ ತನ್ನ ತಪ್ಪಿಗೆ ವಿಷ್ಣುವಿನ ಬಳಿ ಕ್ಷಮೆ ಯಾಚಿಸುತ್ತಾಳೆ. ಅದಕ್ಕೆ ವಿಷ್ಣು ವೃಂದ ನೀನು ಮುಂದಿನ ಜನ್ಮ ದಲ್ಲಿ ತುಳಸಿ ಎಂಬ ಹೆಸರಿನಿಂದ ಪವಿತ್ರವಾದ ಗಿಡ ದಂತೆ ಜನಿಸುತ್ತಿ ಯ ಪ್ರತಿ ಪೂಜೆಯಲ್ಲೂ ನೀನಿದ್ದೇ ಇರುತ್ತೀಯ. ನೀನು ಇಲ್ಲದೆ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ ವೆಂದು ವರ ನೀಡುತ್ತಾರೆ. ಹಾಗೆ ವೃಂದಾಳ ಶಾಪದಿಂದ ವಿಷ್ಣುವಿನ ಅಂಶ ಸಾಲಿಗ್ರಾಮದಂತೆ ಬದಲಾಗುತ್ತದೆ ಜಲಂಧರನ ಶಕ್ತಿ ವೃಂದ ಪಾತಿವ್ರತ್ಯ ಕಳೆದು ಹೋದ ಕಾರಣ ಕ್ಷೀಣಿಸುತ್ತದೆ.
ಆಗ ಶಿವ ಜಲಂಧರನ್ನು ಸಂಹರಿಸುತ್ತಾರೆ. ಇತ್ತ ವೃಂದ ಪರಪುರುಷ ನಿಂದ ತನ್ನ ದೇಹ ಮೈಲಿಗೆಯ ಆದ ಕಾರಣ ಅವಳು ಅಗ್ನಿಗೆ ಆಹುತಿ ಯಾಗುತ್ತಾಳೆ. ಅದರ ನಂತರ ತುಳಸಿ ಗಿಡ ದಂತೆ ಪವಿತ್ರವಾಗಿ ಜನಿ ಸುತ್ತಾಳೆ. ವೃಂದ ವೃಂದ ಮರಣಿಸಿದ ಸ್ಥಳವೇ ವೃಂದಾವನ ದಂತೆ ಬದಲಾಗುತ್ತದೆ. ಇದು ತುಳಸಿಯ ಕಥೆ.
ಇತರೆ ಹಬ್ಬಗಳ ಮಹತ್ವ ತಿಳಿಯಿರಿ
- ದೀಪಾವಳಿ ಹಬ್ಬದ ಹಿಂದಿರುವ ಪುರಾಣ ಕಥೆ
- ದೀಪಾವಳಿ ಹಬ್ಬದ ಶುಭಾಶಯಗಳು 2022
- ಗಣೇಶ ಹಬ್ಬದ ಮಹತ್ವ
- ಮೊಹರಂ ಹಬ್ಬದ ಮಹತ್ವ
- ವರಮಹಾಲಕ್ಷ್ಮಿ ಹಬ್ಬದ ಮಹತ್ವ
- ಹೋಳಿ ಹಬ್ಬದ ಮಹತ್ವ